Republic Day Kurta Fashion 2025: ಗಣರಾಜ್ಯೋತ್ಸವದ ಹಿನ್ನೆಲೆ ಕುರ್ತಾಗಳಿಗೆ ಹೆಚ್ಚಿದ ಡಿಮ್ಯಾಂಡ್
Republic Day Kurta Fashion 2025: ಗಣರಾಜ್ಯೋತ್ಸವ ದಿನಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಸಿಂಪಲ್ ಲುಕ್ ನೀಡುವ ಕುರ್ತಾಗಳಿಗೆ ಬೇಡಿಕೆ ಹೆಚ್ಚಾಗಿದೆ.
| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವರ್ಷದ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸಿಂಪಲ್ ಕುರ್ತಾಗಳಿಗೆ (Republicday Kurta Fashion 2025) ಮೊದಲಿಗಿಂತ ಡಿಮ್ಯಾಂಡ್ ಹೆಚ್ಚಾಗಿದೆ. ಮಹಿಳೆಯರು, ಮಕ್ಕಳು ಹಾಗೂ ಪುರುಷರು ಧರಿಸಬಹುದಾದ ಕಾಲರ್ ರಹಿತ ಹಾಗೂ ಸಹಿತ ಕುರ್ತಾಗಳಿಗೆ ಬೇಡಿಕೆ ಹೆಚ್ಚಾಗಿದೆ.
ಟ್ರೆಂಡ್‌ನಲ್ಲಿ ಏನಿದೆ?
ಎಂದಿನಂತೆ ಬಿಡುಗಡೆಯಾಗಿರುವ ಸಲ್ವಾರ್ ಕುರ್ತಾ, ಧೋತಿ ಕುರ್ತಾ, ಪೈಜಾಮಾ ಕುರ್ತಾ, ಶಾರ್ಟ್ ಕು ರ್ತಾ, ಶರ್ಟ್ ಕುರ್ತಾ, ಲಾಂಗ್ ಕುರ್ತಾಗಳಲ್ಲಿ ಕೊಂಚ ವಿನ್ಯಾಸಗಳು ಬದಲಾಗಿವೆ. ನೋಡಲು ಸಿಂಪಲ್ ಆಗಿ ಕಂಡರೂ ಕಟ್ಸ್ ಹಾಗೂ ಸ್ಟಿಚ್ಚಿಂಗ್ ಪ್ಯಾಟರ್ನ್ ಡಿಫರೆಂಟ್ ಆಗಿವೆ. ಇತರೇ ಡ್ರೆಸ್‌ಗಳಂತೆ ಇವುಗಳಲ್ಲೂ ಬಾಡಿ ಫಿಟ್‌ನವು ದೊರೆಯುತ್ತಿವೆ. ಅಲ್ಲದೇ ಥ್ರೆಡ್ ಹಾಗೂ ಪ್ರಿಂಟ್ಸ್‌ನವು ಚಾಲ್ತಿಯಲ್ಲಿವೆ. ಇನ್ನು ಮೆಷಿನ್ ಥ್ರೆಡ್ ವರ್ಕ್‌ನವು ಕೈಗೆಟಕುವ ದರದಲ್ಲಿ ಲಭ್ಯ. ಆದರೆ ಹ್ಯಾಂಡ್ ವರ್ಕ್‌ನ ಕುರ್ತಾಗಳು ಕೊಂಚ ದುಬಾರಿ ಎನ್ನಬಹುದು.
ಕಾಟನ್ ಹಾಗೂ ಖಾದಿಯಲ್ಲಿ ದೊರೆಯುತ್ತಿದ್ದ ಕುರ್ತಾಗಳು ಇದೀಗ ಕ್ರೇಪ್, ಜಾರ್ಜೆಟ್ ಹಾಗೂ ಸೆಮಿ ಸಿಂಥೆಟಿಕ್ ಫ್ಯಾಬ್ರಿಕ್‌ನಲ್ಲೂ ಲಭ್ಯ. ಕಾಲರ್‌ನಲ್ಲಿ ಸಿಂಪಲ್ ಡಿಸೈನ್, ನೆಕ್ ಡಿಸೈನ್‌ಗಳು ಟ್ರೆಂಡಿಯಾಗಿವೆ.
ವೆರೈಟಿ ಮೆನ್ಸ್ ಕುರ್ತಾ
ಪುರುಷರ ಕುರ್ತಾಗಳಲ್ಲಿ ಹೊಸ ವಿನ್ಯಾಸಗಳು ಬಂದಿವೆ. ಸೀದಾ ಸಾದಾ ಕುರ್ತಾಗಳ ಜಾಗಕ್ಕೆ ಇದೀಗ ಪಾಕೆಟ್ ಕುರ್ತಾ, ಪ್ರಿಂಟ್ಸ್ ಚೆಕ್ಸ್ ಕುರ್ತಾಗಳು ಯುವಕರನ್ನು ಆಕರ್ಷಿಸಿವೆ. ಇದರೊಂದಿಗೆ ಮೈಕ್ರೋ ಥ್ರೆಡ್‌ವರ್ಕ್ ಇರುವಂತವು ವಿಶೇಷವಾಗಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ ಎನ್ನುತ್ತಾರೆ ಮಾರಾಟಗಾರರಾದ ರಾಕೇಶ್.
ಫುಲ್ ಸ್ಲೀವ್ ಕುರ್ತಾ
ಕ್ರೀಮ್ ಶೇಡ್, ವೈಟ್, ಸನ್‌ಕಲರ್, ಕೇಸರಿ, ಬ್ರಿಕ್ರೆಡ್, ಡಸ್ಟ್ ಕಲರ್ ಸೇರಿದಂತೆ ಸಾಕಷ್ಟು ಡಾರ್ಕ್ ಮತ್ತು ನ್ಯೂಡ್ ಕಲರ್‌ನಲ್ಲಿ ಬಂದಿರುವ ಕುರ್ತಾಗಳು ಯಾವುದೇ ನಾರ್ಮಲ್ ಪ್ಯಾಂಟ್ ಮೇಲೆ ಧರಿಸುವಂತಹ ವಿನ್ಯಾಸದಲ್ಲಿ, ಯುವಕರಿಗೆ ಹಾಗೂ ಮಕ್ಕಳಿಗೆ ಇಷ್ಟವಾಗುವಂತಹ ಡಿಸೈನ್‌ನಲ್ಲಿ ಫುಲ್ ಸ್ಲೀವ್‌ನಲ್ಲಿ ಬಿಡುಗಡೆಯಾಗಿವೆ.
ರಾಷ್ಟ್ರಪ್ರೇಮ ಬಿಂಬಿಸುವ ಕುರ್ತಾ ಡಿಸೈನ್ಸ್
ರಾಷ್ಟ್ರ ಪ್ರೇಮ ಬಿಂಬಿಸಲು ಸಹಕಾರಿಯಾಗುವ ಬಹುತೇಕ ಕುರ್ತಾಗಳು ಇದೀಗ ಕೆಲಕಾಲ ವೆಸ್ಟರ್ನ್ ಉಡುಪನ್ನು ಸೈಡಿಗಿಡುವಂತೆ ಮಾಡಿವೆ. ಡ್ರೆಸ್‌ಕೋಡ್ ಬದಲಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಘವ್. ಅವರ ಪ್ರಕಾರ, ಕುರ್ತಾಗಳು ನಮ್ಮ ಸಿಂಪ್ಲಿಸಿಟಿಯನ್ನು ಬಿಂಬಿಸುತ್ತವೆ. ಜತೆಗೆ ನೋಡಲು ಕೂಡ ನಮ್ಮ ವ್ಯಕ್ತಿತ್ವವನ್ನು ಹೈಲೈಟ್ ಮಾಡುತ್ತವೆ. ಗೌರವ ಹೆಚ್ಚಿಸುತ್ತವೆ ಎನ್ನುತ್ತಾರೆ.
ಈ ಸುದ್ದಿಯನ್ನೂ ಓದಿ | Stars Travel Fashion: ಸ್ಟಾರ್ ಕಪಲ್ ಸಂಗೀತಾ-ಸುದರ್ಶನ್ ಟರ್ಕಿ ಟ್ರಾವೆಲ್ ಫ್ಯಾಷನ್
ಎಲ್ಲರ ಮನಗೆದ್ದ ಕುರ್ತಾಗಳು
ಈ ಹಿಂದೆ ಕುರ್ತಾಗಳೆಂದಾಕ್ಷಣ ರಾಜಕೀಯ ವ್ಯಕ್ತಿಗಳು, ಪರ್ತಕತ್ರರು, ಬುದ್ಧಿಜೀವಿಗಳಿಗೆ ಮಾತ್ರ ಸೀಮಿತ ಎಂಬಂತಿತ್ತು. ಆದರೆ, ಇದೀಗ ಕುರ್ತಾ ಕೂಡ ಟ್ರೆಂಡ್‌ಗೆ ತಕ್ಕಂತೆ ರೂಪ ಬದಲಿಸಿ ಎಲ್ಲರ ಮನಗೆದ್ದಿವೆ.
ಈ ಸುದ್ದಿಯನ್ನೂ ಓದಿ | Makeup Kit Awareness 2025: ಸೌಂದರ್ಯವರ್ಧಕಗಳ ಬಾಳಿಕೆಗೆ ಈ 5 ಟಿಪ್ಸ್ ಫಾಲೋ ಮಾಡಿ
ಕುರ್ತಾ ಪ್ರಿಯರಿಗೆ ಒಂದಿಷ್ಟು ಸಲಹೆ
- ಗುಣಮಟ್ಟವುಳ್ಳ ಫ್ಯಾಬ್ರಿಕ್‌ನ ಕುರ್ತಾಗಳನ್ನು ಖರೀದಿಸಿ.
- ಟ್ರೆಂಡ್‌ನಲ್ಲಿರುವ ವಿನ್ಯಾಸದ್ದನ್ನು ಆಯ್ಕೆ ಮಾಡಿ.
- ಕುರ್ತಾಗೆ ಮ್ಯಾಚ್ ಆಗುವ ಪ್ಯಾಂಟನ್ನು ಧರಿಸಿ.
- ನಿರ್ವಹಣೆ ಬಗ್ಗೆ ಖರೀದಿಸುವಾಗಲೇ ತಿಳಿದುಕೊಳ್ಳಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)