Pravasi Prapancha: ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆಯಿಂದ ರೋಡ್ ಶೋ ಪ್ರಾರಂಭ
Karnataka Tourism Department : ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆ ವತಿಯಿಂದ ಆಯೋಜಿಸಿರುವ “ಕರ್ನಾಟಕ ಡೆಸ್ಟಿನೇಶನ್ ಪ್ರಮೋಶನ್ ರೋಡ್ ಶೋ” ಇಂದು ಪ್ರಾರಂಭಗೊಂಡಿದೆ. ಕರ್ನಾಟಕವನ್ನು ಪ್ರಮುಖ ಪ್ರವಾಸಿ ತಾಣವಾಗಿ ಪ್ರಚಾರ ಮಾಡುವುದರ ಜತೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ B2B ಸಹಕಾರ ಬಲಪಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ.
ಕರ್ನಾಟಕ ಪ್ರವಾಸೋದ್ಯ ಇಲಾಖೆ -
ಬೆಂಗಳೂರು: ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆ ವತಿಯಿಂದ ಆಯೋಜಿಸಿರುವ “ಕರ್ನಾಟಕ ಡೆಸ್ಟಿನೇಶನ್ ಪ್ರಮೋಶನ್ ರೋಡ್ ಶೋ” (Karnataka Tourism Department) ಇಂದು ಪ್ರಾರಂಭಗೊಂಡಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಾಗೂ ಅಂತಾರಾಜ್ಯ ಪ್ರವಾಸೋದ್ಯಮ ಸಹಯೋಗವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿರುವ ಈ ಕಾರ್ಯಕ್ರಮಕ್ಕೆ ಉದ್ಯಮ ವಲಯದಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ.
ಬೆಂಗಳೂರಿನಲ್ಲಿ ಬೆಳಿಗ್ಗೆ 6.15ಕ್ಕೆ ರೋಡ್ಶೋ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಇಂಡಿಯಾ ಟೂರಿಸಂನ ಹಿರಿಯ ಅಧಿಕಾರಿಗಳು ಮತ್ತು ಕರ್ನಾಟಕ ಟೂರಿಸಂ ಸೊಸೈಟಿ (KTS) ಸದಸ್ಯರ ಸಮ್ಮುಖದಲ್ಲಿ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.
Pravasi Prapancha: ಶ್ರೀ ಸಾಮಾನ್ಯರ ಪ್ರವಾಸೋದ್ಯಮಕ್ಕೆ ಪ್ರವಾಸಿ ಪ್ರಪಂಚ ಅಗತ್ಯ: ಸಚಿವ ಎಚ್.ಕೆ ಪಾಟೀಲ್
ಕರ್ನಾಟಕವನ್ನು ಪ್ರಮುಖ ಪ್ರವಾಸಿ ತಾಣವಾಗಿ ಪ್ರಚಾರ ಮಾಡುವುದರ ಜತೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ B2B ಸಹಕಾರ ಬಲಪಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ. ಈ ರೋಡ್ ಶೋ ತಮಿಳುನಾಡು ಮತ್ತು ಕೇರಳದ ನಾಲ್ಕು ಪ್ರಮುಖ ನಗರಗಳಲ್ಲಿ ನಡೆಯಲಿದ್ದು, ರೋಡ್ಶೋ ಮೂಲಕ ಕರ್ನಾಟಕದ ಸಂಸ್ಕೃತಿ, ಪ್ರಕೃತಿ, ಪುರಾತನ ಸ್ಮಾರಕಗಳು, ಸಾಹಸ ಪ್ರವಾಸ, ಜೈವ ವೈವಿಧ್ಯತೆಯ ಬಗ್ಗೆ ವಿಸ್ತೃತ ಮಾಹಿತಿ ನೀಡಿ ಅಲ್ಲಿಯ ಪ್ರವಾಸಿಗರನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ. ಪ್ರವಾಸೋದ್ಯಮ ಉದ್ಯಮಿಗಳ ಜತೆ ನಿಕಟ ಸಂವಾದದ ಮೂಲಕ ಹೊಸ ಸಂಪರ್ಕಗಳನ್ನು ಸಾಧಿಸಿ, ದ್ವಿಪಕ್ಷೀಯ ಸಹಕಾರ ಹೆಚ್ಚಿಸುವುದೂ ಕೂಡ ಈ ಅಭಿಯಾನದ ಉದ್ದೇಶವಾಗಿದೆ. ಈ ಅಭಿಯಾನವು ಕರ್ನಾಟಕ ಪ್ರವಾಸೋದ್ಯಮದ ಪ್ರಚಾರಕ್ಕೆ ಹೊಸ ಮೈಲಿಗಲ್ಲಾಗಲಿರುವ ನಿರೀಕ್ಷೆ ವ್ಯಕ್ತವಾಗಿದೆ.