ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನ ಜೀವನ ಶೈಲಿಗೆ ಮನಸೋತ ರಷ್ಯಾ ಕುಟುಂಬ: ಇಲ್ಲಿನ ಜನರ ನಗುವೇ ನಮಗೆ ಆಸ್ತಿ ಎಂದು ಗುಣಗಾನ

Viral Video: ಸಾಮಾನ್ಯವಾಗಿ ವಿದೇಶಿಯರು ಭಾರತವನ್ನು ಪ್ರವಾಸಿ ತಾಣವಾಗಿ ಇಷ್ಟ ಪಡುತ್ತಾರೆ. ಇಲ್ಲಿನ ಸಂಸ್ಕೃತಿ, ಆಚರಣೆಯನ್ನು ಸವಿದು ಪ್ರವಾಸಿಗರಾಗಿ ಬಂದು ಹೋಗುತ್ತಾರೆ. ಆದರೆ ಕಂಟೆಟ್ ಕ್ರಿಯೇಟರ್ ಯಾನಾ ಮತ್ತು ಅವರ ಪತಿ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ಅವರು ಇಲ್ಲಿನ ಜನ ಜೀವನವನ್ನು ಹಾಡಿ ಹೊಗಳಿದ್ದಾರೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು, ಡಿ. 23: ಭಾರತದ ಅತ್ಯಂತ ಸುಂದರ ನಗರ ಅಂದರೆ ಅದು ಬೆಂಗಳೂರು. ಯಾಕೆಂದರೆ ಇಲ್ಲಿನ ವಾತಾವರಣ, ನಗರ ಜೀವನ ಶೈಲಿ, ಕನ್ನಡಿಗರ ಆತಿಥ್ಯ ಹೀಗೆ ಎಲ್ಲವೂ ಹೊರ ರಾಜ್ಯದವರು ಮಾತ್ರವಲ್ಲ ವಿದೇಶಿಗರನ್ನೂ ಸೆಳೆಯುತ್ತದೆ. ವಿದೇಶಿಗರು ಇಲ್ಲಿನ ಸಂಸ್ಕೃತಿ ಮತ್ತು ಆತಿಥ್ಯಕ್ಕೆ ಮನ ಸೋಲುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ರಷ್ಯಾ ಮೂಲದ ಕಂಟೆಂಟ್ ಕ್ರಿಯೇಟರ್ ಒಬ್ಬರು ತಮ್ಮ ಕುಟುಂಬದ ಜತೆ ಬೆಂಗಳೂರನ್ನು ತಮ್ಮ ಕಾಯಂ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದು ಇಲ್ಲಿ ನೆಲೆಸಲು ಕಾರಣ ಏನು ಎಂಬುದನ್ನು ಪೋಸ್ಟ್ ಮೂಲಕ ಶೇರ್ ಮಾಡಿ ಕೊಂಡಿದ್ದಾರೆ. ಸದ್ಯ ಈ ವಿಡಿಯೊ ಭಾರಿ ವೈರಲ್ (Viral Video) ಆಗಿದೆ.

ಸಾಮಾನ್ಯವಾಗಿ ವಿದೇಶಿಯರು ಹೆಚ್ಚಾಗಿ ಭಾರತವನ್ನು ಪ್ರವಾಸಿ ತಾಣವಾಗಿ ಇಷ್ಟ ಪಡುತ್ತಾರೆ. ಇಲ್ಲಿನ ಸಂಸ್ಕೃತಿ, ಆಚರಣೆಯನ್ನು ಸವಿದು ಒಂದಷ್ಟು ದಿನ ಇದ್ದು ಹೋಗುತ್ತಾರೆ. ಆದರೆ ಕಂಟೆಟ್ ಕ್ರಿಯೇಟರ್ ಯಾನಾ ಮತ್ತು ಅವರ ಪತಿ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಮಕ್ಕಳನ್ನು ಇಲ್ಲಿನ ಶಾಲೆಗೆ ಸೇರಿಸಿ ತಮ್ಮ ದಿನ ನಿತ್ಯದ ಬದುಕು ಸಾಗಿಸುತ್ತಿದ್ದಾರೆ. ʼʼನಾವು ಇಲ್ಲಿ ಒಬ್ಬ ಸಾಮಾನ್ಯ ಭಾರತೀಯರಂತೆ ಬದುಕುತ್ತಿದ್ದೇವೆ. ನಾವು ಇಲ್ಲಿ ಅತಿಥಿಗಳಲ್ಲ. ಬದಲಾಗಿ ಇದು ನಮ್ಮ ಮನೆʼʼ ಎಂದು ಬೆಂಗಳೂರಿನ ಜನರ ಬಗ್ಗೆ ಧನಾತ್ಮಕ ಪ್ರತಿಕ್ರಿಯೆ ‌ನೀಡಿದ್ದಾರೆ.

ವಿಡಿಯೊ ನೋಡಿ:



ʼʼಇಲ್ಲಿನ ನೆರೆಹೊರೆಯವರು ನಮ್ಮನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ‌. ಸಣ್ಣ ಅಂಗಡಿಯವರು ಕೂಡ ನಮ್ಮನ್ನು ಗುರುತಿಸುತ್ತಾರೆ. ಇಂತಹ ಪ್ರೀತಿ, ಮಮತೆ ಬೇರೆಲ್ಲೂ ಸಿಕ್ಕಿಲ್ಲʼʼ ಎಂದು ಯಾನಾ ಭಾರತೀಯರ ಬಾಂಧವ್ಯವನ್ನು ಮೆಚ್ಚಿಕೊಂಡಿದ್ದಾರೆ. ʼʼನಗು ಅನ್ನೋದು ಭಾರತೀಯರ ಸಾರ್ವತ್ರಿಕ ಭಾಷೆಯಾಗಿದೆ. ಇಲ್ಲಿನ ಜನರು ಸಹಾಯ ಹಸ್ತ ಚಾಚಲು ಸದಾ ಮುಂದೆ ಇರುತ್ತಾರೆ. ಇರುವುದರಲ್ಲೇ ಸಂತೋಷವಾಗಿ ಬದುಕುವುದನ್ನು ಇಲ್ಲಿ ನಾವು ಕಲಿತಿದ್ದೇವೆʼʼ ಎಂದು ಯಾನಾ ಹೇಳಿಕೊಂಡಿದ್ದಾರೆ.

ಹಸಿವಿನಿಂದ ಕಣ್ಣೀರು ಹಾಕುತ್ತಿದ್ದ ಹಿಂದಿ ಯುವತಿಗೆ ಸ್ಯಾಂಡ್‌ವಿಚ್ ನೀಡಿದ ಬೆಂಗಳೂರು ಕ್ಯಾಬ್ ಚಾಲಕ

ʼʼಬೆಂಗಳೂರಿನಂತಹ ವಿವಿಧ ಭಾಷೆ, ಸಂಸ್ಕೃತಿಗಳಿರುವ ನಗರದಲ್ಲಿ ಮಕ್ಕಳು ಬೆಳೆಯುವುದರಿಂದ ಅವರು ಹೆಚ್ಚು ಸ್ವಾತಂತ್ರ್ಯ ಮನಸ್ಸಿನವರಾಗುತ್ತಾರೆ. ಇದು ಅವರಲ್ಲಿ ಸಹಬಾಳ್ವೆಯನ್ನು ಕಲಿಸುತ್ತದೆʼʼ ಎಂದಿದ್ದಾರೆ. ಬೆಂಗಳೂರಿನ ಗದ್ದಲ ಮತ್ತು ಟ್ರಾಫಿಕ್ ಬಗ್ಗೆಯೂ ಮಾತನಾಡಿದ ಯಾನಾ, "ಇಲ್ಲಿನ ಬದುಕು ಕೆಲವೊಮ್ಮೆ ಗೊಂದಲದಿಂದ ಕೂಡಿರುತ್ತದೆ. ಆದರೆ ಈ ಗೊಂದಲಗಳ ವಾತವರಣದಲ್ಲಿಯೇ ನಮಗೆ ಒಂದು ವಿಧದ ನೆಮ್ಮದಿ, ಖುಷಿ ಸಿಗುತ್ತಿದೆ. ನಮ್ಮನ್ನು ನಾವು ಪ್ರೀತಿಸುವುದನ್ನು ಈ ದೇಶ ಕಲಿಸಿದೆʼʼ ಎಂದು ಅವರು ಬರೆದುಕೊಂಡಿದ್ದಾರೆ.

ಯಾನಾ ಶೇರ್ ಮಾಡಿದ ಈ ವಿಡಿಯೊ ಸದ್ಯ ಭಾರಿ ವೈರಲ್ ಆಗಿದೆ. ನೆಟ್ಟಿಗರೊಬ್ಬರು ʼʼನಮ್ಮ ದೇಶಕ್ಕೆ ನಿಮಗೆ ಸ್ವಾಗತ. ನಿಮ್ಮ ವಿಭಿನ್ನವಾದ ಆಲೋಚನೆʼʼ ಎಂದು ಹೇಳಿದ್ದಾರೆ. ಮತ್ತೊಬ್ಬರು, "ಭಾರತದಂತಹ ಉತ್ತಮ ಸ್ಥಳ ಮತ್ತೊಂದಿಲ್ಲʼʼ ಎಂದು ಕಮೆಂಟ್ ಮಾಡಿದ್ದಾರೆ. ಅನೇಕ ಬಳಕೆದಾರರು ಹೃದಯದ ಎಮೋಜಿಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.