Viral Video: ಹಸಿವಿನಿಂದ ಕಣ್ಣೀರು ಹಾಕುತ್ತಿದ್ದ ಹಿಂದಿ ಯುವತಿಗೆ ಸ್ಯಾಂಡ್‌ವಿಚ್ ನೀಡಿದ ಬೆಂಗಳೂರು ಕ್ಯಾಬ್ ಚಾಲಕ; ವಿಡಿಯೊ ಇಲ್ಲಿದೆ
Viral Video: ಬೆಂಗಳೂರಿನ ಉಬರ್ ಚಾಲಕನೊಬ್ಬನು ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಯೊಬ್ಬರಿಗೆ ಸ್ಯಾಂಡ್‌ವಿಚ್ ತಂದು ಕೊಟ್ಟು ಹಸಿವು ನೀಗಿಸಿದ್ದಾನೆ. ಮಾನವೀಯತೆ ಮತ್ತು ಪ್ರೀತಿ ಭಾಷೆಯ ಗಡಿಯನ್ನು ದಾಡಿಯೂ ನಿಲ್ಲುತ್ತದೆ ಎಂಬುದಕ್ಕೆ ಈ ಹೃದಯಸ್ಪರ್ಶಿ ಘಟನೆ ಸಾಕ್ಷಿಯಾಗಿದೆ. ತಡರಾತ್ರಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಮುಂಬೈನ ಯುವತಿಯೂ ಹಸಿವಿನಿಂದ ಕಣ್ಣೀರು ಹಾಕುತ್ತಿದ್ದಾಗ, ಬೆಂಗಳೂರಿನ ಕ್ಯಾಬ್ ಚಾಲಕ ತಕ್ಷಣವೇ ತನ್ನ ಕಾರನ್ನು ನಿಲ್ಲಿಸಿ ಸ್ಯಾಂಡ್‌ವಿಚ್ ನೀಡಿ ಆಕೆಯ ದಿನವನ್ನೇ ಖುಷಿಯಾಗಿದ್ದಾನೆ..
ಹಿಂದಿ ಯುವತಿಗೆ ಸ್ಯಾಂಡವಿಚ್ ನೀಡಿದ ಚಾಲಕ -
ಬೆಂಗಳೂರು: ಮಾನವೀಯತೆ ಮರೆಯಾದ ಈ ಕಾಲದಲ್ಲಿ ಕ್ಯಾಬ್ ಚಾಲಕನೊಬ್ಬನ ದಯೆ ಮತ್ತು ಸಹೃದತೆಯ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ. (Bengaluru) ಬೆಂಗಳೂರಿನ ಉಬರ್ ಚಾಲಕನೊಬ್ಬನು ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಯೊಬ್ಬರಿಗೆ ಸ್ಯಾಂಡ್‌ವಿಚ್ ತಂದು ಕೊಟ್ಟು ಹಸಿವು ನೀಗಿಸಿದ್ದಾನೆ. ಮಾನವೀಯತೆ ಮತ್ತು ಪ್ರೀತಿ ಭಾಷೆಯ ಗಡಿಯನ್ನು ದಾಡಿಯೂ ನಿಲ್ಲುತ್ತದೆ ಎಂಬುದಕ್ಕೆ ಈ ಹೃದಯಸ್ಪರ್ಶಿ ಘಟನೆ ಸಾಕ್ಷಿ ಯಾಗಿದೆ. ತಡರಾತ್ರಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಮುಂಬೈನ (Mumbai) ಯುವತಿಯೂ ಹಸಿವಿ ನಿಂದ ಕಣ್ಣೀರು ಹಾಕುತ್ತಿದ್ದಾಗ, ಬೆಂಗಳೂರಿನ ಕ್ಯಾಬ್ ಚಾಲಕ ತಕ್ಷಣವೇ ತನ್ನ ಕಾರನ್ನು ನಿಲ್ಲಿಸಿ ಸ್ಯಾಂಡ್‌ವಿಚ್ ನೀಡಿ ಆಕೆಯ ದಿನವನ್ನೇ ಖುಷಿಯಾಗಿದ್ದಾನೆ. ಈ ವ್ಯಕ್ತಿಯ ಸಹನೆಯ ಕೆಲಸಕ್ಕೆ ಯುವತಿಯೂ ಸೋಶಿಯಲ್ ಮೀಡಿಯಾ ಮೂಲಕ ಕೃತಜ್ಞತೆ ಸಲ್ಲಿಸಿದ್ದಾಳೆ. ಈ ವಿಡಿಯೋ ಸದ್ಯ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿದೆ.
ಕಷ್ಟದ ಸಮಯದಲ್ಲಿ ಕ್ಯಾಬ್ ಚಾಲಕ ತನಗೆ ಹೇಗೆ ಸಹಾಯ ಮಾಡಲು ಪ್ರಯತ್ನಿಸಿದ್ದಾರೆ ಎಂಬುದನ್ನು ಯುವತಿ ಹಂಚಿಕೊಂಡಿದ್ದಾಳೆ. ಬೆಂಗಳೂರಿನಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆಯೂ ಜನರ ಹೃದಯಗಳನ್ನು ಗೆದ್ದಿದೆ. ಮುಂಬೈ ಮೂಲದ ಮಹಿಳೆ ಯೋಗಿತಾ ರಾಥೋಡ್ (yogithaarathore) ಎಂಬವರು ದೀರ್ಘಾವಧಿಯ ಶೂಟಿಂಗ್ ಮುಗಿಸಿ ತೀವ್ರ ಆಯಾಸದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ಯೋಗಿತಾ ಅವರು ಕ್ಯಾಬ್ ಹತ್ತಿದಾಗಲೇ . ವಿಮಾನ ನಿಲ್ದಾಣದ ದೂರವನ್ನು ನೆನಪಿಸಿಕೊಂಡು, ತಾನು ತೀವ್ರವಾಗಿ ಹಸಿವಿನಿಂದ ಬಳಲುತ್ತಿರುವುದಾಗಿ ಮತ್ತು ಮಧ್ಯರಾತ್ರಿ 2 ಗಂಟೆಯ ವಿಮಾನ ನಿಲ್ದಾಣ ತೆರಳುವಾಗ ಊಟ ಸಿಗುವುದೋ ಗೊತ್ತಿಲ್ಲ ಎಂದು ತಮ್ಮ ಸ್ನೇಹಿತೆಯೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದರು. ಯೋಗಿತಾ ಅವರ ಈ ಮಾತುಗಳನ್ನು ಕ್ಯಾಬ್ ಚಾಲಕ ಅರಿತು ಕೊಂಡಿದ್ದಾನೆ.
ವಿಡಿಯೊ ವೀಕ್ಷಿಸಿ:
ಕೆಲವೇ ನಿಮಿಷಗಳ ನಂತರ, ಚಾಲಕನು ಇದ್ದಕ್ಕಿದ್ದಂತೆ ರಸ್ತೆಯ ಬದಿಯಲ್ಲಿ ಕಾರು ನಿಲ್ಲಿಸಿ ತೆರಳಿದ್ದಾರೆ. ಚಾಲಕನು ವೈಯಕ್ತಿಕ ಕೆಲಸಕ್ಕೆ ಹೋಗಿರಬೇಕು ಎಂದು ಯೋಗಿತಾ ಭಾವಿಸಿದ್ದರು. ಆದರೆ, ಚಾಲಕ ಮಾತ್ರ ಬಂದಿದ್ದು ಸ್ಯಾಂಡ್‌ವಿಚ್‌ನೊಂದಿಗೆ...ಯೋಗಿತಾ ಈ ಬಗ್ಗೆ ಪ್ರಶ್ನಿಸಿದಾಗ, ಕ್ಯಾಬ್ ಚಾಲಕನು ಅತ್ಯಂತ ಪ್ರೀತಿಯಿಂದ ಉತ್ತರಿಸಿದ್ದಾರೆ. ನೀವು ಅಷ್ಟೊಂದು ಬಾರಿ ಹಸಿದಿದ್ದೇನೆ ಎಂದು ಹೇಳಿದ್ದು ತನಗೆ ಬೇಸರ ಅನಿಸಿತು. ನನ್ನ ಸಹೋದರಿ ಹಸಿದಿದ್ದರೆ, ನನಗೂ ಈ ರೀತಿಯದ್ದೇ ಭಾವನೆ ಬರುತ್ತಿತ್ತು. ಮತ್ತು ನೀವು ಫೋನಿನಲ್ಲಿ ಸಸ್ಯಾಹಾರ ಬೇಕು ಎಂದು ಹೇಳಿದ್ದು ಕೇಳಿ ಅದನ್ನೇ ಹುಡುಕಿ ತಂದಿರುವೆ ಎಂದು ಹೇಳಿರುವ ದೃಶ್ಯ ವಿಡಿಯೊದಲ್ಲಿ ಕಾಣಬಹುದು.
ಆಟೋ ರಿಕ್ಷಾವನ್ನೇ ಓಯೋ ರೂಮ್ ಮಾಡಿಕೊಂಡ ಜೋಡಿ; ರಸ್ತೆ ಮಧ್ಯೆಯೇ ರೊಮ್ಯಾನ್ಸ್
ಬಳಿಕ ಯೋಗಿತಾ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿ, ನಾನು ನಿಮ್ಮನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿರುವ ದೃಶ್ಯ ಕಾಣಬಹುದು. ಸದ್ಯ ಈ ವಿಡಿಯೋ ಇಪ್ಪತ್ತಾನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು "ದ್ವೇಷ ತುಂಬಿರುವ ಈ ಜಗತ್ತಿನಲ್ಲಿ ಇಂತಹ ಸಣ್ಣ ಘಟನೆ ನಮ್ಮ ಹೃದಯಕ್ಕೆ ಹೆಚ್ಚು ಹಿತ ನೀಡುತ್ತವೆ..ಎಂದು ಬರೆದುಕೊಂಡಿದ್ದಾರೆ. ದಯೆ ನಿಜವಾಗಿಯೂ ಅತ್ಯಂತ ಅನಿರೀಕ್ಷಿತ ವ್ಯಕ್ತಿಗಳಿಂದ ಬರುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.