ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Samsung: ತಮಿಳುನಾಡಿನಲ್ಲಿ 'ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್' ಆರಂಭಕ್ಕೆ ಮದ್ರಾಸ್ ವಿಶ್ವವಿದ್ಯಾಲಯದ ಜೊತೆ ಒಪ್ಪಂದ ಮಾಡಿಕೊಂಡ ಸ್ಯಾಮ್‌ಸಂಗ್

ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆದ ಸ್ಯಾಮ್‌ಸಂಗ್, ತಮಿಳುನಾಡಿನ ಯುವ ಜನತೆಗೆ ಭವಿಷ್ಯದ ತಂತ್ರಜ್ಞಾನ ಕೌಶಲ್ಯಗಳನ್ನು ತರಬೇತಿ ನೀಡುವ ಉದ್ದೇಶದಿಂದ ಮದ್ರಾಸ್ ವಿಶ್ವ ವಿದ್ಯಾಲಯದೊಂದಿಗೆ ಕೈಜೋಡಿಸಿದ್ದು, ಈ ಮೂಲಕ ತಮಿಳು ನಾಡಿನಲ್ಲಿ ತನ್ನ ಪ್ರಮುಖ ತಾಂತ್ರಿಕ ಶಿಕ್ಷಣ ಯೋಜನೆಯಾದ 'ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್' ಅನ್ನು ಜಾರಿಗೆ ತರುವುದಾಗಿ ಕಂಪನಿ ಘೋಷಿಸಿದೆ.

~ ಕೃತಕ ಬುದ್ಧಿಮತ್ತೆ, ಐಓಟಿ, ಬಿಗ್ ಡೇಟಾ ಮತ್ತು ಕೋಡಿಂಗ್‌ನಲ್ಲಿ ಯುವಜನತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ~

~ ಈ ವರ್ಷ ತಮಿಳುನಾಡಿನ 5,000 ವಿದ್ಯಾರ್ಥಿಗಳಿಗೆ ಭವಿಷ್ಯದ ತಂತ್ರಜ್ಞಾನಗಳಲ್ಲಿ ತರಬೇತಿ ನೀಡುವ ಗುರಿ ~

~ ದೇಶದ 10 ರಾಜ್ಯಗಳಿಗೆ ವಿಸ್ತರಣೆಗೊಂಡಿರುವ ಈ ಯೋಜನೆಯು 2025ರಲ್ಲಿ ದೇಶಾದ್ಯಂತ 20,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆದ ಸ್ಯಾಮ್‌ಸಂಗ್, ತಮಿಳು ನಾಡಿನ ಯುವಜನತೆಗೆ ಭವಿಷ್ಯದ ತಂತ್ರಜ್ಞಾನ ಕೌಶಲ್ಯಗಳನ್ನು ತರಬೇತಿ ನೀಡುವ ಉದ್ದೇಶದಿಂದ ಮದ್ರಾಸ್ ವಿಶ್ವವಿದ್ಯಾಲಯದೊಂದಿಗೆ ಕೈಜೋಡಿಸಿದ್ದು, ಈ ಮೂಲಕ ತಮಿಳು ನಾಡಿನಲ್ಲಿ ತನ್ನ ಪ್ರಮುಖ ತಾಂತ್ರಿಕ ಶಿಕ್ಷಣ ಯೋಜನೆಯಾದ 'ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್' ಅನ್ನು ಜಾರಿಗೆ ತರುವುದಾಗಿ ಕಂಪನಿ ಘೋಷಿಸಿದೆ.

ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಸ್ಟೂಡೆಂಟ್ಸ್ ಅಫೇರ್ಸ್ ವಿಭಾ ಗದ ಡೀನ್ ಡಾ.ಪಿ.ಎಸ್.ಮಂಜುಳಾ, ರಿಜಿಸ್ಟ್ರಾರ್ ಡಾ. ರೀಟಾ ಜಾನ್ ಮತ್ತು ಉಪಕುಲಪತಿಗಳ ಸಂಚಾಲಕ ಸಮಿತಿಯ ಸದಸ್ಯರಾದ ಡಾ. ಎಸ್. ಆರ್ಮ್‌ಸ್ಟ್ರಾಂಗ್ ಸೇರಿದಂತೆ ಹಿರಿಯ ಶೈಕ್ಷಣಿಕ ತಜ್ಞರು ಉಪಸ್ಥಿತರಿದ್ದರು.

ರಾಜ್ಯ ಮತ್ತು ರಾಷ್ಟ್ರದ ಕೌಶಲ್ಯಾಭಿವೃದ್ಧಿ ಆದ್ಯತೆಗಳಿಗೆ ಅನುಗುಣವಾಗಿ, ಸ್ಯಾಮ್‌ಸಂಗ್ ಇನ್ನೋ ವೇಶನ್ ಕ್ಯಾಂಪಸ್ ಯೋಜನೆಯ ಮೂಲಕ ಯುವಜನತೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್, ಬಿಗ್ ಡೇಟಾ ಹಾಗೂ ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್‌ನಲ್ಲಿ ತರಬೇತಿ ನೀಡಲಿದೆ. ಪ್ರಸ್ತುತ ಈ ಕಾರ್ಯಕ್ರಮವು ಭಾರತದ 10 ರಾಜ್ಯಗಳಿಗೆ ವಿಸ್ತರಿಸಿದ್ದು, 2025ರ ವೇಳೆಗೆ ದೇಶಾದ್ಯಂತ 20,000 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ.

ಇದನ್ನೂ ಓದಿ: Samsung: ಆಕರ್ಷಕ ವಿನ್ಯಾಸ, ಎಐ ಫೀಚರ್ ಗಳು, ಉತ್ತಮ ಬಾಳಿಕೆ ಮತ್ತು ಓಐಎಸ್ ಆಧರಿತ ನೋ ಶೇಕ್ ಕ್ಯಾಮೆರಾ ಹೊಂದಿರುವ ಗ್ಯಾಲಕ್ಸಿ ಎ17 5ಜಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್

ಈ ವರ್ಷ ತರಬೇತಿ ಪಡೆಯಲಿರುವ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ. 25ರಷ್ಟು ಅಂದರೆ 5,000 ವಿದ್ಯಾರ್ಥಿಗಳು ತಮಿಳುನಾಡಿನವರೇ ಆಗಿದ್ದಾರೆ. ಮೊದಲ ಹಂತದಲ್ಲಿ ಮದ್ರಾಸ್ ವಿಶ್ವವಿದ್ಯಾ ಲಯದ 500 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು, ನಂತರ ಅದರ ಸಂಯೋಜಿತ ಕಾಲೇಜು ಗಳ 1,500 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು.

ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ 2022ರಲ್ಲಿ ಭಾರತದಲ್ಲಿ ಪ್ರಾರಂಭವಾಗಿದ್ದು, 2024ರ ವೇಳೆಗೆ 6,500 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. 2025ರ ಅಂತ್ಯಕ್ಕೆ ಒಟ್ಟು 26,500 ವಿದ್ಯಾರ್ಥಿ ಗಳಿಗೆ ತರಬೇತಿ ನೀಡುವ ಗುರಿ ಇದೆ. ಸ್ಯಾಮ್‌ಸಂಗ್ ಸಂಸ್ಥೆಯು ಈ ಯೋಜನೆಗಾಗಿ ಯುವಜನತೆಗೆ ತರಬೇತಿ ನೀಡಲು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ಅಧೀನದ ಎಲೆಕ್ಟ್ರಾನಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ಆಫ್ ಇಂಡಿಯಾ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ.

ಈ ಯೋಜನೆಯಡಿ ರಾಷ್ಟ್ರಮಟ್ಟದಲ್ಲಿ ಶೇ. 44ರಷ್ಟು ಮಹಿಳಾ ವಿದ್ಯಾರ್ಥಿನಿಯರು ಭಾಗವಹಿಸು ತ್ತಿರುವುದು ಗಮನಾರ್ಹ. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ತಾಂತ್ರಿಕ ಶಿಕ್ಷಣದ ಜೊತೆಗೆ, ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ಸ್ ತರಬೇತಿ ಮತ್ತು ಉದ್ಯೋಗಾವಕಾಶದ ಬೆಂಬಲವನ್ನೂ ನೀಡಲಾಗುತ್ತಿದೆ.

ಸ್ಯಾಮ್‌ಸಂಗ್‌ನ 'ಸಾಲ್ವ್ ಫಾರ್ ಟುಮಾರೋ' ಮತ್ತು 'ಸ್ಯಾಮ್‌ಸಂಗ್ ದೋಸ್ತ್' ಯೋಜನೆಗಳ ಜೊತೆಗೆ, ಈ ಇನ್ನೋವೇಶನ್ ಕ್ಯಾಂಪಸ್ ಭಾರತದ ಯುವಜನತೆಯನ್ನು ತಾಂತ್ರಿಕವಾಗಿ ಸಶಕ್ತರನ್ನಾ ಗಿಸಲು ಮತ್ತು ಉದ್ಯೋಗಕ್ಕೆ ಸಿದ್ಧಗೊಳಿಸಲು ಸಹಕಾರಿಯಾಗಲಿದೆ.