ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat: ವಿಶ್ವವಾಣಿ ಕ್ಲಬ್‌ಹೌಸ್ ಮಹತ್ವದ ಸಾಧನೆ: ವಿಶ್ವೇಶ್ವರ ಭಟ್

ಕ್ಷಣಿಕ ಮನರಂಜನೆ ಮತ್ತು ಒಂದು ನಿಮಿಷದ ರೀಲ್ಸ್‌ಗಳ ಪ್ರಭಾವ ಹೆಚ್ಚುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ, ಜ್ಞಾನ ಪೂರ್ಣ ಚರ್ಚೆಗಳಿಗೆ ವೇದಿಕೆಯಾಗಿರುವ ವಿಶ್ವವಾಣಿ ಕ್ಲಬ್‌ಹೌಸ್ 1500 ಸಂಚಿಕೆ (1500 Episodes) ಪೂರೈಸಿರುವುದು ಮಹತ್ವದ ಸಾಧನೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್(Vishweshwar Bhat) ಹೇಳಿದರು.

ವಿಶ್ವವಾಣಿ ಕ್ಲಬ್‌ಹೌಸ್ ಮಹತ್ವದ ಸಾಧನೆ: ವಿಶ್ವೇಶ್ವರ ಭಟ್

-

Profile
Ashok Nayak Oct 17, 2026 9:04 AM

ಮಾತಿನ ಮಂಟಪ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಫಾಲೋವರ್ಸ್

ಬೆಂಗಳೂರು: ಕ್ಷಣಿಕ ಮನರಂಜನೆ ಮತ್ತು ಒಂದು ನಿಮಿಷದ ರೀಲ್ಸ್‌ಗಳ ಪ್ರಭಾವ ಹೆಚ್ಚುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ, ಜ್ಞಾನ ಪೂರ್ಣ ಚರ್ಚೆಗಳಿಗೆ ವೇದಿಕೆಯಾಗಿರುವ ವಿಶ್ವವಾಣಿ ಕ್ಲಬ್‌ಹೌಸ್ 1500 ಸಂಚಿಕೆ (1500 Episodes) ಪೂರೈಸಿರುವುದು ಮಹತ್ವದ ಸಾಧನೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್(Vishweshwar Bhat) ಹೇಳಿದರು.

ವಿಶ್ವವಾಣಿ ಕ್ಲಬ್‌ಹೌಸ್‌(Vishwavani Club House)ನ 1500ನೇ ಸಂಚಿಕೆಯ ಸಂದರ್ಭದಲ್ಲಿ ಮಾತನಾಡಿ, ವಿಶ್ವವಾಣಿ ಕ್ಲಬ್‌ ಹೌಸ್‌ನ ಸುಮಾರು 1500 ಸಂಚಿಕೆಗಳಲ್ಲಿ ಚರ್ಚಿಸಲಾದ ವೈವಿಧ್ಯಮಯ ವಿಷಯಗಳ ಕಥೆ ಮತ್ತು ವಿಚಾರಗಳ ಅದ್ಭುತ ಭಂಡಾರವಾಗಿ ಪರಿಗಣಿಸ ಬಹುದು. ವಿವಿಧ ಕ್ಷೇತ್ರಗಳ ಅನೇಕ ವಿಷಯಗಳು ಚರ್ಚೆಯಾಗಿದ್ದು, ಅವು ಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿದರೆ ಭವಿಷ್ಯದ ಬರಹಗಾರರು ಮತ್ತು ಆಸಕ್ತರಿಗೆ ಅನುಕೂಲಕರವಾಗಬಹುದು. ಕಾರ್ಯ ಕ್ರಮದ ಯಶಸ್ಸಿನಲ್ಲಿ ಶ್ರೋತೃಗಳ ಪಾತ್ರವೂ ಮಹತ್ವದ್ದಾಗಿದೆ.

ಮೊದಲ ಸಂಚಿಕೆಯಿಂದ ಇಂದಿನವರೆಗೂ ನಿರಂತರವಾಗಿ ಭಾಗವಹಿಸುತ್ತಿರುವ ನೂರಾರು ಶ್ರೋತೃಗಳು, ಕಾರ್ಯಕ್ರಮ ನಡೆಯದಿದ್ದಾಗ ವಿಚಾರಿಸುವುದು ಹಾಗೂ ತಮ್ಮ ಆಸಕ್ತಿ ವ್ಯಕ್ತಪಡಿಸು ವುದು ವೇದಿಕೆಯ ಮೇಲಿನ ಅವರ ಪ್ರೀತಿಯನ್ನು ತೋರಿಸುತ್ತದೆ ಎಂದರು.

ಇದನ್ನೂ ಓದಿ: Vishwavani Club House Completes 5 Years: ಮಾತಿನ ಮಂಟಪ ವಿಶ್ವವಾಣಿ ಕ್ಲಬ್‌ʼಹೌಸ್ʼಗೆ 5 ವರ್ಷ

ವಿಶ್ವವಾಣಿ ಕ್ಲಬ್‌ಹೌಸ್ ಜ್ಞಾನಲೋಕ: ಕರೋನಾ ನಂತರ ಅನೇಕ ಕ್ಲಬ್‌ಹೌಸ್ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದರೂ, ವಿಶ್ವವಾಣಿ ಕ್ಲಬ್‌ಹೌಸ್ ಅನ್ನು ಸ್ವತಂತ್ರ ವೇದಿಕೆಯಾಗಿ ಮುಂದುವರಿಸಿ ಕೊಂಡು ಬಂದಿರುವುದು ಗಮನಾರ್ಹ. ಕಾರ್ಯಕ್ರಮಕ್ಕೆ ಎಷ್ಟು ಮಂದಿ ಸೇರುತ್ತಾರೆ ಎಂಬುದಕ್ಕಿಂತ, ಭಾಗವಹಿಸುವವರು ಎಷ್ಟು ಆಸಕ್ತಿಯಿಂದ ವಿಷಯ ಆಲಿಸುತ್ತಾರೆ ಎಂಬುದು ಮುಖ್ಯ. ಯಾವುದೇ ವಾಣಿಜ್ಯ ಲಾಭದ ಉದ್ದೇಶವಿಲ್ಲ. ಉತ್ತಮ ವಿಷಯಗಳ ಚರ್ಚೆ ಮತ್ತು ಬೌದ್ಧಿಕ ಚಟುವಟಿಕೆ ನಿರಂತರವಾಗಿ ನಡೆಯಬೇಕು ಎಂಬ ಆಶಯವಿದೆ. ವಿಶ್ವವಾಣಿ ಕ್ಲಬ್‌ಹೌಸ್ ಅನ್ನು ಸಂಸ್ಥೆಯ ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿ ಗುರುತಿಸಲಾಗುವುದು. ಗುಣಮಟ್ಟದ ಚರ್ಚೆ ಮತ್ತು ಜ್ಞಾನ ಹಂಚಿಕೆಗೆ ಆದ್ಯತೆ ನೀಡುವ ಮೂಲಕ ಈ ವೇದಿಕೆಯನ್ನು ಮುಂದೆಯೂ ಮುಂದುವರಿಸಬೇಕು ಎಂದು ತಿಳಿಸಿದರು.

1500th club house ok

ಕೇಳುಗರ ಪಾಲು ದೊಡ್ಡದು: ಕ್ಲಬ್ ಹೌಸ್‌ನ ವಿಶೇಷತೆ ಅದರ ಸಂವಾದದ ಸ್ವರೂಪ ದಲ್ಲಿದೆ. ಇಲ್ಲಿ ಮಾತನಾಡುವವರ ವಿಚಾರಗಳಿಗೆ ಕೇಳುಗರು ತಕ್ಷಣವೇ ಪ್ರತಿಕ್ರಿಯಿಸಬಹುದು. ಒಪ್ಪಿಗೆ, ಭಿನ್ನಾಭಿ ಪ್ರಾಯ ಹಾಗೂ ಪ್ರಶ್ನೆಗಳ ಮೂಲಕ ಚರ್ಚೆ ಮುಂದುವರಿಯುತ್ತದೆ. ಹೀಗಾಗಿ ಇದು ಏಕಮುಖ ಭಾಷಣಕ್ಕಿಂತ ಭಿನ್ನವಾದ ಆಧುನಿಕ ವಿದ್ಯುನ್ಮಾನ ಸಂವಾದದ ವೇದಿಕೆಯಾಗಿದೆ. ಇಂದಿನ ವೇಗದ ಜೀವನದಲ್ಲಿ ತಾಳ್ಮೆಯಿಂದ ಕೇಳುವ ಗುಣ ಕಡಿಮೆಯಾಗುತ್ತಿದೆ.

ಮತ್ತೊಬ್ಬರು ಮಾತನಾಡುವಾಗ ಅವರ ಮಾತು ಸಂಪೂರ್ಣವಾಗಿ ಆಲಿಸುವ ಬದಲು, ಅದಕ್ಕೆ ಹೇಗೆ ಉತ್ತರಿಸಬೇಕು ಎಂಬುದರ ಬಗ್ಗೆಯೇ ಅನೇಕರು ಯೋಚಿಸುತ್ತಾರೆ. ಇಂತಹ ಸಂದರ್ಭದಲ್ಲಿ ಒಂದರಿಂದ ಒಂದೂವರೆ ಗಂಟೆಯವರೆಗೆ ವಿಚಾರಪೂರ್ಣ ಸಂವಾದ ವನ್ನು ತಾಳ್ಮೆಯಿಂದ ಆಲಿಸುವ ಪ್ರೌಢ ಕೇಳುಗರನ್ನು ಹೊಂದಿರುವುದು ವಿಶ್ವವಾಣಿ ಕ್ಲಬ್‌ಹೌಸ್ ದೊಡ್ಡ ಸಾಧನೆ ಎಂದು ವಿಶ್ವವಾಣಿ ಅಂಕಣಕಾರ ಶಿಶಿರ ಹೆಗಡೆ(Shishir Hegde) ಅವರು ನುಡಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನ 1500ನೇ ಸಂಚಿಕೆಯ ಸಂವಾದ ಕಾರ್ಯಕ್ರಮದಲ್ಲಿ ವಿಶ್ವವಾಣಿ ಅಂಕಣಕಾರ ಹಾಗೂ ಲೇಖಕ ಕಿರಣ್ ಉಪಾಧ್ಯಾಯ(Kiran Upadhyay), ವಿಭಾಕರ್, ಪ್ರಸಾದ್, ಹರ್ಷಾ, ಮಲ್ಲೇಶ್, ನಯನಾ, ರವೀಂದ್ರ, ಜ್ಯೋತಿ ಸೇರಿದಂತೆ ಕ್ಲಬ್‌ಹೌಸ್ ಶ್ರೋತೃಗಳು ಇದ್ದರು.

ಅನೇಕರ ಬದುಕಿಗೆ ಧ್ವನಿ ವಿಶ್ವವಾಣಿ ಕ್ಲಬ್‌ಹೌಸ್

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ 1500 ಕಾರ್ಯಕ್ರಮಗಳ ಮೈಲಿಗಲ್ಲು ತಲುಪಿದ ಬಳಿಕ ಕಾರ್ಯಕ್ರಮ ಗಳನ್ನು ಮುಂದುವರಿಸ ಬೇಕೇ ಅಥವಾ ನಿಲ್ಲಿಸಬೇಕೇ ಎಂಬ ಚಿಂತನೆ ಮೂಡಿತ್ತು. ಆದರೆ, ಕ್ಲಬ್‌ಹೌಸ್ ಮೂಲಕ ಅನೇಕ ಜನರ ಬದುಕಿನ ಕಥೆಗಳನ್ನು ಸಮಾಜಕ್ಕೆ ಪರಿಚಯಿಸುವ ಅವಕಾಶ ವಿರುವುದರಿಂದ, ಈ ಪ್ರಯತ್ನ ಇನ್ನಷ್ಟು ಉತ್ಸಾಹದಿಂದ ಮುಂದುವರಿಸಬೇಕು ಎಂಬ ಆಶಯ ಮೂಡಿದೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೈದ್ಯೆ ಪುಷ್ಪಾವತಿ ಮರಿಸ್ವಾಮಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ, ಕಾಕ್ಲಿಯರ್ ಇಂಪ್ಲಾಂಟ್ ಚಿಕಿತ್ಸೆ ಪಡೆದ ಮಕ್ಕಳು ಹಾಗೂ ಹಿರಿಯರು, ಸ್ಪೀಚ್ ಥೆರಪಿ ಪಡೆಯುತ್ತಿರುವವರು ಮತ್ತು ಚಿಕಿತ್ಸೆಯ ನೆರವಿನಿಂದ ಸಮಾಜದ ಮುಖ್ಯವಾಹಿನಿಗೆ ಬಂದವರ ಬದುಕಿನ ಕಥೆಗಳನ್ನು ಕ್ಲಬ್‌ಹೌಸ್‌ನಲ್ಲಿ ಹಂಚಿಕೊಳ್ಳುವ ಸಾಧ್ಯತೆಯ ಬಗ್ಗೆ ಚರ್ಚಿಸಲಾಯಿತು ಎಂದು ನಿರೂಪಕಿ ಹಾಗೂ ಅಂಕಣಗಾರ್ತಿ, ಲೇಖಕಿ ರೂಪಾ ಗುರುರಾಜ್(Roopa Gururaj) ಅವರು ಕೆಲ ನಿದರ್ಶನಗಳನ್ನು ತಿಳಿಸಿದರು.

image

ವಿಶ್ವವಾಣಿ ಕ್ಲಬ್‌ಹೌಸ್‌ನ 1500 ಸಂಚಿಕೆಗಳ ಯಶಸ್ಸಿನಲ್ಲಿ ಕೇಳುಗರ ಪಾಲು ದೊಡ್ಡರು. ಕೇವಲ ಭಾಷಣಕ್ಕೆ ಸೀಮಿತವಾಗದೆ, ವಿಚಾರಗಳ ವಿನಿಮಯಕ್ಕೆ ಅವಕಾಶ ಕಲ್ಪಿಸುವ ಆಧುನಿಕ ವಿದ್ಯುನ್ಮಾನ ಸಂವಾದ ವೇದಿಕೆಯಾಗಿ ಬೆಳೆದಿದೆ. ಈ ಸಾಧನೆ ಸಾವಿರಾರು ಗಂಟೆಗಳ ವಿಚಾರ ವಿನಿಮಯ, ಹೊಸ ಆಲೋಚನೆಗಳ ಹುಟ್ಟು ಹಾಗೂ ವಿಭಿನ್ನ ದೃಷ್ಟಿಕೋನಗಳಿಂದ ವಿಷಯ ಅರ್ಥ ಮಾಡಿಕೊಳ್ಳುವ ಅವಕಾಶ ಒದಗಿಸಿದೆ.

-ಶಿಶಿರ ಹೆಗಡೆ, ವಿಶ್ವವಾಣಿ ಅಂಕಣಕಾರ