ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಉಚಿತ ತಪಾಸಣೆಯೊಂದಿಗೆ ಡೆಂಟಿಸ್ಟ್‌ ಬೆಂಬಲಿತ ಅತಿ ದೊಡ್ಡ ಸ್ಮೈಲ್‌ ಸ್ಪರ್ಧೆ ‘ ಸ್ಮೈಲಥಾನ್‌’

ಸ್ಮೈಲಥಾನ್‌ ದಂತ ಆರೋಗ್ಯದ ಕಡೆಗೆ ಜಾಗೃತಿಗೂ ಮೀರಿ ಸೂಕ್ತವಾದ ಹೆಜ್ಜೆಯಿಡುವಲ್ಲಿ ಉತ್ತೇಜಿಸು ತ್ತದೆ. ಈಗಿನ ಯುವ ಜನತೆ ವೆಲ್‌ನೆಸ್‌ , ಬ್ಯೂಟಿಗೆ ಹೆಚ್ಚು ಒತ್ತು ನೀಡುತ್ತಾದಂತ ತಪಾಸಣೆಯನ್ನು ನಿರ್ಲಕ್ಷ್ಯಿಸಿ ಆರೋಗ್ಯ ಸಮಸ್ಯೆಗೆ ಗುರಿಯಾಗುತ್ತಾರೆ. ನಮ್ಮ ಸ್ಮೈಲ್‌ ಸ್ಪರ್ಧೆಯು ಪ್ರತಿಯೊಬ್ಬ ಸ್ಪರ್ಧಿಗೂ ಉಚಿತ ತಪಾಸಣೆಯನ್ನು ಕಡ್ಡಾಯಗೊಳಿಸಿ ಮುಂಚಿತ ಸಮಸ್ಯೆ ಪತ್ತೆ, ರಾಜ್ಯಾದ್ಯಂತ ಜಾಗೃತಿ ಹಾಗೂ ಜೀವನ ಪರ್ಯಂತ ಆರೋಗ್ಯವಂತ ಅಭ್ಯಾಸವನ್ನು ಅಳವಡಿಸುವ ಉದ್ದೇಶ ಹೊಂದಿದೆ

ಡೆಂಟಿಸ್ಟ್‌ ಬೆಂಬಲಿತ ಅತಿ ದೊಡ್ಡ ಸ್ಮೈಲ್‌ ಸ್ಪರ್ಧೆ ‘ ಸ್ಮೈಲಥಾನ್‌’

-

Ashok Nayak
Ashok Nayak Feb 1, 2026 11:24 AM

ಐಡಿಎ ಬೆಂಬಲಿತ ಈ ಕಾರ್ಯಕ್ರಮವು 6 ಲಕ್ಷ ನಗದು ಬಹುಮಾನ ಮತ್ತು ಮುಂಚಿತ ರೋಗ ಪತ್ತೆಯನ್ನು ಬೆಂಬಲಿಸುತ್ತದೆ.

ಬೆಂಗಳೂರು, 30 ಜನವರಿ 2026 : ದಂತ ವೈದ್ಯಕೀಯ ವೃತ್ತಿಪರರು ಇಂಡಿಯನ್ ಡೆಂಟಲ್‌ ಅಸೋಸಿಯೇಶನ್‌ (ಐಡಿಎ), ಕರ್ನಾಟಕ ಸರ್ಕಾರ, ಇಂಡಿಯನ್‌ ಪ್ರೊಸ್ತೊಡೊಂಟಿಕ್‌ ಸೊಸೈಟಿ (ಐಪಿಎಸ್‌) ಮತ್ತು ರೋಟರಿ ಬೆಂಗಳೂರು ಸೋಶಿಯಲ್‌ ಕ್ಲಬ್‌ ಜೊತೆಗೂಡಿ ರಾಜ್ಯಾದ್ಯಂತ ದಂತ ಆರೋಗ್ಯದ ಜಾಗೃತಿಗಾಗಿ ‘ಸ್ಮೈಲಥಾನ್‌’ ಸ್ಪರ್ಧೆಯನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ದಂತ ಆರೋಗ್ಯ ಜಾಗೃತಿ ಮತ್ತು ಕರ್ನಾಟಕದ ಬಹುದೊಡ್ಡ ಸ್ಮೈಲ್‌ ಸ್ಪರ್ಧೆಯನ್ನು ಒಳಗೊಂಡಿದ್ದು ಐಡಿಎ ಅನುಮೋದಿತ ಕ್ಲಿನಿಕ್‌ಗಳಲ್ಲಿ ಭಾಗವಹಿಸುವ 1 ಲಕ್ಷಕ್ಕೂ ಅಧಿಕ ಸ್ಪರ್ಧಿಗಳಿಗೆ ಕಡ್ಡಾಯ ವಾಗಿ ಉಚಿತ ತಪಾಸಣೆಯನ್ನು ಆಯೋಜಿಸಿದೆ.

ಸ್ಮೈಲಥಾನ್‌ ಕಾರ್ಯಕ್ರಮವು ನಿತ್ಯದ ಸಂಭಾಷಣೆಯಲ್ಲಿ ದಂತ ಆರೋಗ್ಯವನ್ನು ಸಾಮಾನ್ಯ ಚರ್ಚೆಯನ್ನಾಗಿಸುವ ಮತ್ತು ಕರ್ನಾಟಕದಾದ್ಯಂತ ಜನರು ಆರೋಗ್ಯವಂತ ನಗುವಿನೊಂದಿಗೆ ಉತ್ತಮ ಜೀವನ ನಡೆಸುವಂತೆ ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.

ಕಾರ್ಯಕ್ರಮದ ಕುರಿತು ಮಾತನಾಡಿದ ಸ್ಮೈಲಥಾನ್‌ ಆಯೋಜನೆಯ ಚೇರ್ಮನ್‌ ಡಾ.ಅಕ್ಷಯ್‌ ಎಮ್‌ ಶೆಟ್ಟಿ “ ಸ್ಮೈಲಥಾನ್‌ ದಂತ ಆರೋಗ್ಯದ ಕಡೆಗೆ ಜಾಗೃತಿಗೂ ಮೀರಿ ಸೂಕ್ತವಾದ ಹೆಜ್ಜೆಯಿಡು ವಲ್ಲಿ ಉತ್ತೇಜಿಸುತ್ತದೆ. ಈಗಿನ ಯುವ ಜನತೆ ವೆಲ್‌ನೆಸ್‌ , ಬ್ಯೂಟಿಗೆ ಹೆಚ್ಚು ಒತ್ತು ನೀಡುತ್ತಾ ದಂತ ತಪಾಸಣೆಯನ್ನು ನಿರ್ಲಕ್ಷ್ಯಿಸಿ ಆರೋಗ್ಯ ಸಮಸ್ಯೆಗೆ ಗುರಿಯಾಗುತ್ತಾರೆ. ನಮ್ಮ ಸ್ಮೈಲ್‌ ಸ್ಪರ್ಧೆಯು ಪ್ರತಿಯೊಬ್ಬ ಸ್ಪರ್ಧಿಗೂ ಉಚಿತ ತಪಾಸಣೆಯನ್ನು ಕಡ್ಡಾಯಗೊಳಿಸಿ ಮುಂಚಿತ ಸಮಸ್ಯೆ ಪತ್ತೆ, ರಾಜ್ಯಾದ್ಯಂತ ಜಾಗೃತಿ ಹಾಗೂ ಜೀವನ ಪರ್ಯಂತ ಆರೋಗ್ಯವಂತ ಅಭ್ಯಾಸವನ್ನು ಅಳವಡಿಸುವ ಉದ್ದೇಶ ಹೊಂದಿದೆ” ಎಂದರು.

ಇದನ್ನೂ ಓದಿ: Bangalore News: ಜ.29ರಿಂದ ಫೆಬ್ರವರಿ 1ವರೆಗೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಬೃಹತ್ ಸಮಾವೇಶ

ನೂತನ ರಾಷ್ಟ್ರೀಯ ಮಾಹಿತಿ ಪ್ರಕಾರ ಶೇ. 90 ರಷ್ಟು ಭಾರತೀಯರು ದಂತ ಸಮಸ್ಯೆಯಿಂದ ಬಳಲುತ್ತಿದ್ದು , ಶೇ. 9 ರಷ್ಟು ಜನ ಮಾತ್ರ ನಿಯಮಿತವಾಗಿ ದಂತ ವೈದ್ಯರನ್ನು ಭೇಟಿಯಾಗುತ್ತಾರೆ. ಇದು ಜಾಗೃತಿಯೆಡೆಗಿನ ಅಂತರವನ್ನು ತೋರಿಸುತ್ತದೆ. ಅದರಲ್ಲೂ 15-30 ವಯಸ್ಸಿನ ಜನರಲ್ಲಿ ಈ ಬಗ್ಗೆ ಜಾಗೃತಿ ಕಡಿಮೆಯಿದೆ. ಪೆರಿಯೊಡೊಂಟಿಟಿಸ್‌ ಅಂತಹ ಸಮಸ್ಯೆಯು ಬ್ಯಾಕ್ಟೀರಿಯಾಗಳು ರಕ್ತಕ್ಕೆ ಸೇರಲು ಅನುವು ಮಾಡುತ್ತವೆ ಇದು ಡಯಾಬಿಟಿಸ್‌, ಕಾರ್ಡಿಯೊವಾಸ್ಕ್ಯೂಲರ್‍‌ ಸಮಸ್ಯೆ, ಆಸ್ಟಿಯೊಪೊರೊಸಿಸ್‌, ಇನ್‌ಫ್ಲಮೆಟರಿ ಡಿಸಾರ್ಡರ್‍‌ ಅಪಾಯವನ್ನು ಹೆಚ್ಚಿಸುತ್ತದೆ. ಕಳಪೆ ದಂತ ನೈರ್ಮಲ್ಯವು ಆತ್ಮವಿಶ್ವಾಸ, ಶೈಕ್ಷಣಿಕ ಯಶಸ್ಸು ಮತ್ತು ಸಾಮಾಜಿಕ ವಿಶ್ವಾಸವನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ

ಈ ಸ್ಪರ್ಧೆಯು 18-29 ವರ್ಷದ ಮಹಿಳೆ ಮತ್ತು ಪುರುಷರನ್ನು, 30-45 ವಯಸ್ಸಿನ ಮಹಿಳೆಯರನ್ನು ಸ್ವಾಗತಿಸುತ್ತದೆ. ಸ್ಪರ್ಧಿಗಳು ಸರಳವಾದ ಬಹು ಹಂತದ ಪ್ರಕ್ರಿಯೆಯನ್ನು ಅನುಸರಿಸಬೇಕಾಗಿದ್ದು, ಮೊದಲು ಅಧಿಕೃತ ವೆಬ್‌ಸೈಟ್‌ ಮೂಲಕ ಉಚಿತವಾಗಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ನಂತರ ಪಾಲುದಾರ ಕ್ಲಿನಿಕ್‌ಗಳಲ್ಲಿ ಕಡ್ಡಾಯ ಉಚಿತ ದಂತ ತಪಾಸಣೆ ,ಸೋಶಿಯಲ್‌ ಮೀಡಿಯಾ ದಲ್ಲಿ ಫೋಟೊ ಅಪ್‌ಲೋಡ್‌ ಮತ್ತು ಪಬ್ಲಿಕ್‌ ವೋಟಿಂಗ್‌ ಪ್ರಕ್ರಿಯೆ ನಡೆಯುತ್ತವೆ. ಟಾಪ್‌ 500 ಸ್ಪರ್ಧಿಗಳ ಆಯ್ಕೆಯೊಂದಿಗೆ ಫ್ರಿ ಫಿನಾಲೆ ಮತ್ತು ಟಾಪ್‌ 32 ಸ್ಪರ್ಧಿಗಳು ಮಾರ್ಚ್ 1, 2026ರಂದು ಫಿನಾಲೆಗೆ ಆಯ್ಕೆಯಾಗುತ್ತಾರೆ. ಫಿನಾಲೆ ಬೆಂಗಳೂರಿನ ಪ್ಯಾಲೆಸ್‌ ಗ್ರೌಂಡ್‌ನಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ 6 ಲಕ್ಷದವರೆಗಿನ ನಗದು ಬಹುಮಾನಗಳು, ಗ್ರೂಮಿಂಗ್ ಕಿಟ್‌ಗಳು ಮತ್ತು ದಂತ ಆರೋಗ್ಯ ಪ್ಯಾಕೆಜ್‌ಗಳನ್ನು ಗೆಲ್ಲಬಹುದಾಗಿದೆ.

ಡೆಂಟಲ್‌ ಕ್ಲಿನಿಕ್‌ಗಳನ್ನು ಮೀರಿ ದಂತ ಆರೋಗ್ಯದ ಸಂಭಾಷಣೆಯನ್ನು ನೆರೆಹೊರೆ, ಕೆಲಸದ ಸ್ಥಳ ಮತ್ತು ಡಿಜಿಟಲ್‌ ವೇದಿಕೆಗಳಿಗೆ ವಿಸ್ತರಿಸುವ ಜೊತೆಗೆ ಈ ಕಾರ್ಯಕ್ರಮವು ಆಗಾಗ್ಗೆ ಕಡೆಗಣಿಸ ಲ್ಪಡುವ ದಂತ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮದ ನಡುವಿನ ಸಂಪರ್ಕವನ್ನು ಒತ್ತಿ ಹೇಳುತ್ತದೆ.

ರೋಟರಿ ಬೆಂಗಳೂರು ಸೋಶಿಯಲ್ ಕ್ಲಬ್ ಈ ಉಪಕ್ರಮವನ್ನು ಬಲಿಷ್ಠ ಸಮುದಾಯ ಸಂಪರ್ಕ ಮತ್ತು ಜಾಲಗಳೊಂದಿಗೆ ಬಲಪಡಿಸುತ್ತದೆ, ಕಾರ್ಯಕ್ರಮದ ಆದಾಯದ ಭಾಗವನ್ನು ಸಮಾಜಕ್ಕೆ ಮರಳಿ ನೀಡುವ ಉದ್ದೇಶವನ್ನು ಹೊಂದಿದೆ.