Star Fashion: ಮೆನ್ಸ್ ಯೂನಿಕ್ ಫ್ಯಾಷನ್ ಟಾಪ್ ಲಿಸ್ಟ್‌ಗೆ ಸೇರಿದ ಸುದೀಪ್ ಧರಿಸಿದ್ದ ಬಿಗ್‌ಬಾಸ್ ಫಿನಾಲೆ ಗ್ರ್ಯಾಂಡ್ ಡಿಸೈನರ್‌ವೇರ್ಸ್!
Star Fashion: ಬಿಗ್‌ಬಾಸ್ ರಿಯಾಲಿಟಿ ಶೋನ ಫಿನಾಲೆಯಲ್ಲಿ ನಟ ಸುದೀಪ್ ಧರಿಸಿದ್ದ, ಕೊರಿಯನ್ ಶೈಲಿಯ ಸ್ಪೆಷಲ್ ಡಿಸೈನರ್‌ವೇರ್‌ಗಳು, ಮೆನ್ಸ್ ಯೂನಿಕ್ ಫ್ಯಾಷನ್ ಟಾಪ್ ಲಿಸ್ಟ್‌ಗೆ ಸೇರಿವೆ. ಹಾಗಾದಲ್ಲಿ ಈ ಔಟ್‌ಫಿಟ್‌ಗಳ ವಿಶೇಷತೆಯೇನು? ಬೆಲೆ ಎಷ್ಟು? ಈ ಕುರಿತಂತೆ ಡಿಸೈನರ್ ಭರತ್ ಸಾಗರ್ ವಿವರಿಸಿದ್ದಾರೆ.

ಚಿತ್ರಕೃಪೆ: ಕಲರ್ಸ್

| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋನ ರಿಯಾಲಿಟಿ ಶೋನಲ್ಲಿ, ನಟ ಸುದೀಪ್ (Actor Sudeep) ಅವರು ಧರಿಸಿದ್ದ, ಕೊರಿಯನ್ ಶೈಲಿಯ ಗ್ರ್ಯಾಂಡ್ ಡಿಸೈನರ್‌ವೇರ್ ಔಟ್‌ಫಿಟ್ಸ್, ರಾತ್ರಿ ಬೆಳಗಾಗುವುದರೊಳಗೆ ಟ್ರೆಂಡ್ ಸೆಟ್ ಮಾಡಿದೆ. ಮೆನ್ಸ್ ಯೂನಿಕ್ ಫ್ಯಾಷನ್ ಟಾಪ್ ಲಿಸ್ಟ್‌ಗೆ (Star Fashion) ಸೇರಿಕೊಂಡಿವೆ. ಹೌದು, ಎಂದಿನಂತೆ, ಸುದೀಪ್‌ಗೆ ಬಿಗ್‌ಬಾಸ್‌ಗಾಗಿ ಅತ್ಯಾಕರ್ಷಕ ಔಟ್‌ಫಿಟ್ ವಿನ್ಯಾಸಗೊಳಿಸುವ ಸೆಲೆಬ್ರೆಟಿ ಡಿಸೈನರ್ ಭರತ್ ಸಾಗರ್ ಕೈ ಚಳಕದಲ್ಲಿ ಈ ಡಿಸೈನರ್‌ವೇರ್‌ಗಳು ಮೂಡಿಬಂದಿವೆ.

ಬಟರ್ ಫ್ಲೈ ಡಿಸೈನರ್‌ವೇರ್ಸ್ ವಿಶೇಷತೆ
ಫಿನಾಲೆಯ ಮೊದಲ ದಿನ ಶನಿವಾರ ಸುದೀಪ್ ಧರಿಸಿದ್ದ, ಕೊರಿಯನ್ ಶೈಲಿಯ ಜಗಮಗಿಸುವ ಹಾಫ್ ವೈಟ್‌ನ ಡಿಸೈನರ್ ಕಾಲರ್ ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟನ್ನು, ಕಂಪ್ಲೀಟ್ ಗ್ಲಾಸ್ ಬೀಡ್‌ಗಳಿಂದ ಹ್ಯಾಂಡ್ ಎಂಬ್ರಾಯ್ಡರಿ ವರ್ಕ್ ಮಾಡಿ ಸಿಂಗರಿಸಲಾಗಿದೆ. ಈ ಡಿಸೈನ್‌ಗಾಗಿ ಸುಮಾರು 50 ಸಾವಿರಕ್ಕೂ ಹೆಚ್ಚು, ಟೈನಿ ಗ್ಲಾಸ್ ಪಾಟ್ ಬೀಡ್ಸ್, ಸಿಕ್ವೀನ್ಸ್, ಮಲ್ಟಿ ಕಲರ್ಡ್ ಸ್ಟೋನ್ಸ್ ಬಳಸಲಾಗಿದೆ. ಕಲರ್‌ಫುಲ್ ಬಟರ್ ಫ್ಲೈ ಡಿಸೈನ್ ಹೊಂದಿರುವ ಈ ಔಟ್‌ಫಿಟ್‌ನ ಬೆಲೆಯೇ ಸರಿಸುಮಾರು 1,75,000 ರೂ.ಗಳಾಗಬಹುದು ಎನ್ನುತ್ತಾರೆ ಡಿಸೈನರ್.

ಕೊರಿಯನ್ ಶೈಲಿಯ ಸೂಟ್
ಇನ್ನು, ಫಿನಾಲೆಯ ಭಾನುವಾರದಂದು ಸುದೀಪ್, ಧರಿಸಿದ ಹಾಫ್ ವೈಟ್ ಶೇಡ್‌ನ ಕೊರಿಯನ್ ಸೂಟ್‌ನ ಹೈ ವೀ ನೆಕ್ ಟೀ ಶರ್ಟ್, ಕ್ರಾಪ್ಡ್ ಜಾಕೆಟ್, ಪ್ಯಾಂಟ್ ಕಂಪ್ಲೀಟ್ ಸೆಲ್ಫ್ ಸಿಕ್ವೀನ್ಸ್, ಗ್ಲಾಸ್ ಬೀಡ್ಸ್, ಕಟ್ದಾನಾ ಹ್ಯಾಂಡ್ ಎಂಬ್ರಾಯ್ಡರಿ ಹ್ಯಾಂಡ್ ವರ್ಕ್‌ನಿಂದ ವಿನ್ಯಾಸಗೊಳಿಸಲಾಗಿದೆ. ಇದರ ಬೆಲೆಯೂ ಸರಿ ಸುಮಾರು 1,90,200 ರೂ.ಗಳಾಗಬಹುದು ಎನ್ನುತ್ತಾರೆ ಭರತ್ ಸಾಗರ್.
ಈ ಸುದ್ದಿಯನ್ನೂ ಓದಿ | Bengaluru News: ವಿದ್ಯಾರ್ಥಿಗಳ ಸೃಜನಶೀಲ ಕಲಿಕೆಗೆ ಸಾಕ್ಷಿಯಾದ ಫ್ಯಾಷನ್ ಶೋ ವೇದಿಕೆ; ಉತ್ತಮ ವಿನ್ಯಾಸಕಾರರಿಗೆ ಪ್ರಶಸ್ತಿ
ಸುದೀಪ್ ಯೂನಿಕ್ ಫ್ಯಾಷನ್‌ವೇರ್ಸ್
ಕಿಚ್ಚ ಸುದೀಪ್, ಸದಾ ಯೂನಿಕ್ ಫ್ಯಾಷನ್‌ಗೆ ಆದ್ಯತೆ ನೀಡುತ್ತಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಸದಾ ಹೊಸ ವಿನ್ಯಾಸದಲ್ಲಿ ಕಾಣಿಸಿಕೊಳ್ಳುವ ಅವರ ಒಂದೊಂದು ಔಟ್‌ಫಿಟ್‌ಗಳ ಅಭಿರುಚಿ ಅವರ ಫ್ಯಾಷನ್ ಬಗ್ಗೆ ಇರುವ ಒಲವನ್ನು ಹೈಲೈಟ್ ಮಾಡುತ್ತದೆ ಎನ್ನುತ್ತಾರೆ.