ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ‘ಎಸ್‌ಆರ್‌ಕೆ ಜೊತೆ ಸಂಭ್ರಮ’ ಅಭಿಯಾನಕ್ಕೆ ಹೊಸ ಮೆರುಗು: ಜಾಹೀರಾತು ಫಲಕದಲ್ಲೇ ನೇರ ಪಾರ್ಟಿ ಅನುಭವ
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದ ದೊಡ್ಡ ಡಾರ್ಕ್ ಫ್ಯಾಂಟಸಿ ಫಲಕ ಅಚಾನಕ್ ಜೀವಂತಗೊಂಡು, ಅದರ ಮೇಲೆ ನಟ ಶಾರುಖ್ ಖಾನ್ ಅವರ ದೃಶ್ಯ ಪ್ರಸಾರವಾಯಿತು. ಈ ಸಂದರ್ಭದಲ್ಲಿ ಅವರು “ಲಕ್ಷಾಂತರ ಅಭಿಮಾನಿಗಳ ಕನಸುಗಳನ್ನು ನನಸು ಮಾಡಲು ಬರುತ್ತಿದ್ದೇನೆ” ಎಂದು ಘೋಷಿಸಿದರು. ಕ್ಷಣಾರ್ಧದಲ್ಲಿ ಆ ಸ್ಥಳವು ಸಂಗೀತ, ಬೆಳಕು ಮತ್ತು ಸಂಭ್ರಮದಿಂದ ಕೂಡಿದ ಪಾರ್ಟಿ ವಾತಾವರಣಕ್ಕೆ ಮಾರ್ಪಟ್ಟಿತು. ಜನರು ಈ ದೃಶ್ಯವನ್ನು ವೀಕ್ಷಿಸಿ, ಚಿತ್ರೀಕರಿಸಿ, ಸಂಭ್ರಮದಲ್ಲಿ ಪಾಲ್ಗೊಂಡರು
-
ಬೆಂಗಳೂರು: ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ತನ್ನ ‘ಒಂದು ಮಿಲಿಯನ್ ಕನಸುಗಳು’ ಅಭಿಯಾನವನ್ನು ವಿಭಿನ್ನ ರೀತಿಯಲ್ಲಿ ಜನರ ಮುಂದೆ ತಂದಿದ್ದು, ಸಾಮಾನ್ಯ ಜಾಹೀರಾತು ಫಲಕವನ್ನೇ ನೇರ ಸಂಭ್ರಮದ ವೇದಿಕೆಯಾಗಿಸಿ ಅಪೂರ್ವ ಅನುಭವ ನೀಡಿದೆ.
ನಗರದ ರಸ್ತೆಗಳಲ್ಲೇ ನಡೆದ ಈ ವಿನೂತನ ಹೊರಾಂಗಣ ಪ್ರದರ್ಶನವು ಭಾರೀ ಕುತೂಹಲ ಹುಟ್ಟಿಸಿದ್ದು, ಸಾವಿರಾರು ಮಂದಿ ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಸೇರಿದರು. ಸಾಮಾನ್ಯವಾಗಿ ದೂರದಿಂದ ಮಾತ್ರ ನೋಡುವ ಜಾಹೀರಾತು ಫಲಕವನ್ನು, ಈ ಬಾರಿ ಜನರು ನೇರವಾಗಿ ಅನುಭವಿಸಬಹುದಾದ ಮನರಂಜನಾ ವೇದಿಕೆಯಾಗಿಸಿ ರೂಪಿಸಲಾಗಿದೆ.
ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದ ದೊಡ್ಡ ಡಾರ್ಕ್ ಫ್ಯಾಂಟಸಿ ಫಲಕ ಅಚಾನಕ್ ಜೀವಂತಗೊಂಡು, ಅದರ ಮೇಲೆ ನಟ ಶಾರುಖ್ ಖಾನ್ ಅವರ ದೃಶ್ಯ ಪ್ರಸಾರ ವಾಯಿತು. ಈ ಸಂದರ್ಭದಲ್ಲಿ ಅವರು “ಲಕ್ಷಾಂತರ ಅಭಿಮಾನಿಗಳ ಕನಸುಗಳನ್ನು ನನಸು ಮಾಡಲು ಬರುತ್ತಿದ್ದೇನೆ” ಎಂದು ಘೋಷಿಸಿದರು. ಕ್ಷಣಾರ್ಧದಲ್ಲಿ ಆ ಸ್ಥಳವು ಸಂಗೀತ, ಬೆಳಕು ಮತ್ತು ಸಂಭ್ರಮದಿಂದ ಕೂಡಿದ ಪಾರ್ಟಿ ವಾತಾವರಣಕ್ಕೆ ಮಾರ್ಪಟ್ಟಿತು. ಜನರು ಈ ದೃಶ್ಯವನ್ನು ವೀಕ್ಷಿಸಿ, ಚಿತ್ರೀಕರಿಸಿ, ಸಂಭ್ರಮದಲ್ಲಿ ಪಾಲ್ಗೊಂಡರು.
ಇದನ್ನೂ ಓದಿ: Bangalore News: ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗಾಗಿ ದುಂಡು ಮೇಜಿನ ಸಭೆ ನಡೆಸಿದ ವಾಧ್ವಾನಿ ಫೌಂಡೇಶನ್
ಈ ಅಭಿಯಾನದ ಅಂಗವಾಗಿ, “ಎಸ್‌ಆರ್‌ಕೆ ಜೊತೆ ಸಂಭ್ರಮ” ಎಂಬ ಕನಸನ್ನು 40 ಭಾಗ್ಯ ಶಾಲಿ ಗ್ರಾಹಕರಿಗೆ ನಿಜಗೊಳಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಜಾಹೀರಾತು ಫಲಕದಲ್ಲೇ ಆಯೋಜಿಸಲಾದ ಈ ವಿಶಿಷ್ಟ ಕಾರ್ಯಕ್ರಮವು ಹೊರಾಂಗಣ ಜಾಹೀರಾತು ಮತ್ತು ನೇರ ಅನುಭವದ ನಡುವಿನ ಅಂತರವನ್ನು ಅಳಿಸಿ ಹಾಕುವಂತಾಗಿದೆ.
ಈ ಕುರಿತು ಮಾತನಾಡಿದ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಸೂರಜ್ ಕತೂ ರಿಯಾ, “ಸಾಮಾನ್ಯವಾಗಿ ಹೊರಾಂಗಣ ಜಾಹೀರಾತುಗಳನ್ನು ದೂರದಿಂದ ನೋಡುವಂತೆ ರೂಪಿಸಲಾಗುತ್ತದೆ. ಆದರೆ, ಈ ಬಾರಿ ಜನರು ಅದರಲ್ಲಿ ನೇರವಾಗಿ ಭಾಗವಹಿಸ ಬಹುದಾದ ಅನುಭವವನ್ನು ನೀಡಲು ನಾವು ಪ್ರಯತ್ನಿಸಿದ್ದೇವೆ. ‘ಎಸ್‌ಆರ್‌ಕೆ ಜೊತೆ ಸಂಭ್ರಮ’ ಎಂಬ ಕಲ್ಪನೆ, ಮುಂದಿನ ದೊಡ್ಡ ಅನುಭವಗಳಿಗೆ ಮುನ್ನೋಟವಾಗಿದೆ,” ಎಂದು ಹೇಳಿದರು.
ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ಸಂಸ್ಥೆಯ ಈ ಹೊಸ ಪ್ರಯತ್ನವು ‘ಒಂದು ಮಿಲಿಯನ್ ಕನಸುಗಳು’ ಅಭಿಯಾನದ ಭಾಗವಾಗಿದ್ದು, ಅಭಿಮಾನಿಗಳಿಗೆ ಜೀವನದಲ್ಲಿ ಒಮ್ಮೆ ಸಿಗು ವಂತಹ ಶಾರುಖ್ ಖಾನ್ ಅವರೊಂದಿಗೆ ಸಂಭ್ರಮಿಸುವ ಅವಕಾಶವನ್ನು ಒದಗಿಸುವತ್ತ ಮಹತ್ವದ ಹೆಜ್ಜೆಯಾಗಿದೆ.