ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಗರಗಳ ನಡುವಿನ ಸಾರಿಗೆ ವ್ಯವಸ್ಥೆ ಉತ್ತಮಗೊಳಿಸಲು ಎಲ್‌ಪಿಓ 1822 ಬಸ್ ಚಾಸಿಸ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್

ಭಾರತದ ಇಂಟರ್‌ಸಿಟಿ ಸಾರಿಗೆ ವ್ಯವಸ್ಥೆಯು ಬಹಳ ವೇಗವಾಗಿ ರೂಪಾಂತರಗೊಳ್ಳುತ್ತಿದೆ. ಅದಕ್ಕೆ ಪೂರಕವಾಗಿ ಸಿದ್ಧಗೊಂಡಿರುವ ಟಾಟಾ ಎಲ್‌ಪಿಓ 1822 ಒಂದು ಸುಧಾರಿತ ಉತ್ಪನ್ನವಾಗಿದ್ದು, ಇದು ಉತ್ತಮ ಗುಣಮಟ್ಟ, ಉತ್ಕೃಷ್ಟ ಎಂಜಿನಿಯರಿಂಗ್ ಮತ್ತು ಸ್ಮಾರ್ಟ್ ಫೀಚರ್‌ ಗಳನ್ನು ಸಂಯೋಜಿಸಿ ಅತ್ಯುತ್ತಮ ಮೌಲ್ಯವನ್ನು ನೀಡುತ್ತದೆ.

ಟಾಟಾ ಮೋಟಾರ್ಸ್‌ʼನಿಂದ ಎಲ್‌ಪಿಓ 1822 ಬಸ್ ಚಾಸಿಸ್ ಬಿಡುಗಡೆ

-

Ashok Nayak Ashok Nayak Oct 27, 2025 9:35 PM

ಬೆಂಗಳೂರು: ಭಾರತದ ವಾಣಿಜ್ಯ ಸಾರಿಗೆ ವಾಹನ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಇಂದು ತನ್ನ ನಗರಗಳ ನಡುವಿನ ಸಾರಿಗೆ ವ್ಯವಸ್ಥೆ ಉತ್ತಮಗೊಳಿಸಲು ನೆರವಾಗುವ ಅತ್ಯಾಧುನಿಕ, ಹೊಚ್ಚ ಹೊಸ ಟಾಟಾ ಎಲ್‌ಪಿಓ 1822 ಬಸ್ ಚಾಸಿಸ್ ಅನ್ನು ಅನಾವರಣಗೊಳಿಸಿದೆ.

ದೀರ್ಘ ದೂರದ ಪ್ರಯಾಣಿಕ ಸಾರಿಗೆ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ಸಲುವಾಗಿ ರೂಪಿಸಲಾಗಿರುವ ಎಲ್‌ಪಿಓ 1822, ಸೌಕರ್ಯ, ಕಾರ್ಯಕ್ಷಮತೆ ಮತ್ತು ಕಾರ್ಯಾ ಚರಣೆಯ ದಕ್ಷತೆಯಲ್ಲಿ ಮುಂಚೂಣಿಯಲ್ಲಿ ನಿಲ್ಲಲಿದೆ. ಇದರೊಂದಿಗೆ ಟಾಟಾ ಮೋಟಾರ್ಸ್ ಜನಸಾಮಾನ್ಯರಿಗೆ ಅತ್ಯುತ್ತಮ ಸಂಚಾರದ ವ್ಯವಸ್ಥೆಯನ್ನು ಒದಗಿಸುವಲ್ಲಿ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ.

ಟಾಟಾ ಎಲ್‌ಪಿಓ 1822 ತನ್ನ ಫುಲ್- ಏರ್ ಸಸ್ಪೆನ್ಷನ್ ಮತ್ತು ಕಡಿಮೆ ಶಬ್ದ, ಕಡಿಮೆ ಕಂಪನ ಮತ್ತು ಕಡಿಮೆ ಒರಟುತನ ಗುಣಗಳ ಮೂಲಕ ಅಸಾಧಾರಣ ಪ್ರಯಾಣದ ಅನುಭವವನ್ನು ನೀಡುತ್ತದೆ. ಪ್ರಯಾಣಿಕರು ಮತ್ತು ಚಾಲಕರಿಗೆ ಆಯಾಸರಹಿತ ಪ್ರಯಾಣ ಮಾಡಲು ಅನುವು ಮಾಡಿ ಕೊಡು ತ್ತದೆ. 36 ರಿಂದ 50 ಆಸನಗಳವರೆಗಿನ ಮತ್ತು ಸ್ಲೀಪರ್ ವಿನ್ಯಾಸಗಳಿಗೆ ಹೊಂದಿಕೊಳ್ಳುವ ಕಾನ್ಫಿಗರೇಶನ್‌ ಗಳನ್ನು ಹೊಂದಿರುವ ಈ ಚಾಸಿಸ್ ಅನ್ನು ಭಾರತದ ವಿಕಾಸಗೊಳ್ಳುತ್ತಿರುವ ಸಾರಿಗೆ ಕ್ಷೇತ್ರದ ಬಸ್ ಆಪರೇಟರ್‌ ಗಳ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: Bangalore News: ಇಂಡಿಯಾ ರೈಜಿಂಗ್ ಫೌಂಡೇಶನ್ ₹1000 ಕೋಟಿ ಮೊತ್ತದ ಲಾಭರಹಿತ R&D ಗ್ರಾಂಟ್ ನಿಧಿ ಘೋಷಣೆ

ಈ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ನ ಕಮರ್ಷಿಯಲ್ ಪ್ಯಾಸೆಂಜರ್ ವೆಹಿಕಲ್ ಬಿಸಿನೆಸ್ ನ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಶ್ರೀ ಆನಂದ್ ಎಸ್ ಅವರು, “ಭಾರತದ ಇಂಟರ್‌ಸಿಟಿ ಸಾರಿಗೆ ವ್ಯವಸ್ಥೆಯು ಬಹಳ ವೇಗವಾಗಿ ರೂಪಾಂತರಗೊಳ್ಳುತ್ತಿದೆ. ಅದಕ್ಕೆ ಪೂರಕವಾಗಿ ಸಿದ್ಧಗೊಂಡಿರುವ ಟಾಟಾ ಎಲ್‌ಪಿಓ 1822 ಒಂದು ಸುಧಾರಿತ ಉತ್ಪನ್ನವಾಗಿದ್ದು, ಇದು ಉತ್ತಮ ಗುಣಮಟ್ಟ, ಉತ್ಕೃಷ್ಟ ಎಂಜಿನಿಯರಿಂಗ್ ಮತ್ತು ಸ್ಮಾರ್ಟ್ ಫೀಚರ್‌ ಗಳನ್ನು ಸಂಯೋಜಿಸಿ ಅತ್ಯುತ್ತಮ ಮೌಲ್ಯವನ್ನು ನೀಡುತ್ತದೆ. ಹೆಚ್ಚಿನ ಸೌಕರ್ಯವನ್ನು ಒದಗಿಸಿ, ಹೆಚ್ಚಿನ ಸುರಕ್ಷತೆಯನ್ನು ಒದಗಿಸಿ ಮತ್ತು ಲಾಭದಾಯಕತೆಯನ್ನು ಸುಧಾರಿಸುವ ಮೂಲಕ ಇದು ಪ್ರಯಾಣಿಕರಿಗೆ, ಚಾಲಕರಿಗೆ ಮತ್ತು ಬಸ್ ಗಳ ಮಾಲೀಕರಿಗೆ ಉತ್ತಮ ಪ್ರಯೋಜನ ಒದಗಿಸುತ್ತದೆ” ಎಂದು ಹೇಳಿದರು.

ಎಲ್‌ಪಿಓ 1822 ವಾಹನವು 5.6-ಲೀಟರ್ ಕಮಿನ್ಸ್ ಡೀಸೆಲ್ ಎಂಜಿನ್ ಹೊಂದಿದ್ದು, ಇದು 220hp ಮತ್ತು 925Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಉನ್ನತ ಕಾರ್ಯಕ್ಷಮತೆ ಯನ್ನು ಇಂಧನ ದಕ್ಷತೆಯೊಂದಿಗೆ ಸಮತೋಲನಗೊಳಿಸುವ ಪವರ್‌ ಟ್ರೇನ್ ಆಗಿರುವುದು ವಿಶೇಷವಾಗಿದೆ. ಈ ಚಾಸಿಸ್ ಟಾಟಾ ಮ್ಯಾಗ್ನಾ ಕೋಚ್‌ ಗೆ ಆಧಾರವಾಗಿದ್ದು, ಇದು ಪ್ರೀಮಿಯಂ ಇಂಟರ್‌ಸಿಟಿ ಬಸ್ ಆಗಿದೆ. ಉತ್ತಮ ದರ್ಜೆಯ ಸುರಕ್ಷತೆ, ಸೌಕರ್ಯ ಮತ್ತು ಪ್ರಯಾಣದ ಅನುಭವ ನೀಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಎಲ್‌ಪಿಓ 1822 ಚಾಸಿಸ್ ಟಾಟಾ ಮೋಟಾರ್ಸ್‌ ನ ಮುಂದಿನ ತಲೆಮಾರಿನ ಕನೆಕ್ಟೆಡ್ ವಾಹನ ವೇದಿಕೆಯಾದ ಫ್ಲೀಟ್ ಎಡ್ಜ್‌ ಗೆ ನಾಲ್ಕು ವರ್ಷಗಳ ಉಚಿತ ಸಬ್‌ಸ್ಕ್ರಿಪ್ಷನ್‌ ನೊಂದಿಗೆ ಬರುತ್ತದೆ. ಫ್ಲೀಟ್ ಎಡ್ಜ್ ಬಸ್ ನಿರ್ವಾಹಕರುಗಳಿಗೆ ರಿಯಲ್-ಟೈಮ್ ಡಯಾಗ್ನೋಸ್ಟಿಕ್ಸ್, ಪ್ರಿಡಿಕ್ಟಿವ್ ಮೇಂಟೆ ನೆನ್ಸ್ ಮತ್ತು ಡೇಟಾ ಆಧಾರಿತ ಫ್ಲೀಟ್ ಆಪ್ಟಿಮೈಸೇಶನ್‌ ವ್ಯವಸ್ಥೆ ಒದಗಿಸುತ್ತಿದ್ದು, ಆ ಮೂಲಕ ಸ್ಮಾರ್ಟ್ ಮತ್ತು ಲಾಭದಾಯಕ ಕಾರ್ಯಾಚರಣೆ ಮಾಡಲು ನೆರವಾಗುತ್ತದೆ.

9 ರಿಂದ 55 ಆಸನಗಳ ವರೆಗಿನ ಡೀಸೆಲ್, ಸಿಎನ್‌ಜಿ, ಎಲ್‌ಎನ್‌ಜಿ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ ಗಳನ್ನು ಒಳಗೊಂಡ ಸಮಗ್ರ ಪೋರ್ಟ್‌ಫೋಲಿಯೋ ಹೊಂದಿರುವ ಟಾಟಾ ಮೋಟಾರ್ಸ್ ಭವಿಷ್ಯಕ್ಕೆ ಸಿದ್ಧವಾದ ಸಾರಿಗೆ ಉತ್ಪನ್ನಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ. ಈ ವಾಹನಗಳಿಗೆ Sampoorna Seva 2.0 ಯೋಜನೆ ಲಭ್ಯವಿದ್ದು, ಈ ಯೋಜನೆಯು ಸಮಗ್ರ ವಾಹನ ಜೀವನಚಕ್ರ ಬೆಂಬಲ ಯೋಜನೆಯಾಗಿದೆ.

ಈ ಯೋಜನೆಯು ಹೆಚ್ಚಿನ ಕಾರ್ಯನಿರ್ವಹಣಾ ಸಮಯ ಒದಗುವಂತೆ ಮಾಡುತ್ತದೆ, ಒರಿಜಿನಲ್ ಬಿಡಿಭಾಗಗಗಳು, ವಾರ್ಷಿಕ ನಿರ್ವಹಣೆ ಒಪ್ಪಂದಗಳು ಮತ್ತು 24x7 ಬ್ರೇಕ್‌ಡೌನ್ ಸಹಾಯವನ್ನು ನೀಡುತ್ತದೆ. ದೇಶಾದ್ಯಂತ 4,500ಕ್ಕೂ ಹೆಚ್ಚು ಮಾರಾಟ ಮತ್ತು ಸೇವಾ ಸಂಪರ್ಕ ಕೇಂದ್ರಗಳ ವಿಶಾಲ ಜಾಲದ ಬೆಂಬಲದೊಂದಿಗೆ ಟಾಟಾ ಮೋಟಾರ್ಸ್ ಭಾರತದ ಪ್ರಯಾಣಿಕ ಸಾರಿಗೆ ವಿಭಾಗವನ್ನು ರೂಪಾಂತರಿಸಲು ಬದ್ಧವಾಗಿದೆ.