ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನ ಹೊಟೇಲ್‌ನ ಈಜುಕೊಳದಲ್ಲಿ ಎಲೆಕ್ಟ್ರಿಕ್ ಶಾಕ್​​: ಇಬ್ಬರು ವಿದೇಶಿಗರ ಸಾವು

Bengaluru Horror: ಬೆಂಗಳುರು ನಗರದ ಐಷಾರಾಮಿ ಹೊಟೇಲ್‌ ಆವರಣದಲ್ಲಿ ವಿದ್ಯುತ್‌ ಪ್ರವಹಿಸಿ ಇಬ್ಬರು ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿದ್ದಾರೆ. ಶುಕ್ರವಾರ (ಅಕ್ಟೋಬರ್‌ 30) ಸಂಜೆ ಈ ಘಟನೆ ನಡೆದಿದೆ. ಮೃತರನ್ನು ಸ್ಲೋವಾಕಿಯಾದ ಜುರಾಜ್‌ ಓರಿಯಾಟ್ (45) ಮತ್ತು ಜರ್ಮನಿಯ ಅಲೆಕ್ಸಾಂಡರ್ ಮ್ಯಾಕ್ಸಿಲನ್ ಥೆಸಿಸ್‌ (57) ಎಂದು ಗುರುತಿಸಲಾಗಿದೆ.

ಈಜುಕೊಳದಲ್ಲಿ ಎಲೆಕ್ಟ್ರಿಕ್ ಶಾಕ್​​ ಹೊಡೆದು ಇಬ್ಬರು ವಿದೇಶಿಗರ ಸಾವು

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Oct 31, 2026 11:58 AM

ಬೆಂಗಳೂರು, ಅ. 31: ನಗರದ ಐಷಾರಾಮಿ ಹೊಟೇಲ್‌ ಆವರಣದಲ್ಲಿ ಭೀಕರ ದುರಂತ ನಡೆದಿದ್ದು, ಈಜುಕೊಳದೊಳಗೆ ವಿದ್ಯುತ್‌ ಪ್ರವಹಿಸಿ ಇಬ್ಬರು ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿದ್ದಾರೆ (Bengaluru Horror). ಶುಕ್ರವಾರ (ಅಕ್ಟೋಬರ್‌ 30) ಸಂಜೆ ಈ ಘಟನೆ ನಡೆದಿದೆ. ಶಾಕ್‌ನಿಂದ ಅವರನ್ನು ರಕ್ಷಿಸಲು ಯತ್ನಿಸಿದ ಅಮೆರಿಕ ಪ್ರಜೆ ಸೇರಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಮೃತರನ್ನು ಸ್ಲೋವಾಕಿಯಾದ ಜುರಾಜ್‌ ಓರಿಯಾಟ್ (45) ಮತ್ತು ಜರ್ಮನಿಯ ಅಲೆಕ್ಸಾಂಡರ್ ಮ್ಯಾಕ್ಸಿಲನ್ ಥೆಸಿಸ್‌ (57) ಎಂದು ಗುರುತಿಸಲಾಗಿದೆ.

ʼʼಹಲಸೂರಿನ ಕಾನ್ರಾಡ್ ಹೊಟೇಲ್‌ನ ಮೂರನೇ ಮಹಡಿಯಲ್ಲಿರುವ ಈಜುಕೊಳದ ಡೆಕ್‌ನಲ್ಲಿ ಈ ಘಟನೆ ಸಂಭವಿಸಿದೆʼʼ ಎಂದು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಾಥೆ ತಿಳಿಸಿದ್ದಾರೆ.

ಅಲೆಕ್ಸಾಂಡರ್ ಮ್ಯಾಕ್ಸಿಲನ್ ಲುಫ್ಥಾನ್ಸ ಏರ್‌ಲೈನ್ಸ್‌ನ ಸಿಬ್ಬಂದಿ. ಇನ್ನು ಜುರಾಜ್‌ ಓರಿಯಾಟ್ ಟೆಕ್‌ ದೈತ್ಯ ಐಬಿಎಂನ ಪ್ರಾಜೆಕ್ಟ್‌ ಮ್ಯಾನೇಜರ್‌ ಆಗಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಮೃತ ಅಲೆಕ್ಸಾಂಡರ್ ಪತ್ನಿ ದೂರು ನೀಡಿದ್ದು, ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ. ರಕ್ಷಿಸಲು ಯತ್ನಿಸಿ ಗಾಯಗೊಂಡ ಅಮೆರಿಕದ ಮ್ಯಾಥ್ಯೂ ಡೆಸಂಟಿಸ್‌ ಮತ್ತು ಈಜುಕೊಳ ಸಿಬ್ಬಂದಿ, ಭಾರತೀಯ ರಾಹುಲ್‌ ತಿವಾರಿ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಂಡ್ಲುಪೇಟೆಯಲ್ಲಿ ಗ್ರೈಂಡರ್‌ನಿಂದ ವಿದ್ಯುತ್‌ ಹರಿದು 4 ವರ್ಷದ ಮಗು ಸಾವು

ಸದ್ಯ ಘಟನೆ ಬಗ್ಗೆ ಹೊಟೇಲ್‌ನಿಂದ ಯಾವುದೇ ರೀತಿಯ ಹೇಳಿಕೆ ಹೊರ ಬಿದ್ದಿಲ್ಲ. ಅಕ್ಟೋಬರ್‌ 31ರಿಂದ ನವೆಂಬರ್‌ 30ರ ತನಕ ನಿರ್ವಹಣೆಯ ಕಾರಣಕ್ಕೆ ಈಜುಕೊಳವನ್ನು ಮುಚ್ಚಲಾಗಿದೆ ಎಂದಷ್ಟೇ ತಿಳಿಸಿದೆ.

24 ಮಹಡಿಯ ಕಾನ್ರಾಡ್ ಫೈವ್‌ ಸ್ಟಾರ್‌ ಹೊಟೇಲ್‌ ಹಿಲ್‌ಟಾಪ್‌ ಸಂಸ್ಥೆಯ ಭಾಗವಾಗಿ ಕಾರ್ಯಾಚರಿಸುತ್ತಿದೆ. ಪ್ರತಿ ದಿನದ ಬಾಡಿಗೆ ಕನಿಷ್ಠ 25,000 ರೂಪಾಯಿ ಆಗಿದ್ದು, ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿದ.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.