ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಂಚಿಕೆಯಾಗದ ಖಾತೆ, ಹೈಕಾಂಡಿದ್ದೇ ಕ್ಯಾತೆ

ಸಚಿವರ ಪಟ್ಟಿ ಅಂತಿಮಗೊಂಡರೂ ಇನ್ನೂ ಖಾತೆ ಹಂಚಿಕೆ ಯಾಗಿಲ್ಲ. ಯಾರಿಗೆ ಯಾವ ಖಾತೆ ಎಂದು ಖಾತೆ ಹಂಚಿಕೆ ಯಾಗದೇ ಸಚಿವರೇ ಗೊಂದಲದಲ್ಲಿದ್ದು, ರಾಜ್ಯದ ಆಡಳಿತದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಖಾತೆ ಹಂಚಿಕೆಯಾಗದ ಕಾರಣ ಆಡಳಿತಕ್ಕೆ ವೇಗ ಸಿಗುತ್ತಿಲ್ಲ. 19 ಸಚಿವರು ಖಾತೆ ಹಂಚಿಕೆ ಯಾಗದೇ ಜಿಲ್ಲಾ ಪ್ರವಾಸ ಮಾಡುತ್ತಿದ್ದಾರೆ. ಈ ಹಿನ್ನೆಲೆ ಹಲವು ಸಮಸ್ಯೆ ಎದುರಾಗಿದೆ. ಖಾತೆ ಹಂಚಿಕೆ ಯಾಗದೆ ಇಲಾಖಾವಾರು ಪ್ರಗತಿ ಪರಿಶೀಲನೆಗೆ ಅಡತಡೆಯಾಗಿದೆ.

ಹಂಚಿಕೆಯಾಗದ ಖಾತೆ, ಹೈಕಾಂಡಿದ್ದೇ ಕ್ಯಾತೆ

-

Profile
Ashok Nayak Aug 12, 2026 7:51 AM

ನಾಳೆಯಿಂದ ಅಧಿವೇಶನ: ಖಾತೆರಹಿತ ಸಚಿವರಿಗೆ ಪೇಚಾಟ

ಬೆಂಗಳೂರು ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆಗೆ ಸಂಬಂಧಪಟ್ಟಂತೆ ಹೈಕಮಾಂಡ್ ಅತಿಯಾದ ಹಸ್ತಕ್ಷೇಪ ರಾಜ್ಯ ನಾಯಕರಲ್ಲಿ ಅಸಹನೆಯ ವಾತಾವರಣ ಸೃಷ್ಟಿಸಿದೆ. ಈ ನಡುವೆ ನಾಳೆಯಿಂದ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಖಾತೆಯ ಖ್ಯಾತೆ ಇನ್ನೂ ಮುಗಿದಿಲ್ಲ. ಇದೇ ವೇಳೆ ಕಳಂಕಿತ ಸಚಿವರ ರಾಜೀನಾಮೆ ಪಡೆಯುವರೆಗೂ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಪ್ರತಿಪಕ್ಷಗಳು ಸವಾಲು ಹಾಕಿದೆ.

ಸಚಿವರ ಪಟ್ಟಿ ಅಂತಿಮಗೊಂಡರೂ ಇನ್ನೂ ಖಾತೆ ಹಂಚಿಕೆ ಯಾಗಿಲ್ಲ. ಯಾರಿಗೆ ಯಾವ ಖಾತೆ ಎಂದು ಖಾತೆ ಹಂಚಿಕೆ ಯಾಗದೇ ಸಚಿವರೇ ಗೊಂದಲದಲ್ಲಿದ್ದು, ರಾಜ್ಯದ ಆಡಳಿತದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಖಾತೆ ಹಂಚಿಕೆಯಾಗದ ಕಾರಣ ಆಡಳಿತಕ್ಕೆ ವೇಗ ಸಿಗುತ್ತಿಲ್ಲ. 19 ಸಚಿವರು ಖಾತೆ ಹಂಚಿಕೆಯಾಗದೇ ಜಿಲ್ಲಾ ಪ್ರವಾಸ ಮಾಡುತ್ತಿದ್ದಾರೆ. ಈ ಹಿನ್ನೆಲೆ ಹಲವು ಸಮಸ್ಯೆ ಎದುರಾಗಿದೆ. ಖಾತೆ ಹಂಚಿಕೆ ಯಾಗದೆ ಇಲಾಖಾವಾರು ಪ್ರಗತಿ ಪರಿಶೀಲನೆಗೆ ಅಡತಡೆಯಾಗಿದೆ.

ಅಧಿವೇಶನದಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡಲು ಸಚಿವರಿಗೆ ಸವಾಲಾಗಿದೆ. 18ಕ್ಕೂ ಹೆಚ್ಚು ಇಲಾಖೆಗಳು ಮುಖ್ಯಮಂತ್ರಿ ಅವರ ಬಳಿ ಇದ್ದರೂ, ಎಲ್ಲಾ ಇಲಾಖೆಗಳ ಮೇಲೆ ಗಮನ ಹರಿಸಲು ಸಿಎಂಗೆ ಸಮಯದ ಕೊರತೆಯಾಗಿದೆ. ತುರ್ತು ನಿರ್ಧಾರ ಕೈಗೊಳ್ಳಲು ಆಗದೇ ಯೋಜನೆಗಳು ನನೆಗುದಿಗೆ ಬಿದ್ದಂತಾ ಗಿದ್ದು, ಎಲ್ಲದಕ್ಕೂ ಅಧಿಕಾರಿ ವರ್ಗಗಳ ಮೇಲೆ ಅವಲಂಬನೆ ಹೆಚ್ಚಾಗಿದೆ. ಅಧಿಕಾರಿಗಳು ಹೇಳಿದ್ದಷ್ಟೇ ವೇದ ವಾಕ್ಯ ಎಂಬಂತಾಗಿದೆ. ಇಲಾಖೆ ಹಂಚಿಕೆಯಾಗದ ಕಾರಣ ನೂತನ ಸಚಿವರ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ. ಪ್ರತಿಯೊಂದು ಇಲಾಖೆಯ ಸಮಸ್ಯೆ ಸಿಎಂ ಮುಂದೆಯೇ ಪರಿಹಾರವಾಗಬೇಕಾಗಿರುವ ಒತ್ತಡ ಉಂಟಾಗಿದೆ. ಖಾತೆ ಹಂಚಿಕೆ ತಡವಾಗುತ್ತಿರುವುದರಿಂದ ಆಡಳಿತ ಯಂತ್ರ ಸರಿಯಾಗಿ ಕೆಲಸ ಮಾಡುತ್ತಿಲ್ಲ.

ಇದನ್ನೂ ಓದಿ: CM DK Shivakumar: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದೇನು?

ಸಚಿವರು ಜಿಲ್ಲೆಗಳಿಗೆ ಪ್ರವಾಸ ಮಾಡುತ್ತಿದ್ದಾರೆ. ಆದರೆ ನಿರ್ದಿಷ್ಟ ಇಲಾಖೆಯ ಜವಾಬ್ದಾರಿ ಇಲ್ಲದ ಕಾರಣ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸುವುದು ಕಷ್ಟವಾಗಿದೆ. ಯಾವ ಸಚಿವರು ಯಾವ ಇಲಾಖೆಗೆ ಜವಾಬ್ದಾರರು ಎಂಬುದು ಸ್ಪಷ್ಟವಿಲ್ಲ.

ನೂತನವಾಗಿ ಸಚಿವರಾದವರು ಗೊಂದಲದಲ್ಲಿದ್ದು, ಯಾವ ಇಲಾಖೆಯ ಮೇಲೆ ಗಮನ ಹರಿಸಬೇಕು ಎಂಬುದು ತಿಳಿಯದೇ ಅವರು ಹೆಣಗಾಡುವಂತಾಗಿದೆ. ಅಧಿವೇಶನ ನಡೆಸಲು ಬಿಡಲ್ಲ: ಬಿಜೆಪಿ ಬಿ.ನಾಗೇಂದ್ರ ಸಚಿವರಾಗಿರುವವರೆಗೂ ಅಧಿವೇಶನ ನಡೆಯಲು ಅವಕಾಶ ನೀಡುವುದಿಲ್ಲ. ಅವರ ರಾಜೀನಾಮೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡಲೇ ಪಡೆಯಲೇಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ವತಿಯಿಂದ ಎಲ್ಲ ಜಿ ಕೇಂದ್ರಗಳಿಂದ ಹೋರಾಟ ಆರಂಭಿಸಲಾಗುತ್ತಿದೆ. ಪ್ರತಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾರ್ಯಕರ್ತರು ಹೋರಾಟ ನಡೆಸು ತ್ತಾರೆ. ವಿಧಾನಸಭೆ ಅಧಿವೇಶನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡಲಾಗುವುದು. ಕಳೆದ ಬಾರಿ ಸಚಿವ ಬಿ.ನಾಗೇಂದ್ರ ಅವರನ್ನು ಕಿತ್ತುಹಾಕಿದ್ದು ಏಕೆ ಹಾಗೂ ಈಗ ಮರಳಿ ಸಚಿವರಾಗಿದ್ದು ಏಕೆ ಎಂದು ಸ್ಪಷ್ಟನೆ ನೀಡಬೇಕು.

ನಾಗೇಂದ್ರ ಅವರು ಇನ್ನೂ ಆರೋಪಿಯಾಗಿಯೇ ಇದ್ದಾರೆ. ಸಿಬಿಐನಲ್ಲಿ ಮೂರು ಪ್ರಕರಣಗಳು ಇನ್ನೂ ನಡೆಯುತ್ತಿದೆ. ಲೋಕಾಯುಕ್ತದಲ್ಲಿ ಐದು ಪ್ರಕರಣ ದಾಖಲಾಗಿದೆ. ಎಸ್‌ಟಿಯಲ್ಲಿ ಒಂದು ಪ್ರಕರಣ ಇದೆ. ಕಾರವಾರದಲ್ಲಿ ಸಿಐಡಿ ಪ್ರಕರಣವಿದೆ. ಚೆನ್ನೈನಲ್ಲೂ ಪ್ರಕರಣ ನಡೆಯುತ್ತಿದೆ. ಒಟ್ಟು 31 ಪ್ರಕರಣ ವಿಚಾರಣೆಯಲ್ಲಿದೆ. ಹೀಗಿರುವಾಗ ಅವರು ವಿಧಾನಸೌಧಕ್ಕೆ ಯಾವಾಗ ಬರುತ್ತಾರೆ? ಇಲಾಖೆಯ ಕೆಲಸ ಯಾವಾಗ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ವರಿಷ್ಠರ ಮೇಲೆ ಕಿಡಿ

ನೂತನ ಸರಕಾರ ರಚನೆಯಾಗಿ ಎರಡು ತಿಂಗಳು ಕಳೆದ ಬಳಿಕ ಸಂಪುಟ ವಿಸ್ತರಣೆಗೆ ಅವಕಾಶ ಮಾಡಿ ಕೊಡಲಾಯಿತು. ಪೂರ್ಣ ಪ್ರಮಾಣದ ಸಂಪುಟ ಬದಲಾಗಿ ಮತ್ತು ಒಂದು ಸ್ಥಾನವನ್ನು ಉಳಿಸಿಕೊಳ್ಳಲಾಗಿದೆ. ನೂತನವಾಗಿ ಸಂಪುಟಕ್ಕೆ ಸೇರಿದ ಸಚಿವರಿಗೆ 9 ದಿನ ಕಳೆದರೂ ಖಾತೆ ಹಂಚಿಕೆಯಾಗಿಲ್ಲ. ವಿಧಾನ ಮಂಡಲ ಅಧಿವೇಶನಕ್ಕೆ ಒಂದು ದಿನ ಮಾತ್ರ ಇದೆ. ದೆಹಲಿಗೆ ತೆರಳಿದ್ದ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಜೊತೆ ಸಭೆ ನಡೆಸಿ, ಖಾತೆಗಳ ಹಂಚಿಕೆ ವಿಚಾರವಾಗಿ ಮಾಹಿತಿ ನೀಡಿ ಬಂದಿದ್ದಾರೆ. ಹೀಗಿದ್ದರೂ ಅಧಿಕೃತ ಆದೇಶ ಹೊರ ಬಿದ್ದಿಲ್ಲ. ಬುಧವಾರ ಖಾತೆ ಹಂಚಿಕೆ ಯಾದರೂ ಮರುದಿನವೇ ಅಧಿವೇಶನದಲ್ಲಿ ಕೇಳುವ ಪ್ರಶ್ನೆಗಳಿಗೆ ಸಚಿವರು ಉತ್ತರಿಸ ಬೇಕಾಗಿದೆ. ಕೆಲವರು ಸಂಬಂಧಪಟ್ಟ ಇಲಾಖೆಗಳಿಗೆ ಕೇಳಲಾ ಗುವ ಪ್ರಶ್ನೆಗಳ ಬಗ್ಗೆ ಅನೌಪಚಾರಿಕವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಹೀಗಿದ್ದರೂ ಹೈಕಮಾಂಡ್ ಮೇಲೆ ಶಾಸಕರ ಅಸಮಾಧಾನ ಹೆಚ್ಚಾಗಿದೆ.

ಮೈಸೂರಿನಲ್ಲಿ ಅತೃಪ್ತರ ಸಭೆ

ಈತನ್ಮಧ್ಯೆ, ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿರುವ ಮೂವರು ಹಿರಿಯ ಶಾಸಕರು ಮೈಸೂರಿನಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಮೈಸೂರಿನ ಸರಕಾರಿ ಅತಿಥಿ ಗೃಹದಲ್ಲಿ ಮಾಜಿ ಸಚಿವ, ಹಿರಿಯ ನಾಯಕ ಎಚ್.ಸಿ ಮಹದೇವಪ್ಪ, ಕೆ. ವೆಂಕಟೇಶ್ ಮತ್ತು ತನ್ವೀರ್ ಸೇಠ್ ಸಭೆ ನಡೆಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಕಾಂಗ್ರೆಸ್ನಲ್ಲಿ ಅಸಮಾಧಾನ ಇರುವ ಸಂದರ್ಭದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿರುವ ಈ ಮೂವರು ನಾಯಕರ ಸಭೆ ರಾಜಕೀಯವಾಗಿ ಚರ್ಚೆಗೆ ಗ್ರಾಸ ವಾಗಿದೆ. ಸಭೆ ಬಳಿಕ ಮಾತನಾಡಿದ ಹಿರಿಯ ಶಾಸಕ ತನ್ವೀರ್ ಸೇಠ್, ‘ಪಕ್ಷದಲ್ಲಿ ಎಲ್ಲವೂ ಸರಿಯಿದೆ ಅಂತಾನೂ ಹೇಳಲ್ಲ, ಸರಿ ಇಲ್ಲ ಅಂತಾನೂ ಹೇಳಲ್ಲ’ ಎಂದು ಹೇಳುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.

ಅಧಿವೇಶನ ನಡೆಸಲು ಬಿಡಲ್ಲ

ಬಿ.ನಾಗೇಂದ್ರ ಸಚಿವರಾಗಿರುವವರೆಗೂ ಅಧಿವೇಶನ ನಡೆಯಲು ಅವಕಾಶ ನೀಡುವುದಿಲ್ಲ. ಅವರ ರಾಜೀನಾಮೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಲೇ ಪಡೆಯಲೇ ಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ವತಿಯಿಂದ ಎಲ್ಲ ಜಿಲ್ಲಾ ಕೇಂದ್ರಗಳಿಂದ ಹೋರಾಟ ಆರಂಭಿಸಲಾಗುತ್ತಿದೆ. ಪ್ರತಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾರ್ಯಕರ್ತರು ಹೋರಾಟ ನಡೆಸುತ್ತಾರೆ. ವಿಧಾನಸಭೆ ಅಧಿವೇಶನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡಲಾಗುವುದು.

image

ಸಚಿವ ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ಸಿಕ್ಕಿಲ್ಲ. ತನಿಖೆ ಸಹ ನಡೆಯುತ್ತಿದೆ. ಆದರೂ ಮತ್ತೆ ಅವರನ್ನು ಸಚಿ ವರನ್ನಾಗಿ ನೇಮಿಸಲಾಗಿದೆ. ಅವರ ರಾಜೀ ನಾಮೆಯನ್ನು ಸಿಎಂ ಡಿ.ಕೆ.ಶಿವಕುಮಾರ್ ಪಡೆಯಬೇಕು. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸುವ ಅನಿವಾರ್ಯತೆ ಏನಿತ್ತು ? ಅವರಿಗೆ ಏನಾದರೂ ಭಯವಿತ್ತೇ? ಇಲ್ಲವೇ ಕಾಂಗ್ರೆಸ್ ಹೈಕಮಾಂಡ್ ಒತ್ತಡ ಏನಾದರೂ ಇತ್ತಾ?

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ