ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ಲೌಡ್ ನೈನ್ ಆಸ್ಪತ್ರೆಗೆ ನಾಳೆ ಸಂಜೆ 4 ಗಂಟೆವರೆಗೂ ಗಡುವು ಕೊಟ್ಟ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ; ಏನಿದು ಪ್ರಕರಣ?

HD Kumaraswamy: ಕ್ಲೌಡ್ ನೈನ್ ಆಸ್ಪತ್ರೆಯವರು ದೊಡ್ಡ ತಪ್ಪು ಮಾಡಿ ಅದನ್ನ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಅನಸ್ತೇಶಿಯಾದಿಂದಲೇ ಮಗುವಿನ ಮಿದುಳಿಗೆ ತೊಂದರೆ ಆಗಿದೆ. ತಪ್ಪು ಮಾಡಿರುವ ಪಾಪಪ್ರಜ್ಞೆ ಕೂಡ ಅವರಿಗೆ ಇಲ್ಲ. ನಾಳೆ (ನವೆಂಬರ್‌ 29) ಸಂಜೆ 4 ಗಂಟೆವರಗೂ ಟೈಂ ನೀಡುತ್ತೇನೆ. ಅಷ್ಟರೊಳಗೆ ಆಸ್ಪತ್ರೆಯ ಆಡಳಿತ ಮಂಡಳಿಯವರು ನನ್ನನ್ನು, ಮಗುವಿನ ಪೋಷಕರನ್ನು ಭೇಟಿ ಮಾಡಬೇಕು. ಇಲ್ಲದಿದ್ದರೆ ಆಮೇಲೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ನನ್ನ ಸೌಮ್ಯ ಸ್ವಭಾವವನ್ನು ದೌರ್ಬಲ್ಯ ಎಂದು ತಿಳಿದುಕೊಳ್ಳೋದು ಸರಿಯಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಕ್ಲೌಡ್ ನೈನ್ ಆಸ್ಪತ್ರೆಗೆ ಸಂಜೆ 4 ಗಂಟೆವರೆಗೂ ಗಡುವು ಕೊಟ್ಟ ಎಚ್‌ಡಿಕೆ

ಕೇಂದ್ರ ಸಚಿವ ಎಚ್‌.ಡಿ.‌ ಕುಮಾರಸ್ವಾಮಿ (ಸಂಗ್ರಹ ಚಿತ್ರ) -

Profile
Siddalinga Swamy Nov 28, 2026 3:51 PM

ಬೆಂಗಳೂರು, ನ. 28: ಆಸ್ಪತ್ರೆಯವರು ದೊಡ್ಡ ತಪ್ಪು ಮಾಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ನಾಳೆ (ನವೆಂಬರ್‌ 29) ಸಂಜೆ 4 ಗಂಟೆವರೆಗೂ ಗಡುವು ನೀಡುತ್ತೇನೆ. ಅಷ್ಟರೊಳಗೆ ಮಗುವಿಗೆ ಆಗಿರುವ ಅನ್ಯಾಯ ಸರಿಪಡಿಸಲು ಆಸ್ಪತ್ರೆ ಆಡಳಿತ ಮಂಡಳಿಯವರು ಮುಂದೆ ಬರಬೇಕು. ಇಲ್ಲವಾದರೇ ಆಸ್ಪತ್ರೆ ನಡೆಸಲು ಕಷ್ಟವಾಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy), ಬೆಂಗಳೂರಿನ ಕ್ಲೌಡ್ ನೈನ್ ಆಸ್ಪತ್ರೆಗೆ ಎಚ್ಚರಿಕೆ ನೀಡಿದರು. ಜಯನಗರದ ಕ್ಲೌಡ್‌ನೈನ್ ಆಸ್ಪತ್ರೆಗೆ ಭೇಟಿ ನೀಡಿ ನಾಗರಬಾವಿಯ ಕ್ಲೌಡ್ ನೈನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಒಂದು ವರ್ಷದ ಮಗು ಶಯಾನ ಕೋಮಾಗೆ ಜಾರಿದ್ದು, ಆ ಮಗುವಿನ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಕ್ಲೌಡ್ ನೈನ್ ಆಸ್ಪತ್ರೆಯವರು ದೊಡ್ಡ ತಪ್ಪು ಮಾಡಿ ಅದನ್ನ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಅನಸ್ತೇಶಿಯಾದಿಂದಲೇ ಮಗುವಿನ ಮಿದುಳಿಗೆ ತೊಂದರೆ ಆಗಿದೆ. ತಪ್ಪು ಮಾಡಿರುವ ಪಾಪಪ್ರಜ್ಞೆ ಕೂಡ ಅವರಿಗೆ ಇಲ್ಲ. ನಾಳೆ ಸಂಜೆ 4 ಗಂಟೆವರಗೂ ಟೈಂ ನೀಡುತ್ತೇನೆ. ಅಷ್ಟರೊಳಗೆ ಆಸ್ಪತ್ರೆಯ ಆಡಳಿತ ಮಂಡಳಿಯವರು ನನ್ನನ್ನು, ಮಗುವಿನ ಪೋಷಕರನ್ನು ಭೇಟಿ ಮಾಡಬೇಕು. ಇಲ್ಲದಿದ್ದರೇ ಆಮೇಲೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ನನ್ನ ಸೌಮ್ಯ ಸ್ವಭಾವವನ್ನು ದೌರ್ಬಲ್ಯ ಎಂದು ತಿಳಿದುಕೊಳ್ಳೋದು ಸರಿಯಲ್ಲ ಎಂದು ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಸಿದರು.

ಕ್ಲೌಡ್ ನೈನ್ ಆಸ್ಪತ್ರೆ ವಿರುದ್ಧ ಕೋರ್ಟ್‌ಗೆ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ಮಗು ಬಗ್ಗೆ ನಿರ್ಲಕ್ಷ್ಯ ಮಾಡಿದ್ದಷ್ಟೇ ಅಲ್ಲ, ತಂದೆ-ತಾಯಿಯನ್ನೂ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ದುಡ್ಡಿನ ಮದ ಆ ರೀತಿ ಇದೆ ಎಂದು ಆಸ್ಪತ್ರೆ ವಿರುದ್ದ ಎಚ್‌ಡಿಕೆ ಗುಡುಗಿದರು.

ಪ್ರಕರಣದ ಹಿನ್ನೆಲೆ ಏನು?

ನಾಗರಬಾವಿಯ ಕ್ಲೌಡ್ ನೈನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಒಂದು ವರ್ಷದ ಮಗು ಶಯಾನ ಕೋಮಾಗೆ ತಲುಪಿದೆ. ಕಿವಿಗೆ ಗಾಯವಾದ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಬಂದರೆ ಮಗುವಿಗೆ ಅನಸ್ತೇಶಿಯಾ ಕೊಟ್ಟಿದ್ದಾರೆ. ನುರಿತ ವೈದ್ಯರು ಚಿಕಿತ್ಸೆ ನೀಡದೇ ಬೇರೆಯವರು ಚಿಕಿತ್ಸೆ ನೀಡಿದ ಪರಿಣಾಮ ಮಗುವಿನ ಆರೋಗ್ಯ ಅಪಾಯಕ್ಕೆ ಸಿಲುಕಿದೆ. ನಾಗರಬಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸರಿಯಾಗಿ ಸಿಗದ ಪರಿಣಾಮ ಜಯನಗರದ ಕ್ಲೌಡ್ ನೈನ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಅಲ್ಲಿಯೂ ಮಗುವಿನ ಆರೋಗ್ಯ ಚೇತರಿಕೆ ಕಾಣುತ್ತಿಲ್ಲ ಹಾಗೂ ಆಸ್ಪತ್ರೆ ಸಿಬ್ಬಂದಿ ಮಗುವಿನ ಪೋಷಕರಿಗೆ ಸಹಕಾರ ನೀಡುತ್ತಿಲ್ಲ‌ ಎಂದು ಅವರು ದೂರಿದರು.

ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವನ್ನು ವೀಕ್ಷಿಸಿದ ಕೇಂದ್ರ ಸಚಿವರು, ಮಗು ಮೊದಲಿನಂತೆ ಆಗಿ ಮನೆಗೆ ಮರಳಬೇಕು ಎಂಬ ಆಶಯ ನನ್ನದಾಗಿತ್ತು. ಆದರೆ ವೈದ್ಯರು ಸರಿಯಾದ ಚಿಕಿತ್ಸೆ ನೀಡದೆ ಇಲ್ಲಿ ಕೂಡ ನಿರ್ಲಕ್ಷ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಸ್ಥಿತಿಯನ್ನು ನಾನು ಗಮನಿಸಿದ್ದೇನೆ. ವೈಯಕ್ತಿಕವಾಗಿ ನನಗೆ ಬಹಳ ನೋವು ಉಂಟಾಗಿದೆ. ಕೇವಲ ದುಡ್ಡು ಮಾಡಲು ನಿಂತಿರುವ ಈ ಖಾಸಗಿ ಆಸ್ಪತ್ರೆ, ಮಗುವಿನ ಆರೋಗ್ಯದ ಬಗ್ಗೆ ಸಂಪೂರ್ಣ ನಿರ್ಲಕ್ಷ ವಹಿಸಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.