Bengaluru News: ಜಯನಗರದ ಶ್ರೀ ವಾಸವಿ ವೇದ ನಿಧಿ ಟ್ರಸ್ಟ್ ನಿಂದ ಅದ್ದೂರಿ ವಾಸವಿ ಜಯಂತಿ ಆಚರಣೆ
ದಕ್ಷಿಣ ಭಾರತದ ಮೂಲೆ ಮೂಲೆಯಲ್ಲಿರುವ ಬಡ ಮತ್ತು ಕೆಳ ಮಧ್ಯಮ ವರ್ಗದ ಜನರ ಶ್ರೇಯೋ ಭಿವೃದ್ಧಿಗೆ ಶ್ರಮಿಸುವುದು ಟ್ರಸ್ಟ್ನ ಉದ್ದೇಶವಾಗಿದೆ. ಪ್ರತಿಭಾವಂತರನ್ನು ಕರೆತಂದು ಸನಾತನ ಧರ್ಮದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಎತ್ತಿಹಿಡಿಯಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ


ಬೆಂಗಳೂರು: ಬೆಂಗಳೂರಿನ ಜಯನಗರ 1ನೇ ಬ್ಲಾಕ್ನಲ್ಲಿರುವ ಶ್ರೀ ವಾಸವಿ ವೇದ ನಿಧಿ ಟ್ರಸ್ಟ್ ನಿಂದ ವಾಸವಿ ದೇವಸ್ಥಾನದಲ್ಲಿ ವಾಸವಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. 1979 ರಲ್ಲಿ ವಿಧಾನಪರಿಷತ್ನ ಮಾಜಿ ಸದಸ್ಯರಾದ ಶ್ರೀ ಗೌಂಡಯ್ಯ ಶೆಟ್ಟಿ ಅವರು ವೇದಗಳು, ಸಂಸ್ಕೃತ ಮತ್ತು ಪುರೋಹಿತ್ಯವನ್ನು ಬೋಧಿಸುವ ಉದ್ದೇಶದಿಂದ ಈ ಟ್ರಸ್ಟ್ ಅನ್ನು ಸ್ಥಾಪಿಸಿದರು. ಸದ್ಯಕ್ಕೆ ಈ ಟ್ರಸ್ಟ್ನಲ್ಲಿ ಸುಮಾರು 60 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಅವರು ಮುಂದಿನ ದಿನಗಳಲ್ಲಿ ವೃತ್ತಿಪರ ಪಂಡಿತರು ಹಾಗೂ ಪುರೋಹಿತರಾಗಿ ಹೊರಬರುವ ನಿರೀಕ್ಷೆಯಿದೆ.
ಇದನ್ನೂ ಓದಿ: Bangalore News: ಎಪಿಎಸ್ ಎಜುಕೇಷನಲ್ ಟ್ರಸ್ಟ್ ನಿಂದ ಮೇ 3 ರಂದು ರಾಷ್ಟ್ರಮಟ್ಟದ ಶಿಕ್ಷಣ ಪ್ರದರ್ಶನ ಮತ್ತು ಉದ್ಯೋಗ ಮೇಳ
ದಕ್ಷಿಣ ಭಾರತದ ಮೂಲೆ ಮೂಲೆಯಲ್ಲಿರುವ ಬಡ ಮತ್ತು ಕೆಳ ಮಧ್ಯಮ ವರ್ಗದ ಜನರ ಶ್ರೇಯೋ ಭಿವೃದ್ಧಿಗೆ ಶ್ರಮಿಸುವುದು ಟ್ರಸ್ಟ್ನ ಉದ್ದೇಶವಾಗಿದೆ. ಪ್ರತಿಭಾವಂತರನ್ನು ಕರೆತಂದು ಸನಾತನ ಧರ್ಮದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಎತ್ತಿಹಿಡಿಯಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವಾಸವಿ ವೇದ ನಿಧಿ ಟ್ರಸ್ಟ್ ಎಲ್ಲಾ ಹಿಂದೂ ಹಬ್ಬಗಳು ಮತ್ತು ಆಚರಣೆಗಳನ್ನು ಸಾಂಪ್ರದಾಯಿಕ ವಾಗಿ ಆಚರಿಸುತ್ತದೆ. ನವರಾತ್ರಿಯಲ್ಲಿ 12 ದಿನಗಳ ಕಾಲ ವಾಸವಿ ದೇವಿಗೆ ವಿವಿಧ ಅಲಂಕಾರಗ ಳೊಂದಿಗೆ ಸಿಂಗರಿಸಲಾಗುತ್ತದೆ. ಪ್ರಸ್ತುತ ಟ್ರಸ್ಟ್ 500 ಕ್ಕೂ ಹೆಚ್ಚು ಪುರೋಹಿತರು, ಪಂಡಿತರನ್ನು ಹೊಂದಿದೆ. ವಿದೇಶಗಳಲ್ಲಿಯೂ ಪುರೋಹಿತರನ್ನು ನೇಮಿಸಲಾಗಿದೆ.
ಟ್ರಸ್ಟ್ ಪದಾಧಿಕಾರಿಗಳು: ಪದ್ಮಾಕರ್ - ಖಜಾಂಚಿ, ಆರ್.ಪಿ. ರವಿಶಂಕರ್ - ಪ್ರಧಾನ ಕಾರ್ಯದರ್ಶಿ ಹಾಗೂ ಸಿಎ ಡಾ. ವಿಷ್ಣು ಭರತ್ ಅಧ್ಯಕ್ಷರಾಗಿ ನೇತೃತ್ವ ನೀಡುತ್ತಿದ್ದು, ಇವರ ಸಾರಥ್ಯದಲ್ಲಿ ಟ್ರಸ್ಟ್ ಸಮರ್ಥವಾಗಿ ಮುನ್ನಡೆಯುತ್ತಿದೆ ಎಂದು ಪ್ರಕಟಣೆ ತಿಳಿಸಿದೆ