Zombie Drug: ಜೋಂಬಿ ಡ್ರಗ್ಸ್ ವಿಡಿಯೋ: ದುನಿಯಾ ವಿಜಿ, ಭಾಸ್ಕರ ರಾವ್‌ಗೆ ಎದುರಾಯ್ತು ಸಂಕಷ್ಟ
ವಿಡಿಯೋ ಕುರಿತಂತೆ ಸಮಾಜದ ಜಾಲತಾಣದಲ್ಲಿ ನಟ ವಿಜಯ್ ಮತ್ತು ಭಾಸ್ಕರ್ ರಾವ್ ವಿಡಿಯೋ ಅಪ್ಲೋಡ್ ಮಾಡಿದ್ದರು. ಪ್ರಕರಣ ಸಂಬಂಧ ಬಾಗಲೂರು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈಗಾಗಲೇ ಈ ವಿಡಿಯೋ ಹಂಚಿಕೊಂಡಿದ್ದ 15 ಜನರಿಗೆ ನೋಟಿಸ್ ನೀಡಿದ್ದಾರೆ. ಮಾಹಿತಿಯ ಬಗ್ಗೆ ದಾಖಲೆ ಒದಗಿಸುವಂತೆ ಸೂಚನೆ ನೀಡಿದ್ದಾರೆ.
ದುನಿಯಾ ವಿಜಯ, ಭಾಸ್ಕರ ರಾವ್ -
ಬೆಂಗಳೂರು, ಏ.21 : ಜೋಂಬಿ ಡ್ರಗ್ಸ್ (Zombie Drug) ಸೇವಿಸಿದ ಪರಿಣಾಮದಿಂದ ನಿಶ್ಚಲವಾಗಿ ನಿಂತ ವ್ಯಕ್ತಿ ಎಂದು ವೈರಲ್ ಆಗಿದ್ದ ವಿಡಿಯೋ (viral video) ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಟ ದುನಿಯಾ ವಿಜಯ್ (Dunia Vijay) ಮತ್ತು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ (Bhaskara Rao) ಅವರಿಗೆ ಸಂಕಷ್ಟ ಎದುರಾಗಿದೆ. ಈ ವಿಡಿಯೋ ಬಗ್ಗೆ ಸ್ಪಷ್ಟನೆ ಕೇಳಿ ಬಾಗಲೂರು ಠಾಣೆ ಪೊಲೀಸರು ನೋಟಿಸ್ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಡಿಯೋ ಕುರಿತಂತೆ ಸಮಾಜದ ಜಾಲತಾಣದಲ್ಲಿ ನಟ ವಿಜಯ್ ಮತ್ತು ಭಾಸ್ಕರ್ ರಾವ್ ವಿಡಿಯೋ ಅಪ್ಲೋಡ್ ಮಾಡಿದ್ದರು. ಪ್ರಕರಣ ಸಂಬಂಧ ಬಾಗಲೂರು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈಗಾಗಲೇ ಈ ವಿಡಿಯೋ ಹಂಚಿಕೊಂಡಿದ್ದ 15 ಜನರಿಗೆ ನೋಟಿಸ್ ನೀಡಿದ್ದಾರೆ. ಮಾಹಿತಿಯ ಬಗ್ಗೆ ದಾಖಲೆ ಒದಗಿಸುವಂತೆ ಸೂಚನೆ ನೀಡಿದ್ದಾರೆ.
ದುನಿಯಾ ವಿಜಯ್ ಮತ್ತು ಭಾಸ್ಕರ್ ರಾವ್ ಈಗಾಗಲೇ ವಿಡಿಯೋ ಡಿಲೀಟ್ ಮಾಡಿದ್ದಾರೆ. ಆ ವಿಡಿಯೋ ರಿಟ್ಯು ಮಾಡುವಂತೆ ಇನ್ಸ್ಟಾಗ್ರಾಂಗೆ ಪೊಲೀಸರು ಪತ್ರ ಬರೆದಿದ್ದಾರೆ. ವಿಡಿಯೋ ಸಿಕ್ಕ ಬಳಿಕ ನೋಟಿಸ್ ಕೊಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಜೋಂಬಿಯಂತೆ ವಿಚಿತ್ರವಾಗಿ ವರ್ತಿಸುತ್ತಿರುವುದು ಕಂಡುಬಂದಿತ್ತು. ಆದರೆ ತನಿಖೆಯ ನಂತರ, ಆ ವ್ಯಕ್ತಿ ಅತಿಯಾದ ಮದ್ಯಪಾನ ಮಾಡಿ ಸಮತೋಲನ ತಪ್ಪಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂತಹ ಯಾವುದೇ ಜೋಂಬಿ ಡ್ರಗ್ಸ್ ಪತ್ತೆಯಾಗಿಲ್ಲ. ಇದು ಕೇವಲ ವದಂತಿ ಎಂದು ಪೊಲೀಸ್ ಆಯುಕ್ತರು ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದರು. ಈ ಸುಳ್ಳು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.