ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೋತಿಗಳಿಗೆ ಆಹಾರ ಹಾಕುತ್ತಿದ್ದಾಗ ಅವಘಡ: ಬೆಟ್ಟದ ಮೇಲಿನ ದೇವಾಲಯದಿಂದ ಬಿದ್ದು ಮಹಿಳೆ ದುರ್ಮರಣ

Woman Dies After Falling from Hilltop: 24 ವರ್ಷದ ನವವಿವಾಹಿತೆಯೊಬ್ಬರು ಬೆಟ್ಟದ ತುದಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ. ಕೋತಿಗಳ ಗುಂಪಿಗೆ ಹಣ್ಣುಗಳನ್ನು ತಿನ್ನಿಸುತ್ತಿದ್ದಾಗ ಆಕೆಯನ್ನು ಸುತ್ತುವರೆದಿದೆ ಎನ್ನಲಾಗಿದೆ. ಇದರಿಂದ ಭೀತಿಗೊಂಡ ಆಕೆ ಸಮತೋಲನ ಕಳೆದುಕೊಂಡು ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾಳೆ.

ಬೆಟ್ಟದ ಮೇಲಿನ ದೇವಾಲಯದಿಂದ ಬಿದ್ದು ಮಹಿಳೆ ದುರ್ಮರಣ

ಬೆಟ್ಟದ ಮೇಲಿನ ದೇವಾಲಯದಿಂದ ಬಿದ್ದು ಮಹಿಳೆ ದುರ್ಮರಣ -

Priyanka P
Priyanka P Jun 27, 2026 4:54 PM

ಚೆನ್ನೈ, ಜೂ.27: 24 ವರ್ಷದ ನವವಿವಾಹಿತೆಯೊಬ್ಬರು ಬೆಟ್ಟದ ತುದಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ತಮಿಳುನಾಡಿನ (Tamil Nadu) ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ. ಕೋತಿಗಳ (Monkeys) ಗುಂಪಿಗೆ ಹಣ್ಣುಗಳನ್ನು ತಿನ್ನಿಸುತ್ತಿದ್ದಾಗ ಆಕೆಯನ್ನು ಸುತ್ತುವರೆದಿದೆ ಎನ್ನಲಾಗಿದೆ. ತೂತುಕುಡಿಯ ದಕ್ಷಿಣ ತಿಟ್ಟಂಕುಳಂ ಪ್ರದೇಶದ ಅನಿತಾ ಎಂಬ ಸಂತ್ರಸ್ತೆಯನ್ನು ಕಳೆದ ತಿಂಗಳಷ್ಟೇ 29 ವರ್ಷದ ಸುರೇಶ್ ಅವರನ್ನು ವಿವಾಹವಾಗಿದ್ದರು. ವಿದೇಶದಲ್ಲಿ ಕೆಲಸ ಮಾಡುತ್ತಿರುವ ಸುರೇಶ್ ಇತ್ತೀಚೆಗೆ ಮನೆಗೆ ಮರಳಿದ್ದರು. ದಂಪತಿಗಳು ಪ್ರಾರ್ಥನೆ ಸಲ್ಲಿಸಲು ಕಜುಗುಮಲೈನಲ್ಲಿರುವ ಕಲುಗಸಲಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಮುಖ್ಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ, ದಂಪತಿಗಳು ಬೆಟ್ಟದ ತುದಿಯಲ್ಲಿರುವ ಉಚಿಪಿಳ್ಳಯಾರ್ ದೇವಾಲಯಕ್ಕೆ ಹತ್ತಿದರು. ದಂಪತಿಗಳು ಕೋತಿಗಳಿಗೆ ಹಣ್ಣುಗಳನ್ನು ತಿನ್ನಿಸುತ್ತಿದ್ದಾಗ ಹಲವಾರು ಕೋತಿಗಳು ಇದ್ದಕ್ಕಿದ್ದಂತೆ ಅವರ ಸುತ್ತಲೂ ಗುಂಪುಗೂಡಿದವು ಎಂದು ಪೊಲೀಸರು ತಿಳಿಸಿದ್ದಾರೆ. ಇದು ಆಕೆಯಲ್ಲಿ ಭೀತಿ ಉಂಟುಮಾಡಿತು. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಕೋತಿಗಳು ಗುಂಪುಗೂಡಿದ್ದರಿಂದ ಗಾಬರಿಯಾದ ಅನಿತಾ ಆಯ ತಪ್ಪಿ ಬೆಟ್ಟದ ತುದಿಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವಿಗೀಡಾದರು.

​ತನ್ನ ಮರಿಯಂತೆ ಬೀದಿ ನಾಯಿಮರಿಯನ್ನು ಎತ್ತಿ ಮುದ್ದಾಡಿದ ಕೋತಿ; ಹೃದಯಸ್ಪರ್ಶಿ ವಿಡಿಯೋ ವೈರಲ್‌

ಕಜುಗುಮಲೈನ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ, ಪೊಲೀಸರೊಂದಿಗೆ ಸೇರಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿಗೆ ನಿಖರವಾದ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

ಬೆಟ್ಟದಿಂದ ತಳ್ಳಿ ಭಾವಿ ಪತಿಯನ್ನು ಕೊಂದಿದ್ದ ಯುವತಿ

ಪ್ರತ್ಯೇಕ ಘಟನೆಯೊಂದರಲ್ಲಿ 26 ವರ್ಷದ ರಿಯಲ್ ಎಸ್ಟೇಟ್ ನಿರ್ದೇಶಕ ಕೇತನ್‌ ವಿಶಾಲ್ ಅಗರ್ವಾಲ್ ಎಂಬುವವರನ್ನು ಅವರ ಭಾವಿ ಪತ್ನಿಯೇ ಕೊಲೆ ಮಾಡಿದ್ದ ಘಟನೆ ಇತ್ತೀಚೆಗೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋಹಗಡ್ ಕೋಟೆಯಲ್ಲಿ ಸಂಭವಿಸಿತ್ತು. ಈ ಪ್ರಕರಣ ದೇಶವನ್ನೇ ತಲ್ಲಣಗೊಳಿಸಿತ್ತು. ಟ್ರೆಕ್ಕಿಂಗ್ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಬಿಂಬಿಸಲಾಗಿತ್ತು. ಬಳಿಕ ಇದು ಪೂರ್ವಯೋಜಿತ ಕೊಲೆ ಎಂದು ತಿಳಿದುಬಂದಿದೆ.

ಕೇತನ್‌ ಅಗರ್ವಾಲ್ ಮತ್ತು ಸಿಯಾ ಗೋಯಲ್ ಅವರ ನಿಶ್ಚಿತಾರ್ಥವಾಗಿದ್ದು, ಕುಟುಂಬಸ್ಥರು ಮದುವೆ ಸಿದ್ಧತೆಗಳನ್ನು ಕೂಡ ಆರಂಭಿಸಿದ್ದರು. 17 ಕೋಟಿ ರೂ. ಕೊಟ್ಟು ರಾಜಸ್ಥಾನದ ಉದಯಪುರದಲ್ಲಿ ಮದುವೆ ಮಂಟಪವನ್ನೂ ಬುಕ್ ಮಾಡಲಾಗಿತ್ತು. ಆದರೆ ತನಿಖೆಯಲ್ಲಿ ಸಿಯಾ ಗೋಯಲ್ ಕಳೆದ ಒಂದು ವರ್ಷದಿಂದ ಪುಣೆಯ ಕೊಂಡ್ವಾ ನಿವಾಸಿ 22 ವರ್ಷದ ಚೇತನ್ ಬಾಬುಲಾಲ್ ಚೌಧರಿಯನ್ನು ಪ್ರೀತಿಸುತ್ತಿದ್ದಳು. ಪ್ರಿಯತಮನೊಂದಿಗೆ ಸೇರಿ ಭಾವಿ ಪತಿಗೆ ಚಟ್ಟ ಕಟ್ಟಿದ್ದಾಳೆ. ಈ ಪ್ರಕರಣದಿಂದ ಕೇತನ್‌ ಕುಟುಂಬ ಮಾತ್ರವಲ್ಲ ಸಿಯಾ ಕುಟುಂಬವೂ ಆಘಾತಗೊಂಡಿದೆ. ಆಕೆಗೂ ಅದೇ ಶಿಕ್ಷೆ ನೀಡಬೇಕೆಂದು ಆಕೆಯ ಪೋಷಕರು ಆಗ್ರಹಿಸಿದ್ದಾರೆ.