ಒಕ್ಕಲಿಗರ ಸಂಘದಲ್ಲಿ ಅವ್ಯವಹಾರದ ವಾಸನೆ
ರಾಜ್ಯದ ಪ್ರತಿಷ್ಠಿತ ಸಮುದಾಯ ಸಂಸ್ಥೆಗಳಲ್ಲಿ ಒಂದಾದ ರಾಜ್ಯ ಒಕ್ಕಲಿಗರ ಸಂಘ ದಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಸಂಘದಲ್ಲಿ ನಡೆದಿರುವ ನೇಮಕಾತಿಗಳಲ್ಲಿ ಒಂದು ಹುದ್ದೆಗೆ 10 ರಿಂದ 20 ಲಕ್ಷ ರು. ವರೆಗೆ ಲಂಚ ಪಡೆದಿರುವ ಆರೋಪದ ಜತೆಗೆ 480 ಹುದ್ದೆಗಳ ನೇಮಕಾತಿ ಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ.
-
400 ಹುದ್ದೆಗಳ ಭರ್ತಿಯಲ್ಲಿ ಭ್ರಷ್ಟಾಚಾರದ ಆರೋಪ
ಒಂದು ಹುದ್ದೆಗೆ 10 ರಿಂದ 20 ಲಕ್ಷ ರು. ಲಂಚ
ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಸಮುದಾಯ ಸಂಸ್ಥೆಗಳಲ್ಲಿ ಒಂದಾದ ರಾಜ್ಯ ಒಕ್ಕಲಿಗರ ಸಂಘ ದಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಸಂಘದಲ್ಲಿ ನಡೆದಿರುವ ನೇಮಕಾತಿಗಳಲ್ಲಿ ಒಂದು ಹುದ್ದೆಗೆ 10 ರಿಂದ 20 ಲಕ್ಷ ರು. ವರೆಗೆ ಲಂಚ ಪಡೆದಿರುವ ಆರೋಪದ ಜತೆಗೆ 480 ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ.
ಸಂಘದಲ್ಲಿ ನಡೆದಿರುವ ಹಲವು ಹುದ್ದೆಗಳ ನೇಮಕಾತಿಯಲ್ಲಿ ಕೋಟ್ಯಂತರ ರು. ಲಂಚದ ವ್ಯವಹಾರ ನಡೆದಿದೆ ಎಂಬ ಆರೋಪ ಆಡಳಿತ ಮಂಡಳಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೇಡರ್ ಆಂಡ್ ರಿಕ್ರೂಟ್ಮೆಂಟ್(ಸಿ ಅಂಡ್ ಆರ್) ನಿಯಮಗಳಿವೆ. ಇದರ ಪ್ರಕಾರ ಯಾವುದೇ ಹುದ್ದೆಯನ್ನು ಭರ್ತಿ ಮಾಡಬೇಕಾದರೆ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಯಲ್ಲಿ ಜಾಹೀರಾತು ನೀಡಬೇಕು, ಯಾವ ಹುದ್ದೆ, ಅದಕ್ಕೆ ಕನಿಷ್ಠ ವಿದ್ಯಾರ್ಹತೆ, ವಯೋಮಿತಿ, ಅನುಭವ ಎಂದು ಹತ್ತು ಹಲವು ನಿಬಂಧನೆ ಗಳನ್ನು ಹಾಕಿ ನೇಮಕಾತಿ ಮಾಡಿಕೊಳ್ಳಬೇಕು. ಆದರೆ ಇದ್ಯಾವುದನ್ನೂ ಮಾಡದೇ ಕುಟುಂಬಸ್ಥರು, ಸಂಬಂಧಿಕರು, ಹಣ ನೀಡಿದವರಿಗೆ ನೇಮಕಾತಿ ಪತ್ರಗಳನ್ನು ನೀಡಿರುವುದು ಹಲವು ಅನುಮಾನ ಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: Vokkaliga Yuva Brigade: ನಂಜೇಗೌಡ ನಂಜುಂಡ ಒಕ್ಕಲಿಗ ಸಮುದಾಯದ ಆಸ್ತಿಯಾಗಿದ್ದಾರೆ: ಡಾ.ನಿಶ್ಚಲಾನಂದ ಸ್ವಾಮೀಜಿ
ಪತ್ರಿಕೆಯಲ್ಲಿ ಜಾಹೀರಾತು ನೀಡಿಲ್ಲ, ಅರ್ಜಿಗಳನ್ನೂ ಆಹ್ವಾನಿಸಿಲ್ಲ. ಜೇಷ್ಠತಾ ಪಟ್ಟಿಯನ್ನೂ ತಯಾರಿಸಿಲ್ಲ, ಸಂದರ್ಶನವನ್ನೂ ನಡೆಸಿಲ್ಲ. ದುಡ್ಡು ಬಂದಾಗಲೇ ಆದೇಶ ಕೊಡುತ್ತಿದ್ದಾರೆಯೇ ಹೊರತು ನೇಮಕಾತಿ ಪಟ್ಟಿ ತಯಾರಿಸಿ ಪ್ರಕಟಿಸಿಲ್ಲ. ಕಂಪ್ಯೂಟರ್ ಆಪರೇಟರ್ ತೆಗೆದುಕೊಳ್ಳಬೇಕು ಎಂದು ತೀರ್ಮಾನವಾಗಿತ್ತು. ಆದರೆ ಇವರು ಎಸ್‌ಡಿಎ/ಕಂಪ್ಯೂಟರ್ ಆಪರೇಟರ್ ಎಂದು ತೆಗೆದು ಕೊಂಡಿದ್ದಾರೆ.
ಕಂಪ್ಯೂಟರ್ ಜ್ಞಾನ ಇಲ್ಲದವರನ್ನು ತೆಗೆದುಕೊಳ್ಳಲು ಈ ರೀತಿ ಮಾಡಿದ್ದಾರೆ ಎಂದು ಆಪಾದಿಸ ಲಾಗಿದೆ. ಕನಿಷ್ಠ ಜ್ಞಾನವೂ ಇಲ್ಲದವರನ್ನು ರಾಜ್ಯ ಒಕ್ಕಲಿಗರ ಸಂಘಕ್ಕೆ ನೇಮಕಾತಿ ಮಾಡಿಕೊಂಡಿ ದ್ದಾರೆ. ದುಡ್ಡು ಬಂದಂತೆ ಆದೇಶ ಕೊಡುತ್ತಿದ್ದಾರೆಯೇ ಹೊರತು ಲಿಸ್ಟ್ ತಯಾರು ಮಾಡಿ ಘೋಷಿ ಸಿಲ್ಲ. ಇದನ್ನು ವಿರೋಧಿಸಿ ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ದೂರು ನೀಡಿದ್ದೇವೆ. ನಮ್ಮ ಬಳಿ ಸಾಕ್ಷ್ಯಾಧಾರಗಳಿದ್ದು, ಭ್ರಷ್ಟರಿಗೆ ಶಿಕ್ಷೆಯಾಗಬೇಕು ಎಂದು ಸಂಘದ ವಿರುದ್ಧ ಕೆಲ ಪದಾಧಿಕಾರಿಗಳು ದೂರಿದ್ದಾರೆ.
ವಿವಾದಗಳಲ್ಲಿಯೇ ಮುಳುಗಿರುವ ಒಕ್ಕಲಿಗರ ಸಂಘಕ್ಕೆ ಕಾಯಕಲ್ಪ ಇಲ್ಲವಾಗಿದೆ. ಏಕೆಂದರೆ ಸಂಘಕ್ಕೆ ನಿರ್ದೇಶಕರಾಗಿ ಬಂದವರೆ ಅವಿಶ್ವಾಸ ನಿರ್ಣಯಕ್ಕೆ ಸಿಲುಕಿ ಹುದ್ದೆ ತ್ಯಜಿಸಿದ್ದಾರೆ. ಅಲ್ಲದೆ ಕೆಲ ನಿರ್ದೇಶಕರ ಮೇಲೆ ಹಲವು ಆರೋಪಗಳಿವೆ. ಒಕ್ಕಲಿಗ ಸಮುದಾಯದ ಕಲ್ಯಾಣಕ್ಕೆ ಯಾವುದೇ ಕಾರ್ಯಕ್ರಮ ರೂಪಿಸದೆ ನಿರ್ದೇಶಕರ ಕಲ್ಯಾಣಕ್ಕೆ ಮಾತ್ರ ಸಂಘ ಸೀಮಿತವಾಗಿರುವ ಆರೋಪವೂ ಇದೆ. ಸಮುದಾಯದ ಪ್ರಗತಿಗೆ ಯಾವುದೇ ಪ್ರಗತಿಪರ ಯೋಜನೆಯನ್ನು ಸಂಘ ಘೋಷಣೆ ಮಾಡಿಲ್ಲ. ಅಕ್ರಮಗಳಲ್ಲೇ ಮುಳುಗಿರುವ ಸಂಘಕ್ಕೆ ಕಾನೂನು ಅಸ್ತ್ರದ ಮೂಲಕ ಬಿಗಿ ಮಾಡ ಬೇಕಿದೆ.
ಸಂಘದ ಇನ್ನಷ್ಟು ಅಕ್ರಮಗಳ ಬಹಿರಂಗ
ರಾಜ್ಯ ಒಕ್ಕಲಿಗರ ಸಂಘದಲ್ಲಿ ನಡೆದಿರುವ ಇನ್ನಷ್ಟು ಅಕ್ರಮಗಳ ಕುರಿತು ಬಯಲಿಗೆ ಬರಲಿವೆ. ಕಂಪ್ಯೂಟರ್ ಆಪರೇಟರ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಆ ಕುರಿತು ತಮ್ಮ ಬಳಿ ಸಾಕ್ಷ್ಯಗಳಿವೆ ಎಂದು ಸಂಘದ ನಿರ್ದೇಶಕ ಕೋನಪ್ಪ ರೆಡ್ಡಿ ಹೇಳಿದ್ದಾರೆ. ಕಂಪ್ಯೂಟರ್ ಆಪರೇಟರ್ ಗಳನ್ನು ನೇಮಕಾತಿ ಮಾಡಿಕೊಳ್ಳಲು ಜಾಹೀರಾತು ನೀಡದೆ, ಅರ್ಜಿ ಆಹ್ವಾನಿಸದೆ ಹಣ ನೀಡಿದವ ರಿಗೆ ಹುದ್ದೆ ನೀಡಲಾಗಿದೆ. ಈ ಬಗ್ಗೆ ತಮ್ಮಲ್ಲಿ ಆಡಿಯೊ ಮತ್ತು ವಿಡಿಯೊ ದಾಖಲೆಗಳಿವೆ. ಈ ಕುರಿತು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಿದ್ದೇವೆ. ತನಿಖೆ ನಡೆದು ಭ್ರಷ್ಟರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸುವ ಮೂಲಕ ಅಕ್ರಮಗಳ ಕುರಿತು ದಾಖಲೆ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
*
ಜಾಹೀರಾತು ನೀಡಿಲ್ಲ, ಅರ್ಜಿ ಆಹ್ವಾನಿಸಿಲ್ಲ. ಜೇಷ್ಠತಾ ಪಟ್ಟಿ ತಯಾರಿಸಿಲ್ಲ, ಸಂದರ್ಶನವನ್ನೂ ನಡೆಸಿಲ್ಲ
ದುಡ್ಡು ಬಂದಾಗಲೇ ಆದೇಶ ಕೊಡುತ್ತಿದ್ದಾರೆಯೇ ಹೊರತು ನೇಮಕಾತಿ ಪಟ್ಟಿ ಪ್ರಕಟಿಸಿಲ್ಲ