ಹೋಟೆಲ್‌ನಲ್ಲಿ ಸಿಎಂ ರಹಸ್ಯ ಸಭೆ ನಡೆಸಿದ್ದು ಯಾರೊಂದಿಗೆ? ಕುಮಾರಸ್ವಾಮಿ ಪ್ರಶ್ನೆ
ಡಿ.ಕೆ.ಶಿವಕುಮಾರ್ ಅವರು ಐವರು ಸಚಿವರನ್ನು ‘ನಿಮ್ಮ ವಿರುದ್ಧ ಸ್ಟಿಂಗ್ ಆಗಿದೆ ಎಂದು ಬ್ಲ್ಯಾಕ್ ಮೇಲ್ ಮಾಡುವ ಮುನ್ನ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್ ಪಕ್ಕದ ಪಂಚತಾರಾ ಹೋಟೆಲ್‌ನಲ್ಲಿ ಸ್ಟಿಂಗ್ ಮಾಡುವ ವ್ಯಕ್ತಿಯೊಂದಿಗೆ ಗಂಟೆಗಟ್ಟಲೆ ಚರ್ಚೆ ನಡೆಸಿದ್ದರು. ಆ ಹೋಟೆಲ್ ನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಕೂತಿದ್ದ ಆ ವ್ಯಕ್ತಿ ಯಾರು? ಆ ವ್ಯಕ್ತಿಯ ಜತೆ ಈ ಮುಖ್ಯಮಂತ್ರಿಗೆ ಏನು ಸಂಬಂಧ? ಆ ವ್ಯಕ್ತಿಯನ್ನು ಇಟ್ಟುಕೊಂಡು ಮುಖ್ಯಮಂತ್ರಿ ಯಾರ ಯಾರ ವಿರುದ್ಧ ಸ್ಟಿಂಗ್ ಮಾಡಿಸಿದ್ದರು ಎಂಬುದನ್ನು ಡಿಕೆಶಿ ಅವರು ರಾಜ್ಯದ ಜನರಿಗೆ ಹೇಳಬೇಕಾಗುತ್ತದೆ’ ಎಂದು ಅಗ್ರಹಿಸಿದರು.
-
ಬೆಂಗಳೂರು: ರಾಜ್ಯಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ತನಿಖೆ ನಡೆಸಲು ಏಕೆ ಮುಂದಾಗುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(H D Kumaraswamy) ಪ್ರಶ್ನಿಸಿದ್ದಾರೆ.
ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದ ಐದು ಸಚಿವರ ವಿರುದ್ಧ ಸ್ಟಿಂಗ್ ಆಪ ರೇಷನ್ ನಡೆದಿದೆ ಎಂದು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿ ಸಲಾಗಿದೆ ಎನ್ನಲಾಗಿದೆ. ತಮ್ಮ ವಿರುದ್ಧವೇ ಸ್ಟಿಂಗ್ ಆಪರೇಷನ್ ನಡೆದಿದೆ ಎನ್ನುವ ಆರೋಪವನ್ನು ಡಿಕೆ ಮಾಡಿದ್ದಾರೆ. ಹೀಗಿದ್ದರೂ, ಗೃಹ ಸಚಿವರು ಈ ಪ್ರಕರಣದಲ್ಲಿ ತನಿಖೆ ಏಕೆ ನಡೆಸಲು ಮುಂದಾಗಿಲ್ಲ? ಈ ಆರೋಪದಲ್ಲಿ ಯಾರೆಲ್ಲ ಭಾಗವಹಿಸಿದ್ದಾರೆ? ಇಡೀ ಸಂಪುಟವೇ ಈ ಪ್ರಕರಣದಲ್ಲಿ ಭಾಗವಾಗಿ ದೆಯೇ? ಎಂದು ಖಾರವಾಗಿ ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ ಅವರು ಐವರು ಸಚಿವರನ್ನು ‘ನಿಮ್ಮ ವಿರುದ್ಧ ಸ್ಟಿಂಗ್ ಆಗಿದೆ ಎಂದು ಬ್ಲ್ಯಾಕ್ ಮೇಲ್ ಮಾಡುವ ಮುನ್ನ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್ ಪಕ್ಕದ ಪಂಚತಾರಾ ಹೋಟೆಲ್‌ನಲ್ಲಿ ಸ್ಟಿಂಗ್ ಮಾಡುವ ವ್ಯಕ್ತಿಯೊಂದಿಗೆ ಗಂಟೆಗಟ್ಟಲೆ ಚರ್ಚೆ ನಡೆಸಿದ್ದರು. ಆ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಕೂತಿದ್ದ ಆ ವ್ಯಕ್ತಿ ಯಾರು? ಆ ವ್ಯಕ್ತಿಯ ಜತೆ ಈ ಮುಖ್ಯಮಂತ್ರಿಗೆ ಏನು ಸಂಬಂಧ? ಆ ವ್ಯಕ್ತಿಯನ್ನು ಇಟ್ಟುಕೊಂಡು ಮುಖ್ಯಮಂತ್ರಿ ಯಾರ ಯಾರ ವಿರುದ್ಧ ಸ್ಟಿಂಗ್ ಮಾಡಿಸಿದ್ದರು ಎಂಬುದನ್ನು ಡಿಕೆಶಿ ಅವರು ರಾಜ್ಯದ ಜನರಿಗೆ ಹೇಳಬೇಕಾಗುತ್ತದೆ’ ಎಂದು ಅಗ್ರಹಿಸಿದರು.
ನನ್ನ ವಿರುದ್ಧವೇ ಸ್ಟಿಂಗ್ ನಡೆದಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅಲ್ಲಿಗೆ ರಾಜ್ಯದಲ್ಲಿ ಕಿಂಗ್ ಅಪರೇಷನ್ ನಡೆ ಯುತ್ತಿದೆ ಎಂದು ಸ್ವತಃ ಅವರೇ ಒಪ್ಪಿಕೊಂಡಂತೆ ಆಯಿತು. ಸ್ಟಿಂಗ್ ವಿಷಯ ನಿಜ ಎಂದು ಅವರೇ ಒಪ್ಪಿಕೊಂಡಂತೆ ಆಯಿತು. ಹಾಗಾದರೆ ಮೌಂಟ್ ಕಾರ್ಮೆಲ್ ಕಾಲೇಜಿನ ಪಕ್ಕದ ಹೋಟೆಲ್ ನಲ್ಲಿ ಸ್ಟಿಂಗ್ ಆಪರೇಷನ್ ಮಾಡುವ ವ್ಯಕ್ತಿ ಜತೆ ಕೂತು ಎಷ್ಟು ಹೊತ್ತು ಚರ್ಚೆ ನಡೆಸಿದಿರಿ? ಆ ವ್ಯಕ್ತಿ ಯಾರು ಅಂತ ಜನರ ಮುಂದೆ ಮುಖ್ಯಮಂತ್ರಿ ಹೇಳಬೇಕಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಎಚ್‌ಡಿಕೆಗೆ ಲತಾ ಟಾಂಗ್
ಹಾಸನ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಕೆಪಿಎಸ್‌ಸಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಪದ ಬೆನ್ನಿಗೇ, ಲತಾಕುಮಾರಿ, ‘ಸತ್ಯಮೇವ ಜಯತೇ’ ಎಂದು ರಾಷ್ಟ್ರಲಾಂಛನ ಜತೆ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ಈ ಮೂಲಕ ಕೇಂದ್ರ ಸಚಿವರಿಗೆ ನೇರವಾಗಿ ಟಾಂಗ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
“ನನ್ನ ಮೇಲೆ ಸುಳ್ಳಿನ ದಾಳಿ ಮಾಡಬಹುದು ಆದರೆ ನೀವು ನನ್ನನ್ನು ಸುಳ್ಳಿನಿಂದ ಕುಗ್ಗಿಸಲು ಸಾಧ್ಯವಿಲ್ಲ. ಸುಳ್ಳು ದಾಳಿ ಮಾಡಿದರೆ, ಸತ್ಯ ರಕ್ಷಣೆ ಮಾಡುತ್ತೆ’ ಎಂದು ಲತಾಕುಮಾರಿ ತಮ್ಮ ವೈಯಕ್ತಿಕ ನಂಬರ್‌ನ ವಾಟ್ಸಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ. ಶನಿವಾರವಷ್ಟೇ ಹೆಚ್.ಡಿ.ಕುಮಾರಸ್ವಾಮಿ, ‘ಹಾಸನ ಜಿಲ್ಲಾಧಿಕಾರಿ ಹುದ್ದೆಯಲ್ಲಿರುವ ಮಹಿಳೆ ಕೆಪಿಎಸ್ಸಿಯಲ್ಲಿ ಏನೇನು ಮಾಡಿದ್ದಾರೆ ಎಂಬುದು ದಾಖಲೆ ಸಮೇತ ಸಾಬೀತಾಗಿದೆ. ಆದರೂ ಅಲ್ಲಿ ಅಕ್ರಮ ಎಸಗಿದ ಇವರನ್ನು ಇಲ್ಲಿ ಜಿಲ್ಲಾಧಿಕಾರಿ ಸ್ಥಾನದಲ್ಲಿ ಕೂರಿಸಿದ್ದಾರೆ. ಅವತ್ತೇ ಅವರನ್ನು ರಜೆಯ ಮೇಲೆ ಕಳಿಸಿ ಅಮಾನತು ಮಾಡಬೇಕಾಗಿತ್ತು’ ಎಂದು ಎಚ್‌ಡಿಕೆ ಕಿಡಿಕಾರಿದ್ದರು
![]()
ಐದು ಜನ ಮಂತ್ರಿಗಳ ಮೇಲೆ ಸ್ಟಿಂಗ್ ಆಪರೇಷನ್ ನಡೆದಿದೆ ಎಂದು ಮುಖ್ಯಮಂತ್ರಿಯವರು ಸಂಪುಟ ಸಭೆಯಲ್ಲಿ ಹೇಳಿದ್ದಾರೆ ಎಂದು ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿವೆ. ತಮ್ಮ ಸಂಪುಟದ ಸದಸ್ಯರ ಮೇಲೆ ನಡೆದಿರುವ ಈ ಕುಟುಕು ಕಾರ್ಯಾಚರಣೆಯ ಬಗ್ಗೆ ಮುಖ್ಯ ಮಂತ್ರಿ ಉತ್ತರ ಕೊಡಬೇಕಾಗುತ್ತದೆ. ಇದನ್ನು ಸೂಕ್ತ ರೀತಿಯಲ್ಲಿ ತನಿಖೆ ಮಾಡಿಸ ಬೇಕಾಗುತ್ತದೆ. ನಿಮ್ಮದೇ ಸರಕಾರ ಇದೆ. ನಿಮ್ಮದೇ ಪೊಲೀಸ್ ವ್ಯವಸ್ಥೆ ಇದೆ.
-ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ