ಬೆಂಗಳೂರಿನಲ್ಲಿ ನಡು ರಸ್ತೆಯಲ್ಲೇ ಬಸ್ ಅಡ್ಡಗಟ್ಟಿದ ಮಹಿಳೆ; ಚಾಲಕನಿಗೆ ದಮ್ಕಿ ಹಾಕಿದ ಬಾಲಕರು
Viral Video: ಬೆಂಗಳೂರಿನ ಟ್ರಾಫಿಕ್ ನಡುವೆ ರಸ್ತೆ ಮಧ್ಯದಲ್ಲೇ ಮಹಿಳೆಯೊಬ್ಬಳು ತನ್ನ ಮಕ್ಕಳೊಂದಿಗೆ ಬಸ್ ಚಾಲಕನ ಜತೆ ಜಗಳ ಮಾಡಿರುವ ವಿಡಿಯೊವೊಂದು ವೈರಲ್ ಆಗಿದೆ. ಮಹಿಳೆ ತನ್ನ ಸ್ಕೂಟರ್ ಅನ್ನು ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗೆ ಅಡ್ಡ ಹಾಕಿ ಚಾಲಕನೊಂದಿಗೆ ಜಗಳ ಆಡಿದ್ದಾಳೆ. ಆಕೆಯ ಚಿಕ್ಕ ಮಕ್ಕಳೂ ಇದಕ್ಕೆ ಸಾಥ್ ನೀಡಿದ್ದಾರೆ.
ಬಸ್ ಅಡ್ಡಗಟ್ಟಿ ಚಾಲಕನಿಗೆ ದಮ್ಕಿ ಹಾಕಿದ ಮಹಿಳೆ -
ಬೆಂಗಳೂರು, ಜ. 21: ಬೆಂಗಳೂರಿನ ಟ್ರಾಫಿಕ್ ನಡುವೆ ಕಿರಿಕಿರಿ ನಡುವೆ ರಸ್ತೆ ಮಧ್ಯದಲ್ಲೇ ಮಹಿಳೆಯೊಬ್ಬಳು ಬಸ್ ಚಾಲಕನ ಜತೆ ಜಗಳ ಮಾಡಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬಳು ತನ್ನ ಸ್ಕೂಟರ್ ಅನ್ನು ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ (TNSTC) ಬಸ್‌ಗೆ ಅಡ್ಡ ಇಟ್ಟು ಚಾಲಕನೊಂದಿಗೆ ಜಗಳ ತೆಗೆದಿದ್ದಾಳೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದೆ.
ಮಹಿಳೆಯು ರಸ್ತೆಯ ಮಧ್ಯದಲ್ಲೇ ಬಸ್‌ಗೆ ಅಡ್ಡ ಹಾಕಿ ಸ್ಕೂಟರ್ ನಿಲ್ಲಿಸಿ ವಾಗ್ವಾದ ಮಾಡಿರುವುದು ಕಂಡುಬಂದಿದೆ. ಈ ವೇಳೆ ಮಹಿಳೆಯ ಜತೆ ಇದ್ದ ಮಕ್ಕಳು ಕೂಡ ಬಸ್ ಚಾಲಕನ ಬಳಿ ಹೋಗಿ ಕೂಗುತ್ತಿರುವ ದೃಶ್ಯ ಕಂಡು ಬಂದಿದೆ. ಜನವರಿ 20ರಂದು ಪೋಸ್ಟ್ ಮಾಡಲಾದ ಈ ಕ್ಲಿಪ್‌ನಲ್ಲಿ ಇಬ್ಬರು ಚಿಕ್ಕ ಮಕ್ಕಳು ತಮ್ಮ ತಾಯಿಯನ್ನು ಹಿಂಬಾಲಿಸುತ್ತಿರುವುದನ್ನು ಮತ್ತು ಬಸ್ ಚಾಲಕನ ದಮ್ಕಿ ಹಾಕುತ್ತಿರುವುದನ್ನುನೋಡಬಹುದು.
ವಿಡಿಯೊ ನೋಡಿ:
Mom on scooter blocking TNSTC bus like it’s personal, two tiny kids screaming at driver: “Come touch me if you have guts!” 😭
— Ghar Ke Kalesh (@gharkekalesh) January 20, 2026
Driver just wants to finish shift, now facing the world’s smallest & bravest mafia 😂
Just Bengaluru things 🤌
pic.twitter.com/5yp3zmkWCv
ಇಬ್ಬರು ಪುಟ್ಟ ಮಕ್ಕಳು (10 ವರ್ಷದೊಳಗಿನ ಮಕ್ಕಳು) ಚಾಲಕನ ಮುಂದೆ ಕಿರುಚುತ್ತ ನಿಮಗೆ ಧೈರ್ಯವಿದ್ದರೆ ನಮ್ಮನ್ನು ಮುಟ್ಟಿ ಎಂದು ಸವಾಲು ಹಾಕಿದ್ದಾರೆ. ತಾಯಿ ಮಕ್ಕಳನ್ನು ನಿಯಂತ್ರಿಸುವ ಬದಲು ಅವರ ಬೆಂಬಲಕ್ಕೆ ನಿಂತಿದ್ದಾಳೆ. ನಂತರ ಮತ್ತೊಬ್ಬ ವ್ಯಕ್ತಿ ಬಂದು ಬಸ್ ಮೇಲೆ ಕೈಯಿಂದ ಗುದ್ದಿ ಆಕ್ರೋಶ ಹೊರ ಹಾಕಿದ್ದಾನೆ. ಈ ಜಗಳದಿಂದಾಗಿ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಸವಾರರು ತೊಂದರೆ ಎದುರಿಸಿದರು.
ಏರ್‌ಪೋರ್ಟ್ ರೋಡ್‌ನಲ್ಲಿ ಮಚ್ಚು ಹಿಡಿದು ವಿಲೀಂಗ್
ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು ಮಹಿಳೆಯ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ನೆಟ್ಟಿಗರೊಬ್ಬರು ಇದು ತಮಾಷೆಯಲ್ಲ...ಮಕ್ಕಳು ತಮ್ಮ ಪೋಷಕರನ್ನು ಅನುಸರಿಸುತ್ತಿದ್ದಾರೆ...ಪೋಷಕರು ಮಕ್ಕಳ ಎದುರು ಹೇಗೆ ವರ್ತಿಸಬಾರದು ಎಂಬುದಕ್ಕೆ ಈ ಘಟನೆಯೆ ಸಾಕ್ಷಿ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಚಾಲಕನು ತಾಳ್ಮೆ ಎಂಬ ಪದಕ್ಕೆ ಅರ್ಹನಾಗಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ರಸ್ತೆಯಲ್ಲಿ ಸಂಚಾರ ಅಡ್ಡಿಪಡಿಸಿ ಈ ರೀತಿ ಜಗಳ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.