ಇ.ಎಸ್.ಐಸಿ ಆಸ್ಪತ್ರೆಯಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆ
ಇ.ಎಸ್.ಐಸಿ ಮೆಡಿಕಲ್ ಕಾಲೇಜುನ ಡಾ.ಜೆ.ಎಂ.ಜೀತೇಂದ್ರ ಕುಮಾರ್, ವೈದ್ಯಕೀಯ ಅಧೀಕ್ಷಕ ರಾದ ಸಿಜಿಎಸ್ ಪ್ರಸಾದ್, ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ.ಸಯೀದ್ ಸಿರಾಜುದ್ದೀನ್ ಮದ್ನಿ ಅವರು ಆತ್ಮಹತ್ಯೆ ಕುರಿತು ನೈಜ ಮಾತು – ಸಂವಾದವನ್ನು ಪ್ರಾರಂಭಿಸೋಣ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ದರು.

-

ಬೆಂಗಳೂರು: ರಾಜಾಜಿನಗರ ಇ.ಎಸ್.ಐಸಿ ವೈದ್ಯಕೀಯ ಕಾಲೇಜುನಲ್ಲಿಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನ(World Suicide Prevention Day)ವನ್ನು ಆಚರಿಸಲಾಯಿತು.
ಇ.ಎಸ್.ಐಸಿ ಮೆಡಿಕಲ್ ಕಾಲೇಜುನ ಡಾ.ಜೆ.ಎಂ.ಜೀತೇಂದ್ರ ಕುಮಾರ್, ವೈದ್ಯಕೀಯ ಅಧೀಕ್ಷಕ ರಾದ ಸಿಜಿಎಸ್ ಪ್ರಸಾದ್, ಜಿಬಿಎ ಮುಖ್ಯ ಆರೋಗ್ಯಾಧಿಕಾರಿ ಡಾ. ಸಯೀದ್ ಸಿರಾಜುದ್ದೀನ್ ಮದ್ನಿ ಅವರು ಆತ್ಮಹತ್ಯೆ ಕುರಿತು ನೈಜ ಮಾತು – ಸಂವಾದವನ್ನು ಪ್ರಾರಂಭಿಸೋಣ ಹಾಗೂ ಕಾರ್ಯಕ್ರಮ ಉದ್ಘಾಟಿಸಿದರು.
ಇದನ್ನೂ ಓದಿ: Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ
ಆತ್ಮಹತ್ಯೆ ತಡೆಗೆ ವಾಕ್‌ಥಾನ್, ಈ ಬಗ್ಗೆ ವಿಶೇಷ ಉಪನ್ಯಾಸಗಳು, ಮಾನಸಿಕ ಆರೋಗ್ಯ ಸಹಾಯ ವಾಣಿ ಕಾರ್ಡ್‌ಗಳ ವಿತರಣೆ, ಆತ್ಮಹತ್ಯೆ ಜಾಗೃತಿ ನಾಟಕ ಪ್ರದರ್ಶನ, ವಿದ್ಯಾರ್ಥಿಗಳ ಜೀವನ ಪ್ರತಿಜ್ಞೆ ಕಾರ್ಯಕ್ರಮಗಳು ನಡೆದವು.
ಮುಖ್ಯ ಅತಿಥಿಗಳಾಗಿ ಮಾನಸಿಕ ಆರೋಗ್ಯ ಉಪ ನಿರ್ದೇಶಕರು, ಡಾ.ರಜನಿ ಪಿ, ಡಾ.ಪ್ರಸಾದ್, ಡಾ. ಮನೋರಂಜನ್ ಹೆಗ್ಡೆ, ಡಾ.ಸಂಘಮಿತ್ರ, ಡಾ.ಕಲಾವತಿ ದೇವಿ ಎ.ಎಲ್, ಡಾ.ಎಚ್.ಚಂದ್ರಶೇಖರ್, ಡಾ. ರಾಮು ಜಿ, ಡಾ. ನವೀನ್, ಡಾ. ವಿಕ್ರಮ್ ಅರುಣಾಚಲಂ, ಡಾ. ಸುಚಿತ್ರಾ, ಡಾ ವಿಜಯಕುಮಾರಿ ವಿ. ಡಾ ಶಾಂತಿನಿ, ಡಾ ಧನಂಜಯ, ಡಾ ಗಿರೀಶ್ ಎಂ ಎಸ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ತಜ್ಞರು, ಮಾನಸಿಕ ಆರೋಗ್ಯ ತಜ್ಞರು, ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.