ನಿಮ್ಮ ಸುರಕ್ಷತೆ ನಮ್ಮ ಅತ್ಯುನ್ನತ ಆದ್ಯತೆ: ಭಾರ್ತಿ ಏರ್ಟೆಲ್'ನ ಗೋಪಾಲ್ ವಿಠ್ಠಲ್
ಇಂದಿನ ಡಿಜಿಟಲ್ ಪಾವತಿ ಪರಿಸರದಲ್ಲಿ, ನಿಮ್ಮ ಮುಖ್ಯ ಬ್ಯಾಂಕ್ ಖಾತೆಯನ್ನು ಯುಪಿಐ ಅಥವಾ ಪೇಮೆಂಟ್ ಆ್ಯಪ್‌ಗಳಿಗೆ ಲಿಂಕ್ ಮಾಡುವುದರಿಂದ ನಿಮ್ಮ ಉಳಿತಾಯವು ಅಪಾಯಕ್ಕೆ ಒಳಗಾಗ ಬಹುದು. ನಮ್ಮ ಸೇಫ್ ಸೆಕೆಂಡ್ ಅಕೌಂಟ್ ನಿಮಗೆ ಸರಳ ಮತ್ತು ಸುರಕ್ಷಿತ ರಕ್ಷಣಾ ಮಾರ್ಗವನ್ನು ಒದಗಿಸುತ್ತದೆ
-
ಬೆಂಗಳೂರು: ಗೋಪಾಲ್ ವಿಠ್ಠಲ್, ವೈಸ್ ಚೇರ್‌ಮನ್ ಮತ್ತು ಎಂ.ಡಿ., ಭಾರ್ತಿ ಏರ್ಟೆಲ್, ಡಿಜಿಟಲ್ ವಂಚನೆಗಳು ಮತ್ತು ಮೋಸಗಳ ಹೆಚ್ಚುತ್ತಿರುವ ಅಪಾಯವನ್ನು ಉಲ್ಲೇಖಿಸಿ ಏರ್ಟೆಲ್ ಗ್ರಾಹಕರಿಗೆ ಪತ್ರ ಬರೆದಿದ್ದಾರೆ. ನಕಲಿ ಪಾರ್ಸೆಲ್ ಡೆಲಿವರಿ ಕರೆಗಳು, ಫಿಶಿಂಗ್ ಲಿಂಕ್‌ಗಳು ಮತ್ತು ಡಿಜಿಟಲ್ ಅರೆಸ್ಟ್ ಸ್ಕ್ಯಾಮ್‌ಗಳಂತಹ ಬೆದರಿಕೆಗಳು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ, ಬಳಕೆದಾರರ ಸುರಕ್ಷತೆಯನ್ನು ಆದ್ಯತೆಯಾಗಿ ಕಾಪಾಡುವ ಏರ್ಟೆಲ್‌ನ ಬದ್ಧತೆಯನ್ನು ಪುನರುಚ್ಚರಿಸಿದರು.
ತಮ್ಮ ಪತ್ರದಲ್ಲಿ, ಗ್ರಾಹಕರ ದುಡಿಮೆಯ ಹಣವನ್ನು ರಕ್ಷಿಸಲು ಮತ್ತು ಡಿಜಿಟಲ್ ಪಾವತಿಗಳನ್ನು ಅವರ ಮುಖ್ಯ ಬ್ಯಾಂಕ್ ಖಾತೆಯಿಂದ ಪ್ರತ್ಯೇಕವಾಗಿ ಇಡುವಂತೆ ವಿನ್ಯಾಸಗೊಳಿಸಲಾದ ಏರ್ಟೆಲ್ ಪೇಮೆಂಟ್ ಬ್ಯಾಂಕ್‌ನ ಸೇಫ್ ಸೆಕೆಂಡ್ ಅಕೌಂಟ್ ಅನ್ನು ಅವರು ಘೋಷಿಸಿದರು.
‘‘ನಮ್ಮ ಜಾಲತಾಣದಲ್ಲಿ ಸಂಭವಿಸುವ ಯಾವುದೇ ಅಪರಾಧ ಅಥವಾ ವಂಚನೆ ಏರ್ಟೆಲ್‌ಗೆ ತುಂಬಾ ನೋವನ್ನುಂಟುಮಾಡುತ್ತದೆ. ನಿಮ್ಮ ಸುರಕ್ಷತೆ ನಮ್ಮ ಅತ್ಯುನ್ನತ ಆದ್ಯತೆ ಆಗಿದ್ದು ಮುಂದುವರೆಯುತ್ತದೆ,’’ ಎಂದು ಗೋಪಾಲ್ ಹೇಳಿದ್ದಾರೆ. ‘‘ಸುಧಾರಿತ ಎಐ ಬಳಸಿ, ಸ್ಪ್ಯಾಮ್ ಕರೆಗಳು ಮತ್ತು ಸಂದೇಶಗಳಿಗಾಗಿ ತಕ್ಷಣ ಎಚ್ಚರಿಕೆಗಳನ್ನು ನೀಡುವಲ್ಲಿ ನಾವು ಮುಂಚೂಣಿಯಲ್ಲಿ ದ್ದೇವೆ ಮತ್ತು ತಪ್ಪಾಗಿ ಕ್ಲಿಕ್ ಮಾಡಿದರೂ ವಂಚನೆ ಲಿಂಕ್‌ಗಳನ್ನು ತಡೆಯಲು ಆರಂಭಿಸಿದ್ದೇವೆ. ಆದರೆ ಇಂದಿನ ಡಿಜಿಟಲ್ ಪಾವತಿ ಪರಿಸರದಲ್ಲಿ, ನಿಮ್ಮ ಮುಖ್ಯ ಬ್ಯಾಂಕ್ ಖಾತೆಯನ್ನು ಯುಪಿಐ ಅಥವಾ ಪೇಮೆಂಟ್ ಆ್ಯಪ್‌ಗಳಿಗೆ ಲಿಂಕ್ ಮಾಡುವುದರಿಂದ ನಿಮ್ಮ ಉಳಿತಾಯವು ಅಪಾಯಕ್ಕೆ ಒಳಗಾಗಬಹುದು. ನಮ್ಮ ಸೇಫ್ ಸೆಕೆಂಡ್ ಅಕೌಂಟ್ ನಿಮಗೆ ಸರಳ ಮತ್ತು ಸುರಕ್ಷಿತ ರಕ್ಷಣಾ ಮಾರ್ಗವನ್ನು ಒದಗಿಸುತ್ತದೆ.’’
ತಮ್ಮ ಪತ್ರದಲ್ಲಿ ಅವರು, ಸೇಫ್ ಸೆಕೆಂಡ್ ಅಕೌಂಟ್ ಮುಖ್ಯವಾಗಿ ಪಾವತಿಗಳಿಗಾಗಿ ಬಳಸುವ ಖಾತೆಯಾಗಿದ್ದು, ಕಡಿಮೆ ಕನಿಷ್ಠ ಬ್ಯಾಲೆನ್ಸ್ ಮಾತ್ರ ಅಗತ್ಯವಿರುತ್ತದೆ — ಅದೂ ಕೂಡ ಬಡ್ಡಿಯನ್ನು ಗಳಿಸುತ್ತದೆ ಎಂದು ವಿವರಿಸಿದ್ದಾರೆ. ಏಕೆಂದರೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಕ್ರೆಡಿಟ್ ಸೌಲಭ್ಯ ನೀಡುವುದಿಲ್ಲ, ಆದ್ದರಿಂದ ಗ್ರಾಹಕರು ತಮ್ಮ ಖಾತೆಯಲ್ಲಿ ಹೆಚ್ಚಿನ ಹಣವನ್ನು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಈ ಖಾತೆಯನ್ನು ತೆರೆಯುವುದು ವೇಗವಾದ ಮತ್ತು ಸುಲಭವಾದದ್ದು: ಪೇಮೆಂಟ್ಸ್ ಬ್ಯಾಂಕ್ ಟ್ಯಾಬ್‌ಗೆ ಹೋಗಿ, ಆಧಾರ್ ಮತ್ತು ಪ್ಯಾನ್ ಆಧಾರಿತ ಕೆವೈಸಿ ಪೂರ್ಣಗೊಳಿಸಿ, ಎಂಪಿನ್ ಸೃಷ್ಟಿಸಿ ಮತ್ತು ಖಾತೆಗೆ ಹಣ ಹಾಕಿದ ಬಳಿಕ ಸುರಕ್ಷಿತ ವಾಗಿ ವ್ಯವಹಾರ ಪ್ರಾರಂಭಿಸಬಹುದು.
ಗ್ರಾಹಕರು ತಮ್ಮ ಮುಖ್ಯ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸುವ ಮೂಲಕ ಅಥವಾ ಯಾವುದೇ ಏರ್ಟೆಲ್ ಪೇಮೆಂಟ್ ಬ್ಯಾಂಕ್ ರಿಟೇಲ್ ಪಾಯಿಂಟ್‌ನಲ್ಲಿ ನಗದು ಠೇವಣಿ ಮಾಡುವ ಮೂಲಕ ಸೇಫ್ ಸೆಕೆಂಡ್ ಅಕೌಂಟ್ ಅನ್ನು ಟಾಪ್-ಅಪ್ ಮಾಡಬಹುದು. ಈ ಸೌಲಭ್ಯವು ಅನಧಿಕೃತ ಪ್ರವೇಶ ಮತ್ತು ವಂಚನೆಗಳಿಂದ ಲಕ್ಷಾಂತರ ಗ್ರಾಹಕರ ಹಣಕಾಸನ್ನು ರಕ್ಷಿಸುವಲ್ಲಿ ಸಹಾಯಕವಾಗುತ್ತದೆ, ಜೊತೆಗೆ ನಿರಂತರ ಮತ್ತು ಸುಲಭವಾದ ಡಿಜಿಟಲ್ ಪಾವತಿ ಅನುಭವವನ್ನು ಒದಗಿಸುತ್ತದೆ.
‘‘ನಾವು ನಮ್ಮ ಗ್ರಾಹಕರಿಗೆ ಇಂದು ಕೆಲವು ನಿಮಿಷಗಳನ್ನು ತೆಗೆದುಕೊಂಡು ಸೇಫ್ ಸೆಕೆಂಡ್ ಅಕೌಂಟ್ ತೆರೆಯಲು ಮತ್ತು ತಮ್ಮ ಹಣವನ್ನು ರಕ್ಷಿಸಲು ಮನವಿ ಮಾಡುತ್ತೇವೆ,’’ ಎಂದು ವಿಠ್ಠಲ್ ತಿಳಿಸಿದ್ದಾರೆ. ‘‘ಸುರಕ್ಷಿತ, ಸಮಾವೇಶಿತ ಮತ್ತು ಸುಲಭವಾಗಿ ಬಳಸಬಹುದಾದ ಹಣಕಾಸು ಸೇವೆ ಗಳೊಂದಿಗೆ ನಿಮ್ಮನ್ನು ಸಬಲಗೊಳಿಸಲು ಏರ್ಟೆಲ್ ಸದಾ ಬದ್ಧವಾಗಿದೆ.’’