Bengaluru Lift Tragedy: ಬೆಂಗಳೂರಿನಲ್ಲಿ ಘೋರ ಘಟನೆ; ಲಿಫ್ಟ್ ಡೋರ್‌ನಲ್ಲಿ ತಲೆ ಸಿಲುಕಿ ಯುವಕ ಸಾವು
ಬೆಂಗಳೂರಿನ ಜಯನಗರದ ದಕ್ಷಿಣ ಉಪಹಾರ ಹೋಟೆಲ್‌ನಲ್ಲಿ ಸೋಮವಾರ ದುರ್ಘಟನೆ ನಡೆದಿದೆ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತನಿಖೆ ಆರಂಭಿಸಿದ್ದಾರೆ. ಈ ದುರ್ಘಟನೆಯು ಲಿಫ್ಟ್ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.
-
ಬೆಂಗಳೂರು: ಲಿಫ್ಟ್‌ನಲ್ಲಿ ತಲೆ ಸಿಲುಕಿದ ಪರಿಣಾಮ ಯುವಕನೊಬ್ಬ ದಾರುಣವಾಗಿ ಮೃತಪಟ್ಟಿರುವುದು ನಗರದಲ್ಲಿ ನಡೆದಿದೆ. ಮೃತನನ್ನು ಧಾರವಾಡ ಮೂಲದ ರಾಜೇಶ್ ಎಂದು ಗುರುತಿಸಲಾಗಿದೆ. ಜಯನಗರದ ದಕ್ಷಿಣ ಉಪಹಾರ ಹೋಟೆಲ್‌ನಲ್ಲಿ ಸೋಮವಾರ ಘಟನೆ ನಡೆದಿದೆ.
ರಾಜೇಶ್ ಲಿಫ್ಟ್ ಮೂಲಕ 2ನೇ ಮಹಡಿಗೆ ತೆರಳಲು ಮುಂದಾಗಿದ್ದರು. ತಲೆ ಹೊರಗೆ ಹಾಕಿದ್ದ ವೇಳೆ ಲಿಫ್ಟ್ ಏಕಾಏಕಿ ಮೇಲಕ್ಕೆ ಹೋಗಿದ್ದರಿಂದ ಲಿಫ್ಟ್ ಮತ್ತು ಗೋಡೆ ನಡುವೆ ತಲೆ ಸಿಲುಕಿದ್ದರಿಂದ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ. ಈ ದುರ್ಘಟನೆಯು ಲಿಫ್ಟ್ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.
ನಾಯಿ ಬೆಲ್ಟ್‌ನಿಂದ ಗರ್ಭಿಣಿ ಪತ್ನಿ ಕುತ್ತಿಗೆ ಬಿಗಿದು ಕೊಂದು ಪತಿಯೂ ಆತ್ಮಹತ್ಯೆ!
ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆ ಗರ್ಭಿಣಿ ಪತ್ನಿಯನ್ನು ಗಂಡ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ರಾಜಧಾನಿಯಲ್ಲಿ ನಡೆದಿದೆ. ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆ (Bengaluru Murder) ಬೆಳಕಿಗೆ ಬಂದಿದೆ. ಮನೋಜ್ (28), ಸ್ವಪ್ನ (26) ದಂಪತಿ ಸಾವನ್ನಪ್ಪಿದ್ದು, ಸ್ಥಳಕ್ಕೆ ಸಿಕೆ ಅಚ್ಚುಕಟ್ಟು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ದಂಪತಿ ಮನೋಜ್ ಮತ್ತು ಸ್ವಪ್ನ, ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಪ್ರಸ್ತುತ ಸ್ವಪ್ನ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಬೆಂಗಳೂರು ನಿವಾಸಿಯಾದ ಮನೋಜ್, ವೃತ್ತಿಯಲ್ಲಿ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ. ಆದರೆ, ಈತ ಕಳೆದ ನಾಲ್ಕು ದಿನದಿಂದ ಕೆಲಸಕ್ಕೆ ಹೋಗಿರಲಿಲ್ಲ. ಇವತ್ತು ಮನೆಯಲ್ಲಿ ಹೆಂಡತಿ ಜೊತೆಗೆ ಗಲಾಟೆ ಶುರುಮಾಡಿದ್ದಾನೆ.
ಜಗಳ ವಿಕೋಪಕ್ಕೆ ತಿರುಗಿ ನಾಯಿಗೆ ಹಾಕುವ ಬೆಲ್ಟ್‌ನಿಂದ ಪತ್ನಿಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಮನೋಜ್ ಕೊಲೆ ಮಾಡಿದ್ದಾನೆ. ಆಕೆ ಸಾವನ್ನಪ್ಪಿದ ಬಳಿಕ ಅದೇ ಬೆಲ್ಟ್‌ನಿಂದ ತಾನೂ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗ-ಸೊಸೆಯ ಸಾವು ಕಂಡು ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಸದ್ಯ ಮೃತದೇಹಗಳನ್ನ ಪೊಲೀಸರು ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.