ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ ಯುಲು 1 ಶತಕೋಟಿ ಕಿಮೀ ಸಂಭ್ರಮ; ನಗರದ ಹೈಪರ್‌ಲೋಕಲ್ ಮೊಬಿಲಿಟಿ ಪರಿಸರ ವ್ಯವಸ್ಥೆಗೆ ಭದ್ರ ಬುನಾದಿ

ಬೆಂಗಳೂರು ಯುಲು ಸಂಸ್ಥೆಗೆ ಪ್ರಮುಖ ಮಾರುಕಟ್ಟೆಯಾಗಿದ್ದು, ಇದು ಮುಂಬೈ, ದೆಹಲಿ NCR ಮತ್ತು ಹೈದರಾಬಾದ್‌ನಲ್ಲೂ ಅಸ್ತಿತ್ವದಲ್ಲಿದೆ. ತಾನೇ ನೇರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಈ ಎಲ್ಲಾ ಮಾರುಕಟ್ಟೆಗಳಲ್ಲಿ ಯುಲು ಒಟ್ಟು 46,000 ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದ್ದು, ಅವು ಒಟ್ಟಾರೆ ಯಾಗಿ 2 ಶತಕೋಟಿ ಹಸಿರು ಕಿಲೋಮೀಟರ್‌ಗಳನ್ನು ಕ್ರಮಿಸಿವೆ ಮತ್ತು 54 ಮಿಲಿಯನ್ ಕೆಜಿ CO2 ಹೊರಸೂಸುವಿಕೆಯನ್ನು ತಡೆಗಟ್ಟಿವೆ.

ಬೆಂಗಳೂರಿನಲ್ಲಿ ಯುಲು 1 ಶತಕೋಟಿ ಕಿಮೀ ಸಂಭ್ರಮ

-

Profile
Ashok Nayak Apr 16, 2026 1:36 PM

ಬೆಂಗಳೂರು: ಬೆಂಗಳೂರಿನಲ್ಲಿಯೇ ಜನ್ಮತಳೆದ ಯುಲು ಸಂಸ್ಥೆಯು, ತನ್ನ ಹಂಚಿಕೆಯ ಎಲೆಕ್ಟ್ರಿಕ್ ವಾಹನಗಳು ನಗರದಲ್ಲಿ 1 ಶತಕೋಟಿ ಕಿಲೋಮೀಟರ್‌ಗಳ ಸಂಚಾರವನ್ನು ಪೂರೈಸಿವೆ ಎಂದು ಇಂದು ಘೋಷಿಸಿದೆ. ರಸ್ತೆಯಲ್ಲಿರುವ 22,500 ಎಲೆಕ್ಟ್ರಿಕ್ ವಾಹನಗಳೊಂದಿಗೆ, ಯುಲು ಬೆಂಗಳೂರಿನ ಮುಂಚೂಣಿಯ ಅಲ್ಪ-ದೂರದ ಸಂಚಾರ ಪ್ಲಾಟ್‌ಫಾರ್ಮ್ ಆಗಿ ಮುಂದುವರೆದಿದೆ. ಕಂಪನಿಯು ತನ್ನ ಪ್ರಮಾಣ ಮತ್ತು ಪ್ರಭಾವವನ್ನು ವಿವರಿಸುತ್ತಾ, ನಗರದಲ್ಲಿ ಇದುವರೆಗೆ 190 ಮಿಲಿಯನ್ ಡೋರ್‌ಸ್ಟೆಪ್ ಡೆಲಿವರಿಗಳನ್ನು ಪೂರೈಸಿದೆ ಮತ್ತು 27 ಮಿಲಿಯನ್ ಕೆಜಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಿದೆ ಎಂದು ಬಹಿರಂಗಪಡಿಸಿದೆ.

ಮಾಹಿತಿಗಾಗಿ, 27 ಮಿಲಿಯನ್ ಕೆಜಿ CO2 ಎಂಬುದು ಸರಿಸುಮಾರು 18,500 ಕಾರುಗಳು ವರ್ಷಕ್ಕೆ ಹೊರಹಾಕುವ ಒಟ್ಟು ಅನಿಲ ಹೊರಸೂಸುವಿಕೆಗೆ ಸಮಾನವಾಗಿದೆ.

ಬೆಂಗಳೂರು ಯುಲು ಸಂಸ್ಥೆಗೆ ಪ್ರಮುಖ ಮಾರುಕಟ್ಟೆಯಾಗಿದ್ದು, ಇದು ಮುಂಬೈ, ದೆಹಲಿ NCR ಮತ್ತು ಹೈದರಾಬಾದ್‌ನಲ್ಲೂ ಅಸ್ತಿತ್ವದಲ್ಲಿದೆ. ತಾನೇ ನೇರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಈ ಎಲ್ಲಾ ಮಾರುಕಟ್ಟೆಗಳಲ್ಲಿ ಯುಲು ಒಟ್ಟು 46,000 ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದ್ದು, ಅವು ಒಟ್ಟಾರೆಯಾಗಿ 2 ಶತಕೋಟಿ ಹಸಿರು ಕಿಲೋಮೀಟರ್‌ಗಳನ್ನು ಕ್ರಮಿಸಿವೆ ಮತ್ತು 54 ಮಿಲಿಯನ್ ಕೆಜಿ CO2 ಹೊರಸೂಸುವಿಕೆಯನ್ನು ತಡೆಗಟ್ಟಿವೆ.

ಇದನ್ನೂ ಓದಿ: Yulu ಡೆಲಿವರಿ ರೈಡರ್‌ಗಳಿಗಾಗಿ ಭಾರತದ ಮೊದಲ ವಾಟ್ಸಾಪ್ ಆಧಾರಿತ ರಸ್ತೆ ಸುರಕ್ಷತಾ ಕಲಿಕಾ ಉಪಕ್ರಮ ಪ್ರಾರಂಭ

ಬೆಂಗಳೂರಿನ ಪ್ರತಿಯೊಂದು ಪ್ರಮುಖ ಪಿನ್‌ಕೋಡ್‌ಗಳಲ್ಲೂ ಕಾರ್ಯನಿರ್ವಹಿಸುತ್ತಿರುವ ಯುಲು, ನಗರದ ಸಂಚಾರ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಪೀಣ್ಯದಿಂದ ವೈಟ್‌ಫೀಲ್ಡ್‌ವರೆಗೆ ಮತ್ತು ಹೆಬ್ಬಾಳದಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಇದರ ಜಾಲವು ವಿಸ್ತರಿಸಿದ್ದು, 16 ಯುಲು ಕೇಂದ್ರಗಳು ಮತ್ತು 700 ಕ್ಕೂ ಹೆಚ್ಚು ಯುಲು ವಲಯಗಳು ನಗರದಾದ್ಯಂತ ವಾಹನಗಳ ಲಭ್ಯತೆಯನ್ನು ಸುಲಭಗೊಳಿಸಿವೆ.

ಯುಲು ಸಂಸ್ಥೆಯ ಸಮಗ್ರ ಮೊಬಿಲಿಟಿ ತಂತ್ರಜ್ಞಾನ ಮತ್ತು ಕಾರ್ಯಾಚರಣೆಯ ಅನುಭವವು ಅದನ್ನು ನಗರದ ನಂಬರ್ 1 ಕ್ವಿಕ್-ಕಾಮರ್ಸ್ ಡೆಲಿವರಿ ಪ್ಲಾಟ್‌ಫಾರ್ಮ್ ಆಗಿ ಮಾಡಿದೆ. ಸ್ಮಾರ್ಟ್ ವಾಹನಗಳು, AI-ಆಧಾರಿತ ಫ್ಲೀಟ್ ರಿಬ್ಯಾಲೆನ್ಸಿಂಗ್ ಸಿಸ್ಟಮ್‌ಗಳು, ಮತ್ತು 'ಯೂಮಾ ಎನರ್ಜಿ' ಮೂಲಕ ಹೊಂದಿರುವ ಬಲಿಷ್ಠ ಎನರ್ಜಿ ನೆಟ್‌ವರ್ಕ್‌ನಿಂದಾಗಿ ಯುಲು ಯಾವಾಗಲೂ ಎಲೆಕ್ಟ್ರಿಕ್ ವಾಹನಗಳ ಲಭ್ಯತೆಯನ್ನು ಖಚಿತಪಡಿಸುತ್ತದೆ. ಇದು ಇತರ ಕಂಪನಿಗಳಿಗಿಂತ ಉತ್ತಮ ಆರ್ಥಿಕ ಲಾಭವನ್ನು ನೀಡುವುದಲ್ಲದೆ, ಡೆಲಿವರಿ ಪಾಲುದಾರರಿಗೆ ಬಾಡಿಗೆ ದರವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಅವರು ಪೆಟ್ರೋಲ್ ಬೈಕ್‌ಗಳನ್ನು ಬಳಸುವುದಕ್ಕಿಂತ 30-40% ರಷ್ಟು ಹೆಚ್ಚಿನ ಹಣವನ್ನು ಉಳಿತಾಯ ಮಾಡಬಹುದಾಗಿದೆ.

ಈ ಅಂಶಗಳು ಸಣ್ಣ ಮೊಬಿಲಿಟಿ ಫ್ಲೀಟ್‌ಗಳಿಗಿಂತ ಯುಲುಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತವೆ. ಅಂತಹ ಸಣ್ಣ ಸಂಸ್ಥೆಗಳ ಚದುರಿದ ಕಾರ್ಯಾಚರಣೆಗಳು, ವಿವಿಧ ವಾಹನ ಮಾದರಿಗಳ ಮೇಲಿನ ಅವಲಂಬನೆ ಮತ್ತು ಆಫ್‌ಲೈನ್ ಸೇವೆಗಳು ಅವುಗಳ ದಕ್ಷತೆಯನ್ನು ಕುಂಠಿತಗೊಳಿಸುತ್ತವೆ ಮತ್ತು ಬೆಳವಣಿಗೆಗೆ ಅಡ್ಡಿಯಾಗುತ್ತವೆ. ಇದು ವಿಶೇಷವಾಗಿ 'ಕ್ವಿಕ್ ಕಾಮರ್ಸ್' ಡೆಲಿವರಿ ವಿಭಾಗದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ; ಇಂದು ನಗರದ ಡಾರ್ಕ್ ಸ್ಟೋರ್‌ಗಳಲ್ಲಿರುವ ಪ್ರತಿ ಮೂರು ಡೆಲಿವರಿ ವಾಹನಗಳಲ್ಲಿ ಒಂದು ಯುಲು ವಾಹನವಾಗಿದೆ. ಮಾರ್ಚ್ 2026 ಒಂದರಲ್ಲೇ ಯುಲು 8.5 ಮಿಲಿಯನ್ ಡೆಲಿವರಿಗಳನ್ನು (ಅಂದರೆ ದಿನಕ್ಕೆ ಸುಮಾರು 300,000 ಡೆಲಿವರಿಗಳು) ಸಾಧ್ಯವಾಗಿಸಿದೆ, ಇದು ಬೆಂಗಳೂರಿನ ಡೆಲಿವರಿ ಆರ್ಥಿಕತೆಯಲ್ಲಿ ಅದರ ವ್ಯಾಪ್ತಿ ಮತ್ತು ಮೌಲ್ಯವರ್ಧನೆಗೆ ಸ್ಪಷ್ಟ ಪ್ರತಿಬಿಂಬವಾಗಿದೆ. ಅಖಿಲ ಭಾರತ ಮಟ್ಟದಲ್ಲಿ, ಯುಲು ಬಳಸುವ ಸವಾರರು 400 ಮಿಲಿಯನ್ ಹಸಿರು (ಪರಿಸರ ಸ್ನೇಹಿ) ಡೆಲಿವರಿಗಳನ್ನು ಪೂರೈಸಿದ್ದಾರೆ.

ಕ್ವಿಕ್ ಕಾಮರ್ಸ್ ಮತ್ತು ಇ-ಕಾಮರ್ಸ್ ಮೀರಿ, ಯುಲು ಮತ್ತೊಂದು ವೇಗವಾಗಿ ಬೆಳೆಯುತ್ತಿರುವ ವಿಭಾಗವಾದ 'ಆನ್-ಡಿಮ್ಯಾಂಡ್ ಗೃಹ ಸೇವೆಗಳ' ಮಾರುಕಟ್ಟೆಯ ಅಗತ್ಯತೆಗಳನ್ನು ಸಹ ಪೂರೈಸುತ್ತಿದೆ. ಈ ಮೂಲಕ ಹಿಂದುಳಿದ ವರ್ಗದ ಮಹಿಳಾ ಗಿಗ್ ವೃತ್ತಿಪರರ ಜೀವನೋಪಾಯ ವನ್ನು ಉತ್ತಮಗೊಳಿಸುವಲ್ಲಿ ತನ್ನ ಪಾತ್ರವನ್ನು ಮತ್ತಷ್ಟು ವಿಸ್ತರಿಸುತ್ತಿದೆ.

ಯುಲು ಸಂಸ್ಥೆಯ ಸಹ-ಸ್ಥಾಪಕ ಮತ್ತು ಸಿಇಒ ಅಮಿತ್ ಗುಪ್ತಾ ಮಾತನಾಡಿ, “ನಮ್ಮ ಬೆಂಗಳೂರು ಯಾವಾಗಲೂ ಯುಲು ಕಥೆಯ ಕೇಂದ್ರಬಿಂದುವಾಗಿದೆ. ನಾವು ಇದೇ ನಗರದಲ್ಲಿ ಸಂಸ್ಥೆಯನ್ನು ಸ್ಥಾಪಿಸಿದ ಒಂಬತ್ತು ವರ್ಷಗಳ ನಂತರ, ಇಂದು 'ಕೊನೆಯ ಮೈಲಿ ಸಂಚಾರಕ್ಕೆ ಮೊದಲ ಆಯ್ಕೆ'ಯಾಗಿ ಮುಂದುವರಿಯುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ. ತಂತ್ರಜ್ಞಾನ ಆಧಾರಿತ ಇವಿ ಅಳವಡಿಕೆಯಲ್ಲಿ ಬೆಂಗಳೂರನ್ನು ರಾಷ್ಟ್ರೀಯ ನಾಯಕನನ್ನಾಗಿ ಮಾಡಲು

ಯುಲು ಶ್ರಮಿಸುತ್ತಿದ್ದು, ಈ 1 ಶತಕೋಟಿ ಕಿಮೀ ಮೈಲಿಗಲ್ಲು ಕೇವಲ ಆರಂಭವಷ್ಟೇ. ನಾವು ಭವಿಷ್ಯದತ್ತ ನೋಡುತ್ತಿರುವಾಗ, ಕೇವಲ ಸುಸ್ಥಿರವಷ್ಟೇ ಅಲ್ಲದೆ, ಲಕ್ಷಾಂತರ ಬೆಂಗಳೂರಿಗರಿಗೆ ಮತ್ತು ಭಾರತೀಯರಿಗೆ ಕೈಗೆಟುಕುವ ಮತ್ತು ಸುಲಭವಾಗಿ ಲಭ್ಯವಾಗುವ ಎಲೆಕ್ಟ್ರಿಕ್ ಮೊಬಿಲಿಟಿ ಯನ್ನು ಉತ್ತೇಜಿಸಲು ಯುಲು ಬದ್ಧವಾಗಿದೆ,” ಎಂದರು.

ಮುಂಬರುವ ವರ್ಷದಲ್ಲಿ, ಯುಲು ತನ್ನ ಬೆಂಗಳೂರು ಮೂಲದ ವಾಹನಗಳ ಸಂಖ್ಯೆಯನ್ನು 35,000 ದಿಂದ 40,000 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ, ಇದು ಪ್ರತಿ ತಿಂಗಳು 20 ಮಿಲಿಯನ್ ಡೆಲಿವರಿಗಳನ್ನು ಬೆಂಬಲಿಸಲಿದೆ. ಅಲ್ಲದೆ, ನಗರದ ಪ್ರತಿಯೊಂದು ಬಡಾವಣೆಗಳಲ್ಲೂ ತನ್ನ ಹಂಚಿಕೆಯ ಮೊಬಿಲಿಟಿ ಸೇವೆಯನ್ನು ಮತ್ತಷ್ಟು ಆಳವಾಗಿ ಮತ್ತು ಸಾಂದ್ರವಾಗಿ ವಿಸ್ತರಿಸುವುದನ್ನು ಮುಂದುವರಿಸಲಿದೆ.

*

22,500 ಎಲೆಕ್ಟ್ರಿಕ್ ವಾಹನಗಳೊಂದಿಗೆ (EVs), ಬೆಂಗಳೂರಿನ ಹೈಪರ್‌ಲೋಕಲ್ ಡೆಲಿವರಿ ಮತ್ತು ಸಂಚಾರ ವ್ಯವಸ್ಥೆಯ ಬೆನ್ನೆಲುಬಾಗಿ ಯುಲು ಗುರುತಿಸಿಕೊಂಡಿದೆ.

  • ಇದರ ಎಲೆಕ್ಟ್ರಿಕ್ ವಾಹನಗಳು ನಗರದಲ್ಲಿ ಪ್ರತಿದಿನ ಸುಮಾರು 300,000 ಪರಿಸರ ಸ್ನೇಹಿ ಡೆಲಿವರಿಗಳನ್ನು ಪೂರೈಸುತ್ತಿವೆ ಮತ್ತು ಆರಂಭದಿಂದ ಇಲ್ಲಿಯವರೆಗೆ ಒಟ್ಟು 190 ಮಿಲಿಯನ್ ಡೆಲಿವರಿಗಳನ್ನು ಯಶಸ್ವಿಯಾಗಿ ಬೆಂಬಲಿಸಿವೆ.
  • ಯುಲು ಬೆಂಗಳೂರಿನಲ್ಲಿ 27 ಮಿಲಿಯನ್ ಕೆಜಿಗಿಂತಲೂ ಹೆಚ್ಚು ಇಂಗಾಲದ ಡೈಆಕ್ಸೈಡ್ (CO2) ಹೊರಸೂಸುವಿಕೆಯನ್ನು ತಡೆಗಟ್ಟಿದ್ದು, ಉದ್ಯಾನ ನಗರಿಯ ಉತ್ತಮ ವಾಯು ಗುಣಮಟ್ಟಕ್ಕೆ ವರ್ಷವಿಡೀ ಬೆಂಬಲ ನೀಡುತ್ತಿದೆ.