ಮನೆ ಬೀಗ ಮುರಿದು ಮುರಿದು ಕಳ್ಳತನ ; 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿ ದೋಚಿದ ಕಳ್ಳರು
ಮನೆಯಲ್ಲಿರುವವರು ಮದುವೆಗೆಂದು ತೆರಳಿದ್ದಾಗ ಬೀಗ ಮುರಿದು 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ಲಕ್ಷಾಂತರ ಮೌಲ್ಯದ ಬೆಳ್ಳಿ ಆಭರಣಗಳು, 1.50 ಲಕ್ಷ ನಗದು ದೋಚಿ ಕಳ್ಳರು ಪರಾರಿಯಾದ ಘಟನೆ ಬೀದರ್ ತಾಲೂಕಿನ ಚಿದ್ರಿ ಗ್ರಾಮದಲ್ಲಿ ನಡೆದಿದೆ. ಮನೆ ಮಂದಿ ಮದುಗೆ ತೆರಳಿದ್ದಾಗ ಕಳ್ಳತನ ಮಾಡಲಾಗಿದೆ.
ಸಂಗ್ರಹ ಚಿತ್ರ -
ಬೀದರ್: ಮನೆಯಲ್ಲಿರುವವರು ಮದುವೆಗೆಂದು ತೆರಳಿದ್ದಾಗ ಬೀಗ ಮುರಿದು 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ಲಕ್ಷಾಂತರ ಮೌಲ್ಯದ ಬೆಳ್ಳಿ ಆಭರಣಗಳು, 1.50 ಲಕ್ಷ ನಗದು ದೋಚಿ ಕಳ್ಳರು ಪರಾರಿಯಾದ ಘಟನೆ ಬೀದರ್ ತಾಲೂಕಿನ (Bidar News) ಚಿದ್ರಿ ಗ್ರಾಮದಲ್ಲಿ ನಡೆದಿದೆ. ಮನೆಯವರು ಎಲ್ಲರೂ ಸಂಬಂಧಿಕರ ಮದುವೆ ಸಮಾರಂಭಕ್ಕೆ ಹೋಗಿದ್ದಾಗ ರಾಜಕುಮಾರ ಬಿರಾದರ್ ಚಿದ್ರಿ ಎಂಬವರ ಮನೆಯ ಬೀಗ ಮತ್ತು ಅಲಮರಿ ಬೀಗ ಮುರಿದು ಕಳ್ಳತನ ಮಾಡಿದ್ದಾರೆ.
ಒಟ್ಟು 150 ಗ್ರಾಂ ಚಿನ್ನದ ಆಭರಣಗಳು, 100 ಗ್ರಾಂ ಬೆಳ್ಳಿ ಆಭರಣಗಳು ಮತ್ತು 1.50 ಲಕ್ಷ ನಗದು ಕಳ್ಳತನವಾಗಿದೆ. ಮನೆ ಮಂದಿ ಮದುವೆಗೆ ಮುಗಿಸಿ ರಾತ್ರಿ ಮನೆಗೆ ಹಿಂದಿರುಗಿದಾಗ ಕಳ್ಳತನದ ವಿಷಯ ತಿಳಿದು ಬಂದಿದ್ದು, ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಘಟನಾ ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ, ಗಾಂಧಿಗಂಜ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿಯ ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ತೀರ್ಥಹಳ್ಳಿಯ ಮಾಳೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಯಲ್ಲಿ ಒಂದು ಕೋಟಿ ರೂ. ಮೌಲ್ಯದ ಬಂಗಾರದ ವಸ್ತುವಿನ ಜೊತೆಗೆ ಆರೋಪಿಯನ್ನ ಸಹ ವಶಕ್ಕೆ ಪಡೆದಿದ್ದಾರೆ. ತೀರ್ಥಹಳ್ಳಿಯ ಮಹಿಷಿ ಗ್ರಾಮದಲ್ಲಿರುವ ಶ್ರೀ ಸತ್ಯಸಂಧ ಉತ್ತರಾದಿ ಮಠದಲ್ಲಿ ಜೂ.17 ರ ಸಂಜೆ ವೇಳೆಗೆ ಸುಮಾರು 1.1 ಕೋಟಿ ಮೌಲ್ಯದ 780 ಗ್ರಾಂ ತೂಕದ ಬಂಗಾರದ 16 ಹಲಗಾರತಿಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಮಾಳೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.
ತಕ್ಷಣವೇ ಪ್ರಕರಣದ ಬೆನ್ನತ್ತಿದ್ದ ಮಾಳೂರು ಪೊಲೀಸ್ ಠಾಣೆಯ ಪೊಲೀಸರು, ಶಿವಮೊಗ್ಗದ ಗಾಂಧಿನಗರದ 25 ವರ್ಷದ ರಾಘವೇಂದ್ರ ಆಚಾರ್ಯ ಬಿನ್ ವಿಜಯೇಂದ್ರ ಆಚಾರ್ಯ ಎಂಬಾತನನ್ನು ವಶಕ್ಕೆ ಪಡೆದು, ಕಳ್ಳತನ ಮಾಡಿದ್ದ ಬಂಗಾರದ ಹಲಗಾರತಿಗಳನ್ನ ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯನ್ನ ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.