ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CET exam 2026: ಕೆಇಎಯಿಂದ ಸಿಇಟಿ ಪರೀಕ್ಷೆಯ ಕೀ ಉತ್ತರಗಳು ಪ್ರಕಟ, ಇಲ್ಲಿ ಪರಿಶೀಲಿಸಿ

2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET exam)ಯ ಎಲ್ಲ ವಿಷಯಗಳ ಕೀ ಉತ್ತರಗಳನ್ನು (key answers) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆಕ್ಷೇಪಣೆಗಳ ಜತೆಗೆ ಪ್ರಶ್ನೆ ಸಂಖ್ಯೆ, ವರ್ಷನ್ ಕೋಡ್ ಇತ್ಯಾದಿ ಮಾಹಿತಿಯನ್ನು ನಿಖರವಾಗಿ ದಾಖಲಿಸಬೇಕು. ಅಪೂರ್ಣ ಮಾಹಿತಿಯ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಕೆಇಎಯಿಂದ ಸಿಇಟಿ ಪರೀಕ್ಷೆಯ ಕೀ ಉತ್ತರಗಳು ಪ್ರಕಟ, ಇಲ್ಲಿ ಪರಿಶೀಲಿಸಿ

ಸಾಂದರ್ಭಿಕ ಚಿತ್ರ -

ಹರೀಶ್‌ ಕೇರ
ಹರೀಶ್‌ ಕೇರ Apr 27, 2026 9:52 AM

ಬೆಂಗಳೂರು, ಏ.27: ಇದೇ ತಿಂಗಳ 23 ಮತ್ತು 24ರಂದು ನಡೆದ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET exam)ಯ ಎಲ್ಲ ವಿಷಯಗಳ ಕೀ ಉತ್ತರಗಳನ್ನು (key answers) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಈ ಕೀ ಉತ್ತರಗಳಿಗೆ ಆಕ್ಷೇಪಣೆಗಳು ಏನಾದರು ಇದ್ದರೆ ಏ.30ರೊಳಗೆ ಸಲ್ಲಿಸಬೇಕು.

ಇದಕ್ಕೆ ಆನ್ ಲೈನ್ ಲಿಂಕ್ ಕೂಡ ಬಿಡುಗಡೆ ಮಾಡಿದ್ದು, ಆಕ್ಷೇಪಣೆಗಳ ಜತೆಗೆ ಪ್ರಶ್ನೆ ಸಂಖ್ಯೆ, ವರ್ಷನ್ ಕೋಡ್ ಇತ್ಯಾದಿ ಮಾಹಿತಿಯನ್ನು ನಿಖರವಾಗಿ ದಾಖಲಿಸಬೇಕು. ಅಪೂರ್ಣ ಮಾಹಿತಿಯ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ವಿಷಯ ತಜ್ಞರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

KCET ಉತ್ತರ ಕೀ 2026 ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

KCET 2026 ಉತ್ತರ ಕೀ PDF ಅನ್ನು ಇಲ್ಲಿ ನೀಡಲಾದ ಸೂಚನೆಗಳನ್ನು ಬಳಸಿಕೊಂಡು ಡೌನ್‌ಲೋಡ್ ಮಾಡಬಹುದು

KCET ಅಧಿಕೃತ ವೆಬ್‌ಸೈಟ್ ತೆರೆಯಿರಿ - cetonline.karnataka.gov.in

KCET ಉತ್ತರ ಕೀ ಲಿಂಕ್ ಅನ್ನು ಕ್ಲಿಕ್ ಮಾಡಿ

PDF ಡೌನ್‌ಲೋಡ್ ಮಾಡಿ

ಸರಿಯಾದ ಉತ್ತರಗಳಿಗಾಗಿ ಪರಿಶೀಲಿಸಿ

CET Exam: ಸಿಇಟಿ ಪರೀಕ್ಷೆ; ಚಿಕ್ಕಬಳ್ಳಾಪುರದಲ್ಲೂ ಜನಿವಾರ ತೆಗೆಸಿದ ಸಿಬ್ಬಂದಿ, 12 ದಿನದ ಹಿಂದೆ ಉಪನಯನವಾಗಿದ್ದ ವಿದ್ಯಾರ್ಥಿ