26.90 ಲಕ್ಷ ರು.ವೆಚ್ಚದಲ್ಲಿ ನಿರ್ಮಾಣ: ನಾಲ್ಕು ತಿಂಗಳಿನಿಂದ ಶೌಚಾಲಯಕ್ಕೆ ಬೀಗ,, ಸಾರ್ವಜನಿಕರಿಗೆ ಬಯಲೇ ಗತಿ
ನಗರಸಭೆ ಅನುದಾನದಡಿ ಸ್ವಚ್ಛ ಭಾರತ್ ಮಿಷನ್ (ನಗರ 2.0) ಯೋಜನೆಯಡಿ ಅಂದಾಜು 26.90 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾದ ಈ ಶೌಚಾಲಯ, ನಿರ್ಮಾಣ ಗೊಂಡು ಕೇವಲ ಮೂರು ವರ್ಷಗಳಲ್ಲೇ ಬಳಕೆಗೆ ಬಾರದ ಸ್ಥಿತಿಗೆ ತಲುಪಿದೆ. ಕಳೆದ ನಾಲ್ಕು ತಿಂಗಳಿಂದ ಬಾಗಿಲು ತೆರೆಯದ ಕಾರಣ, ಸಾರ್ವಜನಿಕರ ಹಣದಲ್ಲಿ ನಿರ್ಮಿಸಿದ ಸೌಲಭ್ಯ ಇದ್ದೂ ಇಲ್ಲದಂತಾಗಿದೆ.
-
ಗಿರೀಶ್ ಅಮ್ಮನವರ ರಾಣೇಬೆನ್ನೂರು
ಒಂದೆಡೆ ಸ್ವಚ್ಛ ಭಾರತ್ ಅಭಿಯಾನ, ಮತ್ತೊಂದೆಡೆ ಜನನಿಬಿಡ ಪ್ರದೇಶದಲ್ಲಿರುವ 26.90 ಲಕ್ಷ ರು. ವೆಚ್ಚದ ಸಾರ್ವಜನಿಕ ಶೌಚಾಲಯಕ್ಕೆ ನಾಲ್ಕು ತಿಂಗಳಿಂದ ಬೀಗ! ಪರಿಣಾಮ, ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಶೌಚಕ್ಕಾಗಿ ಬಯಲು ಪ್ರದೇಶವೇ ಅನಿವಾರ್ಯ ವಾಗಿದೆ. ನಗರದ ಜನನಿಬಿಡ ಪ್ರದೇಶದಲ್ಲಿರುವ ಈ ಸಾರ್ವಜನಿಕ ಶೌಚಾಲಯದ ಎದುರೇ ಕೆಎಸ್‌ಆರ್‌ಟಿಸಿ ಬಸ್‌ಗಾಗಿ ಪ್ರಯಾಣಿಕರು ಕಾಯುತ್ತಾರೆ. ಸಮೀಪದಲ್ಲೇ ಪ್ರೌಢ ಶಾಲೆ-ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಾರೆ.
ಪಕ್ಕ ದಲ್ಲೇ ಆಟೋ ನಿಲ್ದಾಣ, ಹಿಂಭಾಗದಲ್ಲಿ ಇಂದಿರಾ ಕ್ಯಾಂಟೀ ನ್ ಹಾಗೂ ಎದುರಿಗೇ ಗ್ರಾಮೀಣ ಪೊಲೀಸ್ ಠಾಣೆ ಇದೆ. ಇಷ್ಟೊಂದು ಜನದಟ್ಟಣೆಯ ಪ್ರದೇಶದಲ್ಲಿದ್ದರೂ ಶೌಚಾಲಯ ನಿರ್ವಹಣೆ ಮಾತ್ರ ನಗರಸಭೆಯ ಗಮನಕ್ಕೆ ಬಂದಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೂರು ವರ್ಷದಲ್ಲೇ ದುಸ್ಥಿತಿ: ನಗರಸಭೆ ಅನುದಾನದಡಿ ಸ್ವಚ್ಛ ಭಾರತ್ ಮಿಷನ್ (ನಗರ 2.0) ಯೋಜನೆಯಡಿ ಅಂದಾಜು 26.90 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾದ ಈ ಶೌಚಾಲಯ, ನಿರ್ಮಾಣ ಗೊಂಡು ಕೇವಲ ಮೂರು ವರ್ಷಗಳಲ್ಲೇ ಬಳಕೆಗೆ ಬಾರದ ಸ್ಥಿತಿಗೆ ತಲುಪಿದೆ. ಕಳೆದ ನಾಲ್ಕು ತಿಂಗಳಿಂದ ಬಾಗಿಲು ತೆರೆಯದ ಕಾರಣ, ಸಾರ್ವಜನಿಕರ ಹಣದಲ್ಲಿ ನಿರ್ಮಿಸಿದ ಸೌಲಭ್ಯ ಇದ್ದೂ ಇಲ್ಲದಂತಾಗಿದೆ.
ಇದನ್ನೂ ಓದಿ: Haveri News: ಅಪಾಯಕಾರಿ ತಗ್ಗು-ಗುಂಡಿಯಿಂದ ಕೂಡಿರುವ ದೇವಗಿರಿ ರಸ್ತೆಯಿಂದ ಸ್ಥಳೀಯರಿಗೆ ಕಿರಿಕಿರಿ; ವಾಹನ ಸವಾರರೇ ಎಚ್ಚರ
ಶೌಚಾಲಯ ನಿರ್ವಹಣೆಯನ್ನು ಭದ್ರಾವತಿಯ ಸಂಸ್ಥೆಯೊಂದಕ್ಕೆ ಟೆಂಡರ್ ಮೂಲಕ ವಹಿಸಲಾಗಿತ್ತು. ಆದರೆ, ಸಂಸ್ಥೆ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದೀಗ ಸಂಸ್ಥೆಗೆ ನೋಟಿಸ್ ನೀಡಿ, ಬೇರೊಂದು ಸಂಸ್ಥೆಗೆ ನಿರ್ವಹಣೆ ವಹಿಸುವುದಾಗಿ ನಗರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ನಾಲ್ಕು ತಿಂಗಳು ಕಳೆದರೂ ಶೌಚಾಲಯ ಮಾತ್ರ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ನಿರ್ಮಿಸಿದ ಶೌಚಾಲಯವನ್ನು ನಿರ್ವಹಣೆ ಕೊರತೆಯಿಂದ ಮುಚ್ಚಿಟ್ಟಿರುವುದು ಯಾವ ಕಾರಣಕ್ಕೆ? ಟೆಂಡರ್ದಾರರ ನಿರ್ಲಕ್ಷ್ಯವಿದ್ದರೆ ಕ್ರಮ ಕೈಗೊಳ್ಳಲು ಇಷ್ಟು ವಿಳಂಬ ಏಕೆ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಸಾರ್ವಜನಿಕರ ಆಗ್ರಹ: ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯವನ್ನು ಕೂಡಲೇ ತೆರೆಯಿಸಿ, ಸಮರ್ಪಕ ನಿರ್ವಹಣೆಗೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ಸಾರ್ವಜನಿಕರ ಹಣ ವ್ಯರ್ಥವಾಗುವುದಲ್ಲದೆ, ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಶೀಘ್ರ ನೋಟಿಸ್, ಬೇರೆಯವರಿಗೆ ನಿರ್ವಹಣೆ
ಈ ಭಾಗದ ಸಾರ್ವಜನಿಕ ಶೌಚಾಲಯದ ಪರಿಸ್ಥಿತಿ ನಮ್ಮ ಗಮನಕ್ಕೆ ಬಂದಿದೆ. ಭದ್ರಾವತಿಯ ಒಂದು ಸಂಸ್ಥೆಗೆ ನಿರ್ವಹಣೆಗಾಗಿ ಟೆಂಡರ್‌ನೀಡಲಾಗಿತ್ತು. ಅವರು ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಶೀಘ್ರವೇ ನೋಟಿಸ್ ನೀಡಿ, ಬೇರೆಯವರಿಗೆ ನಿರ್ವಹಣೆ ವಹಿಸಿ ಸರಿಯಾದ ಕ್ರಮ ಕೈಗೊಳ್ಳಲಾಗುವುದು" ಎಂದು ರಾಣೇಬೆನ್ನೂರು ನಗರಸಭೆ ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ ತಿಳಿಸಿದ್ದಾರೆ.
ಮಹಿಳೆಯರ ಗತಿಯೇನು?
ಶೌಚಾಲಯ ಬಂದ್ ಆಗಿರುವ ಪರಿಣಾಮ ಪುರುಷರು ಬಯಲು ಪ್ರದೇಶವನ್ನು ಆಶ್ರಯಿಸುತ್ತಿರು ವುದು ಸಾಮಾನ್ಯವಾಗಿದೆ. ಆದರೆ ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಪರಿಸ್ಥಿತಿ ಏನು? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಅದರಲ್ಲೂ ಗ್ರಾಮೀಣ ಪೊಲೀಸ್ ಠಾಣೆಗೆ ಪ್ರತಿನಿತ್ಯ ನೂರಾರು ಜನರು ಭೇಟಿ ನೀಡುತ್ತಿದ್ದು, ಅವರಿಗೂ ಶೌಚಾಲಯದ ಅಗತ್ಯವಿದೆ.