Chamarajanagara: ಚಾಮರಾಜನಗರದಲ್ಲಿ ಲೋ ಬಿಪಿಯಿಂದ 6 ವರ್ಷದ ಬಾಲಕ ಸಾವು
Low BP: ಈತ 1ನೇ ತರಗತಿ ಓದುತ್ತಿದ್ದ. ಸೋಮವಾರ ಶಾಲೆಗೆ ಹೋಗಿ ಸಂಜೆ ವಾಪಸ್ ಮನೆಗೆ ಬಂದಿದ್ದಾನೆ. ಅನಂತರ ಸ್ವಲ್ಪ ಸಮಯದಲ್ಲಿಯೇ ಬಾಲಕ ಕುಸಿದು ಬಿದ್ದಿದ್ದಾನೆ. ತಕ್ಷಣ ಪಾಲಕರು ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಮೃತ ಬಾಲಕ ಆರ್ಯ

ಚಾಮರಾಜನಗರ : ಕಡಿಮೆ ರಕ್ತದೊತ್ತಡದಿಂದ (Low BP) ಕುಸಿದುಬಿದ್ದು 6 ವರ್ಷದ ಬಾಲಕನೊಬ್ಬ (Boy death) ಸಾವನ್ನಪ್ಪಿರುವ ಘಟನೆ ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಗ್ರಾಮದ ನಿವಾಸಿ ಮಹೇಶ್ ಪುತ್ರ ಆರ್ಯ (6) ಮೃತ ಬಾಲಕ. ಈತ 1ನೇ ತರಗತಿ ಓದುತ್ತಿದ್ದ. ಸೋಮವಾರ ಶಾಲೆಗೆ ಹೋಗಿ ಸಂಜೆ ವಾಪಸ್ ಮನೆಗೆ ಬಂದಿದ್ದಾನೆ. ಅನಂತರ ಸ್ವಲ್ಪ ಸಮಯದಲ್ಲಿಯೇ ಬಾಲಕ ಕುಸಿದು ಬಿದ್ದಿದ್ದಾನೆ.
ತಕ್ಷಣ ಪಾಲಕರು ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಬಾಲಕ ರಕ್ತದ ಒತ್ತಡ ಕಡಿಮೆಯಾಗಿ ಮನೆಯಲ್ಲಿಯೇ ಮೃತಪಟ್ಟಿದ್ದಾನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಆರ್.ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಕಿವಿ ಚುಚ್ಚಲು ನೀಡಿದ ಅನಸ್ತೇಶಿಯಾದಿಂದ 5 ತಿಂಗಳ ಮಗು ಸಾವು
ಗುಂಡ್ಲುಪೇಟೆ: ಚಾಮರಾಜನಗರದಲ್ಲಿ (Chamarajanagar) 5 ತಿಂಗಳ ಮಗುವಿನ ಸಾವಿನ (Infant death) ಕಾರಣ 6 ತಿಂಗಳ ಬಳಿಕ ರಿವೀಲ್ ಆಗಿದೆ. ಕಿವಿ ಚುಚ್ಚುವ ಮುನ್ನ ವೈದ್ಯರು ಕೊಟ್ಟ ಅನಸ್ತೇಶಿಯಾದಿಂದ (anesthesia) ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ತಾಲೂಕಿನ ಬೊಮ್ಮಲಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಎಡವಟ್ಟಿಗೆ ಐದು ತಿಂಗಳ ಗಂಡು ಮಗುವೊಂದು ಸಾವನ್ನಪ್ಪಿದೆ. ಹಂಗಳ ಗ್ರಾಮದ ಆನಂದ್, ಮಾನಸ ದಂಪತಿ ಪುತ್ರ ಪ್ರಖ್ಯಾತ್ ಎಂಬ 5 ತಿಂಗಳ ಮಗು ಮೃತಪಟ್ಟಿದೆ.
ಕಳೆದ 6 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ತನಿಖೆಯ ವರದಿಯಲ್ಲಿ ಕಿವಿ ಚುಚ್ಚುವ ಮುನ್ನ ವೈದ್ಯರು ಕೊಟ್ಟ ಅನಸ್ತೇಶಿಯಾದಿಂದ ಮಗು ಮೃತಪಟ್ಟಿದೆ ಎಂಬುದು ವರದಿಯಾಗಿದೆ. ಪೋಷಕರು ಕಿವಿ ಚುಚ್ಚಲು ತಮ್ಮ ಮಗುವನ್ನು ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಆಗ ವೈದ್ಯರು ನೋವಾಗಬಾರದೆಂದು ಮಗುವಿನ 2 ಕಿವಿಗಳಿಗೆ ಅರಿವಳಿಕೆ ನೀಡಿದ್ದಾರೆ, ನಂತರ ಮಗುವಿನ ಬಾಯಲ್ಲಿ ನೊರೆ ಬಂದಿದ್ದು, ವೈದ್ಯರ ಸಲಹೆ ಮೇರೆಗೆ ಗುಂಡ್ಲುಪೇಟೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಮಗು ಮೃತಪಟ್ಟಿದೆ ಎಂದು ವೈದ್ಯರು ಧೃಡಪಡಿಸಿದ್ದರು.
6 ತಿಂಗಳ ಬಳಿಕ ಮಗುವಿನ ಮರಣೋತ್ತರ ಪರೀಕ್ಷೆ ಸಿಕ್ಕಿದ್ದು, ವರದಿಯಲ್ಲಿ ಮಗು ಅನಸ್ತೇಶಿಯಾದಿಂದ ಮೃತಪಟ್ಟಿರುವುದು ಧೃಡವಾಗಿದೆ. ಅನಸ್ತೇಶಿಯಾ ನೀಡಿದ್ದಕ್ಕೆ ಮಗುವಿನ ಶ್ವಾಸಕೋಶ ಹಾಗೂ ಮೆದುಳಿನಲ್ಲಿ ರಕ್ತ ಹೆಪ್ಪು ಗಟ್ಟಿದ್ದು, ಮಗು ಮೃತಪಟ್ಟಿದೆ ಎಂಬುದು ಧೃಡವಾಗಿದೆ.
ಇದನ್ನೂ ಓದಿ: Heart Attack: ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು