ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chinthamani News:ಹಾದಿಗೆರೆ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳ ವಿತರಣೆ

ಟ್ರಸ್ಟಿನ ಸದಸ್ಯರು ಹಾಗೂ ಬಿ ಎಸ್ ಏನ್ ಎಲ್ ನಿವೃತ್ತ ಅಧಿಕಾರಿಯದ ಆರ್. ನರಸಿಂಹಮೂರ್ತಿ ರವರು ಮಾತನಾಡಿ, ಹಿಂದಿನ ವರ್ಷದಲ್ಲೂ ಶಾಲೆಗೆ ಹಲವು, ಕೊಡುಗೆ ನೀಡಿದ್ದು, ಮುಂದಿನ ವರ್ಷದಲ್ಲೂ ಸಹ ಸಹಾಯ ಒದಗಿಸುವುದಾಗಿ ನುಡಿದರು. ಮಕ್ಕಳು ಶ್ರದ್ದಾ ಭಕ್ತಿಯಿಂದ ಕಲಿತು ಉತ್ತಮ ಪ್ರಜೆಗಳಾಗಬೇಕೆಂದು ಹೇಳಿದರು

ಮಕ್ಕಳಿಗೆ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳ ವಿತರಣೆ

-

Profile
Ashok Nayak Jul 21, 2026 10:30 AM

ಚಿಂತಾಮಣಿ: ತಾಲೂಕಿನ ಹಾದಿಗೆರೆ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬೆಂಗಳೂರಿನ ಎಂ ಎ ಎಸ್ ಟ್ರಸ್ಟಿನ ವತಿಯಿಂದ ಉಚಿತ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಟ್ರಸ್ಟಿನ ಸದಸ್ಯರು ಹಾಗೂ ಬಿ ಎಸ್ ಏನ್ ಎಲ್ ನಿವೃತ್ತ ಅಧಿಕಾರಿಯದ ಆರ್. ನರಸಿಂಹಮೂರ್ತಿರವರು ಮಾತನಾಡಿ, ಹಿಂದಿನ ವರ್ಷದಲ್ಲೂ ಶಾಲೆಗೆ ಹಲವು, ಕೊಡುಗೆ ನೀಡಿದ್ದು, ಮುಂದಿನ ವರ್ಷದಲ್ಲೂ ಸಹ ಸಹಾಯ ಒದಗಿಸುವುದಾಗಿ ನುಡಿದರು. ಮಕ್ಕಳು ಶ್ರದ್ದಾ ಭಕ್ತಿಯಿಂದ ಕಲಿತು ಉತ್ತಮ ಪ್ರಜೆಗಳಾಗಬೇಕೆಂದು ಹೇಳಿದರು. 

ಇದನ್ನೂ ಓದಿ: Chinthamani News: ಕೃಷಿ ಇಲಾಖೆ ನೇಮಕಾತಿ ನಿಯಮ ಉಲ್ಲಂಘನೆ ಆರೋಪ: ಕೃಷಿ ಪದವೀಧರರಿಂದ ಬೃಹತ್ ಪ್ರತಿಭಟನೆ!

ದೊಡ್ಡ ಗಂಜೂರು ಗ್ರಾ ಪಂ ಮಾಜಿ ಅಧ್ಯಕ್ಷರಾದ ಎಸ್. ಅಂಜಪ್ಪನವರು ಮಾತನಾಡಿ, ದಾನಿಗಳ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ದಾನಿಗಳಾದ ಆರ್. ನರಸಿಂಹಮೂರ್ತಿ ರವರನ್ನು ಶಾಲೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸ ಲಾಯಿತು.

ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆಯಾದ ಅಂಬಿಕಾ ತುಳಸಿ ಕೃಷ್ಣ, ಗ್ರಾಪಂ ಮಾಜಿ ಸದಸ್ಯ ರಾದ ತಾಜ್ ಷಾ, ಎಸ್ ಡಿ ಎಂ ಸಿ ಅಧ್ಯಕ್ಷೆ ಆಶಾ ರಾಣಿ, ಮುಖ್ಯ ಶಿಕ್ಷಕ ಎನ್ ವಿ. ಮುನಿಯಪ್ಪ, ಸಹ ಶಿಕ್ಷಕಿ ಜಿ ವಿ .ಮಂಜುಳಾ, ಪೋಷಕರು ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು.