ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Accident: ಎರಡು ಬೈಕ್ ಗಳಲ್ಲಿ 6 ಜನ ಪ್ರಯಾಣ,ಅಪಘಾತದಲ್ಲಿ 3 ಸಾವು,ಇಬ್ಬರ ಸ್ಥಿತಿ ಗಂಭೀರ

ಎರಡು ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನ ಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಿದ್ದು ಅದರಲ್ಲಿ ಮಾರಣ್ಣ ಎಂಬುವವರು ಸೋಮವಾರ ಬೆಳಗ್ಗೆ ಮೃತಪಟ್ಟಿರುತ್ತಾರೆ

Accident: ಎರಡು ಬೈಕ್ ಗಳಲ್ಲಿ 6 ಜನ ಪ್ರಯಾಣ,ಅಪಘಾತದಲ್ಲಿ 3 ಸಾವು,ಇಬ್ಬರ ಸ್ಥಿತಿ ಗಂಭೀರ

ಮೃತರಾದ ಸಂತೋಷ್, ಮನೋಜ್ ಪೋಟೋ

Profile Ashok Nayak Jan 20, 2025 11:27 PM

Source : Chikkaballapur Reporter

ಗೌರಿಬಿದನೂರು: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ೩ ಮಂದಿ ಮೃತಪಟ್ಟು,ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಗೌರಿಬಿದನೂರು ತಾಲ್ಲೂಕಿನ ಕಾಮಲಪುರ ಸಮೀಪ ಭಾನುವಾರ ರಾತ್ರಿ ನಡೆದಿದೆ.

20cbpm4santosh ok

ಮೃತ ಯುವಕರನ್ನು ತಾಲ್ಲೂಕಿನ ಮಂಚೇನಹಳ್ಳಿ ಮೂಲದ (19)ಸಂತೋಷ್ ಹಾಗೂ (19 ) ಮನೋಜ್ ನೆಲಮಂಗಲ ಮೂಲದ ಮಾರಣ್ಣ(23) ಎಂದು ತಿಳಿದು ಬಂದಿದೆ. ಸಂತೋಷ್, ಮನೋಜ್,ರೆಹಮಾನ್ ಒಂದೇ ಬೈಕ್‌ನಲ್ಲಿ ತೊಂಡೆ ಬಾವಿ ಕಡೆಯಿಂದ ಗೌರಿಬಿದನೂರು ದರ್ಗಾಗೆ ಬರುತ್ತಿದ್ದರಂತೆ, ನೆಲಮಂಗಲ ಮೂಲದವರಾದ ಮಾರಣ್ಣ,ಕಿರಣ್,ಶಿವಶಂಕರ್ ೩ ಜನ ಒಂದೇ ಬೈಕ್‌ನಲ್ಲಿ ಗೌರಿಬಿದನೂರಿನಿಂದ ನೆಲಮಂಗಲಕ್ಕೆ ಹೋಗುತ್ತಿದ್ದು,  ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ಕಾಮಲಪುರ ಗ್ರಾಮದ ಬಳಿಯ ತಿರುವಿನಲ್ಲಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ

ಎರಡು ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನ ಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಿದ್ದು ಅದರಲ್ಲಿ ಮಾರಣ್ಣ ಎಂಬುವವರು ಸೋಮವಾರ ಬೆಳಗ್ಗೆ ಮೃತಪಟ್ಟಿರುತ್ತಾರೆ.

ಇನ್ನೂ ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಬೈಕ್ ಗಳಲ್ಲಿ 6 ಜನ ಪ್ರಯಾಣಿಸುತ್ತಿದ್ದು ಹೆಲ್ಮೆಟ್ ಧರಿಸದೆ ಪ್ರಯಾಣ ಮಾಡುತ್ತಿದ್ದುದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಆಸ್ಪತ್ರೆ ಬಳಿ ಸ್ನೇಹಿತರು ಸಂಬಂಧಿಕರು ಮತ್ತು ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ವಯಸ್ಸಿಗೆ ಬಂದ ಮಕ್ಕಳನ್ನು ಕಳೆದುಕೊಂಡ ಮನೆಯವರಿಗೆ ಕಣ್ಣೀರಿನಲ್ಲಿ ಕೈತೆಳೆಯುವ ಸ್ಥಿತಿ ನಿರ್ಮಾಣವಾಗಿತ್ತು.

ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದ್ದರೂ ಸವಾರರು ಎಚ್ಚೆತ್ತುಕೊಳ್ಳದೇ ಇರುವುದು ಅಪಘಾತಗಳಿಗೆ ಕಾರಣ ವಾಗುತ್ತಿದೆ. ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: Chikkaballapur Crime: ಅಕ್ರಮವಾಗಿ ಗೋಮಾಂಸ ಸಾಗಣೆ: 4 ಮಂದಿ ಆರೋಪಿಗಳ ಸಹಿತ 3 ಬೊಲೆರೋ ವಾಹನ ಜಪ್ತಿ