ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಸಾಧನೆ ಎಂಬುದು ದಣಿವಿರದ ಪ್ರಯಾಣ, ಯಶಸ್ಸು ಇದರ ನಿಲ್ದಾಣ : ಕೆ.ವಿ.ನವೀನ್‌ಕಿರಣ್

ವಿದ್ಯಾರ್ಥಿ ಜೀವನದಲ್ಲಿ ಮಾಡುವ ಸಾಧನೆಗೆ ಸೋಲಿಲ್ಲ ಎಂಬ ಮಾತನ್ನು ಒಪ್ಪಿದರೂ ಕೂಡ, ಅಂಕಗಳ ಸಾಧನೆಗಿಂತ ಅಂತರಂಗದ ಸಾಧನೆಗೆ ಅಂದರೆ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಬೆಲೆಯಿದೆ. ಉತ್ತಮ ಫಲಿತಾಂಶದ ಸಾಧನೆ ಬದುಕಿನ ಭಾಗವೇ ಆದರೂ ಜವಾಬ್ದಾರಿಯುತ ನಾಗರೀಕರಾಗಿ ಬೆಳೆದಾಗ ಮಾತ್ರವೇ ಸಮಾಜದ ಆಸ್ತಿಯಾಗಲು ಸಾಧ್ಯ

ಸಾಧನೆ ಎಂಬುದು ದಣಿವಿರದ ಪ್ರಯಾಣ

ವಿದ್ಯಾರ್ಥಿ ದಿಸೆಯಲ್ಲಿ ಗುರುಗಳ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹ ಮತ್ತು ನಿರಂತರ ಪರಿಶ್ರಮವಿದ್ದಲ್ಲಿ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ದತ್ತಿ ಸಂಸ್ಥೆಗಳ ಅಧ್ಯಕ್ಷ ಕೆ.ವಿ.ನವೀನ್ ತಿಳಿಸಿದರು.

Profile Ashok Nayak Apr 25, 2025 9:29 PM

ಚಿಕ್ಕಬಳ್ಳಾಪುರ : ಸಾಧನೆ ಎಂಬುದು ದಣಿವಿರದ ಪ್ರಯಾಣವಾಗಿದ್ದು ನಮ್ಮ ನಮ್ಮ ಕ್ಷೇತ್ರಗಳಲ್ಲಿ ನಾವು ಪಡೆಯುವ ಯಶಸ್ಸೇ ಇದರ ನಿಲ್ದಾಣವಾಗಿದೆ. ವಿದ್ಯಾರ್ಥಿ ದಿಸೆಯಲ್ಲಿ ಗುರುಗಳ ಮಾರ್ಗ ದರ್ಶನ, ಪೋಷಕರ ಪ್ರೋತ್ಸಾಹ ಮತ್ತು ನಿರಂತರ ಪರಿಶ್ರಮವಿದ್ದಲ್ಲಿ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ದತ್ತಿ ಸಂಸ್ಥೆಗಳ ಅಧ್ಯಕ್ಷ ಕೆ.ವಿ.ನವೀನ್ ತಿಳಿಸಿದರು.

ನಗರ ಹೊರವಲಯ ನಾಗಾರ್ಜುನ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿ ದರು.

ವಿದ್ಯಾರ್ಥಿ ಜೀವನದಲ್ಲಿ ಮಾಡುವ ಸಾಧನೆಗೆ ಸೋಲಿಲ್ಲ ಎಂಬ ಮಾತನ್ನು ಒಪ್ಪಿದರೂ ಕೂಡ, ಅಂಕಗಳ ಸಾಧನೆಗಿಂತ ಅಂತರಂಗದ ಸಾಧನೆಗೆ ಅಂದರೆ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಬೆಲೆಯಿದೆ. ಉತ್ತಮ ಫಲಿತಾಂಶದ ಸಾಧನೆ ಬದುಕಿನ ಭಾಗವೇ ಆದರೂ ಜವಾಬ್ದಾರಿಯುತ ನಾಗರೀಕರಾಗಿ ಬೆಳೆದಾಗ ಮಾತ್ರವೇ ಸಮಾಜದ ಆಸ್ತಿಯಾಗಲು ಸಾಧ್ಯ ಎಂದರು.

ಇದನ್ನೂ ಓದಿ:Chikkaballapur shootout: ಚಿಕ್ಕಬಳ್ಳಾಪುರದಲ್ಲಿ ರಸ್ತೆ ನಿರ್ಮಾಣ ವಿರೋಧಿಸಿದ ವ್ಯಕ್ತಿ ಮೇಲೆ ಫೈರಿಂಗ್‌; ಮಾಜಿ ಎಂಎಲ್‌ಸಿ ಸಂಬಂಧಿ ಅರೆಸ್ಟ್‌

ಶಾಲಾ ಕಾಲೇಜು ದಿನಗಳಲ್ಲಿ ಮಾಡುವ ಸಾಧನೆ ತಂದೆ ತಾಯಿ ತಲೆಯೆತ್ತಿ ನಡೆಯುವಂತೆ ಮಾಡುತ್ತದೆ. ಬಲಿಷ್ಟ ರಾಷ್ಟ್ರವನ್ನು ಕಟ್ಟುವ ಶಕ್ತಿಯುಳ್ಳ ನೀವು ನಿಮ್ಮ ಸಾಧನೆಯ ಮೂಲಕ ದೇಶಕಟ್ಟು ಮುಂದಾಗುವ ಅಗತ್ಯವಿದೆ.ಎ.ಐ ತಂತ್ರಜ್ಞಾನದ ಈ ಯುಗದಲ್ಲಿ ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಕೆಲವನ್ನು ನೀವು ಮಾಡಬೇಕು. ಆಗಲೇ ಇಂತಹ ಕಾರ್ಯಕ್ರಮಗಳಿಗೆ ಬೆಲೆ ಬರಲಿದೆ ಎಂದರು.

ವಿದ್ಯಾರ್ಥಿ ಜೀವನದಲ್ಲಿ ಈ ಮೂರು ಅಂಶಗಳಿಗೆ ಒತ್ತು ನೀಡಬೇಕು. ಮೊದಲನೆಯದಾಗಿ ತಂದೆ ತಾಯಿ, ಗುರು ಹಿರಿಯರಿಗೆ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಎರಡನೆಯದಾಗಿ ನೀವು ಏನು ಆಗಲು ಬಯಸುತ್ತೀರೋ ಆದಿಕ್ಕಿನತ್ತ ಸ್ಪಷ್ಟತೆಯಿರಬೇಕು. ಮೂರನೆಯದಗಿ ಜವಾಬ್ದಾರಿ ಯುತ ನಾಗರೀಕರಾಗಿ ಮುನ್ನಡೆಯುವ ಸಂಕಲ್ಪತೊಡಬೇಕು. ಏಕೆಂದರೆ ನಿಮ್ಮ ಪೋಷಕರು ನಿಮಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸು ತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ನಾನು ಅವರ ಕಣ್ಣಲ್ಲಿ ಬೆಳಕು ಕಾಣಬೇಕೇ ವಿನಃ ಕಣ್ಣೀರು ತರಿಸ ಬಾರದು. ಅವರ ದುಡಿಮೆಯ ಸ್ಮರಣೆ ಸದಾ ನಿಮಗಿರಬೇಕು ಎಂದು ಕಿವಿ ಮಾತು ಹೇಳಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ನಾವು ಜಾಗೃತೆಯಿಂದ ವ್ಯಾಸಾಂಗದಲ್ಲಿ ತೊಡಗಬೇಕು.ಇಲ್ಲದಿದ್ದರೆ ಅನಗತ್ಯ ವಿಚಾರಗಳಿಗೆ ಒತ್ತು ನೀಡುತ್ತಾ ಬಂದಿರುವ ಉದ್ಯೋಗವನ್ನೇ ಮರೆಯುವ ಸಾಧ್ಯತೆ ಯಿರುತ್ತದೆ. ಹೀಗಾಗಿ ನಮ್ಮ ಆಸಕ್ತಿಯ ಕ್ಷೇತ್ರ ಯಾವುದು ಎಂಬುದನ್ನು ಕಂಡುಕೊಂಡು ಅತ್ತ ಗಮನಹರಿಸಬೇಕು. ಅವಕಾಶಗಳು ವಿಪುಲವಾಗಿದ್ದರೂ ಅರ್ಹತೆಯುಳ್ಳ ಅಭ್ಯರ್ಥಿಗಳ ಕೊರತೆಯಿದೆ ಎಂಬುದನ್ನು ಉದ್ಯಮಿಗಳು ಹೇಳುತ್ತಿದ್ದಾರೆ.ಇದನ್ನು ಮನಗಂಡು ಯಶಸ್ಸಿನತ್ತ ದಾಪುಗಾಲು ಇಡುತ್ತಿರುವಂತೆ,ಕೌಶಲ್ಯಯುತ ವಿದ್ಯಾರ್ಥಿಗಳಾಗಿ ಬೆಳೆದರೆ ಅವಕಾಶಗಳು ನಿಮ್ಮನ್ನೇ ಹುಡುಕಿ ಕೊಂಡು ಬರುವಂತೆ ಬೆಳೆಯಿರಿ ಎಂದು ಕರೆ ನೀಡಿದರು.

ಉನ್ನತ ಶಿಕ್ಷಣ ಪಡೆದರೂ ಕೂಡ ಉತ್ತಮ ಸಂಸ್ಕಾರವಿಲ್ಲದಿದ್ದರೆ ಪಡೆದ ಶಿಕ್ಷಣಕ್ಕೆ ಬೆಲೆ ಯಿರುವು ದಿಲ್ಲ. ಇನ್ಪೋಸಿಸ್‌ನಲ್ಲಿ ಉನ್ನತ ಉದ್ಯೋಗದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಸ್ವಾರ್ಥಕ್ಕಾಗಿ ವಿಮಾನ ದಲ್ಲಿ ಬಾಂಬ್‌ಯಿದೆ ಎಂದು ಸುಳ್ಳುಸುದ್ದಿ ಹಬ್ಬಿಸಿದ ಪರಿಣಾಮ,ಹತ್ತಾರು ವಿಮಾನಗಳ ಹಾರಾಟ ಹತ್ತಾರು ಗಂಟೆಗಳ ಕಾಲ ಸ್ಥಗಿತಗೊಂಡು ಅನಗತ್ಯ ಕ್ಷೋಭೆಗೆ ಕಾರಣವಾಗಿತ್ತು.ಉನ್ನತ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರೂ ಕೂಡ ಜವಾಬ್ದಾರಿಯುತ ನಾಗರೀಕ ಆಗಲಿಲ್ಲ ಎಂದರೆ ಪಡೆದ ಶಿಕ್ಷಣಕ್ಕೆ ಬೆಲೆಯಿರುವುದಿಲ್ಲ. ಇಂತಹವರಿಂದ ಸಮಾಜಕ್ಕೆ ಸಹಾಯಕ್ಕಿಂತ ಅಪಾಯವೇ ಹೆಚ್ಚು. ಆದ್ದರಿಂದ ನಿಮ್ಮ ಶಿಕ್ಷಣ ಸಾಧನೆ ಮಾನವೀಯ ಗುಣಗಳನ್ನು ಪ್ರೋತ್ಸಾಹಿಸುವಂತಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 2025ನೇ ಸಾಲಿನ ಜೆಇಇ ಪರೀಕ್ಷೆಯಲ್ಲಿ 616ನೇ ರ‍್ಯಾಂಕ್ ಪಡೆದ ದರ್ಶನ್ ಕೆ.ರೆಡ್ಡಿ, ೨೨೧೭ನೇ ರ‍್ಯಾಂಕ್ ಪಡೆದ ಜಾಹ್ನವಿ, ಶ್ರೇಯಸ್ ಮೊದಲಾದ ಸಾಧಕ ವಿದ್ಯಾರ್ಥಿ ಮತ್ತು ತಂದೆತಾಯಿಯನ್ನು ಆತ್ಮೀಯವಾಗಿ ಸತ್ಕರಿಸುವ ಮೂಲಕ ಸಾಧನೆಗೆ ಸಾವಿಲ್ಲ ಎಂಬುದನ್ನು ತೋರಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ನಾಗಾರ್ಜುನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮುರಳೀಧರ ಚೌಧರಿ, ಮಾನವ ಸಂಪನ್ಮೂಲ ವಿಭಾಗದ ಎಂ.ಲತಾ ಮತ್ತು ಪದವಿಪೂರ್ವ ಕಾಲೇಜಿನ ಬೋಧಕ, ಬೋಧ ಕೇತರ ಸಿಬ್ಬಂದಿ ಇದ್ದರು.