Chikkaballapur News: ಖಾಲಿ ಹುದ್ದೆಗಳ ಶೀಘ್ರ ಭರ್ತಿಗೆ ಕ್ರಮವಹಿಸ ಬೇಕು : ಮುಖ್ಯಮಂತ್ರಿ ಬದಲಾದಲ್ಲಿ ದಲಿತರನ್ನು ಸಿ.ಎಂ.ಮಾಡಿ : ಶಿವಶಂಕರ್ ಒತ್ತಾಯ
ದಲಿತರ ಕಾರಣಕ್ಕಾಗಿ ಅಧಿಕಾರಕ್ಕೆ ಬಂದಿರುವ ರಾಜ್ಯದ ಕಾಂಗ್ರೆಸ್ ಸರಕಾರ ದಲಿತರ ಏಳಿಗಾಗಿ ಇನ್ನಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ದಲಿತ ದಮನಿತರ ಪರವಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಳಮೀಸಲಾತಿ ಜಾರಿ ದಲಿತರಲ್ಲಿ ಒಗ್ಗಟ್ಟು ಮೂಡಿಸುವ ಬದಲಿಗೆ ವೈಮನಸ್ಸು ಉಂಟು ಮಾಡಿದೆ.
ಚಿಕ್ಕಬಳ್ಳಾಪುರ ನಗರದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಪ.ಜಾತಿ/ವರ್ಗದ ಸರಕಾರಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ಮಾತನಾಡಿದರು. -
Ashok Nayak
Nov 3, 2025 2:05 AM
ಚಿಕ್ಕಬಳ್ಳಾಪುರ : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕಾಂಗ್ರೆಸ್ ಸರಕಾರ ೨೦೨೩ರಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಖಾಲಿಯಿರುವ ಹುದ್ದೆಗಳ ಭರ್ತಿಗೆ ಕ್ರಮವಹಿಸಬೇಕು.ವಿವಿಧ ಇಲಾಖೆಗಳಲ್ಲಿ ೭.೭೦ಲಕ್ಷ ಮಂಜೂರಾತಿ ಹುದ್ದೆಗಳಿವೆ.ಈ ಪೈಕಿ ಕನಿಷ್ಟ ೨.೮೦ ಲಕ್ಷ ಸರಕಾರಿ ಹುದ್ದೆಗಳನ್ನು ಈ ಎರಡುವರೆ ವರ್ಷದಲ್ಲಿ ತುಂಬದಿರುವುದು ಬೇಸರ ತಂದಿದೆ. ಕೂಡಲೇ ಕ್ರಮವಹಿಸಬೇಕು ಎಂದು ಪ.ಜಾತಿ/ವರ್ಗದ ಸರಕಾರಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ಸರಕಾರವನ್ನು ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಅವರು ಮಾತನಾಡಿದರು.
ದಲಿತರ ಕಾರಣಕ್ಕಾಗಿ ಅಧಿಕಾರಕ್ಕೆ ಬಂದಿರುವ ರಾಜ್ಯದ ಕಾಂಗ್ರೆಸ್ ಸರಕಾರ ದಲಿತರ ಏಳಿಗಾಗಿ ಇನ್ನಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ದಲಿತ ದಮನಿತರ ಪರವಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಳಮೀಸಲಾತಿ ಜಾರಿ ದಲಿತರಲ್ಲಿ ಒಗ್ಗಟ್ಟು ಮೂಡಿಸುವ ಬದಲಿಗೆ ವೈಮನಸ್ಸು ಉಂಟು ಮಾಡಿದೆ. ಈ ವಿಚಾರ ಸೂಕ್ಷ್ಮ ವಾಗಿರುವುದರಿಂದ ಸರಿಯಾಗಿ ನಿಭಾಯಿಸಬೇಕಿತ್ತು. ಒಗ್ಗಟು ಸ್ಥಾಪನೆ ಬದಲಿಗೆ ಅಪನಂಬಿಕೆ ಬಲಿಯುವಂತೆ ಆಗಿರುವುದು ಬೇಸರ ತಂದಿದೆ ಎಂದರು.
ಇದನ್ನೂ ಓದಿ: Chikkaballapur News: ಮೂಲವ್ಯಾಧಿ ಬಗ್ಗೆ ಜಾಗೃತೆಯಿರಲಿ ; ನಕಲಿ ವೈದ್ಯರ ಬಳಿ ಚಿಕಿತ್ಸೆ ಖಂಡಿತ ಬೇಡ : ಡಾ.ಮಾದೇಶ್
ಇತ್ತೀಚೆಗೆ ರಾಜ್ಯ ಸೇರಿ ದೇಶಾದ್ಯಂತ ಸಂವಿಧಾನದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು ಅಟ್ಟಹಾಸದ ಸ್ಥಿತಿ ತಲುಪಿದೆ. ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆತ ಪ್ರಕರಣ ಸಂವಿಧಾನದ ಮೇಲಿನ ದಾಲಿನ ಸ್ಪಷ್ಟ ಸೂಚನೆಯಾಗಿದೆ. ಇಷ್ಟೇ ಅಲ್ಲದೆ ಗ್ರಾಮೀಣಾಭಿ ವೃದ್ಧಿ ಸಚಿವರ ಪ್ರಿಯಾಂಕ್ ಖರ್ಗೆ ವಿರುದ್ಧ ಸಂಘ ಪರಿವಾರದ ಹಿಂಬಾಲಕರ ಅವಮಾನ ಅವಹೇಳನ ಮಾಡುವುದು, ಅಸಹ್ಯಕರವಾಗಿ ಟೀಕಿಸುವುದು ಸರಿಯಲ್ಲ. ಸರಕಾರ ಕೂಡಲೇ ಇಂತಹ ಮನಸ್ಥಿತಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ದಲಿತ ಸಮುದಾಯ ಮತ್ತು ಸರಕಾರಿ ನೌಕರರು ಕೂಡ ಒಗ್ಗಟ್ಟು ಪ್ರದರ್ಶನ ಮಾಡುವುದು ಅಗತ್ಯ ಎಂದರು.
ದೇಶದಲ್ಲಿ ವಿಚಿತ್ರ ರಾಜಕೀಯ ಪರಿಸ್ಥಿತಿ ಇದೆ. ಶೋಷಿತರ ಬೆಂಬಲದಿAದ ಬಂದಿರುವ ಈ ಸರ್ಕಾರ ದಲ್ಲಿ ದೂರದೃಷ್ಟಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ೫ ವರ್ಷ ಅವರೇ ಇರಬೇಕು.ಒಂದು ವೇಳೆ ಬದಲಾವಣೆ ಆಗಿದ್ದೇ ಆದಲ್ಲಿ ದಲಿತ ಮುಖಂಡರಿಗೆ ಆ ಸ್ಥಾನ ನೀಡಿ. ದೇಶಕ್ಕೆ ಸ್ವಾತಂತ್ರ್ಯ ಬಂದು ೭೮ ವರ್ಷ ಆದರೂ ರಾಜಕೀಯದಲ್ಲಿ ಈವರೆಗೆ ಸಾಮಾಜಿಕ ನ್ಯಾಯ ಬಂದಿಲ್ಲ.ದಲಿತರಲ್ಲಿ ಶುದ್ಧತೆಯ ನಾಯಕರಿದ್ದಾರೆ. ಈ ಪೈಕಿ, ಕೆ.ಹೆಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಗೃಹ ಸಚಿವ ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಇದ್ದಾರೆ ಎಂದರು.
ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದಾಕ್ಷಣ ದಲಿತರ ಉದ್ಧಾರ ಆಗಲಿದೆ ಎಂಬ ಅರ್ಥವಲ್ಲ. ಏಕೆಂದರೆ ರಾಮಕೃಷ್ಣ ಹೆಗಡೆ , ಗುಂಡೂರಾವ್ ಮುಖ್ಯಮಂತ್ರಿಯಾದ ತಕ್ಷಣ ಬ್ರಾಹ್ಮಣರ ಸಮಗ್ರ ಅಭಿವೃದ್ಧಿ, ದೇವೇಗೌಡ, ಕುಮಾರಸ್ವಾಮಿ ಆದಾಗ ಒಕ್ಕಲಿಗ ಸಮುದಾಯದ ಸಂಪೂರ್ಣ ಆಗಿದೆ ಎಂದಲ್ಲ.ಮುಖ್ಯಮAತ್ರಿ ಬದಲಾವಣೆ ಆಗಿದ್ದೇ ಆದಲ್ಲಿ ದಲಿತರಿಗೆ ನೀಡಿ ಸಾಮಾಜಿಕ ನ್ಯಾಯ ಕಾಪಾಡಿ ಎಂದು ವಿನಂತಿಸಿದರು.
ಎನ್.ಪಿ.ಎಸ್ ಬಗ್ಗೆ ನೌಕರರ ವರ್ಗದಲ್ಲಿ ಭಯ ಆತಂಕ ಇದೆ.ಇವರ ಕಟಾವಿನ ಹಣಯಾವ ಖಾತೆಗೆ ಹೋಗುತ್ತಿದೆ ಎಂಬುದೇ ಗೊತ್ತಾಗದಷ್ಟು ಗೋಜಲಾಗಿದೆ.ಎನ್‌ಪಿಎಸ್ ಅಡಿಯಲ್ಲಿ ನೌಕರನೊಬ್ಬ ಸತ್ತರೆ ಪೆನ್ಶನ್ ಕ್ಲಿಯರ್ ಆಗಲು ಸಂತ್ರಸ್ತರ ಸಾವಾಗುತ್ತದೆ, ಅಷ್ಟು ಪಡಿಪಾಟಲು ಪಡಬೇಕು. ಆದ್ದರಿಂದ ಕೂಡಲೇ ಮುಖ್ಯಮಂತ್ರಿಗಳು ನೀಡಿದ್ದ ಮಾತಿನಂತೆ ಒಪಿಎಸ್ ಮಾಡಬೇಕು ಎಂದು ಒತ್ತಾಯಿಸಿದರು.
ಸರಕಾರ ಈ ಕೂಡಲೇ ಬ್ಯಾಕ್‌ಲಾಗ್ ತುಂಬಬೇಕು.ಇದನ್ನು ಮಾಡಲು ವಿಳಂಭ ಮಾಡುತ್ತಿರುವ ದಲಿತ ವಿರೋಧಿ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು. ರಾಜ್ಯ ಸರಕಾರ ಕೂಡಲೇ ಖಾಸಗಿ ಕ್ಷೇತ್ರದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಜಾರಿ ಮಾಡಬೇಕು ಎಂದರು.
ಭಾರತ ಭಾರತೀಯರ ಭಾರತ ಆಗಬೇಕಾದರೆ ಸಂವಿಧಾನ ಉಳಿಯಬೇಕು. ಸಂವಿಧಾನಕ್ಕೆ ಕಂಠಕ ಉಂಟು ಮಾಡುವವರ ಸಮುದಾಯ ವಿರುದ್ಧ ಜಾಗೃತರಾಗಬೇಕು ಎಂದರು.
ಈ ವೇಳೆ ಸಂಘದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಇದ್ದರು.