Chikkaballapur News: ದೇಹ ಮತ್ತು ಮನಸ್ಸುಗಳ ಸಂಲಗ್ನವೇ ಯೋಗ: ಜೀವನದಲ್ಲಿ ಏನೇ ಬಿಟ್ಟರೂ ಯೋಗ ಬಿಡಬೇಡಿ : ಡಾ.ಲೋಕನಾಥ್
ದೇಹ ಮತ್ತು ಮನಸ್ಸುಗಳ ಸಂಲಗ್ನವೇ ಯೋಗ, ಜೀವನದಲ್ಲಿ ಏನೇ ಬಿಟ್ಟರೂ ಯೋಗ ಬಿಡ ಬಾರದು. ಇದರಿಂದಾಗಿ ಜ್ಞಾಪಕಶಕ್ತಿ ಹೆಚ್ಚಾಗಲಿದ್ದು ಬೆನ್ನುನೋವು ಕಡಿಮೆ ಮಾಡಿಕೊಂಡು ಸ್ಥೂಲಕಾಯದ ಸಮಸ್ಯೆ ನಿವಾರಣೆ ಆಗಲಿದೆ. ಅಮೆರಿಕಾದಲ್ಲಿ ಪ್ರತಿ ಹತ್ತು ಮನೆಗಳಿಗೆ ಒಂದು ಯೋಗ ಕೇಂದ್ರವಿದೆ.ಆದರೆ ಭಾರತದಲ್ಲಿ ಇದರ ಕೊರತೆಯಿದೆ
-
Ashok Nayak
Nov 3, 2025 1:58 AM
ಚಿಕ್ಕಬಳ್ಳಾಪುರ : ಮಾನವನ ದೇಹದ ಪ್ರತಿಯೊಂದು ಅಂಗಾಂಗವೂ ಆರೋಗ್ಯದ ದೃಷ್ಟಿಯಿಂದ ಮುಖ್ಯವಾದ ಪಾತ್ರವಹಿಸುತ್ತದೆ.ಯೋಗಾಭ್ಯಾಸದಿಂದ ಇದನ್ನು ಕಾಪಾಡಿಕೊಳ್ಳಲು ನೆರವಾಗಲಿದೆ. ಜೀವನದಲ್ಲಿ ಏನು ಬಿಟ್ಟರೂ ಯೋಗಾಭ್ಯಾಸ ಬಿಡಬೇಡಿ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾ ಲಯದ ಕುಲಸಚಿವ ಡಾ.ಲೋಕನಾಥ್ ತಿಳಿಸಿದರು.
ನಗರ ಹೊರವಲಯ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅಂತರಕಾಲೇಜು ಪುರುಷ ಮತ್ತು ಮಹಿಳೆಯರ ಯೋಗಸ್ಪರ್ಧೆ ಮತ್ತು ಆಯ್ಕೆ ೨೦೨೫-೨೬ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಹ ಮತ್ತು ಮನಸ್ಸುಗಳ ಸಂಲಗ್ನವೇ ಯೋಗ, ಜೀವನದಲ್ಲಿ ಏನೇ ಬಿಟ್ಟರೂ ಯೋಗ ಬಿಡ ಬಾರದು. ಇದರಿಂದಾಗಿ ಜ್ಞಾಪಕಶಕ್ತಿ ಹೆಚ್ಚಾಗಲಿದ್ದು ಬೆನ್ನುನೋವು ಕಡಿಮೆ ಮಾಡಿಕೊಂಡು ಸ್ಥೂಲಕಾಯದ ಸಮಸ್ಯೆ ನಿವಾರಣೆ ಆಗಲಿದೆ. ಅಮೆರಿಕಾದಲ್ಲಿ ಪ್ರತಿ ಹತ್ತು ಮನೆಗಳಿಗೆ ಒಂದು ಯೋಗ ಕೇಂದ್ರವಿದೆ.ಆದರೆ ಭಾರತದಲ್ಲಿ ಇದರ ಕೊರತೆಯಿದೆ ಎಂದರು.
ಪ್ರಪAಚಕ್ಕೆ ಯೋಗ ಪರಿಚಯ ಮಾಡಿದ್ದು ಕೋಲಾರ ಮೂಲದವರಾದ ಬಿ.ಕೆ.ಎಸ್.ಅಯ್ಯಂಗಾರ್ ಆಗಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಯೋಗದಿಂದ ಧ್ಯಾನ ಧಾರಣ ಸಮಾಧಿ ಸ್ಥಿತಿಗಳನ್ನು ಅರಿಯಬೇಕು. ಅದರಂತೆ ಯೋಗ ಮಾಡಬೇಕು. ಯೋಗ ವೈಜ್ಞಾನಿಕವಾದ ಶಿಕ್ಷಣವಾಗಿರುವು ದರಿಂದ ಸೋಡಾ ಸ್ಪಿರಿಟ್ ಎಂದೆAದಿಗೂ ಅಪಾಯಕಾರಿ.ತೂಕ ಕಳೆದುಕೊಳ್ಳಲು ಇಚ್ಚಿಸುವವರು ತಪ್ಪದೆ ಯೋಗಾಭ್ಯಾಸ ಮಾಡಿ ಎಂದು ಕರೆ ನೀಡಿದರು.
ಇದನ್ನೂ ಓದಿ: Chikkanayakanahalli News: ಪದವೀಧರರ ಧ್ವನಿಯಾಗಿ ಮೇಲ್ಮನೆಯಲ್ಲಿರುವೆ: ಬಿಜೆಪಿ ಮುಖಂಡ ವಸಂತಕುಮಾರ್
ನಿರಂತರ ಯೋಗಾಭ್ಯಾಸದಿಂದ ಮನಸ್ಸು ಪ್ರಸನ್ನ ಗೊಳ್ಳುತ್ತದೆ. ಶಶಾಂಕಾಸನ ಅಭ್ಯಾಸ ಮಾಡುವ ಮೂಲಕ ಸಂಬAಧಗಳನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ಪ್ರಾಣಾಯಾಮ, ಕಪಾಲಭಾತಿ ಹೆಸರು ಕೇಳಿದರೆ ಸಾಲದು ಮಾಡಿಯೇ ಇದನ್ನು ಅರಿಯಬೇಕು ಎಂದರು.
ಪ್ರೀತಿಯಿAದ ಗಳಿಸಲಾಗದ್ದು ಮತ್ಯಾವುದರಿಂದಲು ಗಳಿಸಲು ಆಗದು ಎಂದು ಗೌತಮ ಬುದ್ದರು ಹೇಳುತ್ತಾರೆ. ಯೋಗ ಇಂತಹ ಪ್ರೀತಿಯನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಅವಕಾಶ ಮಾಡಿಕೊಡ ಲಿದೆ ಎಂದರು.
ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಯೋಗದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದೊಂದಿಗೆ ಅಂತರಕಾಲೇಜು ಯೋಗಪ್ರದರ್ಶನ ಸ್ಪರ್ಧೆಯನ್ನು ಏರ್ಪಡಿಸಿರುವುದು ಸಂತೋಷದ ಸಂಗತಿಯಾಗಿದೆ. ಈಪರಂಪರೆ ಇಲ್ಲಿಗೆ ನಿಲ್ಲದೆ ಮುಂದುವರೆಯಲಿ ಎಂದು ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಜಿಲ್ಲೆಯಷ್ಟೇ ಅಲ್ಲದೆ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟ ೨೦ ಕ್ಕೂ ಹೆಚ್ಚು ಕಾಲೇಜು ಗಳಿಂದ ಬಂದಿದ್ದ ವಿದ್ಯಾರ್ಥಿ ತಮ್ಮ ಅಮೋಘ ಪ್ರದರ್ಶನದ ಮೂಲಕ ಯೋಗದ ಮಹತ್ವವನ್ನು ಇತರೆ ವಿದ್ಯಾರ್ಥಿಗಳು ಅರಿಯುವಂತೆ ಮಾಡುವಲ್ಲಿ ಸಫಲರಾದರು.ಈ ಸ್ಪರ್ಧೆಯಲ್ಲಿ ಪುರುಷ ವಿಭಾಗ ಏಕ ವ್ಯಕ್ತಿ ಪ್ರದರ್ಶನ ಬಂಗಾರಪೇಟೆ ಕಾಲೇಜಿನ ಚೆನ್ನಬಸವ ಪ್ರಥಮ, ದೊಡ್ಡಬಳ್ಳಾಪುರ ಸ.ಪ್ರ.ದ.ಕಾಲೇಜು ವಿದ್ಯಾರ್ಥಿ ಕಾರ್ತಿಕ್ ದ್ವಿತೀಯ,ಬಿಜಿಎಸ್ ಅಕಾಡೆಮಿ ಚಿಕ್ಕಬಳ್ಳಾಪುರ ಮೂರನೇ ಸ್ಥಾನ ಪಡೆದಿದೆ.
ಸಾಂಪ್ರದಾಯಿಕ ಗುಂಪು ವಿಭಾಗದಲ್ಲಿ ಪ್ರಥಮಸ್ಥಾನ-ಗೌರಿಬಿದನೂರಿನ ರಾಮಲಕ್ಷ್ಮ ಕಾಲೇಜು, ದ್ವಿತೀಯ ಸುಧಾ ಕೊಂಗಾಡಿಯಪ್ಪ ಕಾಲೇಜು ದೊಡ್ಡಬಳ್ಳಾಪುರ, ಮೋಜಿಕ ಜಿ.ಎಫ್,ಜಿ.ಸಿ ಕೆ.ಆರ್.ಪುರಂ ಪಡೆದಿದೆ. ಮಹಿಳಾ ವಿಭಾಗ ಸಾಂಪ್ರದಾಯಿಕ - ಪ್ರಥಮ ಸ್ಥಾನ-ಸ.ಪ್ರ.ದ.ಕಾಲೇಜು ಗೌರಿಬಿದನೂರು, ದ್ವಿತೀಯ ಸ್ಥಾನ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಚಿಕ್ಕಬಳ್ಳಾಪುರ, ಮೂರನೇ ಸ್ಥಾನ ಸ.ಪ್ರ.ದ.ಕಾಲೇಜು ಕೆ.ಆರ್.ಪುರಂ ಪಡೆದಿದೆ.
ಮಹಿಳಾ ವಿಭಾಗ ಗುಂಪುಸ್ಪರ್ಧೆ-ಗೌರಿಬಿದನೂರು ಕಾಲೇಜು, ದ್ವಿತೀಯ ಕೆ.ಆರ್‌ಪುರಂ ಕಾಲೇಜು, ತೃತೀಯ ಮಹಿಳಾ ಪ್ರಥಮದರ್ಜೆ ಕಾಲೇಜು ಚಿಕ್ಕಬಳ್ಳಾಪುರ ಪಡೆದಿವೆ. ಕಾರ್ಯಕ್ರಮದ ಕೊನೆಗೆ ವಿಜೇತ ತಂಡಗಳನ್ನು ಸನ್ಮಾನಿಸಲಾಯಿತು.
ಕುಲಸಚಿವ ಡಾ.ಲೋಕನಾಥ್ , ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ಮಂಜುನಾಥ್ ಯೋಗ ಚಿಕಿತ್ಸಕ, ತೀರ್ಪುಗಾರರಾದ ಚಂದ್ರಶೇಖರ್, ಸತೀಶ್ ಕುಮಾರ್, ಚಂದ್ರಿಕಾ, ಪ್ರಸನ್ನ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಶಾರದ ಪ್ರಾಧ್ಯಾಪಕರಾದ ಹರೀಶ್, ಡಾ.ರಾಮಕೃಷ್ಣಪ್ಪ, ಪ್ರೇಮ ಕುಮಾರ್ ಇದ್ದರು.