200 ಕೋಟಿ ವೆಚ್ಚದಲ್ಲಿ ಗಂಟಲಮಲ್ಲಮ್ಮ ಡ್ಯಾಂ ನಿರ್ಮಿಸಲು ಎಲ್ಲಾ ತಯಾರಿ ನಡೆದಿದೆ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
ಬಾಗೇಪಲ್ಲಿ ಭಾಗದಲ್ಲಿ ಯಾವುದೇ ದೊಡ್ಡ ನದಿಗಳು ಇಲ್ಲ. ಆದ್ದರಿಂದ ಈ ಭಾಗಕ್ಕೆ ಶಾಶ್ವತ ನೀರಾ ವರಿ ವ್ಯವಸ್ಥೆ ಹಾಗೂ ಕೈಗಾರಿಕೆಗಳು ಸ್ಥಾಪನೆ ಮಾಡಿ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಕಲ್ಪಿಸಲು ಉದ್ದೇಶ ಹೊಂದಿದ್ದೇನೆ. ಇದರ ಭಾಗವಾಗಿ ಸುಮಾರು 200 ಕೋಟಿ ವೆಚ್ಚದಲ್ಲಿ ಗಂಟಲ ಮಲ್ಲಮ್ಮ ಡ್ಯಾಂ ನಿರ್ಮಿಸಲು ಎಲ್ಲ ತಯಾರಿ ನಡೆದಿದೆ.


ಬಾಗೇಪಲ್ಲಿ: ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ನೀರಿನ ಅಭಾವ ಕಡಿಮೆ ಮಾಡಲು 200 ಕೋಟಿ ವೆಚ್ಚದಲ್ಲಿ ಗಂಟಲಮಲ್ಲಮ್ಮ ಡ್ಯಾಂ ನಿರ್ಮಿಸಲು ಎಲ್ಲಾ ತಯಾರಿ ನಡೆದಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ನಡೆದ ಅದ್ದೂರಿ ಗಣರಾಜ್ಯೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಗೇಪಲ್ಲಿ ಭಾಗದಲ್ಲಿ ಯಾವುದೇ ದೊಡ್ಡ ನದಿಗಳು ಇಲ್ಲ. ಆದ್ದರಿಂದ ಈ ಭಾಗಕ್ಕೆ ಶಾಶ್ವತ ನೀರಾ ವರಿ ವ್ಯವಸ್ಥೆ ಹಾಗೂ ಕೈಗಾರಿಕೆಗಳು ಸ್ಥಾಪನೆ ಮಾಡಿ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಕಲ್ಪಿಸಲು ಉದ್ದೇಶ ಹೊಂದಿದ್ದೇನೆ. ಇದರ ಭಾಗವಾಗಿ ಸುಮಾರು 200 ಕೋಟಿ ವೆಚ್ಚದಲ್ಲಿ ಗಂಟಲ ಮಲ್ಲಮ್ಮ ಡ್ಯಾಂ ನಿರ್ಮಿಸಲು ಎಲ್ಲ ತಯಾರಿ ನಡೆದಿದೆ. ಇದರಿಂದಾಗಿ ಒಂದು ಸಾವಿರಕ್ಕೆ ಹೆಚ್ಚು ಎಕರೆಗಳಷ್ಟು ರೈತರ ಜಮೀನುಗಳಿಗೆ ನೀರು ಒದಗಿಸಲಿದ್ದೇವೆ ಎಂದರು.
ಅಂಬೇಡ್ಕರ್ ಕನಸು ನನಸು: ನಮ್ಮ ಕಾಂಗ್ರೆಸ್ ಸರಕಾರವು ತಳ ಸಮುದಾಯಗಳು ಸೇರಿದಂತೆ ಎಲ್ಲ ವರ್ಗಗಳ ಸಾಮಾಜಿಕ,ಆರ್ಥಿಕ, ಶೈಕ್ಷಣಿಕವಾಗಿ ಬಲಿಷ್ಟರಾಗಬೇಕು ಎಂಬ ಸುದ್ದೇಶ ಹೊಂದಿ ದೆ. ಅದಕ್ಕೆ ನಮ್ಮ ಸರಕಾರವೂ ಬದ್ಧವಾಗಿ ಯೋಜನೆಗಳನ್ನು ರೂಪಿಸಿದೆ. ಹಾಗಾಗಿ ಎಲ್ಲ ತಾರತಮ್ಯ ಗಳನ್ನು ತೊಡೆದು ಹಾಕಿ ಸಮಸಮಾಜದ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗಲು ಸಾಧ್ಯ,ಈ ಮೂಲಕ ಡಾ.ಬಿ.ಆರ್ ಅಂಬೇಡ್ಕರ್ ಕಂಡ ಕನಸು ನನಸು ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ತಹಶೀಲ್ದಾರ್ ಮನಿಷಾ ಮಹೇಶ್ ಎಸ್.ಪತ್ರಿಯವರು ಮಾತನಾಡಿ, ಗಣರಾಜ್ಯೋ ತ್ಸವವನ್ನು ಇಷ್ಟೊಂದು ಅದ್ದೂರಿ ಆಚರಿಸಲು ಡಾ.ಬಿ.ಆರ್ ಅಂಬೇಡ್ಕರ್ ರವರು ನೀಡಿದ ಸಂವಿಧಾನವೇ ಕಾರಣವಾಗಿದೆ. ಸಂವಿಧಾನದ ಮೂಲಕ ದೇಶದ ಪ್ರತಿ ಪ್ರಜೆಯೂ ಆತ್ಮಗೌರವದಿಂದ ಬದುಕಲು ಪ್ರಪಂಚದಲ್ಲೆ ಅತ್ಯುತ್ತಮ ಮತ್ತು ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರೂಪಿಸಿ ನಮಗೆ ನೀಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ದೇಶದ ಸಮಗ್ರತೆ ಅಭಿವೃದ್ಧಿ ಜೊತೆಗೆ ಪ್ರಜಾ ಪ್ರಭುತ್ವದ ಆಶಯಗಳನ್ನು ಸಾಕಾರಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಆರ್.ಹನುಮಂತರೆಡ್ಡಿ, ಆರಕ್ಷಕ ವೃತ್ತ ನಿರೀಕ್ಷಕ ಪ್ರಶಾಂತ್ ಆರ್ ವರ್ಣಿ, ಬಿಇಓ ವೆಂಕಟೇಶಪ್ಪ,ಇಒ ರಮೇಶ್,ಪುರಸಭೆಯ ಅಧ್ಯಕ್ಷ ಶ್ರೀನಿವಾಸ್, ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಶಿಕ್ಷಣ ಸಂಯೋಜಕ ಆರ್.ವೆಂಕಟರಾಮ್, ಮುಖ್ಯ ಶಿಕ್ಷಕ ಕೆ.ವಿ ಆದಿನಾರಾಯಣ ಸೇರಿದಂತೆ ಹಲವಾರು ಮಂದಿ ಇದ್ದರು.