ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶೇಂಗಾ ಬೀಜದಲ್ಲಿ ಭಾರೀ ಅಕ್ರಮ ಮತ್ತು ಲೋಪ ನಡೆದಿವೆ ಎಂದು ಆರೋಪಿಸಿ, ಅಖಿಲ ಕರ್ನಾಟಕ ರೈತ ಸಂಘದ ವತಿಯಿಂದ ನಗರದ ಕೃಷಿ ಇಲಾಖೆ ಕಚೇರಿಯ ಎದುರು ಪ್ರತಿಭಟನೆ

ನಿಗದಿತ ದಿನಾಂಕಗಳಲ್ಲಿ ಆಯಾ ಗ್ರಾಮದ ರೈತರು ಮಾತ್ರ ನೋಂದಣಿಗೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ನೋಂದಣಿಗೆ ಬರುವ ರೈತರು ಆಧಾರ್‌ ಕಾರ್ಡ್, ಪಹಣಿ ಮತ್ತು ಎಫ್‌ಐಡಿ (ಊಐಈ) ದಾಖಲೆ ತರಬೇಕು. ನೋಂದಣಿ ದಿನಾಂಕಗಳ ವಿವರ ವನ್ನು ಆಯಾ ಗ್ರಾಪಂ, ಹೋಬಳಿ ಮಟ್ಟದ ಕಚೇರಿಗಳಲ್ಲಿ ಪ್ರದರ್ಶಿಸಲಾಗಿದೆ.

ಶೇಂಗಾ ಬೀಜದಲ್ಲಿ ಭಾರೀ ಅಕ್ರಮ ಎಂದು ಆರೋಪ: ಪ್ರತಿಭಟನೆ

-

Profile
Ashok Nayak Jun 30, 2026 11:41 PM

ಗೌರಿಬಿದನೂರು: ಕೇಂದ್ರ ಸರ್ಕಾರದ 'ರಾಷ್ಟ್ರೀಯ ಖಾದ್ಯ ತೈಲ ಕಾಳು ಬೆಳೆ' ಯೋಜನೆ(National Edible Oilseed Crop Scheme) ಯಡಿ ರೈತರಿಗೆ ಉಚಿತವಾಗಿ ವಿತರಿಸಬೇಕಾದ ಶೇಂಗಾ ಬೀಜದಲ್ಲಿ ಭಾರೀ ಅಕ್ರಮ ಮತ್ತು ಲೋಪ ನಡೆದಿವೆ ಎಂದು ಆರೋಪಿಸಿ, ಅಖಿಲ ಕರ್ನಾಟಕ ರೈತ ಸಂಘದ ವತಿಯಿಂದ ನಗರದ ಕೃಷಿ ಇಲಾಖೆ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ರೈತರನ್ನುದ್ದೇಶಿಸಿ ಅಖಿಲ ಕರ್ನಾಟಕ ರೈತ ಸಂಘಟನೆ ತಾಲೂಕು ಸಂಚಾಲಕ ರವಿಚಂದ್ರರೆಡ್ಡಿ ಮಾತನಾಡಿ, ತಾಲೂಕಿನ ನಗರಗೆರೆ ಮತ್ತು ಡಿ.ಪಾಳ್ಯ ಹೋಬಳಿಯಲ್ಲಿ ಕೃಷಿ ಇಲಾಖೆ ಶೇಂಗಾ ಬೀಜ ವಿತರಣೆ ಮಾಡುವಾಗ ಫಲಾನುಭವಿಗಳನ್ನು ಆಯ್ಕೆ ಮಾಡುವುದರಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ, ಅರ್ಹರನ್ನು ಗುರುತಿಸುವಲ್ಲಿ ಕೃಷಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Chikkaballapur News: "2028ರಲ್ಲಿ ಎಷ್ಟು ಮತಗಳ ಅಂತರದಲ್ಲಿ ಸೋಲುತ್ತೀಯೋ ಕಾದು ನೋಡು" ಸವಾಲು

ಕ್ರಮ ಕೈಗೊಳ್ಳಿ: ಮುಂದಿನ 2-3 ದಿನಗಳಲ್ಲಿ ಆಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮತ್ತು ಅರ್ಹ ಫಲಾನುಭವಿಗಳಿಗೆ ಸವಲತ್ತು ತಲುಪಿಸದಿದ್ದರೆ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮುಂದೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೃಷಿ ಸಹಾಯಕ ನಿರ್ದೇಶಕ ರವಿಕುಮಾರ್ ಮಾತನಾಡಿ, ಈ ಬಾರಿ ಅಂತಹ ಸಮಸ್ಯೆ ಮರು ಕಳಿಸದಂತೆ ವ್ಯವಸ್ಥಿತವಾಗಿ ಕ್ರಮ ಕೈಗೊಳ್ಳಲಾಗಿದೆ. ಕಳೆದ ಬಾರಿ ಕಡಲೆಕಾಯಿ ಖರೀದಿಯಿಂದ ವಂಚಿತವಾಗಿದ್ದ ಹಳ್ಳಿಗಳಿಗೆ ಆದ್ಯತೆನೀಡಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದರು. 

ನೋಂದಣಿಗೆ ವಿವರ ನೀಡಲು ರೈತರ ಆಗ್ರಹ: ನಿಗದಿತ ದಿನಾಂಕಗಳಲ್ಲಿ ಆಯಾ ಗ್ರಾಮದ ರೈತರು ಮಾತ್ರ ನೋಂದಣಿಗೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ನೋಂದಣಿಗೆ ಬರುವ ರೈತರು ಆಧಾರ್‌ ಕಾರ್ಡ್, ಪಹಣಿ ಮತ್ತು ಎಫ್‌ಐಡಿ (ಊಐಈ) ದಾಖಲೆ ತರಬೇಕು. ನೋಂದಣಿ ದಿನಾಂಕಗಳ ವಿವರ ವನ್ನು ಆಯಾ ಗ್ರಾಪಂ, ಹೋಬಳಿ ಮಟ್ಟದ ಕಚೇರಿಗಳಲ್ಲಿ ಪ್ರದರ್ಶಿಸಲಾಗಿದೆ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು, ಅವರ ಮಾರ್ಗದರ್ಶನದಂತೆ ಪಾರದರ್ಶ ಕವಾಗಿ ಕಡಲೆಕಾಯಿ ಖರೀದಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದೆಂದರು.

ಪ್ರತಿಭಟನೆಯ ಸಂದರ್ಭದಲ್ಲಿ ರೈತರಾದ ಆಂಜಿನಪ್ಪ, ವೆಂಕಟರೆಡ್ಡಿ, ಚವನ್ ಭಾಷಾ, ನರಸಿಂಹಪ್ಪ ಅಶ್ವಥ್ ರೆಡ್ಡಿ, ಬಾಲಚಂದ್ರ ರೆಡ್ಡಿ ಸತ್ಯನಾರಾಯಣ, ನಿರಂಜನ್, ನಟರಾಜ್, ರೈತ ಮುಖಂಡರು ಉಪಸ್ಥಿತರಿದ್ದರು.