ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gauribidanur News: ಅಮರನಾರೇಯಣ ಶತಕವು ಜೀವನದ ಮೌಲ್ಯಗಳನ್ನು ಸಾರುವ ಆಧ್ಯಾತ್ಮಿಕ ಮಾರ್ಗದರ್ಶಕ

ನಗರದ ಶ್ರೀ ಶನಿಮಹಾತ್ಮ ದೇವಾಲಯದ ಆವರಣದಲ್ಲಿ ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯನವರ ತ್ರಿಶತಮಾನೋತ್ಸವದ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪೋತನ ಭಾಗವತ ಹಾಗೂ ಶ್ರೀ ಅಮರನಾರೇಯಣ ಶತಕದ ಪ್ರವಚನ ಸಪ್ತಾಹ ಮಾತನಾಡಿದ ಅವರು, ಅಮರನಾರೇಯಣ ಶತಕವು ಕೇವಲ ಸಾಹಿತ್ಯ ಕೃತಿಯಲ್ಲಿ ಅದು ಜೀವನದ ಮೌಲ್ಯ ಗಳನ್ನು ಸಾರುವ ಆಧ್ಯಾತ್ಮಿಕ ಮಾರ್ಗದರ್ಶಕವಾಗಿದೆ.

ಅಮರನಾರೇಯಣ ಶತಕವು ಆಧ್ಯಾತ್ಮಿಕ ಮಾರ್ಗದರ್ಶಕವಾಗಿದೆ

-

Profile
Ashok Nayak Jun 11, 2026 11:06 PM

ಗೌರಿಬಿದನೂರು: ಕೃವಾರ ಕ್ಷೇತ್ರದ ಸದ್ಗುರು ಯೋಗಿ ನಾರೇಯಣ ಶ್ರೀಗಳ ತ್ರಿಶತಮಾನ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿರುವ ಶ್ರೀ ಅಮರನಾರೇಯಣ ಶತಕ ಪ್ರವಚನ ಸಪ್ತಾಹವು ಭಕ್ತರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಮಹತ್ವದ ಕಾರ್ಯಕ್ರಮವಾಗಿದೆ. 

ಯೋಗಿನಾರೇಯಣ ಶ್ರೀಗಳು ತಮ್ಮ ಜೀವನವನ್ನೇ ಸಮಾಜದ ಒಳಿತಿಗಾಗಿ, ಧರ್ಮದ ಪ್ರಚಾರಕ್ಕಾಗಿ ಹಾಗೂ ಮಾನವೀಯ ಮೌಲ್ಯಗಳ ಬೆಳವಣಿಗೆಗಾಗಿ ಸಮರ್ಪಿಸಿದ್ದರು ಎಂದು ಶ್ರೀ ಕ್ಷೇತ್ರ ಕೈವಾರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ತಿಳಿಸಿದರು.

ನಗರದ ಶ್ರೀ ಶನಿಮಹಾತ್ಮ ದೇವಾಲಯದ ಆವರಣದಲ್ಲಿ ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯನವರ ತ್ರಿಶತಮಾನೋತ್ಸವದ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪೋತನ ಭಾಗವತ ಹಾಗೂ ಶ್ರೀ ಅಮರನಾರೇಯಣ ಶತಕದ ಪ್ರವಚನ ಸಪ್ತಾಹ ಮಾತನಾ ಡಿದ ಅವರು, ಅಮರನಾರೇಯಣ ಶತಕವು ಕೇವಲ ಸಾಹಿತ್ಯ ಕೃತಿಯಲ್ಲಿ ಅದು ಜೀವನದ ಮೌಲ್ಯಗಳನ್ನು ಸಾರುವ ಆಧ್ಯಾತ್ಮಿಕ ಮಾರ್ಗದರ್ಶಕವಾಗಿದೆ. ಇಂತಹ ಪ್ರವಚನಗಳ ಮೂಲಕ ಯುವಪೀಳಿಗೆ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಸನಾತನ ಧರ್ಮದ ತತ್ವ ಗಳನ್ನು ಅರಿತುಕೊಳ್ಳುವ ಅವಕಾಶ ದೊರೆಯುತ್ತದೆ ಎಂದರು.

ಇದನ್ನೂ ಓದಿ: Chikkaballapur News: ವೈಭವ ಮತ್ತು ಲವಲವಿಕೆಯಿಂದ 91ನೇ ಹುಟ್ಟುಹಬ್ಬ ಆಚರಿಸಿಕೊಂಡ ಜಿ.ಪಂ.ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ

ಕೈವಾರ ತಾತಯ್ಯನವರ ನೆಲದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ವಿಶೇಷ ಮಹತ್ವ ಪಡೆದಿದ್ದು ಭಕ್ತರು ಪ್ರವಚನಗಳ ಸಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸತ್ಪಜೆಯಾಗಿ, ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಯೋಗಿ ನಾರೇಯಣ ಶ್ರೀಗಳ ಆದರ್ಶಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ. ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ, ಶಾಂತಿ ಮತ್ತು ನೈತಿಕ ಮೌಲ್ಯಗಳನ್ನು ಬಲಪಡಿಸುತ್ತವೆ. ಬ್ರಹ್ಮಾಂಡದಲ್ಲಿ ಪ್ರತಿಯೊಂದಕ್ಕೂ ಜೀವವಿದೆ ಎಂಬುದನ್ನು ಅರಿತುಕೊಂಡು ಎಲ್ಲರೂ ಈ ಸಪ್ತಾಹದಲ್ಲಿ ಭಾಗವಹಿಸಿ ಆಧ್ಯಾತ್ಮಿಕ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪ್ರವಚನಕಾರ ಬೆಂಗಳೂರಿನ ಶ್ರೀ ಮಂಕಾಲ ಶ್ರೀಹರಿ ಶರ್ಮ ಮಾತನಾಡಿ, ಶ್ರೀ ಅಮರ ನಾರೇಯಣ ಶತಕವು ಭಕ್ತಿ, ಜ್ಞಾನ ಹಾಗೂ ವೈರಾಗ್ಯದ ಅಮೂಲ್ಯ ಸಂದೇಶಗಳನ್ನು ಒಳಗೊಂಡಿರುವ ಮಹತ್ವದ ಕೃತಿ. ಈ ಶತಕದ ಪ್ರತಿಯೊಂದು ಪದ್ಯವೂ ಮಾನವ ಜೀವನ ವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ದಿವ್ಯ ಮಾರ್ಗದರ್ಶನವಾಗಿದೆ. ಸದ್ಗುರು ಯೋಗಿ ನಾರೇಯಣ ಶ್ರೀಗಳು ಬೋಧಿಸಿದ ಮೌಲ್ಯಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತ ವಾಗಿವೆ ಎಂದರು.

ಮಾನವನ ಬದುಕಿನಲ್ಲಿ ಆತ್ಮಚಿಂತನೆ, ಸದಾಚಾರ ಮತ್ತು ದೈವಭಕ್ತಿ ಅತ್ಯಗತ್ಯ, ಭೌತಿಕ ಸಾಧನೆಗಳ ಜತೆಗೆ ಆಧ್ಯಾತ್ಮಿಕ ಸಾಧನೆಯೂ ಸಮಾನವಾಗಿ ಮುಖ್ಯವಾಗಿದೆ ಎಂಬ ಸಂದೇಶ ವನ್ನು ಅಮರನಾರೇಯಣ ಶತಕ ಸಾರುತ್ತದೆ. ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿ, ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ಸಾಗುವಂತೆ ಈ ಕೃತಿ ಪ್ರೇರೇಪಿಸುತ್ತದೆ ಎಂದು ಹೇಳಿದರು.

ಪ್ರವಚನವು ಜೂ.12ರವರೆಗೆ ಪ್ರತಿದಿನ ಸಂಜೆ 6.30ರಿಂದ 8.30ರವರೆಗೆ ನಡೆಯಲಿದ್ದು, ಸಾರ್ವಜನಿಕರು ಈ ಪ್ರವಚನದಲ್ಲಿ ಪಾಲ್ಗೊಂಡು ಸನ್ಮಾರ್ಗದ ಸಂದೇಶವನ್ನು ಪಡೆದು ಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೈವಾರ ತಾತಯ್ಯನವರ ಭಕ್ತ ವೃಂದದವರು ಸಮುದಾಯದ ಮುಖಂಡರಾದ ಎಲ್ಐಸಿ ರವಿ, ಪ್ರದೀಪ್, ನಗರಸಭೆ ಮಾಜಿ ಸದಸ್ಯ ರಮೇಶ್, ನಗರ ವಿಶ್ವ ಹಿಂದು ಪರಿಷದ್ ಕಾರ್ಯದರ್ಶಿ ರಮೇಶ್ ಬಾಬು ಹಾಗೂ ಇನ್ನಿತರರು ಭಾಗವಹಿಸಿದ್ದರು.