ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆ ಬಲಿಷ್ಠವಾಗಿ ಬೆಳೆಯುತ್ತಿದೆ : ರಾಜ್ಯಾಧ್ಯಕ್ಷ ಡಾ.ಕೆ.ಎಂ. ಸಂದೇಶ್
ಬಾಬಾ ಸಾಹೇಬ ಅಂಬೇಡ್ಕರ್ ಅವರ ಆಶಯಗಳನ್ನು ಜನರೆಡೆಗೆ ಕೊಂಡೊ ಯ್ಯುವ ಮೂಲಕ ಅವರಲ್ಲಿ ಅರಿವಿನ ಹಣತೆ ಹಚ್ಚುವ ಕೆಲಸವನ್ನು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆ ಮಾಡುತ್ತಾ ಇಂದು ಬಲಿಷ್ಠ ಸಂಘಟನೆಯಾಗಿ ಬೆಳೆಯುತ್ತಿರುವುದು ಸಂತೋಷ ತಂದಿದೆ
-
ಚಿಕ್ಕಬಳ್ಳಾಪುರ : ಬಾಬಾ ಸಾಹೇಬ ಅಂಬೇಡ್ಕರ್ ಅವರ ಆಶಯಗಳನ್ನು ಜನರೆಡೆಗೆ ಕೊಂಡೊ ಯ್ಯುವ ಮೂಲಕ ಅವರಲ್ಲಿ ಅರಿವಿನ ಹಣತೆ ಹಚ್ಚುವ ಕೆಲಸವನ್ನು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆ ಮಾಡುತ್ತಾ ಇಂದು ಬಲಿಷ್ಠ ಸಂಘಟನೆಯಾಗಿ ಬೆಳೆಯುತ್ತಿರುವುದು ಸಂತೋಷ ತಂದಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಕೆ.ಎಂ. ಸಂದೇಶ್ ತಿಳಿಸಿದರು.
ನಗರದ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಅಪಾರವಾದ ಓದು, ತ್ಯಾಗ, ಪರಿಶ್ರಮ, ಸಾಮಾಜಿಕ ಕಳಕಳಿ, ಸಮಾನತೆಗಾಗಿ ಅವಿರತವಾಗಿ ಮಿಡಿದ ಕಾರಣವಾಗಿ ಸಂವಿಧಾನದಲ್ಲಿ ಎಲ್ಲಾ ಜಾತಿ ಜನಾಂಗಗಳು ನೆಮ್ಮದಿಯಾಗಿ ಜೀವನ ಸಾಗಿಸುವಂತೆ ಆಗಿದೆ. ಇದನ್ನು ಅರಿಯದ ಮನುವಾದಿಗಳು ಸ್ವಾತಂತ್ರ್ಯ ಬಂದು ೭೮ ವರ್ಷ ಗಳಾದರೂ ಅಂಬೇಡ್ಕರ್ ಅವರನ್ನು ಶೋಷಿತ ಸಮುದಾಯದ ನಾಯಕ ಎಂಬಂತೆ ಬಿಂಬಿಸಿರುವು ದರಿಂದಲೇ ಮಹಾಮಾನವತಾವಾದಿಯ ಶಕ್ತಿ ಸಾಮರ್ಥ್ಯ, ದೂರದೃಷ್ಟಿ ಬಹು ಸಂಖ್ಯಾತರಾದ ಬಹುಜನ ಸಮಾಜವೂ ಸೇರಿ ಮೇಲ್ವರ್ಗದ ಸಮುದಾಯಗಳಿಗೆ ಇನ್ನೂ ಅರಿವಾಗುತ್ತಿಲ್ಲ. ಈ ಬಗ್ಗೆ ಗುಣಾತ್ಮಕ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಕೆಲಸವನ್ನು ನಮ್ಮ ಸಂಘಟನೆ ಮಾಡುತ್ತಿದೆ ಎಂದರು.
ಜಿಲ್ಲೆಯಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆ ತಲೆಯೆತ್ತಿದ್ದು ಜಿಲ್ಲಾಧ್ಯಕ್ಷರಾಗಿ ನಾಗರಾಜು, ಉಪಾಧ್ಯಕ್ಷರಾಗಿ ರಾಜಣ್ಣ, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷರಾಗಿ ವಿನೋದ್ ಕುಮಾರ್, ಉಪಾಧ್ಯಕ್ಷರಾಗಿ ಶ್ರೀನಿವಾಸ್, ಗೌರಿಬಿದನೂರು, ಮಂಚೇನಹಳ್ಳಿ ತಾಲೂಕು ಅಧ್ಯಕ್ಷರಾಗಿ ಎ.ಅರುಣ್ ಕುಮಾರ್, ಉಪಾಧ್ಯಕ್ಷರಾಗಿ ಬಾಲು ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾ ಧ್ಯಕ್ಷ ಡಾ.ಕೆ.ಎಂ.ಸಂದೇಶ್ ತಿಳಿಸಿದರು.