ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶಿಕ್ಷಣದಿಂದಲೇ ಪ್ರಗತಿ ಸಾಧ್ಯವೆಂಬುದು ಅಂಬೇಡ್ಕರ್ ಬಲವಾದ ನಂಬಿಕೆ : ನರಸಿಂಹಮೂರ್ತಿ ಅಭಿಮತ

ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿ ನಂತರ ಮಾತನಾಡಿದ ಅವರು ಬಿ.ಆರ್. ಅಂಬೇಡ್ಕರ್ ಅವರು ವಿಶ್ವಶ್ರೇಷ್ಠ ಆರ್ಥಿಕ ತಜ್ಞರಾಗಿದ್ದು, ಭಾರತದಲ್ಲಿ ಆರ್ಥಿಕ ಭದ್ರತೆಗೆ ಭದ್ರ ಬುನಾದಿಯನ್ನು ಹಾಕಿದ್ದರು.

ಶಿಕ್ಷಣದಿಂದಲೇ ಪ್ರಗತಿ ಸಾಧ್ಯವೆಂಬುದು ಅಂಬೇಡ್ಕರ್ ಬಲವಾದ ನಂಬಿಕೆ

-

Ashok Nayak
Ashok Nayak Dec 7, 2025 3:32 PM

ಶಿಡ್ಲಘಟ್ಟ: ಪ್ರತಿ ವ್ಯಕ್ತಿಗೂ ಕೂಡ ಸಾಮಾಜಿಕ ಸಮಾನತೆ ಮತ್ತು ಶಿಕ್ಷಣ ಸಿಗಬೇಕೆನ್ನುವುದು ಅಂಬೇ ಡ್ಕರ್ ಅವರ ಕನಸಾಗಿದ್ದು ಶಿಕ್ಷಣದಿಂದಲೇ ಪ್ರಗತಿ ಸಾಧ್ಯವೆಂದು ನಂಬಿದ್ದರು ಎಂದು ಮಹಾ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆ ಸಂಘದ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ ಹೇಳಿದರು.

ನಗರದ ಆಶಾ ಕಿರಣ ಅಂದ ಮಕ್ಕಳ ಶಾಲೆಯಲ್ಲಿ ಏರ್ಪಡಿಸಿದ್ದ ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ ಅವರ ೬೯ನೇ ಮಹಾ ಪರಿನಿರ್ವಾಣದಲ್ಲಿ ಭಾಗವಹಿಸಿ ಮಾತನಾಡಿದರು.

ಸಂವಿಧಾನದಿಂದಲೇ ಜನರಿಗೆ ಸಿಗಬೇಕಾದ ಸಮಾನವಾದ ಹಕ್ಕುಗಳು ಹಾಗೂ ನ್ಯಾಯವನ್ನು ಒದಗಿಸಲು ರಾಜದಾರಿ ತೋರಿಸಿದ್ದಾರೆ. ಇವರ ಸಾಧನೆಗಳು ವಿದ್ಯಾರ್ಥಿಗಳಿಗೆ ದಾರಿಯನ್ನು ತೋರಿಸುತ್ತದೆ ಎಂದರು.

ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿ ನಂತರ ಮಾತನಾಡಿದ ಅವರು ಬಿ.ಆರ್.ಅಂಬೇಡ್ಕರ್ ಅವರು ವಿಶ್ವಶ್ರೇಷ್ಠ ಆರ್ಥಿಕ ತಜ್ಞರಾಗಿದ್ದು, ಭಾರತದಲ್ಲಿ ಆರ್ಥಿಕ ಭದ್ರತೆಗೆ ಭದ್ರ ಬುನಾದಿಯನ್ನು ಹಾಕಿದ್ದರು. ಕಾನೂನು ತಜ್ಞರಾಗಿದ್ದು, ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಗಳು ಹಾಗೂ ಹಕ್ಕುಗಳನ್ನು ಒದಗಿಸಲು ಶ್ರಮಿಸಿದರು ಎಂದರು.

ಇದನ್ನೂ ಓದಿ: Chikkaballapur News: ಸಾಮಾಜಿಕ ನ್ಯಾಯಕ್ಕೆ ಆಗ್ರಹಿಸಿ ಡಿ.೬ರಂದು ಸಿದ್ದರಾಮನ ಹುಂಡಿಯಿಂದ ಕಾಲ್ನಡಿಗೆ ಜಾಥ : ಸಮಿತಿ ರಾಜ್ಯಾಧ್ಯಕ್ಷ ಕೇಶವಮೂರ್ತಿ ಹೇಳಿಕೆ

ಡಾ.ಅಂಬೇಡ್ಕರ್ ಅವರು ಜೀವಮಾನದಲ್ಲಿ ಹೆಚ್ಚು ಹೋರಾಡಿದ್ದು ಸಮಾಜದ ಸಮಾನತೆಗೆ. ಅವರ ಜೀವನದಲ್ಲಿ ಆದ ನೋವು, ಅಸಮಾನತೆ ನೋಡಿ ಎಲ್ಲರೂ ಸಮಾನವಾಗಿ ಬದುಕಬೇಕು ಎಂದು ನಂಬಿದ್ದರು. ಉತ್ತಮ ಸಮಾಜ ನಿರ್ಮಾಣಕ್ಕೆ ಸಂವಿಧಾನ ರಚನೆ ಮಾಡಿದ ಡಾ.ಅಂಬೇಡ್ಕರ್ ಅವರ ಆಶಯವನ್ನು ಇಂದಿಗೂ ಪಾಲಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಯುವ ಮುಖಂಡ ಸುರೇಶ (ಭಗತ್ ) ಮಾತನಾಡಿ, ದೇಶಕ್ಕೆ ಸಂವಿಧಾನ ಕಲ್ಪಿಸಿಕೊಟ್ಟ ಮಹಾತ್ಮ ರಾದ ಡಾ.ಬಿ.ಆರ್.ಅಂಬೇಡ್ಕರ್ ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಿರುವುದು ನನ್ನ ಪುಣ್ಯ. ಶಿಕ್ಷಣ, ಸಂಘಟನೆ, ಹೋರಾಟ ಎಂಬ ಧ್ಯೇಯವನ್ನು ನೀಡಿದ  ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್  ಸಮಾನತೆಗೆ ಹೋರಾಡಿದವರು. ಜಾತಿ ಮತ್ತು ಅಸ್ಪೃಶ್ಯತೆ ಹೋಗಲಾಡಿಸಲು  ಶ್ರಮಿಸಿದ ಧೀಮಂತ ನಾಯಕ. ಅವರಿಂದಲೇ ಇವತ್ತು ನಾವೆಲ್ಲ ಸ್ವಾತಂತ್ರ‍್ಯದಿAದ ಬದುಕುವ ಹಕ್ಕು ಪಡೆದಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಕ ಆನಂದ್, ಯುವ ಮುಖಂಡ ಚೆಲುವ ರಾಜ್,ಸನಾತನ ಜನ ಸೇನಾ ಸೇವಾದಳ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಬುಜ್ಜಿ ನಾಯಕ್, ಲಿಯೋ ಕ್ಲಬ್ ಕಿರಣ ಶ್ರೀಕಾಂತ್, ಲಿಯೋ ಲೋಕೇಶ್, ಕೆಇಬಿ ಕೃಷ್ಣಪ್ಪ, ರಾಮಾಂಜನೇಯ, ಶ್ರೀ ರಾಮ್ ಸೇರಿದಂತೆ ಆಶಾ ಕಿರಣ ಅಂದ ಮಕ್ಕಳ ಶಾಲೆ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.