ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gauribidanur News: ಭಕ್ತರ ಮನಸೆಳೆಯುತ್ತಿದೆ ಅಯೋಧ್ಯ ಶ್ರೀ ರಾಮ ಮಂದಿರ ಪ್ರದರ್ಶನ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬೀದರ ಗ್ರಾಮದ ವಿನಯ ರಾಮ ಅವರು ಸಂಕಲ್ಪ ಮಾಡಿ ಅಯೋಧ್ಯ ಶ್ರೀ ರಾಮ ಮಂದಿರ ಮಾದರಿಯನ್ನು ಈಗಾಗಲೇ ರಾಷ್ಟ್ರ ಹಾಗೂ ರಾಜ್ಯದ 101 ಕಡೆ ನಡೆಸಲಾಗಿದೆ. ಈಗ  ಕರ್ನಾಟಕದ 18 ಜಿಲ್ಲೆಗಳಲ್ಲಿ ಪ್ರದರ್ಶನ ಏರ್ಪಡಿಸಿದ್ದು, ಗೌರಿಬಿದನೂರಿ ನಲ್ಲಿ ಗುರುವಾರದಿಂದ 102ನೇ ಪ್ರದರ್ಶನ ನಡೆಸಲಾಗುತ್ತಿದೆ.

ಭಕ್ತರ ಮನಸೆಳೆಯುತ್ತಿದೆ ಅಯೋಧ್ಯ ಶ್ರೀ ರಾಮ ಮಂದಿರ ಪ್ರದರ್ಶನ

-

Profile
Ashok Nayak Apr 10, 2026 11:29 PM

ಗೌರಿಬಿದನೂರು: ಆರ್ಯವೈಶ್ಯ ಮಂಡಳಿ  ಹಾಗೂ ವಾಸವಿ ದೀಕ್ಷಾ ಸಮಿತಿ ಮತ್ತು ಎಲ್ಲಾ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಏರ್ಪಡಿ ಸಿರುವ ಅರಮನೆ ಶೈಲಿಯ ಅಯೋಧ್ಯ ಶ್ರೀ ರಾಮ ಮಂದಿರ ಪ್ರದರ್ಶನ ಭಕ್ತರ ಮನ ಸೆಳೆಯುತ್ತಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬೀದರ ಗ್ರಾಮದ ವಿನಯ ರಾಮ ಅವರು ಸಂಕಲ್ಪ ಮಾಡಿ ಅಯೋಧ್ಯ ಶ್ರೀ ರಾಮ ಮಂದಿರ ಮಾದರಿಯನ್ನು ಈಗಾಗಲೇ ರಾಷ್ಟ್ರ ಹಾಗೂ ರಾಜ್ಯದ 101 ಕಡೆ ನಡೆಸಲಾಗಿದೆ. ಈಗ  ಕರ್ನಾಟಕದ 18 ಜಿಲ್ಲೆಗಳಲ್ಲಿ ಪ್ರದರ್ಶನ ಏರ್ಪಡಿಸಿದ್ದು, ಗೌರಿಬಿದನೂರಿ ನಲ್ಲಿ ಗುರುವಾರದಿಂದ 102ನೇ ಪ್ರದರ್ಶನ ನಡೆಸಲಾಗುತ್ತಿದೆ.  

ಇದನ್ನೂ ಓದಿ: Gauribidanur News: ಗೊಟಕಣಾಪುರ ಗ್ರಾಮದಲ್ಲಿ ಗ್ರಾಮದೇವತೆಗಳ ಪೂಜೆ

ಆರ್ಯವೈಶ್ಯ ಮಂಡಳಿಯ ಅಧ್ಯಕ್ಷತೆಯನ್ನು ಎ.ಎನ್.ರಾಜಣ್ಣ ಈ ಕುರಿತು ಮಾತನಾಡಿ, ಬುಧವಾರ ದವರೆಗೆ ಏಳು ದಿನಗಳ ಕಾಲ ನಿತ್ಯ ಸಂಜೆ 5:30 ರಿಂದ 8 ಗಂಟೆಯವರೆಗೆ ಪ್ರದರ್ಶನ ನಡೆಯಲಿದೆ.

ಪ್ರದರ್ಶನದಲ್ಲಿ ಅಯೋಧ್ಯಶ್ರೀ ರಾಮ ಮಂದಿರದ ಮಾದರಿಯನ್ನು ಮತ್ತು ಬಾಲರಾಮನ ದರ್ಶನ ವನ್ನು ಭಕ್ತರು ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಅಧಿಕ ಸಂಖ್ಯೆಯ ಜನ ಭೇಟಿ ನೀಡಿ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಆರ್ಯವೈಶ್ಯ ಮಂಡಳಿ ನಗರಸಭೆ ಮಾಜಿ ಸದಸ್ಯ ಅಮರ್ ಶೆಟ್ಟಿ ಮನವಿ ಮಾಡಿದ್ದಾರೆ.