Chikkaballapur News: ಅಂಬೇಡ್ಕರ್ ಭವನ, ಅಂಗನವಾಡಿ, ಸರಕಾರಿ ಶಾಲೆ ನವೀಕರಣ ಸೇರಿ 12 ಲಕ್ಷದ ಕಾಮಗಾರಿಗಳಿಗೆ ಭೂಮಿಪೂಜೆ
ಕಾಲಾವಕಾಶ ಬೇಡುವ ಸಮಸ್ಯೆಗಳಿಗೆ ಅಧಿಕಾರಿಗಳಿಂದಲೇ ಯಾವಾಗ ಮಾಡಿಕೊಡುತ್ತೀರಿ ಎಂದು ಬಾಯಿ ಬಿಡಿಸಿ ಅದೇ ದಿನಾಂಕವನ್ನು ದೂರುದಾರರಿಗೆ ತಿಳಿಸಿ ಈ ಅವಧಿ ಒಳಗೆ ಕೆಲಸ ಮಾಡಲಿಲ್ಲ ಎಂದರೆ ನನಗೆ ತಿಳಿಸಿ ಎನ್ನುತ್ತಾ ಸಾಂತ್ವನ ಹೇಳಿ ಕಳಿಸುತ್ತಿದ್ದ ದೃಶ್ಯಗಳು ಜನಪರ ನಾಯಕರೊಬ್ಬರ ನೈಜ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಿತ್ತು

ತಾಲೂಕು ಎಸ್.ಗೊಲ್ಲಹಳ್ಳಿ ಗ್ರಾಪಂನ ಗೊಲ್ಲದೊಡ್ಡಿ ಗ್ರಾಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮ ಹಮ್ಮಿಕೊಂಡು ಜನರ ಕಷ್ಟಗಳಿಗೆ ಸ್ಪಂದಿಸಿದರು.

ಚಿಕ್ಕಬಳ್ಳಾಪುರ :ತಾಲೂಕಿನ ಎಸ್.ಗೊಲ್ಲಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಸೋಮವಾರ ಶಾಸಕ ಪ್ರದೀಪ್ ಈಶ್ವರ್ ಹಮ್ಮಿಕೊಂಡಿದ್ದ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ನೂತನ ಅಂಬೇಡ್ಕರ್ ಭವನ, ಅಂಗನವಾಡಿ ಕಟ್ಟಡ ಮತ್ತು ಸರಕಾರಿ ಶಾಲೆ ನವೀಕರಣ ಸೇರಿ ಒಟ್ಟು 12 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಗೊಲ್ಲದೊಡ್ಡಿ ಗ್ರಾಮದ ದೇವಾಲಯದ ಮುಂಭಾಗ ಚಾಪೆಯ ಮೇಲೆ ಕುಳಿತ ಶಾಸಕರು ಮತ್ತು ಅಧಿಕಾರಿಗಳು ಸಾರ್ವಜನಿಕರಿಗೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಅಹವಾಲು ಸಲ್ಲಿಸಿ ಕಷ್ಟಗಳನ್ನು ಹೇಳಿಕೊಂಡರು. ಅಹವಾಲು ಸ್ವೀಕರಿಸಿದ ಶಾಸಕರು ಪರಿಹಾರ ಆಗಬಹುದಾದ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಾಣಿಸಿ ದರು.
ಕಾಲಾವಕಾಶ ಬೇಡುವ ಸಮಸ್ಯೆಗಳಿಗೆ ಅಧಿಕಾರಿಗಳಿಂದಲೇ ಯಾವಾಗ ಮಾಡಿಕೊಡುತ್ತೀರಿ ಎಂದು ಬಾಯಿಬಿಡಿಸಿ ಅದೇ ದಿನಾಂಕವನ್ನು ದೂರುದಾರರಿಗೆ ತಿಳಿಸಿ ಈ ಅವಧಿ ಒಳಗೆ ಕೆಲಸ ಮಾಡಲಿಲ್ಲ ಎಂದರೆ ನನಗೆ ತಿಳಿಸಿ ಎನ್ನುತ್ತಾ ಸಾಂತ್ವಾನ ಹೇಳಿ ಕಳಿಸುತ್ತಿದ್ದ ದೃಶ್ಯಗಳು ಜನಪರ ನಾಯಕ ರೊಬ್ಬರ ನೈಜ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಿತ್ತು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಗೊಲ್ಲದೊಡ್ಡಿ ಗ್ರಾಮದಲ್ಲಿ ನಡೆದ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಸುಮಾರು 100ಕ್ಕೂ ಹೆಚ್ಚು ಅರ್ಜಿಗಳನ್ನು ಗ್ರಾಮಸ್ಥರಿಂದ ಸ್ವೀಕರಿಸಲಾಗಿದೆ. ಇಲ್ಲಿ ಸರ್ವೆ ನಂಬರ್ ಒಂದರಲ್ಲಿ 20 ಮನೆ ಕಟ್ಟಿಕೊಂಡಿದ್ದಾರೆ. ಮಾಲಿಕರು ನಮಗೆ ಪರಿಹಾರ ಕೊಡಿ ಇಲ್ಲಾ ಖಾಲಿ ಮಾಡಿ ಎನ್ನುತ್ತಿದ್ದಾರೆ. ತಹಶೀಲ್ದಾರ್‌ಗೆ ಸಮಸ್ಯೆ ಬಗೆ ಹರಿಸಲು ಸೂಚಿಸಿದ್ದು ಹಕ್ಕುಪತ್ರ ಕೊಡಿಸಿ ಶೀಗ್ರವೇ ಪರಿಹಾರ ಮಾಡಲಾಗುವುದು ಎಂದರು.
ಸೋಮವಾರದ ಸಭೆಯಲ್ಲಿ ಪ್ರಧಾನವಾಗಿ ಪಿಂಚಣಿ, ವೃದ್ಧಾಪ್ಯ ವೇತನ, ಭಾಗ್ಯಲಕ್ಷ್ಮೀ ಹಣ ಬ್ಯಾಂಕಿನಲ್ಲಿ ವಿಳಂಭ,ನಿವೇಶನ ಕೊಡಿ, ಖಾತಾ ಸಮಸ್ಯೆ ಪರಿಹರಿಸಿ, ಸ್ಮಶಾನಕ್ಕೆ ರಸ್ತೆಯಿಲ್ಲ, ಆನಾ ರೋಗ್ಯವಿದೆ ಚಿಕಿತ್ಸೆಗೆ ನೆರವು ಕೋರಿರುವ ಅರ್ಜಿಗಳು ಬಂದಿವೆ. ದರಖಾಸ್ತು ಅರ್ಜಿಗಳನ್ನು ಒಂದೂ ಬಿಡದೆ ಕ್ಲಿಯರ್ ಮಾಡಲು ತಹಶೀಲ್ದಾರ್‌ಗೆ ಸೂಚಿಲಾಗಿದೆ. ಎಂದು ತಿಳಿಸಿದರು.
ಮಗುವಿಗೆ ಆರ್ಥಿಕ ನೆರವು
ಇಟ್ಟಪ್ಪನಹಳ್ಳಿ ಗ್ರಾಮದ ಸುಕನ್ಯಾ ಮತ್ತು ಅಂಬರೀಶ್ ದಂಪತಿಗಳ ಪುತ್ರ 10 ವರ್ಷದ ರಾಜೇಶ್ ಜನ್ಮತಹ: ವಿಶೇಷ ಚೇತನ ಮಗುವಾಗಿದೆ.ಕೈಕಾಲು ಕುತ್ತಿಗೆ ತಲೆ ನೇರವಾಗಿ ನಿಲ್ಲಲಾಗಲ್ಲ. ಮಲಗಿದ್ದ ಲ್ಲಿಯೇ ಮಗು ಇರುತ್ತದೆ.ಇಂತಹ ಮಗುವಿನ ಚಿಕಿತ್ಸೆಗೆ ಏನಾದರೂ ಸಹಾಯ ಮಾಡಿ ಎಂದು ತಾಯಿ ಶಾಸಕರಿಗೆ ಮನವಿ ಮಾಡಿದರು.ಕೂಡಲೇ ಸ್ಪಂಧಿಸಿದ ಅವರು ತಾಲೂಕು ವೈದ್ಯಾಧಿಕಾರಿಗಳಿಗೆ ಈ ಬಗ್ಗೆ ಗಮನಿಸಲು ಸೂಚಿಸಿದರಲ್ಲದೆ ತಾಯಿಗೆ 5 ಸಾವಿರ ನಗದು ನೀಡಿದರು. ಸ್ಥಳದಲ್ಲಿಯೇ ಇದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನಮ್ಮ ಇಲಾಖೆಯಿಂದಲೂ ಮಗುವಿನ ಆರೈಕೆಗೆ ಪ್ರತಿ ತಿಂಗಳು ೧ ಸಾವಿರ ಕೊಡಿಸುವ ಬಗ್ಗೆ ಶಾಸಕರಿಗೆ ತಿಳಿಸಿದರು. ಇದರಿಂದ ಸಂತೋಷ ಗೊಂಡ ರಾಜೇಶ್ ಅವರ ತಾಯಿ ಶಾಸಕರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
೫೦ಕೋಟಿ ಕಾಮಗಾರಿಗೆ ಚಾಲನೆ
ಎರಡುಮೂರು ದಿನಗಳಲ್ಲಿ 50 ಕೋಟಿ ಕಾಮಗಾರಿಗೆ ಚಾಲನೆ ನೀಡಲಾಗುವುದು.ಇದರಲ್ಲಿ ಮುಷ್ಟೂರು ರಸ್ತೆಗೆ 5 ಕೋಟಿ ಅನುದಾನ. ಕಂದವಾರ ರಸ್ತೆಗೆ 8 ಕೋಟಿ, ದಿನ್ನೆಹೊಸಹಳ್ಳಿ ಸೇರಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಮಾತ್ರ 40 ರಿಂದ 50 ಕೋಟಿ ಹಾಕಿದ್ದೇನೆ. ಇದರ ಜತೆಗೆ ಇನಮಿಂಚೇನಹಳ್ಳಿ ರಸ್ತೆಗೆ 3 ಕೋಟಿ, ಜಡಲತಿಮ್ಮನಹಳ್ಳಿ ರಸ್ತೆಗೆ 1.25ಕೋಟಿ ಅನುದಾನ ಕೊಟ್ಟಿ ದ್ದೇನೆ. ಮೈಲಪನಹಳ್ಳಿ ರಸ್ತೆಗೆ 1 ಕೋಟಿ ನೀಡಿದ್ದು ಕಾಮಗಾರಿ ಪ್ರಾರಂಭಿಸಲು ತಾಂತ್ರಿಕ ಸಮಸ್ಯೆ ಯಿದೆ. ಪರಿಹಾರವಾದ ನಂತರ ಕೆಲಸ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಎತ್ತಿನ ಹೊಳೆಗೆ 450 ಕೋಟಿ
ಜಿಲ್ಲೆಯ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ಎತ್ತಿನ ಹೊಳೆ ಯೋಜನೆಯೇ ಪರಿಹಾರ. ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ಹರಿಯಲು 450 ಕೋಟಿ ಅನುದಾನ ಬೇಕಿದ್ದು ಇದಕ್ಕಾಗಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.ಇದು ಬಿಡುಗಡೆ ಆದಲ್ಲಿ 1 ವರ್ಷ ದಲ್ಲಿ ನೀರು ತರಬಲ್ಲೆ. 120ಕೋಟಿ ಹೂವಿನ ಮಾರುಕಟ್ಟೆಗೆ ಅನುದಾನ ತರುತ್ತಿದ್ದೇನೆ ಎಂದರು.
ಜಕ್ಕಲಮೊಡಗು ಎತ್ತರ ಏರಿಕೆ!!
ಜಕ್ಕಲಮೊಡಗು ಜಲಾಶಯ ಏರಿಕೆ ಮಾಡಲು ಯೋಜನೆಯಿದೆ.ಇದಾದಲ್ಲಿ ಆಂಧ್ರಪ್ರದೇಶ ತಕ ರಾರು ತೆಗೆಯುವ ಸಮಸ್ಯೆಯಿದೆ. ಈ ಸಂಬಂಧ ಶೀಘ್ರವೇ ಚಂದ್ರಬಾಬುನಾಯ್ಡು, ಉಪ ಮುಖ್ಯ ಮಂತ್ರಿ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ ಚರ್ಚಿಸಿ ಏರಿಕೆಗೆ ಕ್ರಮ ವಹಿಸಲಾಗುವುದು ಎಂದರು.ಎತ್ತಿನ ಹೊಳೆ ನೀರು ತಂದಾಗ ಆ ನೀರು ಹರಿದುಕೊಂಡು ಆಂದ್ರಕ್ಕೆ ಹೋದರೆ ನಾನು ಏನು ಮಾಡಬೇಕು?ಎತ್ತಿನಹೊಳೆ ನೀರು ಬರುವಷ್ಟರಲ್ಲಿ ಜಕ್ಕಲಮೊಡಗು ಜಲಾಶಯದ ಎತ್ತರ ಏರಿಕೆ ಮಾಡುವ ಅಗತ್ಯವಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸ್ಥಳ ಪರಿಶೀಲನೆ
ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ನಿರ್ಮಿಸಲು ಜಿಲ್ಲಾಡಳಿತ ಭವನದ ಹಿಂಭಾಗ ಸಿ.ಎ. ಸೈಟ್ ಗುರ್ತಿಸಲಾಗಿದ್ದು ಮಾರ್ಚ್ ತಿಂಗಳ ಮೊದಲ ವಾರದಲ್ಲಿ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಯುವ ನಾಯಕ ರಾಹುಲ್ ಗಾಂಧಿ ಅವರನ್ನು ಕರೆದು ಭೂಮಿಪೂಜೆ ಮಾಡಲಾಗು ವುದು. ಇದರ ಉಸ್ತುವಾರಿಗಳಾಗಿ ಬೆಂಗಳೂರು ಪೂರ್ವ ಜಿಲ್ಲೆ ನಾಯಕ ರಾಜ್‌ಕುಮಾರ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರು ಸ್ಥಳಪರಿಶೀಲನೆ ಮಾಡಲು ಬಂದಿದ್ದು ಅವರೊಂದಿಗೆ ಹೋಗಿ ಸ್ಥಳವನ್ನು ತೋರಿಸಲಾಗುವುದು ಎಂದರು.
ಆಂದೋಲನ ಯಶಸ್ವಿಗೊಳಿಸಿ
ಫೆ.20,21,22ರವರೆಗೆ ಬೆಳಿಗ್ಗೆ 8 ರಿಂದ 4.30ರವರೆಗೆ ಬಿ ಖಾತಾ ಆಂದೋಲನ ನಡೆಸಲಾಗುವುದು. ನಾಗರೀಕರು ನಿಮಗೆ ಸೂಚಿಸಿದ ದಿನ ನಿಗದಿಪಡಿಸಿದ ಸ್ಥಳಕ್ಕೆ ಬಂದು ಅಗತ್ಯ ದಾಖಲೆ ಸಲ್ಲಿಸುವ ಮೂಲಕ ಕಛೇರಿಗೆ ಅನಗತ್ಯ ಅಲೆದಾಟವಿಲ್ಲದೆ, ಸರಕಾರ ನಿಗದಿಪಡಿಸಿದ ತೆರಿಗೆ ಪಾವತಿಸಿ ಬಿಖಾತೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಈ ವೇಳೆ ತಹಶೀಲ್ದಾರ್ ಅನಿಲ್‌ಕುಮಾರ್, ಇಒ ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುಳ, ತಾಲೂಕು ಸಹಾಯಕ ಕೃಷಿ ಅಧಿಕಾರಿ ಮುನಿರಾಜು ಸೇರಿ ಎಲ್ಲಾ 36 ಇಲಾಖೆಗಳ ಅಧಿಕಾರಿಗಳು ಇದ್ದರು.