ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauribidanur News: ಗೌರಿಬಿದನೂರಿನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳಲ್ಲಿ ಎನ್‌ಡಿಎ ಮೈತ್ರಿಕೂಟ ಐತಿಹಾಸಿಕ ವಿಜಯದತ್ತ ದಾಪುಗಾಲು ಹಾಕಿದೆ. ಭಾರೀ ಮುನ್ನಡೆ ಸಾಧಿಸುವ ಮೂಲಕ ಮಹಾಘಟ ಬಂಧನ ವನ್ನು ಸಂಪೂರ್ಣವಾಗಿ ನೆಲಸಮ ಮಾಡಿದೆ. ಚುನಾವಣಾ ವಿಶ್ಲೇಷಕರ ಲೆಕ್ಕಾಚಾರಗಳನ್ನು ಮೀರಿ ಎನ್‌ಡಿಎ ಪ್ರಬಲ ಜನಾದೇಶವನ್ನು ಪಡೆದುಕೊಂಡಿದೆ.

ಸಿಹಿ ಹಂಚಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಬಿಜೆಪಿ ನಗರ ಘಟಕದ ಅಧ್ಯಕ್ಷ ಮಾರ್ಕೆಟ್ ಮೋಹನ್ ಮಾತನಾಡಿದರು. -

Ashok Nayak
Ashok Nayak Nov 14, 2025 11:42 PM

ಗೌರಿಬಿದನೂರು : ಬಿಹಾರದಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಮಾರ್ಕೆಟ್ ಮೋಹನ್ ಮಾತನಾಡಿ, ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳಲ್ಲಿ ಎನ್‌ಡಿಎ ಮೈತ್ರಿಕೂಟ ಐತಿಹಾಸಿಕ ವಿಜಯದತ್ತ ದಾಪುಗಾಲು ಹಾಕಿದೆ. ಭಾರೀ ಮುನ್ನಡೆ ಸಾಧಿಸುವ ಮೂಲಕ ಮಹಾಘಟ ಬಂಧನವನ್ನು ಸಂಪೂರ್ಣವಾಗಿ ನೆಲಸಮ ಮಾಡಿದೆ. ಚುನಾವಣಾ ವಿಶ್ಲೇಷಕರ ಲೆಕ್ಕಾಚಾರ ಗಳನ್ನು ಮೀರಿ ಎನ್‌ಡಿಎ ಪ್ರಬಲ ಜನಾದೇಶವನ್ನು ಪಡೆದುಕೊಂಡಿದೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ರವರ ಜನಪ್ರಿಯತೆ ಎನ್‌ಡಿಎ ಸರ್ಕಾರದ ಸ್ಥಿರತೆ ಮತ್ತು ಜನಪ್ರಿಯತೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ತಿಳಿಸಿದರು.

ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಅವರ ನಿಧನಕ್ಕೆ ಕೂಡ ಸಂತಾಪ ಸೂಚಿಸಿ ಮಾತನಾಡಿದ ಅವರು ಈ ಒಂದು ಚುನಾವಣೆಯ ಫಲಿತಾಂಶ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರಸಭೆ, ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಈ ಒಂದು ಗೆಲುವು ದಿಕ್ಸೂಚಿಯಾಗುತ್ತದೆ , ನರೇಂದ್ರ ಮೋದಿಜೀ ರವರ ನಾಯಕತ್ವ ದೇಶಾದ್ಯಂತ ಜನಪ್ರಿಯತೆ ಪಡೆದಿದೆ ಬಿಹಾರದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಇದನ್ನೂ ಓದಿ: Gauribidanur News: ಮದಕರಿ ನಾಯಕನ ಶೌರ್ಯ ಸಾಹಸ ಯುವ ಜನತೆಗೆ ಮಾದರಿ : ಆಂಧ್ರ ಸಂಸದ ಅಂಬಿಕಾ ಜಿ ಲಕ್ಷ್ಮೀನಾರಾಯಣ

ಜೆಡಿಎಸ್ ಪಕ್ಷದ ಮುಖಂಡರಾದ ಸಿ ಆರ್ ನರಸಿಂಹಮೂರ್ತಿ ಮಾತನಾಡಿ ಭಾರತದಲ್ಲಿ ಮೋದಿಜೀ ರವರ ನಾಯಕತ್ವ ಪರ ಜಾತ್ಯತೀತವಾಗಿ ಬೆಂಬಲಿಸಿ ಬಿಹಾರದಲ್ಲಿ ಅಭೂತ ಪೂರ್ವ ಜಯಗಳಿಸಿದ್ದಾರೆ ಅದೇ ರೀತಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಸಹ ಎನ್ ಡಿ ಎ ಮೈತ್ರಿಕೂಟ ಜಯಭೇರಿ ಬಾರಿಸಿ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ಮಾಡುತ್ತದೆ ಎಂದರು.

ಬಿಜೆಪಿ ಪಕ್ಷದ ಗ್ರಾಮಾಂತರ ಮಂಡಲದ ಅಧ್ಯಕ್ಷ ರಮೇಶ ರಾವ್ ಶಾಲ್ಕೆ ರವರು ಮಾತನಾಡಿ, ಮಹಾಘಟಬಂಧನ್ ಮಂದಿ ಓಟ್ ಚೋರಿ ಎಂದು ಜನರಿಗೆ ಯಾಮಾರಿಸುವು ದಕ್ಕೆ ನೋಡಿದರೂ ಸಹ ಜನರು ಯಾವುದಕ್ಕೂ ಕಿವಿಗೊಡದೆ ನ್ಯಾಯಕ್ಕೆ ಬೆಲೆ ಕೊಟ್ಟು ಎನ್ ಡಿ ಎ ಮೈತ್ರಿಕೂಟಕ್ಕೆ ಓಟು ಹಾಕುವ ಮುಖಾಂತರ ಇತಿಹಾಸ ನಿರ್ಮಾಣ ಮಾಡುವ ರೀತಿಯಲ್ಲಿ ಒಳ್ಳೆಯ ಫಲಿತಾಂಶ ನೀಡಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೊಡಿರ್ಲಪ್ಪ, ವೇಣು ಮಾಧವನ್, ಮುದ್ದು ವೀರಪ್ಪ, ದಾಲ್ ರಮೇಶ್, ಎಸ್ಪಿ ಮೋರ್ಚಾ ಅಧ್ಯಕ್ಷರಾದ ಶಾಂತ ಕುಮಾರ್, ಗೊವಿಂದರಾಜು, ವೆಂಕಟೇಶ್ ಆರ್ ವಿ , ನಕ್ಕಲಹಳ್ಳಿ ರಾಜು, ಮಲ್ಲಿಕಾರ್ಜುನ, ವಾರ್ಡ್ ೨೦ ನೇ ಮಂಜುನಾಥ್, ಜೆಡಿಎಸ್ ಪಕ್ಷದ ತಾಲ್ಲೂಕು ಕಾರ್ಯಾಧ್ಯಕ್ಷರಾದ ನಟರಾಜ್, ಎಸ್ ಸಿ ಮೋರ್ಚಾ ಅಧ್ಯಕ್ಷ ಕೇಶವ್ ಉಪಾಧ್ಯಕ್ಷರಾದ ವೆಂಕಟಾದ್ರಿ ಈಶ್ವರ್ ಮಂಜುನಾಥ್ ರಾವ್  ಗೋಪಿ, ಶ್ರೀನಿವಾಸ ರೆಡ್ಡಿ, ಮಹೇಂದ್ರ ರೆಡ್ಡಿ, ವೆಂಕಟರೋಣಪ್ಪ,
ಮಾರುತಿ, ಭಾರತ್, ಮಂಜುನಾಥ್ ರಾವ್, ಪ್ರವೀಣ್ , ಮಣಿಕಂಠ, ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ಅರುಣಮ್ಮ, ಪಾರ್ವತಮ್ಮ, ನಂದೀಶ್, ಗೊವಿಂದರಾಜು, ಮುಂತಾದವರು ಉಪಸ್ಥಿತರಿದ್ದರು.