14 ಮತ್ತು 15ನೇ ಹಣಕಾಸು ಯೋಜನೆ ಕಾರ್ಯಯೋಜನೆ ಬಗ್ಗೆ ಸುಧೀರ್ಘ ಚರ್ಚೆ
ಚಿಕ್ಕಬಳ್ಳಾಪುರ: ತಾಲೂಕಿನ ಆವಲಗುರ್ಕಿ ಪಂಚಾಯಿತಿಯಲ್ಲಿ ಶುಕ್ರವಾರ ಗೇರಹಳ್ಳಿ ಗ್ರಾಮದಲ್ಲಿ ಗ್ರಾಮಪಂಚಾಯಿತಿ ನೋಡಲ್ ಅಧಿಕಾರಿ, ತಾಲೂಕು ಸಮಾಜಕಲ್ಯಾಣ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಮಹಾತ್ಮಾಗಾಂಧಿ ರಾಷ್ಟೀಯ ಉದ್ಯೋಗ ಖಾತರಿ ಯೋಜನೆ ಮತ್ತು 2023-24ನೇ ಸಾಲಿನ 14 ಮತ್ತು 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ನಡೆಯಿತು.
ಆವಲಗುರ್ಕಿ ಗ್ರಾಮಪಂಚಾಯಿತಿ ಆವರಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಹಿಂದಿನ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲಿ ಕಂಡು ಬಂದ ಅಂಶಗಳಿಗೆ ಕೈಗೊಂಡ ಅನು ಪಾಲನಾ ಕ್ರಮಗಳನ್ನು ಸಭೆಗೆ ಓದಿ ತಿಳಿಸಲಾಯಿತು.ಇದೇ ವೇಳೆ ಇಲ್ಲಿಯವರೆಗೆ ಲಭ್ಯ ವಾಗಿರುವ ಮತ್ತು ಖರ್ಚಾಗಿರುವ ಅನುದಾನ ಮಾಹಿತಿ ಕೂಡ ಓದಿ ಹೇಳಿ ಸದಸ್ಯರು ಸಾರ್ವಜನಿಕರಿಂದ ಬಂದ ಅಹವಾಲುಗಳನ್ನು ಸಾವಧಾನವಾಗಿ ಆಲಿಸಲಾಯಿತು.
ಸಾಮಾಜಿಕ ಪರಿಶೋಧನೆ ನೋಡಲ್ ಅಧಿಕಾರಿ ಗಿರೀಶ್ ನರೇಗಾ ಯೋಜನೆಯಲ್ಲಿ ಬರುವ ವೈಯಕ್ತಿಕ ಕಾಮಗಾರಿಗಳು ಸಮುದಾಯದ ಕಾಮಗಾರಿಗಳ ಬಗ್ಗೆ ಸಭೆಗೆ ತಿಳಿಸಿಕೊಡುವ ಮೂಲಕ ಮಹಾತ್ಮಾಗಾಂಧಿ ರಾಷ್ಟೀಯ ಉದ್ಯೋಗ ಖಾತರಿ ಯೋಜನೆಯ ಉದ್ದೇಶದ ಬಗ್ಗೆ ಅರಿವು ಮೂಡಿಸಿದರು.
ಸಭೆಯಲ್ಲಿ ಹಾಜರಿದ್ದ ವಿವಿಧ ಗ್ರಾಮಸ್ಥರು ಈ ಖಾತೆ ಮಾಡಿಕೊಡಿ, ನಿವೇಶನ ಮಂಜೂರು ಮಾಡಿ,ರಸ್ತೆ ಮಾಡಿಕೊಡಿ, ಉದ್ಯೋಗ ಖಾತರಿ ಅಭಿವೃದ್ಧಿ ಕಾಮಗಾರಿಗಳ ಲೋಪದೋಷ ಗಳು, ನಿಗದಿಪಡಿಸಿದ ಸ್ಥಳದಲ್ಲಿಯೇ ಕಾಮಗಾರಿ ನಡೆಸಲಾಗಿದೆಯೇ, ಇಲ್ಲವೆ? ಇಲ್ಲವೆಂದರೆ ಯಾಕೆ ಮಾಡಿಲ್ಲ ಎಂಬ ಬಗ್ಗೆ ಏರುದನಿಯಲ್ಲಿ ಎಂಬ ಬಗ್ಗೆ ಏರುದನಿಯಲ್ಲಿ ಮಾತನಾ ಡುತ್ತಾ ನೋಡಲ್ ಅಧಿಕಾರಿಗಳು, ಗ್ರಾಮಪಂಚಾಯಿತಿ ಆಡಳಿತವನ್ನು ತರಾಟೆಗೆ ತೆಗೆದು ಕೊಂಡರು.
ಗ್ರಾಮಸ್ಥ ಲಕ್ಷö್ಮಣ್ ಮಾತನಾಡಿ ಫಲಾನುಭವಿಗಳ ಗೈರುಹಾಜರಿಯಲ್ಲಿ, ಆವಲಗುರ್ಕಿ ಗ್ರಾಪಂಗೆ ಒಳಪಟ್ಟ ಗ್ರಾಮಸ್ಥರ ಗೈರುಹಾಜರಿಯಲ್ಲಿ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ ನಡೆಸುತ್ತಿರುವುದು ತಪ್ಪು. ಈಬಗ್ಗೆ ಮೊದಲೇ ಅವರಿಗೆ ಮಾಹಿತಿ ನೀಡಿ ಸಭೆಯಲ್ಲಿ ಹಾಜರಿರುವಂತೆ ನೋಡಿಕೊಳ್ಳಬೇಕಿತ್ತು.ಗ್ರಾ.ಪಂ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡು ತ್ತಿಲ್ಲ ಎಂಬುದು ಇದರಿಂದ ತಿಳಿಯುತ್ತಿದೆ ಎಂದು ದೂರಿದರು.
ಈ ವೇಳೆ ಮಾತನಾಡಿದ ಪಿಡಿಒ ಅರುಣಗೋಪಿ ನಮ್ಮ ಅವಧಿಯಲ್ಲಿ ನಡೆದಿರುವ ಯಾವುದೇ ಕಾಮಗಾರಿಗಳಲ್ಲಿ ಲೋಪವಾಗಿಲ್ಲ,ಅಕ್ರಮವಾಗಿ ಯಾವುದೇ ಬಿಲ್ಲುಗಳನ್ನು ಪಾಸು ಮಾಡಿಲ್ಲ. ಸ್ಥಳತನಿಖೆ ಮಾಡಿಯೇ ಎಲ್ಲವನ್ನೂ ಮಾಡಲಾಗಿದೆ. ಹಾಗೂ ಎಲ್ಲಾ ದರೂ ಲೋಪವಾಗಿದ್ದರೆ ಸರಿಪಡಿಸುವ ಕೆಲಸ ಮಾಡಲಾಗುವುದು.
ಮುಂದಿನ ಸಾಮಾಜಿಕ ಪರಿಶೋಧನಾ ಸಭೆಯ ಬಗ್ಗೆ ಡಂಗೂರ ಸಾರಿಸಿ ಫಲಾನುಭವಿಗಳು ಸೇರಿ ಸಕಲರೂ ಭಾಗಿಯಾಗುವಂತೆ ಕ್ರಮವಹಿಸಲಾಗುವುದು. ಪ್ರತಿ ಹಳ್ಳಿಯಲ್ಲಿ ವಾರ್ಡ್ ಸಭೆ ಮಾಡಲು ಕೂಡ ಇಂದಿನ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.ತಮಟೆ ಹೊಡೆಸುವ ಮೂಲಕ ಮಾಹಿತಿ ನೀಡಲಾಗುವುದು. 2025ನೇ ಸಾಲಿನ ಕಾಮಗಾರಿಗಳ ನಡೆಸುವ ಬಗ್ಗೆ ಅರ್ಜಿ ನೀಡವವರು ನೀಡಬಹುದು ಎಂದು ಸಭೆಗೆ ತಿಳಿಸುವ ಮೂಲಕ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ಮುಕ್ತಾಯಗೊಳಿಸಲಾಯಿತು.
ಈ ವೇಳೆ ಗ್ರಾಮಪಂಚಾಯತಿ ಅಧ್ಯಕ್ಷೆ ಎ.ನೇತ್ರಾ,ಉಪಾಧ್ಯಕ್ಷೆ ವರಲಕ್ಷö್ಮಮ್ಮ,ನೋಡಲ್ ಅಧಿಕಾರಿ ಶೇಷಾದ್ರಿ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣಗೋಪಿ, ಕಾರ್ಯದರ್ಶಿ ಹೆಚ್.ಎಸ್.ನಾಗರಾಜ್, ಗ್ರಾ.ಪಂ ಸದಸ್ಯರಾದ ದೇವರಾಜ್, ವೆಂಕಟೇಶ್,ರಾಘವೇಂದ್ರ, ಮಂಜುನಾಥ್ ಶ್ರೀನಿವಾಸ್, ಗಂಗರತ್ನಮ್ಮ,ರೂಪ,ನಾಗವೇಣಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಅನಿತ ಸೇರಿದಂತೆ ಎಲ್ಲಾ ಗ್ರಾಮಪಂಚಾಯಿತಿ ಸದಸ್ಯರು ಇದ್ದರು.
ಇದನ್ನೂ ಓದಿ: Chikkaballapur News: ಯುವಶಕ್ತಿಯ ಸಬಲೀಕರಣವೇ ನನ್ನ ಧ್ಯೇಯವಾಗಿದೆ: ಸಂದೀಪ್ ರೆಡ್ಡಿ ಹೇಳಿಕೆ