Chikkaballapur News: ಚಲೋ ಭೀಮ ಕೊರೆಂಗವ್ ಯಾತ್ರೆಗೆ ಚಾಲನೆ ನೀಡಿದ ವಕೀಲರ ಸಂಘದ ಅಧ್ಯಕ್ಷ: ಎ.ನಂಜುಂಡಪ್ಪ

Chikkaballapur News: ಚಲೋ ಭೀಮ ಕೊರೆಂಗವ್ ಯಾತ್ರೆಗೆ ಚಾಲನೆ ನೀಡಿದ ವಕೀಲರ ಸಂಘದ ಅಧ್ಯಕ್ಷ: ಎ.ನಂಜುಂಡಪ್ಪ

Profile Ashok Nayak Dec 29, 2024 11:24 PM
ಬಾಗೇಪಲ್ಲಿ: ದೇಶದ ಸ್ವಾಭಿಮಾನಿ ದಲಿತರ ವಿಜಯ ಸಂಕೇತವಾದ ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ವೀರ ಯೋಧರಿಗೆ ಗೌರವಪೂರ್ವಕವಾದ ಕ್ರಾಂತಿಕಾರಿ ಭೀಮ ನಮನಗಳನ್ನು ಸಲ್ಲಿಸಲು ಪ್ರಯಾಣಿಸುತ್ತಿರುವ ನಮ್ಮ ದಲಿತ ಮುಖಂಡರಿಗೆ ಶುಭವಾಗಲಿ ಎಂದು ವಕೀಲರ ಸಂಘದ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಎ.ನಂಜುಂಡಪ್ಪ ತಿಳಿಸಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನಿರ್ಮಾಣ ಜಾಗದಲ್ಲಿರುವ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಚಲೋ ಭೀಮ ಕೊರೆಂಗವ್ ಯಾತ್ರೆಗೆ ಚಾಲನೆ ನೀಡಿ ಅವರು ಮಾತ ನಾಡಿದರು.
ಕೋರೆಗಾಂವ್, ಮಹಾರಾಷ್ಟ್ರ ರಾಜ್ಯದ ಪುಣೆಯಿಂದ ೧೭ ಕಿ.ಮೀ. ದೂರದಲ್ಲಿರುವ ಒಂದು ಪಟ್ಟಣ ಜನವರಿ ೦೧, ೧೮೧೮ ರಂದು ಇಡೀ ದೇಶ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾಗ '500 ಜನ' ಮಹರ್ ಸೈನಿಕರ ತಂಡ, ಭೀಮಾನದಿ ದಂಡೆಯ ಮೇಲೆ ಇರುವ ಕೋರೆಗಾಂವ್ ಪಟ್ಟಣದಲ್ಲಿ ಬ್ರಾಹ್ಮಣ ಪೇಶ್ವೆ ರಾಜವಂಶದ ೨೦,೦೦೦ ಅಶ್ವದಳ, ೮,೦೦೦ ಕಾಲ್ದಳದಷ್ಟು ದೊಡ್ಡ ಸಂಖ್ಯೆಯ ಸೈನ್ಯವನ್ನು, ಶಿರೂರಿನಿಂದ ಭೀಮಾ ಕೋರೆಗಾಂವ್‌ಗೆ ಸುಮಾರು ೨೭ ಮೈಲಿ ದೂರವನ್ನು ಊಟ, ನೀರು, ವಿರಾಮವಿಲ್ಲದೆ ಕಾಲ್ನಡಿಗೆಯಲ್ಲಿ ಕ್ರಮಿಸಿ, ಯುದ್ಧದ ರಣಭೂಮಿಯಲ್ಲಿ ಆತ್ಮ ಗೌರವ ಹಾಗೂ ಅಸಹಾಯಕ ವರ್ಗಗಳ ಹಕ್ಕುಗಳಗಾಗಿ ಸತತ 12 ಘಂಟೆಗಳು ವೀರಾವೇಶದಿಂದ ಹೋರಾಡಿ ಗೆದ್ದರು.
ಈ ಯುದ್ಧದಲ್ಲಿ 22 ಜನ ಮಹರ್ (ದಲಿತ) ಜನಾಂಗದವರು ವೀರ ಮರಣ ಹೊಂದಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ತಪ್ಪದೇ ಜನವರಿ ೧ನೆ ತಾರೀಕು ಕೋರೆಗಾಂವ್‌ಗೆ ಭೇಟಿ ನೀಡಿ ಗೌರವ ಸಲ್ಲಿಸುತ್ತಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹೋರಾಟಗಳು ಮತ್ತು ಅವರ ಆಶಯಗಳನ್ನು ಮೈಗೂಡಿಸಿಕೊಂಡು ರಾಜ್ಯಾದ್ಯಂತ ದಲಿತ, ಅಲ್ಪಸಂಖ್ಯಾತ ಹಿಂದುಳಿದ ಕಡುಬಡತನದ ಎಲ್ಲಾ ವರ್ಗಗಳ ಪರವಾಗಿ ಅನೇಕ ಭೂ ಹೊರಾಟಗಳನ್ನು, ಮೂಲಭೂತ ಸೌಕರ್ಯಗಳನ್ನು ಒದಗಿಸಿರುತ್ತದೆ ಎಂದರು.
ದಲಿತ ಸಂಘರ್ಷ ಸಮಿತಿ ಬಾಗೇಪಲ್ಲಿ ತಾಲ್ಲೂಕು ಶಾಖೆಯು ನ್ಯಾಯಯುತವಾದ ಇನ್ನೂ ಹಲವಾರು ಹೋರಾಟ ಗಳನ್ನು ಮಾಡಿಕೊಂಡು ಬಂದಿರುತ್ತದೆ. ಈ ಹಿನ್ನಲೆಯಲ್ಲಿ ಪ್ರತಿ ವರ್ಷವು "ಬೀಮಾ ಕೋರೆಗಾಂವ್" ಭಾರತ ದೇಶದ ದೊಡ್ಡ ಮಟ್ಟದ ಇತಿಹಾಸ ಹೊಂದಿರುವ ಸಮಸ್ತ ದೇಶದ ಸ್ವಾಭಿಮಾನ ದಲಿತರ ವಿಜಯ ಸಂಕೇತವಾದ ಕೋರೆ ಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ವೀರ ಯೋಧರಿಗೆ ಗೌರವಪೂರ್ವಕವಾದ ಕ್ರಾಂತಿಕಾರಿ ಭೀಮ ನಮನ ಗಳನ್ನು ಸಲ್ಲಿಸಿ, ವೀರ ಯೋಧರಿಗೆ ಶುಭ ಹಾರೈಸಲು ನೂರಾರು ಮುಖಂಡರು ತೆರಳುತ್ತಿದ್ದು ಅವರ ಪ್ರಯಾಣ ಸುಖಮಯವಾಗಿ ಇರಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶ್ರೀನಿವಾಸ್, ಈಶ್ವರಪ್ಪ ಮುಖಂಡರಾದ ಗಿರಿಜಾ ಕಲ್ಯಾಣ ಮಂಟಪದ ಮಾಲೀಕ ಬಾಬಣ್ಣ, ದಸಂಸ ತಾಲ್ಲೂಕು ಸಂಘಟನಾ ಸಂಚಾಲಕರಾದ ಎಲ್.ಎನ್.ನರಸಿಂಹಯ್ಯ, ಎಂ.ವಿ.ನರಸಿಂಹಪ್ಪ, ಡಿ.ಕೆ.ರಮೇಶ್, ಕೆ.ಸತೀಶ್, ಜಿ.ಬಾಬು, ಜಿ.ನರಸಿಂಹಪ್ಪ, ವೈ.ನಾರಾಯಣಸ್ವಾಮಿ, ಶಿವಣ್ಣ, ಪಿ. ಎಲ್. ಡಿ.-ಬ್ಯಾಂಕ್ ನಿರ್ದೇಶಕರಾದ ವೆಂಕಟರಮಣ, ಶ್ರೀನಿವಾಸ, ಅಶೋಕ, ಟೈಲರ್ ವೆಂಕಟೇಶ, ಧನಂಜಯ್, ನಂಜುಂಡಪ್ಪ , ಎಂ.ವಿ.ಶಿವಣ್ಣ ಇದ್ದರು.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

urea
2:13 PM January 22, 2025

ಕೃಷಿ ಸಬ್ಸಿಡಿಗೆ ರೈತರು ಬಿಟ್ಟು ಉಳಿದವರೆಲ್ಲ ಫಲಾನುಭವಿಗಳು!

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು