ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ತಂದೆಯನ್ನು ಮನೆಯಿಂದ ಹೊರ ಹಾಕಿದ ಮಕ್ಕಳು : ತಹಶೀಲ್ದಾರ್ ಮೂಲಕ ಮತ್ತೆ ಮನೆಗೆ ಸೇರ್ಪಡೆ

ಚಿಕ್ಕಬಳ್ಳಾಪುರ ನಗರ ನಕ್ಕಲಕುಂಟೆ ಪುರಸಭಾ ನಿವೇಶನ ಸಂಖ್ಯೆ-119ರಲ್ಲಿ ನಿರ್ಮಿಸಲಾಗಿರುವ ಮನೆ ಯನ್ನು ವೆಂಕಟರೋಣಪ್ಪ ಬಿನ್ ಲೇಟ್ ವೆಂಕಟಸ್ವಾಮಿ ಅವರ ಮಕ್ಕಳಾದ ಸುಬ್ಬಲಕ್ಷ್ಮಮ್ಮ ಕೋಂ ವೆಂಕಟೇಶಪ್ಪ ಇವರು ಆಕ್ರಮಿಸಿಕೊಂಡು ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ. ನನಗೆ ವಯಸ್ಸಾ ಗಿರುವುದರಿಂದ ದುಡಿಯಲು ಅಶಕ್ತನಾಗಿದ್ದೇನೆ.

ತಂದೆಯನ್ನು ಮನೆಯಿಂದ ಹೊರಹಾಕಿದ ಮಕ್ಕಳು

ತಹಶೀಲ್ದಾರ್ ಅನಿಲ್ ಕುಮಾರ್ ಸಂತ್ರಸ್ಥರನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಮಕ್ಕಳ ಸಮ್ಮುಖದಲ್ಲಿ ಕೂರಿಸಿ ಬುದ್ಧಿವಾದ ಹೇಳುತ್ತಿರುವುದು

Profile Ashok Nayak Apr 9, 2025 10:46 PM

ಚಿಕ್ಕಬಳ್ಳಾಪುರ : ತಂದೆಯ ಪಾಲನೆ ಪೋಷಣೆ ಮಾಡಬೇಕಾಗಿದ್ದ ಹೆತ್ತ ಮಕ್ಕಳೇ ಅವರನ್ನು ಮನೆಯಿಂದ ಹೊರಗೆ ಹಾಕಿದ್ದರು.ಎಸಿ ನ್ಯಾಯಾಲಯದ ತೀರ್ಪಿನಂತೆ ತಹಶೀಲ್ದಾರ್ ಅನಿಲ್ ಅನಾಗರೀಕವಾಗಿ ವರ್ತಿಸಿ ತಂದೆಯನ್ನು ಹೊರಗೆ ಹಾಕಿದ್ದ ಮಕ್ಕಳಿಗೆ ಬುದ್ದಿವಾದ ಹೇಳಿ ವೆಂಕಟ ರೋಣಪ್ಪ ಅವರನ್ನು ಮನೆಗೆ ಬಿಟ್ಟ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಹೌದು ನಗರದ ಶಾಂತಿನಗರ ವಾರ್ಡ್-೨೧ರಲ್ಲಿ ವಾಸವಾಗಿರುವ ವೆಂಕಟರೋಣಪ್ಪ ಬಿನ್ ವೆಂಕಟಸ್ವಾಮಿ ಎಂಬ 72ವರ್ಷದ ಹಿರಿಯ ನಾಗರೀಕರನ್ನು ಹೆತ್ತ ಮಕ್ಕಳೇ ಮನೆಯಿಂದ ಹೊರಗೆ ತಳ್ಳಿ ಅಮಾನವೀಯ ವಾಗಿ ನಡೆದುಕೊಂಡ ಕಾರಣ ಅವರು ಎ.ಸಿ ಕೋರ್ಟಿನಲ್ಲಿ ಕೇಸು ಹಾಕಿದ್ದರು.

ಬುಧವಾರ ನ್ಯಾಯಾಲಯದ ತೀರ್ಪು ತಂದೆಯ ಪರ ಬಂದಿದ್ದು ಮಾಹೆಯಾನ 5 ಸಾವಿರ ಪೋಷಣಾ ಭತ್ಯೆ,ನಕ್ಕಲಕುಂಟೆ ಮನೆಯನ್ನು ತಂದೆಗೆ ಬಿಟ್ಟುಕೊಡಬೇಕು. ಆರೋಗ್ಯ ಸಮಸ್ಯೆ ಎದುರಾದಾಗ ಡಿಹೆಚ್‌ಒ ಚಿಕಿತ್ಸೆ ನೀಡಬೇಕು ಎಂದು ಆದೇಶ ನೀಡಿದ್ದಾರೆ. ಆದ ಕಾರಣ ತಹಶೀಲ್ದಾರ್ ಅನಿಲ್,ನಗರಸಭೆ ಇಂಜನಿಯರ್ ಉಮಾಶಂಕರ್,ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಮರ್, ಮತ್ತು ಸಂತ್ರಸ್ಥರ ಪರ ವಕೀಲ ಮಂಜುನಾಥರೆಡ್ಡಿ,ವಕೀಲ ಗಂಗರಾಜು ಕತ್ರಿಗುಪ್ಪೆ, ಸಂತ್ರಸ್ಥರನ್ನು  ಮನೆಗೆ ಸೇರಿಸಿ,ಮಕ್ಕಳಿಗೆ ಬುದ್ದಿವಾದ ಹೇಳಿದ್ದಾರೆ.

ಇದನ್ನೂ ಓದಿ: Chikkaballapur News: ಕುರಿಗಳ ಹಿಂಡಿನ ಮೇಲೆ ಬೀದಿನಾಯಿಗಳ ದಾಳಿ: 3 ಸಾವು 14 ಕುರಿಗೆ ಗಾಯ

ಏನಿದು ಪ್ರಕರಣ?
ಚಿಕ್ಕಬಳ್ಳಾಪುರ ನಗರ ನಕ್ಕಲಕುಂಟೆ ಪುರಸಭಾ ನಿವೇಶನ ಸಂಖ್ಯೆ-119ರಲ್ಲಿ ನಿರ್ಮಿಸಲಾಗಿರುವ ಮನೆಯನ್ನು ವೆಂಕಟರೋಣಪ್ಪ ಬಿನ್ ಲೇಟ್ ವೆಂಕಟಸ್ವಾಮಿ ಅವರ ಮಕ್ಕಳಾದ ಸುಬ್ಬಲಕ್ಷ್ಮಮ್ಮ ಕೋಂ ವೆಂಕಟೇಶಪ್ಪ ಇವರು ಆಕ್ರಮಿಸಿಕೊಂಡು ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ನನಗೆ ವಯಸ್ಸಾಗಿರುವುದರಿಂದ ದುಡಿಯಲು ಅಶಕ್ತನಾಗಿದ್ದೇನೆ. ಮನೆಯನ್ನು ಬಿಡಿಸಿಕೊಟ್ಟು ಜೀವ ನಾಂಶಕ್ಕೆ ಆದೇಶ ನೀಡಬೇಕು ಎಂದು ತಂದೆತಾಯಿಯರ ಮತ್ತು ಹಿರಿಯ ನಾಗರೀಕರ ಪೋಷಣೆ ಮತ್ತು ಶ್ರೇಯೋಭಿವೃದ್ಧಿ ಹಾಗೂ ಸಂರಕ್ಷಣಾ ಕಾಯ್ದೆ 2007ರಡಿ ಮೇಲ್ಮನವಿ ಸಲ್ಲಿಸಿದ್ದರು.

ಈ ಪ್ರಕರಣವು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಬುಧವಾರ ವಿಚಾರಣೆಗೆ ಬಂದಿದ್ದು ಹಿರಿಯ ನಾಗರೀಕರ ಸಂರಕ್ಷಣಾ ಕಾಯ್ದೆ 2007ರಂತೆ, ಮಕ್ಕಳು ಪೋಷಕರನ್ನು ಕಾಪಾಡುವ ಹೊಣೆ ಹೊರಬೇಕಾಗುತ್ತದೆ.ನೀವು ಆಸ್ತಿಯನ್ನು ಹೊಂದಬೇಕಾದರೆ ಮೊದಲು ಅವರ ಆರೈಕೆ ಮಾಡಿ,ಅವರ ಮನಸ್ಸು ಒಲಿಸಿಕೊಳ್ಳಿ.ಅವರೇ ಕಟ್ಟಿರುವ ಮನೆಯಿಂದ ಅವರನ್ನು ಹೊರಗೆ ಹಾಕುವುದು ತರವಲ್ಲ ಎಂದು ಬುದ್ಧಿವಾದ ಹೇಳಿ ವೆಂಕಟರೋಣಪ್ಪ ಬಿನ್ ವೆಂಕಟಸ್ವಾಮಿ ಪರವಾಗಿ ತೀರ್ಪು ಪ್ರಕಟಿಸಿ ದ್ದರು.

ಈ ತೀರ್ಪಿನಂತೆ ತಹಶೀಲ್ದಾರ್ ಅನಿಲ್ ಕುಮಾರ್ ಸಂತ್ರಸ್ಥರನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಮಕ್ಕಳ ಸಮ್ಮುಖದಲ್ಲಿ ಕೂರಿಸಿ ಬುದ್ಧಿವಾದ ಹೇಳಿ ಬಂದಿರುವುದು ನಾಗರೀಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಇಂತಹ ಆದೇಶ ಮಾಡಿರುವ ಜಿಲ್ಲಾ ಉಪವಿಭಾಗಾಧಿಕಾರಿಗಳ ಕ್ರಮವನ್ನೂ ಕೂಡ ನಾಗರೀಕರು ಕೊಂಡಾಡಿದ್ದಾರೆ.

ಈ ಪ್ರಕರಣದಲ್ಲಿ ಸಂತ್ರಸ್ಥರ ಪರ ಉಚಿತವಾಗಿ ವಾದ ಮಾಡಿರುವ ವಕೀಲ ಮಂಜುನಾಥ್‌ರೆಡ್ಡಿ ಮಾತನಾಡಿ ಪೋಷಕರನ್ನು ನಿರ್ಲಕ್ಷಿಸುವ ಮಕ್ಕಳಿಗೆ ಈ ತೀರ್ಪು ಗುಣಪಾಠವಾಗಿದೆ.ಯಾರೇ ಮಕ್ಕಳಿಂದ ಈತರ ಅನ್ಯಾಯಕ್ಕೆ ಒಳಗಾದಲ್ಲಿ ಕಾಯ್ದೆಯನ್ನು ಬಳಸಿಕೊಂಡು ನ್ಯಾಯ ಪಡೆಯ ಬಹುದು ಎಂದು ಮನವಿ ಮಾಡಿದ್ದಾರೆ.