ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಕುರಿಗಳ ಹಿಂಡಿನ ಮೇಲೆ ಬೀದಿನಾಯಿಗಳ ದಾಳಿ: 3 ಸಾವು 14 ಕುರಿಗೆ ಗಾಯ

ಬುಧವಾರ ಬೆಳಗಿನ ಜಾವಾ ಸುಮಾರು ೬ ಗಂಟೆ ಸಮಯದಲ್ಲಿ ಕುರಿಗಳನ್ನು ಮಾಲೀಕ ಮನೆಯಿಂದ ಗ್ರಾಮದ ಪಕ್ಕದ ಕೊಟ್ಟಿಗೆಗೆ ಸ್ಥಳಾಂತರ ಮಾಡಿದ್ದು, ತನ್ನ ದಿನನಿತ್ಯ ಕೆಲಸದಲ್ಲಿ ತೊಡಗಿರುತ್ತಾನೆ. ಆದರೆ ೧೦ ಗಂಟೆಗೆ ಕುರಿಗಳನ್ನು ಹೊಲದಲ್ಲಿ ಮೇಯಿಸಲು ಕರೆದುಕೊಂಡು ಹೋಗಲು ಹೋಗಿ ನೋಡಿದರೆ ಸುಮಾರು ೫,೬, ಬೀದಿ ನಾಯಿಗಳು ಕೊಟ್ಟಿಗೆಯಲ್ಲಿ ಕುರಿಗಳನ್ನು ಅಟ್ಟಾಡಿಸುತ್ತಿದ್ದುವು

ಕುರಿಗಳ ಹಿಂಡಿನ ಮೇಲೆ ಬೀದಿನಾಯಿಗಳ ದಾಳಿ: 3 ಸಾವು 14 ಕುರಿಗೆ ಗಾಯ

ತಾಲ್ಲೂಕಿನ ಪಾತಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಟ್ಟುಮಿಂದಪಲ್ಲಿಯ  ದೋಬಿ ವೆಂಕಟಸ್ವಾಮಿ ಬಡ ಕೂಲಿಕಾರ್ಮಿಕನ ಕುರಿಗಳ ಹಿಂಡಿನ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದು ಸುಮಾರು ೩ ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

Profile Ashok Nayak Apr 9, 2025 9:54 PM

ಬಾಗೇಪಲ್ಲಿ: ತಾಲ್ಲೂಕಿನ ಪಾತಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಟ್ಟುಮಿಂದಪಲ್ಲಿಯ ದೋಬಿ ವೆಂಕಟಸ್ವಾಮಿ ಬಡ ಕೂಲಿ ಕಾರ್ಮಿಕನ ಕುರಿಗಳ ಹಿಂಡಿನ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದು ಸುಮಾರು 3ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಬುಧವಾರ ಬೆಳಗಿನ ಜಾವಾ ಸುಮಾರು ೬ ಗಂಟೆ ಸಮಯದಲ್ಲಿ ಕುರಿಗಳನ್ನು ಮಾಲೀಕ ಮನೆಯಿಂದ ಗ್ರಾಮದ ಪಕ್ಕದ ಕೊಟ್ಟಿಗೆಗೆ ಸ್ಥಳಾಂತರ ಮಾಡಿದ್ದು, ತನ್ನ ದಿನನಿತ್ಯ ಕೆಲಸದಲ್ಲಿ ತೊಡಗಿರುತ್ತಾನೆ. ಆದರೆ ೧೦ ಗಂಟೆಗೆ ಕುರಿಗಳನ್ನು ಹೊಲದಲ್ಲಿ ಮೇಯಿಸಲು ಕರೆದುಕೊಂಡು ಹೋಗಲು ಹೋಗಿ ನೋಡಿದರೆ ಸುಮಾರು ೫,೬, ಬೀದಿ ನಾಯಿಗಳು ಕೊಟ್ಟಿಗೆಯಲ್ಲಿ ಕುರಿಗಳನ್ನು ಅಟ್ಟಾಡಿಸುತ್ತಿದ್ದುವು.ಇದನ್ನು ನೋಡಿದ ತಕ್ಷಣ ಕೂಗಿಕೊಂಡಾಗ ನಾಯಿಗಳು ಅಲ್ಲಿಂದ ಪರಾರಿಯಾಗಿವೆ. ಈ ದಾಳಿಯಲ್ಲಿ ಸುಮಾರು ಮೂರು ಕುರಿಗಳು ಮೃತಪಟ್ಟಿದ್ದರೆ 14 ಕುರಿಗಳನ್ನು ಕಚ್ಚಿ ತೀವ್ರ ಸ್ವರೂಪದ ಗಾಯ ಗಳಾಗಿಸಿವೆ. ಈ ಪೈಕಿ ೨ ಕುರಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಮ್ಮ ಅಳಲು ತೋಡಿ ಕೊಂಡರು.

ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ

ಘಟನೆಯಲ್ಲಿ ೩ ಕುರಿಗಳು ದಾಳಿಗೀಡಾಗಿದ್ದು, ಇದರಿಂದ ಕುರಿಸಾಕಿದ್ದ ಕೂಲಿ ಕಾರ್ಮಿಕ ತೀವ್ರ ಸಂಕಷ್ಟಕ್ಕೀಡಾಗಿದ್ದಾನೆ. ಕನಿಷ್ಠ ೧ ಲಕ್ಷ ರೂಪಾಯಿಗಳು ನಷ್ಟ ಸಂಭವಿಸಿದೆ. ಜೀವನೋಪಾಯಕ್ಕೆ ಯಾವುದೇ ಬೇರೆ ಮೂಲಗಳಿಲ್ಲದ ಆ ರೈತ ಕುರಿ ಸಾಕಾಣಿಕೆಯಿಂದಲೇ ಜೀವನ ಸಾಗಿಸುತ್ತಿದ್ದ. ಹೀಗಾಗಿ ಗ್ರಾಮ ಪಂಚಾಯಿತಿ ಮತ್ತು ಸಂಬAಧಪಟ್ಟ ಇಲಾಖೆ ರೈತನಿಗೆ ನಷ್ಟ ಭರಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸಂಬAಧ ಮಾಹಿತಿ ಪಡೆದ ಪಾತಪಾಳ್ಯ ಗ್ರಾಮದ ಪಶು ವೈದ್ಯಾಧಿಕಾರಿ ವೆಂಕಟೇಶ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು ಕುರಿಗಳ ಪಂಚನಾಮೆ ನಡೆಸಿದರು. ಇಲಾಖೆಯಿಂದ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದ್ದು ಸರ್ಕಾರಕ್ಕೆ ಅರ್ಜಿಯನ್ನು ಸಲ್ಲಿಸುವಂತೆ ಸಲಹೆ ನೀಡಿದ್ದಾರೆ.

ವ್ಯವಸಾಯ ಸೇವಾ ಅಭಿವೃದ್ಧಿ ಬ್ಯಾಂಕ್ ನ ಮಾಜಿ ಅದ್ಯಕ್ಷರಾದ ತಿಪ್ಪಿರೆಡ್ಡಿ  ಮಾತನಾಡಿ ಇತ್ತೀಚಿಗೆ ಗ್ರಾಮದಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ರಾತ್ರಿ ಸಮಯದಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಹಸು, ಕುರಿ ಮೇಕೆಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತಿದ್ದು ನಾಯಿಗಳನ್ನು ಗ್ರಾಮ ಪಂಚಾಯಿತಿಯವರು ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಆಗ್ರಹಿಸಿ ದ್ದಾರೆ.