ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಂದಾಯ ಭೂಮಿಗೆ ನಗರಸಭೆ ‘ಇ-ಖಾತೆ’!: 24 ಎಕರೆ ಭೂಮಿಗೆ ಖಾಸಗಿ ಖಾತೆ ಆರೋಪ; 24 ಗಂಟೆಯಲ್ಲಿ ವರದಿ ಕೇಳಿದ ಜಿಲ್ಲಾಧಿಕಾರಿ

ಮಾಜಿ ನಗರಸಭಾ ಸದಸ್ಯ ಮಹಮದ್ ಸಾದಿಕ್ ನೀಡಿರುವ ದೂರಿನ ಪ್ರಕಾರ, ಅಣಕನೂರು ಗ್ರಾಮದ ಸರ್ವೆ ನಂಬರ್ 109ರಲ್ಲಿ ಸುಮಾರು 97,130.30 ಚದರ ಮೀಟರ್, ಅಂದರೆ 24 ಎಕರೆ ಸರ್ಕಾರಿ ಜಮೀನಿಗೆ ನಗರಸಭೆಯಿಂದ ಇ-ಖಾತೆ ನೀಡಲಾಗಿದೆ. ಈ ಜಮೀನು ನಗರಸಭೆ ವ್ಯಾಪ್ತಿಗೆ ಒಳಪಡದಿ ದ್ದರೂ 29ನೇ ವಾರ್ಡ್ ವ್ಯಾಪ್ತಿಗೆ ಸೇರಿದ ಆಸ್ತಿ ಎಂದು ನಮೂದಿಸಿ ಖಾತೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

24 ಎಕರೆ ಭೂಮಿಗೆ ಖಾಸಗಿ ಖಾತೆ ಆರೋಪ; ವರದಿ ಕೇಳಿದ ಜಿಲ್ಲಾಧಿಕಾರಿ

-

Profile
Ashok Nayak Sep 4, 2026 5:00 PM

ಚಿಕ್ಕಬಳ್ಳಾಪುರ: ಸರ್ಕಾರಿ ಜಮೀನಿಗೆ ಖಾಸಗಿ ವ್ಯಕ್ತಿಯ ಹೆಸರಲ್ಲಿ ನಗರಸಭೆಯಿಂದ ಇ-ಖಾತೆ(e-khata) ನೀಡಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತನಿಖೆಗೆ ಮುಂದಾ ಗಿದೆ. ಚಿಕ್ಕಬಳ್ಳಾಪುರ ನಗರಸಭೆ ಆಸ್ತಿ ಸಂಖ್ಯೆ 820/755ಕ್ಕೆ ಸಂಬಂಧಿಸಿದಂತೆ ಸಮಗ್ರ ಪರಿಶೀಲನೆ ನಡೆಸಿ 24 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿರುವುದು ಸಾರ್ವಜನಿಕ ವಲಯ ದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಮಾಜಿ ನಗರಸಭಾ ಸದಸ್ಯ ಮಹಮದ್ ಸಾದಿಕ್ ನೀಡಿರುವ ದೂರಿನ ಪ್ರಕಾರ, ಅಣಕನೂರು ಗ್ರಾಮದ ಸರ್ವೆ ನಂಬರ್ 109ರಲ್ಲಿ ಸುಮಾರು 97,130.30 ಚದರ ಮೀಟರ್, ಅಂದರೆ 24 ಎಕರೆ ಸರ್ಕಾರಿ ಜಮೀನಿಗೆ ನಗರಸಭೆಯಿಂದ ಇ-ಖಾತೆ ನೀಡಲಾಗಿದೆ. ಈ ಜಮೀನು ನಗರಸಭೆ ವ್ಯಾಪ್ತಿಗೆ ಒಳಪಡದಿದ್ದರೂ 29ನೇ ವಾರ್ಡ್ ವ್ಯಾಪ್ತಿಗೆ ಸೇರಿದ ಆಸ್ತಿ ಎಂದು ನಮೂದಿಸಿ ಖಾತೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Chikkaballapur News: ತರಗತಿ ಕೊಠಡಿಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಯಿಂದ ಭೂಮಿಪೂಜೆ

ಸರ್ವೆ ನಂಬರ್ 109ರಲ್ಲಿ ಸುಮಾರು 70 ಎಕರೆ ಜಮೀನು ಇದ್ದು, ಪಹಣಿಯಲ್ಲಿ ಸರ್ಕಾರಿ ಬಿ-ಖರಾಬು ಎಂದು ದಾಖಲಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. 24 ಎಕರೆ ಜಮೀನಿನ ಇಂದಿನ ಮಾರುಕಟ್ಟೆ ಮೌಲ್ಯ ಸುಮಾರು ₹150 ಕೋಟಿಗೂ ಅಧಿಕವಾಗಿದ್ದು, ಇ-ಖಾತೆ ನೀಡುವಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ ಎಂದು ಸಾದಿಕ್ ಆರೋಪಿಸಿದ್ದಾರೆ.

unnamed (1)ok

ಇ-ಖಾತೆಯ ಆಧಾರದ ಮೇಲೆ ಶಿಡ್ಲಘಟ್ಟ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬಿಡುಗಡೆ ಪತ್ರ ಮಾಡಿಸಿರುವುದಾಗಿ ಹೇಳಿರುವ ಅವರು, ಇದು ದಾಖಲೆಗಳನ್ನು ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ದೂರಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಇಲ್ಲದಿದ್ದರೆ ಹೈಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾರೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಜಿಲ್ಲಾಧಿಕಾರಿಗಳು ಚಿಕ್ಕಬಳ್ಳಾಪುರ ಉಪವಿಭಾಗಾ ಧಿಕಾರಿ ಡಿ.ಹೆಚ್. ಅಶ್ವಿನ್ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚಿಸಿದ್ದಾರೆ. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ್ ಎ.ಎಸ್. ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಶಿಲ್ಪಾ ದೇಸಾಯಿ ಸದಸ್ಯರಾಗಿದ್ದಾರೆ.

ಇದೇ ವೇಳೆ, ಇ-ಖಾತೆ ಪ್ರಕ್ರಿಯೆಗೆ ಸಂಬಂಧಿಸಿದ ಅರ್ಜಿದಾರರ ದಾಖಲೆಗಳು, ಕಚೇರಿ ಟಿಪ್ಪಣಿ, ಕಂದಾಯ ವಿವರಗಳು ಹಾಗೂ ಶುಲ್ಕದ ವಿವರ ಸೇರಿದಂತೆ ಸಂಪೂರ್ಣ ಕಡತಗಳನ್ನು ಪರಿಶೀಲಿಸಿ, ನಿಯಮಾನುಸಾರ ಕ್ರಮ ಕೈಗೊಂಡು ಮೂರು ದಿನಗಳೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾ ನಗರಾ ಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದ್ದಾರೆ.

ಆರೋಪಗಳು ತನಿಖೆಯಲ್ಲಿ ಸಾಬೀತಾದರೆ, ಸರ್ಕಾರಿ ಜಮೀನಿಗೆ ಇ-ಖಾತೆ ನೀಡಿದವರು ಸೇರಿದಂತೆ ಭಾಗಿಯಾಗಿರುವ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.