ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chinthamani News: ಕೈವಾರ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಲ್ಲಿ ಅಕ್ರಮ ಮತದಾರರು ಸೃಷ್ಟಿ

ಸಂಘದಲ್ಲಿರುವ ಷೇರುದಾರರಿಗೆ ಹಾಗೂ ಸಾಲಗಾರರ ಕ್ಷೇತ್ರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿಲ್ಲ, 2021 ರಲ್ಲಿ ಕೈವಾರ ಗ್ರಾಮದಲ್ಲಿ 88 ಮಂದಿ ಸಾಲಗಾರರ ಕ್ಷೇತ್ರದಲ್ಲಿದ್ದು, ಇದರಲ್ಲಿ 33 ಮಂದಿ ಸಾಲಗಾರರನ್ನು ತೆಗೆದು ಹಾಕಿ,ಸಾಲಗಾರರಲ್ಲದ ಕ್ಷೇತ್ರಕ್ಕೆ ಸೇರ್ಪಡೆ ಮಾಡಿದ್ದು,119 ಮಂದಿ ಷೇರುದಾರ ರನ್ನು ಸಾಲಗಾರರ ಕ್ಷೇತ್ರಕ್ಕೆ ಸೇರಿಸುವುದರ ಮೂಲಕ ಮತಗಳ್ಳತನಕ್ಕೆ ಕುಮ್ಮುಕ್ಕು ನೀಡುತ್ತಿದ್ದಾರೆ.

ಅಕ್ರಮವಾಗಿ 119 ಮಂದಿ ಹೊಸ ಸಾಲಗಾರರ ಕ್ಷೇತ್ರಕ್ಕೆ ಮತದಾರರ ಸೇರ್ಪಡೆ

-

Ashok Nayak Ashok Nayak Oct 26, 2025 10:39 PM

ಚಿಂತಾಮಣಿ: 15 ವರ್ಷಗಳಿಂದ ಚುನಾವಣೆ ನಡೆಯದೆ ಇರುವ ಸಂಘವು ಸಮಾಪನೆಯಾಗಿದ್ದು, ಯಾವುದೇ ಹೊಸ ಸಾಲಗಳನ್ನು ನೀಡಿಲ್ಲ ಹಾಗೂ ಹೊಸದಾಗಿ ಯಾರು ಷೇರುದಾರರು ಸೇರ್ಪಡೆ ಗೊಳ್ಳಲು ಸಾಧ್ಯವಿಲ್ಲ ಮತ್ತು ಆಡಳಿತ ಮಂಡಳಿಯೇ ಅಸ್ಥಿತ್ವದಲ್ಲಿದ ಪಕ್ಷದಲ್ಲಿ ಸಂಘಕ್ಕೆ ಹೊಸ ದಾಗಿ 119 ಮಂದಿಯನ್ನು ಯಾವ ಆಧಾರ ಮೇಲೆ ಸಾಲಗಾರರಕ ಕ್ಷೇತ್ರಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆಯೆಂದು ಕೈವಾರ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ದೊಡ್ಡಹಳ್ಳಿ ಗೋಪಾಲಕೃಷ್ಣ ಪ್ರಶ್ನೆ ಮಾಡಿದ್ದಾರೆ.

ಚಿಂತಾಮಣಿ ತಾಲೂಕು ಕೈವಾರದ ಮಠದ ಬಳಿಯಿರುವ ಕೈವಾರ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಬಳಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ದೊಡ್ಡಹಳ್ಳಿ ಗೋಪಾಲಕೃಷ್ಣ,119 ಮಂದಿ ಸಾಲಗಾರರ ಕ್ಷೇತ್ರಕ್ಕೆ ಅಕ್ರಮ ಮತದಾರ ರನ್ನು ಸೃಷ್ಟಿ ಮಾಡುವುದರ ಮೂಲಕ ಸಂಘಕ್ಕೆ ಅನ್ಯಾಯ ಮಾಡಿ ಚುನಾವಣೆ ಮಾಡಲು ಹೊರಟಿದ್ದು ಇದಕ್ಕೆ ಸಂಬಂಧಿಸಿದಂತೆ ಎಸ್‌ಎಫ್‌ಎಸ್‌ಸಿಎಸ್ ಸಂಘದ ಉನ್ನತ ಅಧಿಕಾರಿಗಳಾದ ಸಹಕಾರಿ ಚುನಾವಣಾ ಆಯುಕ್ತರು,ಸಹಕಾರ ಸಂಘದ ಜಂಟಿ ನಿಬಂಧಕರು, ಸಹಕಾರಅಭಿವೃದ್ಧಿ ಅಧಿಕಾರಿಗಳಿಗೆ  ಪತ್ರದ ಮುಖೇನ ಮನವಿ ಸಲ್ಲಿಸಿದ್ದು, ಕರಡು ಮತದಾರರ ಪಟ್ಟಿಯನ್ನು ಅಂತಿಮ ವಾಗಿರುವ ಮತದಾರರ ಪಟ್ಟಿಯಲ್ಲಿ ಷೇರುದಾರರು, ಸಾಲಗಾರರರಲ್ಲದವರನ್ನು ಸೇರ್ಪಡೆ ಮಾಡಿ ಅಕ್ರಮ ಚುನಾವಣೆಗೆ ಮುಂದಾಗಿದ್ದುಇದು ಕಾನೂನು ಬಾಹಿರವೆಂದು ಟೀಕಿಸಿದರು.  

ಇದನ್ನೂ ಓದಿ: Chintu Son of Vishalakshi: 'ಚಿಂಟು ಸನ್ ಆಫ್ ವಿಶಾಲಾಕ್ಷಿ' ಚಿತ್ರಕ್ಕೆ ಚಾಲನೆ ನೀಡಿದ ಚಿತ್ರತಂಡ!

ಕೈವಾರ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾದ್ಯಕ್ಷ ಬನಹಳ್ಳಿ ಮಂಜುನಾಥ್ ಹಾಗೂ ಕೆ.ಎನ್.ಕೆ ರವಿ ಮಾತನಾಡಿ ಕೈವಾರ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘಕ್ಕೆ ನವೆಂಬರ್ 5 ರಂದು ಚುನಾವಣೆ ನಡೆಯಲಿದ್ದು,ಆದರೆ ಸಂಘದ ಸಿಇಒ ರಾಜ್‌ಕುಮಾರ್ ಸಂಘದ ಕಛೇರಿಯನ್ನು ತೆರೆದು ಗುರುತಿನ ಚೀಟಿಯನ್ನು ನೀಡಬೇಕಾಗಿದ್ದು ಆದರೆ ಚುನಾವಣೆ ಸಮೀಪ ವಾಗುತ್ತಿದ್ದರೂ ಸಹಾ ಸಿಇಒ ಕಛೇರಿಯ ಬಾಗಿಲನ್ನು ತೆರೆದು ಗುರುತಿನ ಚೀಟಿಯನ್ನು ಮಾಡಿ ಕೊಡದೆ ಅನ್ಯಾಯವೆಸಗುತ್ತಿದ್ದು,ಮತದಾರರ ಪಟ್ಟಿಯನ್ನು ನೀಡುವ ಗೋಜಿಗೆ ಹೋಗಿಲ್ಲವೆಂದ ಅವರು ನಿಜವಾದ ಮತಗಳ್ಳತನ ಎಸ್‌ಎಫ್‌ಎಸ್‌ಸಿಎಸ್ ಕೈವಾರದಲ್ಲಿ ನಡೆಯುತ್ತಿದ್ದು ಇದು ರಾಜಕೀಯ ದೂರುದ್ದೇಶದಿಂದ ಕೂಡಿದೆಯೆಂದರು ಗಂಭೀರ ಆರೋಪ ಮಾಡಿದರು. 

ಸಂಘದಲ್ಲಿರುವ ಷೇರುದಾರರಿಗೆ ಹಾಗೂ ಸಾಲಗಾರರ ಕ್ಷೇತ್ರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿಲ್ಲ, 2021 ರಲ್ಲಿ ಕೈವಾರ ಗ್ರಾಮದಲ್ಲಿ 88 ಮಂದಿ ಸಾಲಗಾರರ ಕ್ಷೇತ್ರದಲ್ಲಿದ್ದು, ಇದರಲ್ಲಿ 33 ಮಂದಿ ಸಾಲಗಾರರನ್ನು ತೆಗೆದು ಹಾಕಿ,ಸಾಲಗಾರರಲ್ಲದ ಕ್ಷೇತ್ರಕ್ಕೆ ಸೇರ್ಪಡೆ ಮಾಡಿದ್ದು,119 ಮಂದಿ ಷೇರುದಾರರನ್ನು ಸಾಲಗಾರರ ಕ್ಷೇತ್ರಕ್ಕೆ ಸೇರಿಸುವುದರ ಮೂಲಕ ಮತಗಳ್ಳತನಕ್ಕೆ ಕುಮ್ಮುಕ್ಕು ನೀಡುತ್ತಿದ್ದಾರೆ. ಅಕ್ರಮ ವೆಸಗಿದ್ದು ನಿಜವಾಗಿದ್ದು ವೋಟ್‌ ಚೋರ್ ನಡೆಯುತ್ತಿದೆಯೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಘದ ಚುನಾವಣೆ 2025 ಅಂತಿಮ ಮತದಾರರ ಪಟ್ಟಿ ದೋಷಪೂರಿತವಾಗಿ ಕಂಡುಬಂದಿದ್ದು ಸದರಿ ಮತದಾರರ ಪಟ್ಟಿಯನ್ನು ಮರು ಪರೀಶೀಲನೆ ಮಾಡಿ ಇದಕ್ಕೆ ಕಾರಣಕರ್ತರಾದ ಸಿಇಓ ರವರ ಕ್ರಮ ತೆಗೆದುಕೊಳ್ಳಬೇಕೆಂದು ಸಂಬಂಧ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ಬನಹಳ್ಳಿರವಿ,ಅಂಚೆ ರಾಜಣ್ಣ, ಕೆ.ಎನ್.ಕೆ.ರವಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ, ಅಂಚೆರಾಜಣ್ಣ, ತೋಟ್ಲಿ ರಾಮಚಂದ್ರಪ್ಪ,ಬನಹಳ್ಳಿ ಚೆನ್ನಕೇಶಪ್ಪ, ಎ.ನಾರಾಯಣಸ್ವಾಮಿ, ದೊಡ್ಡಹಳ್ಳಿ ಡೈರಿ ಅಧ್ಯಕ್ಷ ಡಿ.ಬಿ.ಶ್ರೀನಿವಾಸ್, ಎಲೆ ರಾಮಣ್ಣ, ಕೆ.ಎನ್.ದೇವರಾಜ್, ಬನಹಳ್ಳಿ ಅರುಣ್‌ಕುಮಾರ್ ಸೇರಿದಂತೆ ಷೇರುದಾರರು ಮತ್ತಿತರರು ಉಪಸ್ಥಿತರಿದ್ದರು.