ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chintamani News: ಪೋಷಕರು ಮತ್ತು ಶಿಕ್ಷಕರ ಸಮನ್ವಯತೆ ಅಗತ್ಯ : ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್

ವಿದ್ಯಾರ್ಥಿಗಳಿಗೆ ಪೋಷಕರು ಮೊದಲನೆಯ ಮಾರ್ಗದರ್ಶಕರಾದರೆ, ಶಿಕ್ಷಕರು ಎರಡನೇ ಮಾರ್ಗದರ್ಶಕರು. ಇವರಿಬ್ಬರ ಸಹಕಾರದಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವು ಬೆಳೆಯು ತ್ತದೆ. ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಕೈಜೋಡಿಸಿ ಕೆಲಸ ಮಾಡಿದರೆ ವಿದ್ಯಾರ್ಥಿಗಳಲ್ಲಿ ಗಮನಾರ್ಹವಾದ ಸಕಾರಾತ್ಮಕವಾದ ಬದಲಾವಣೆ ಕಂಡುಬರುತ್ತದೆ.

ಚಿಂತಾಮಣಿಯಲ್ಲಿ ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಮಾತನಾಡಿದರು.

ಚಿಂತಾಮಣಿ: ಪೋಷಕರು ಮತ್ತು ಶಿಕ್ಷಕರ ನಡುವಿನ ಸಮನ್ವಯದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಉತ್ತಮವಾಗುತ್ತದೆ ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಅಭಿಪ್ರಾಯಪಟ್ಟರು.

ಚಿಂತಾಮಣಿ ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಮಕ್ಕಳ ದಿನಾಚರಣೆಯಂದು ಆಯೋಜಿಸಲಾಗಿದ್ದ ಬೃಹತ್ ಪೋಷಕರ ಹಾಗೂ ಶಿಕ್ಷಕರ ಸಭೆಯಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪೋಷಕರು ಮೊದಲನೆಯ ಮಾರ್ಗದರ್ಶಕರಾದರೆ, ಶಿಕ್ಷಕರು ಎರಡನೇ ಮಾರ್ಗದರ್ಶಕರು. ಇವರಿಬ್ಬರ ಸಹಕಾರದಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವು ಬೆಳೆಯುತ್ತದೆ. ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಕೈಜೋಡಿಸಿ ಕೆಲಸ ಮಾಡಿದರೆ ವಿದ್ಯಾರ್ಥಿಗಳಲ್ಲಿ ಗಮನಾರ್ಹವಾದ ಸಕಾರಾತ್ಮಕವಾದ ಬದಲಾವಣೆ ಕಂಡುಬರುತ್ತದೆ. ವಿದ್ಯಾರ್ಥಿಗಳು ಓದಿನ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು.

ಇದನ್ನೂ ಓದಿ: Chintamani News: ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು: ಆನಂದ್ ಪ್ರತಿಕ್ರಿಯೆ

ಏಕಾಗ್ರತೆಯಿಂದ ಓದಿದರೆ ಭವಿಷ್ಯದ ಬದುಕು ಹಸನಾಗುತ್ತದೆ. ವಿದ್ಯಾರ್ಥಿಗಳು ಒಂದು ಗುರಿಯನ್ನು ಇಟ್ಟುಕೊಳ್ಳಬೇಕು. ಗುರಿಯ ಕಡೆಗೆ ಸದಾ ಕಾಲ ಮನಸ್ಸು ತುಡಿಯುತ್ತಿರಬೇಕು. ಆಗ ಯಶಸ್ಸನ್ನು ಕಾಣಲು ಸಾಧ್ಯವಿದೆ. ಎಷ್ಟೇ ಎತ್ತರದ ಬೆಟ್ಟವಾದರೂ ಅದನ್ನು ಹತ್ತಲು ಮೊದಲ ಮೆಟ್ಟಿಲಿನಿಂದಲೇ ನಡಿಗೆ ಆರಂಭಿಸಬೇಕು. ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಇಂದಿನಿಂದಲೇ ಉತ್ತಮ ಅಭ್ಯಾಸ ಆರಂಭಿಸಿ ಎಂದರು.

ಗೈರುಹಾಜರಿ ನೋಡಲ್ ಶಿಕ್ಷಕ ಫಯಾಜ್ ಅಹ್ಮದ್ ಮಾತನಾಡಿ, ವಿದ್ಯಾರ್ಥಿಗಳು ಶಾಲೆಗೆ ಗೈರುಹಾಜರಾಗುವ ಬಗ್ಗೆ ಪೋಷಕರು ಗಮನ ಹರಿಸಬೇಕು. ಶಾಲೆಗೆ ನಿಯಮಿತ ವಾಗಿ ಗೈರು ಹಾಜರಾದರೆ ಪಾಠ-ಪ್ರವಚನಗಳಿಂದ ವಂಚಿತರಾಗುತ್ತಾರೆ. ಇದರಿಂದ ಅವರ ಮುಂದಿನ ವಿದ್ಯಾಭ್ಯಾಸವು ಕುಂಠಿತವಾಗುತ್ತದೆ. ಪೋಷಕರು ಈ ಬಗ್ಗೆ ಹೆಚ್ಚು ಜಾಗೃತ ರಾಗಬೇಕು. ಗೈರುಹಾಜರಾಗದಂತೆ ನೋಡಿಕೊಳ್ಳಬೇಕು. ತಮಗೆ ಯಾವುದೇ ರೀತಿಯ ತೊಂದರೆ ಗಳಿದ್ದರೂ ಶಾಲಾ ಶಿಕ್ಷಕರನ್ನು ಭೇಟಿಯಾಗಿ ಸರಿಪಡಿಸಿಕೊಳ್ಳಬೇಕು ಎಂದರು.

ಶಿಕ್ಷಕ ನಂಜುಂಡೇಶ್ವರ ರವರು ಪಾಠ ಆಧಾರಿತ ಮೌಲ್ಯಾಂಕನದ ಬಗ್ಗೆ, ಶಿಕ್ಷಕ ಭಾಸ್ಕರ್ ಗೌಡರವರು ಎಸ್,ಎಸ್,ಎಲ್,ಸಿ ಕಾರ್ಯಚಟುವಟಿಕೆಯ ಬಗ್ಗೆ, ಶಿಕ್ಷಕಿ ಸೌಭಾಗ್ಯಮ್ಮ ರವರು ಸಮನ್ವಯ ಶಿಕ್ಷಣದ ಬಗ್ಗೆ, ಶಿಕ್ಷಕಿ ಸುಗುಣ ರವರು ಪೋಕ್ಸೊ ಕಾಯಿದೆ ಬಗ್ಗೆ ವಿಚಾರ ಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸ ಲಾಯಿತು.

ಶಾಲೆಯ ಮುಖ್ಯಶಿಕ್ಷಕರಾದ ಸುಭಾಷ್‌ ಚಂದ್ರ ಬೋಸ್ ರವರು ಅಧ್ಯಕ್ಷತೆಯನ್ನು ವಹಿಸಿ ದ್ದರು. ಶಿಕ್ಷಕ ಮುನಿರಾಜು ಕಾರ್ಯಕ್ರಮ ನಿರೂಪಿಸಿದರು. ಪೋಷಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.