Chintamani News: ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು: ಆನಂದ್ ಪ್ರತಿಕ್ರಿಯೆ
ನಾನು ಯಾವ ಮಹಿಳೆಗೂ ಸಹ ಸಾಲ ಕೊಡಿಸುತ್ತೇನೆ ಎಂದು ಭರವಸೆ ಕೊಟ್ಟಿಲ್ಲ, ಹಾಗೇ ನಾದರೂ ಇದ್ದರೆ ದಾಖಲೆ ಸಮೇತ ಮುಂದೆ ಬರಲಿ ಸುಖ ಸುಮ್ಮನೆ ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಗಳು ನೀಡಿ ಹಾರಿ ಬಿಟ್ಟಿರುವದು ಎಷ್ಟರಮಟ್ಟಿಗೆ ಸರಿ ಎಂದು ಹೇಳಿದರು.
ಕೆಲ ವ್ಯಕ್ತಿಗಳು ನನ್ನ ಗೌರವಕ್ಕೆ ದಕ್ಕೆ ತರುವ ಕೆಲಸ ಮಾಡಿದ್ದಲ್ಲದೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳು ಮಾಡುತ್ತಿರುವದು ಸತ್ಯಕ್ಕೆ ದೂರವಾದದ್ದು ಎಂದು ಮುಖಂಡ ನಲ್ಲಗುಟ್ಟಹಳ್ಳಿ ಆನಂದ್ ಸ್ಪಷ್ಟಪಡಿಸಿದ್ದಾರೆ. -
ಚಿಂತಾಮಣಿ : ಕೆಲ ವ್ಯಕ್ತಿಗಳು ನನ್ನ ಗೌರವಕ್ಕೆ ದಕ್ಕೆ ತರುವ ಕೆಲಸ ಮಾಡಿದ್ದಲ್ಲದೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳು ಮಾಡುತ್ತಿರುವದು ಸತ್ಯಕ್ಕೆ ದೂರವಾದದ್ದು ಎಂದು ಮುಖಂಡ ನಲ್ಲಗುಟ್ಟಹಳ್ಳಿ ಆನಂದ್ ಸ್ಪಷ್ಟಪಡಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶ್ರಾವಣಿ ಎಂಬ ಮಹಿಳೆಯನ್ನು ಕೆಲ ವ್ಯಕ್ತಿಗಳು ಎತ್ತಿ ಕಟ್ಟಿ ನನ್ನ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ಕೊಡಿಸುತ್ತಿರುವುದು ಬೇಸರದ ಸಂಗತಿಯಾಗಿದೆ.
ನನಗೆ ನೀಡಿರುವ ತೊಂದರೆ ಹಾಗೂ ಕಿರುಕುಳದ ಎಲ್ಲಾ ದಾಖಲೆಗಳು ಗ್ರಾಮಾಂತರ ಠಾಣೆಗೆ ನೀಡಿದ್ದೇನೆ ಎಂದು ಹೇಳಿದ ಅವರು ನ್ಯಾಯಕ್ಕೆ ಎಂದಿಗೂ ಜಯ ಸಿಕ್ಕೇ ಸಿಗುತ್ತದೆ ಎಂದು ವಿವರಿಸಿದರು.
ನಾನು ಯಾವ ಮಹಿಳೆಗೂ ಸಹ ಸಾಲ ಕೊಡಿಸುತ್ತೇನೆ ಎಂದು ಭರವಸೆ ಕೊಟ್ಟಿಲ್ಲ, ಹಾಗೇನಾದರೂ ಇದ್ದರೆ ದಾಖಲೆ ಸಮೇತ ಮುಂದೆ ಬರಲಿ ಸುಖ ಸುಮ್ಮನೆ ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಗಳು ನೀಡಿ ಹಾರಿ ಬಿಟ್ಟಿರುವದು ಎಷ್ಟರಮಟ್ಟಿಗೆ ಸರಿ ಎಂದು ಹೇಳಿದರು.
ನನ್ನ ಹೆಸರು ಕೆಡಿಸಲು ಯಾರು ಪಿತೂರಿ ನಡೆಸುತ್ತಿದ್ದಾರೆ ಅಂತಹ ಅವರ ವಿರುದ್ಧ ನಾನು ಕಾನೂನು ಹೋರಾಟ ಸಿದ್ಧನಿದ್ದೇನೆ.