ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭ್ರಷ್ಟನನ್ನು ನ್ಯಾಯಾಲಯ ವಜಾಗೊಳಿಸಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಜಯ: ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು

ಎಸ್.ಎನ್.ಸುಬ್ಬಾರೆಡ್ಡಿ ವಿರುದ್ಧ ಸಾವಿರಾರು ಕೋಟಿ ರೂ ಹಗರಣವಿದೆ. ಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರಿಂದ ತೀರ್ಪು ಬಂದಿದೆ. ಈ ತೀರ್ಪಿನಿಂದ ನ್ಯಾಯಾ ಲಯದ ಮೇಲೆ ಜನರಲ್ಲಿ ವಿಶ್ವಾಸ ಹೆಚ್ಚಾಗಿದೆ ಎಂದು ದೂರುದಾರ, ಪರಾಜಿತ ಬಿಜೆಪಿ ಅಭ್ಯರ್ಥಿ ಸಿ.ಮುನಿರಾಜು ಹೇಳಿದರು.

ನ್ಯಾಯಾಲಯದಿಂದ ಭ್ರಷ್ಟನ ವಜಾ ಪ್ರಜಾಪ್ರಭುತ್ವಕ್ಕೆ ಸಂದ ಜಯ

-

Ashok Nayak
Ashok Nayak Feb 18, 2026 10:34 AM

ಬಾಗೇಪಲ್ಲಿ: ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ(Congress MLA S.N. Subba reddy) ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ. ಆಸ್ತಿ ವಿವರಗಳನ್ನು ಮುಚ್ಚಿಟ್ಟು, ಜಿಎಸ್‌ಟಿ ವಂಚನೆ ಮತ್ತು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದ ಆರೋಪ ದಡಿ ತೀರ್ಪು ನೀಡಲಾಗಿದೆ. ದೂರುದಾರ ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು(BJP's defeated candidate C. Muniraju) ನ್ಯಾಯಾಲಯದ ತೀರ್ಪಿನಿಂದ ತಮಗೆ ನ್ಯಾಯ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಅವರು ಪಟ್ಟಣದ ಹೊರವಲಯದ ಸಿ.ಮುನಿರಾಜು ಸ್ವಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಎಸ್.ಎನ್.ಸುಬ್ಬಾರೆಡ್ಡಿ ವಿರುದ್ಧ ಸಾವಿರಾರು ಕೋಟಿ ರೂ ಹಗರಣವಿದೆ. ಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರಿಂದ ತೀರ್ಪು ಬಂದಿದೆ. ಈ ತೀರ್ಪಿನಿಂದ ನ್ಯಾಯಾ ಲಯದ ಮೇಲೆ ಜನರಲ್ಲಿ ವಿಶ್ವಾಸ ಹೆಚ್ಚಾಗಿದೆ ಎಂದು ದೂರುದಾರ, ಪರಾಜಿತ ಬಿಜೆಪಿ ಅಭ್ಯರ್ಥಿ ಸಿ.ಮುನಿರಾಜು ಹೇಳಿದರು.

ಇದನ್ನೂ ಓದಿ: Bagepalli MLA SN Subba Reddy: ಬಾಗೇಪಲ್ಲಿ ಕಾಂಗ್ರೆಸ್‌ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆ ಅಸಿಂಧು; ಹೈಕೋರ್ಟ್ ಆದೇಶ

ನಾನು ಅರ್ಜಿ ಹಾಕಿದ ಮೇಲೆ ಸರ್ಕಾರಕ್ಕೆ ಜಿಎಸ್ಟಿ ತೆರಿಗೆ ಕಟ್ಟಿದ್ದಾರೆ ಪುತ್ರಿಯ ಹೆಸರಿನಲ್ಲಿ ರುವ ಜಮೀನು ವಿವರ ತೋರಿಸಿರಲಿಲ್ಲ. ಪತ್ನಿಯ ಹೆಸರಿನಲ್ಲಿ ಜಮೀನು ಮತ್ತು ಕಂಪನಿ ಇದ್ದರೂ ತೋರಿಸಿರಲಿಲ್ಲ. ಕುಣಿಗಲ್ ಶಾಸಕ ಡಾ. ರಂಗನಾಥ್ ಅವರಿಗೆ 23 ಲಕ್ಷ ರೂ. ದುಡ್ಡು ಕೊಟ್ಟಿದ್ದು ತೋರಿಸಿರಲಿಲ್ಲ. ವೈ.ಎ. ನಾರಾಯಣಸ್ವಾಮಿ ಅವರಿಗೂ 28 ಲಕ್ಷ ರೂ ದುಡ್ಡು ಕೊಟ್ಟಿದ್ದು ತೋರಿಸಿಕೊಂಡಿಲ್ಲ. ನಾನು ಅರ್ಜಿ ಹಾಕಿದ ಮೇಲೆ ಸರ್ಕಾರಕ್ಕೆ ಜಿಎಸ್ಟಿ ತೆರಿಗೆ ಕಟ್ಟಿದ್ದಾರೆ. ಸಣ್ಣಪುಟ್ಟ ತಪ್ಪಾಗಿದೆ ಎಂದು ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾರೆ ಎಂದರು.

ಬೇನಾಮಿ ಆಸ್ತಿಗಳನ್ನು ತೆಗೆದುಕೊಂಡು ಎಂ.ಬಿ. ಪಾಟೀಲ್ ಹತ್ತಿರ ಕುಳಿತುಕೊಂಡು ಹೆಚ್ಚಿನ ಹಣಕ್ಕೆ ಫಿಕ್ಸ್ ಮಾಡಿಕೊಂಡಿದ್ದಾರೆ. ಸಾವಿರಾರು ರೂ ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಗುಡಿಬಂಡೆ, ಬಾಗೇಪಲ್ಲಿಯ ಹೊಸಹುಡ್ಯ, ಜಿಲಾಜಿರ್ಲ, ಚೇಳೂರಿನ ರಾಶ್ಚೇರುವು ಕಡೆ ಸಾವಿರಾರು ಎಕರೆ ಜಮೀನು ಗಳನ್ನು ಕಬಳಿಸಿ ಶಾಸಕರ ಮಾಲೀ ಕತ್ವದ ಹೋಟೆಲ್‌ಗಳಲ್ಲಿ ಕೆಲಸ ಮಾಡುವವರ, ಸಂಬಂಧಿಕರ ಹೆಸರಿನಲ್ಲಿ ನೊಂದಣಿ ಮಾಡಿಸಿ ದ್ದಾರೆ. ಎಂದು ಹೇಳಿದರು.

ನನ್ನನ್ನು ವಿಜೇತ ಎಂದು ಘೋಷಣೆ ಮಾಡಲು ನಾವು ಕೇಳಿದ್ದೆವು. ಕಾನೂನಿನಲ್ಲಿ ಅವಕಾಶ ಇದ್ದರೂ ನ್ಯಾಯಾಧೀಶರು ಅದನ್ನು ಮಾನ್ಯ ಮಾಡಿಲ್ಲ. ನಮ್ಮ ವಕೀಲರು ಮತ್ತು ಹೈಕಮಾಂಡ್ ಜೊತೆ ಚರ್ಚಿಸಿ ಮುಂದಿನ ಹೋರಾಟ ನಿರ್ಧರಿಸಲಾಗುವುದು. ಉಪಚುನಾವಣೆ ಎದುರಾದರೆ ನಾನು ರೆಡಿ ಇದ್ದೇನೆ, ಆದರೆ ಅದು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಸಿ. ಮುನಿರಾಜು ಹೇಳಿದರು.

ಮುಂದಿನ ದಾರಿ ಏನು?
ಹೈಕೋರ್ಟ್ ತೀರ್ಪಿನಿಂದ ಸುಬ್ಬಾರೆಡ್ಡಿ ಅವರು ತಮ್ಮ ಶಾಸಕ ಸ್ಥಾನವನ್ನು ಕಳೆದು ಕೊಂಡಿದ್ದಾರೆ. ಆದಾಗ್ಯೂ, ಅವರಿಗೆ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡದಿದ್ದರೆ, ಬಾಗೇಪಲ್ಲಿ ಕ್ಷೇತ್ರಕ್ಕೆ ಶೀಘ್ರದಲ್ಲೇ ಉಪಚುನಾವಣೆ ಎದುರಾಗಲಿದೆ. ಈ ತೀರ್ಪು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೂ ಅಲ್ಪ ಮಟ್ಟದ ಹಿನ್ನಡೆ ತಂದೊಡ್ಡಿದೆ ಎಂದು ಹೇಳಿದರು.

ಪ್ರಕರಣದ ಹಿನ್ನೆಲೆ: ಸುಬ್ಬಾರೆಡ್ಡಿ ಚುನಾವಣೆಗೆ ಸ್ಪರ್ಧಿಸುವಾಗ ಸಲ್ಲಿಸಿದ್ದ ಅಫಿಡವಿಟ್‌ ನಲ್ಲಿ ಆಸ್ತಿ ಘೋಷಣೆ ವೇಳೆ ಮಾಹಿತಿಯನ್ನು ಮರೆಮಾಚುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದು ಚುನಾವಣಾ ಅಕ್ರಮವಾಗಿದೆ. ಹಾಗಾಗಿ, ಸುಬ್ಬಾರೆಡ್ಡಿ ಆಯ್ಕೆ ಯನ್ನು ಅಸಿಂಧುಗೊಳಿಸುವಂತೆ ಮತ್ತು ಎರಡನೇ ಸ್ಥಾನ ಗಳಿಸಿರುವ ತನ್ನನ್ನು ಜಯಶಾಲಿ ಎಂದು ಘೋಷಿಸುವಂತೆ ಸಿ.ಮುನಿರಾಜು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಿದ್ದರು.

ಈ ಸಂದರ್ಭದಲ್ಲಿ ಮುಖಂಡರಾದ  ಆರ್.ಪ್ರತಾಪ್, ಗುಡಿಬಂಡೆ ಗಂಗಿರೆಡ್ಡಿ, ಆಧಿರೆಡ್ಡಿ, ಕೆ.ಟಿ.ವೀರಾಂಜನೇಯ,  ಆರ್.ವೆಂಕಟೇಶ್, ಚೇಳೂರು ಆಂಜನೇಯರೆಡ್ಡಿ, ಎಂ.ಬಿ.ಲಕ್ಷ್ಮೀ ನರಸಿಂಹಪ್ಪ, ಜಿನ್ನಿ, ಚಿನ್ನಪೂಜಪ್ಪ, ಸೆಂಟ್ರಿಂಗ್ ಸೀನಾ, ಗಂಗರಾಜು, ಕೊತ್ತಕೋಟೆ ಲೋಕೇಶ್,  ರಂಗಾರೆಡ್ಡಿ, ಆಚೇಪಲ್ಲಿ ರಘು,ಮದ್ದುರೆಡ್ಡಿ,ನಾಗೇಶ್ರವಿ ಕುಮಾರ್, ಮಂಜುಳಾ, ರೂಪ, ನಂದಿನಿ, ಕೃಷ್ಣವೇಣಿ ಮತ್ತಿತರರು ಇದ್ದರು.