ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೀರಿನ ಕೊರತೆ ನೀಗಿಸಲು ಸಮಸ್ಯಾತ್ಮಕ ಹೋಬಳಿಗೆ ಜಿಲ್ಲಾ ಮಟ್ಟದ ಅಧಿಕಾರಿ ನೇಮಕ: ಜಿ ಪ್ರಭು

ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಕುಡಿಯುವ ನೀರು ಪೂರೈಕೆ, ಜಾನುವಾರುಗಳ ಮೇವಿನ ಸ್ಥಿತಿಗತಿ, ಕೃಷಿ ಚಟುವಟಿಕೆಗಳ ಸಿದ್ಧತೆಗಳಿಗೆ ಸಂಬಂಧಿಸಿದಂತೆ ನಿಗಾ ಹಾಗೂ ಪರಿಶೀಲನೆ ಮಾಡಲು ಜಿಲ್ಲೆಯ 8 ತಾಲ್ಲೂಕುಗಳಲ್ಲಿನ ಎಲ್ಲಾ 26 ಹೋಬಳಿಗಳಿಗೆ  ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ

ನೀರಿನ ಕೊರತೆ ನೀಗಿಸಲು ಜಿಲ್ಲಾ ಮಟ್ಟದ ಅಧಿಕಾರಿ ನೇಮಕ

ಜಿಲ್ಲಾಡಳಿತ ಭವನದ ಚಿತ್ರ.. -

Profile
Ashok Nayak Apr 25, 2026 11:37 PM

ಚಿಕ್ಕಬಳ್ಳಾಪುರ : ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಕುಡಿಯುವ ನೀರು ಪೂರೈಕೆ, ಜಾನುವಾರುಗಳ ಮೇವಿನ ಸ್ಥಿತಿಗತಿ, ಕೃಷಿ ಚಟುವಟಿಕೆಗಳ ಸಿದ್ಧತೆಗಳಿಗೆ ಸಂಬಂಧಿಸಿದಂತೆ ನಿಗಾ ಹಾಗೂ ಪರಿಶೀಲನೆ ಮಾಡಲು ಜಿಲ್ಲೆಯ 8 ತಾಲ್ಲೂಕುಗಳಲ್ಲಿನ ಎಲ್ಲಾ 26 ಹೋಬಳಿಗಳಿಗೆ  ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ಬಿಡುಗಡೆ ಮಾಡಿ ಮಾತನಾಡಿರುವ ಅವರು ನೇಮಕಗೊಂಡ ನೋಡಲ್ ಅಧಿಕಾರಿಗಳು ಅವರಿಗೆ ವಹಿಸಿರುವ ಹೋಬಳಿಗೆ ವಾರಕ್ಕೆ ಕನಿಷ್ಠ ಒಂದು ದಿನ ಖುದ್ದು ಭೇಟಿ ನೀಡಿ ಸಮಸ್ಯೆ ಪರಿಹಾರ ಸಂಬAಧ ಸಭೆ ನಡೆಸಬೇಕು. ಆಮೂಲಕ ಕೂಡಲೇ ನೀರಿನ ಬವಣೆ ನೀಗಿಸಲು ಕ್ರಮ ಕೈಗೊಳ್ಳಬೇಕು.ಇದರ ಹೊರತಾಗಿ ಏನೇ ಸಮಸ್ಯರ ಸಮಸ್ಯೆ ಆದರೂ ನೋಡಲ್ ಅಧಿಕಾರಿಗಳೇ ಹೊಣೆಗಾರರು ಆಗುತ್ತಾರೆ ಎಂದರು.

ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಇಲಾಖೆಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆಯ ರಾಜಸ್ವ ನಿರೀಕ್ಷ ಕರು, ಬಿಲ್ ಕಲೆಕ್ಟರ್‌ಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾ ಯಕ ಅಭಿಯಂತರರು, ಕೃಷಿ ಇಲಾಖೆಯ ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರ, ತೋಟ ಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿಗಳು, ಪಶು ವೈದ್ಯಕೀಯ ಇಲಾಖೆಯ ಪಶು ವೈದ್ಯಾಧಿಕಾರಿಗಳು ಇವರುಗಳೊಂದಿಗೆ ಸಭೆ ನಡೆಸಬೇಕು.

ಇದನ್ನೂ ಓದಿ: Chikkaballapur News: ಶಾಸಕರ ವಿರುದ್ಧ ಮಾತನಾಡುವವರಿಗೆ ಕಠಿಣ ಕ್ರಮವಾಗಲಿ: ನಾಗಭೂಷಣ್ ಒತ್ತಾಯ

ಅವರಿಗೆ ಸಂಬಂಧಪಟ್ಟ ಹೋಬಳಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಮತ್ತು ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ಸ್ಥಳೀಯ ಸಂಸ್ಥೆಗಳು, ಖಾಸಗಿ ಕೊಳವೆಬಾವಿ  ಅಥವಾ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುವುದನ್ನು ಖಚಿತಪಡಿಸಿ ಕೊಳ್ಳುವಂತೆ, ಆರ್.ಓ.ಪ್ಲಾಂಟ್‌ಗಳಲ್ಲಿ ನೀರಿನ ಗುಣಮಟ್ಟ ಪರಿಶೀಲನೆ ಮಾಡಿ ಕುಡಿಯುವ ನೀರು ಶುದ್ಧವಾಗಿರುವ ಬಗ್ಗೆ ಖಾತ್ರಿಪಡಿಸುವಂತೆ, ಮೇವಿನ ಕೊರತೆ ಉಂಟಾದಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.

ಬೇಸಿಗೆಯ ಬಿಸಿಲಿನ ತಾಪಮಾನದಿಂದ ಉಂಟಾಗಬಹುದಾದ ಯಾವುದೇ ಸಮಸ್ಯಾತ್ಮಕ ವಿಷಯ ಗಳನ್ನು ಯಾವುದೇ ಲೋಪವಿಲ್ಲದಂತೆ ಪರಿಹರಿಸಲು ಎಲ್ಲಾ 26 ಹೋಬಳಿಗಳ ನೋಡಲ್ ಅಧಿಕಾರಿಗಳಿಗೆ ಸೂಚಿಸಿ, ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಉಂಟಾ ಗದಂತೆ ಕ್ರಮ ವಹಿಸುವಂತೆ ನಿರ್ದೇಶಿಸಿರುವುದಾಗಿ ಜಿಲ್ಲಾಧಿಕಾರಿ ಜಿ. ಪ್ರಭು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೋಡಲ್ ಅಧಿಕಾರಿಗಳ ಮಾಹಿತಿ
ಚಿಕ್ಕಬಳ್ಳಾಪುರ ಕಸಬಾ ಹೋಬಳಿ ಅತೀಕ್ ಪಾಷಾ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯಿತಿ ಚಿಕ್ಕಬಳ್ಳಾಪುರ -ಮೊ. 9460859001,ನಂದಿ ಹೋಬಳಿ ನಾಗರಾಜ್ ಕೆಳಗಿನ ಮನಿ ಜಂಟಿ ನಿರ್ದೇಶಕರು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಗಳ ಇಲಾಖೆ ಚಿಕ್ಕಬಳ್ಳಾಪುರ - 6482623869, ಮಂಡಿಕಲ್ಲು ಹೋಬಳಿ ಶಿಲ್ಪದೇಸಾಯಿ ಆಯುಕ್ತರು ನಗರಭಿವೃದ್ದಿ ಪ್ರಾಧಿಕಾರ ಚಿಕ್ಕಬಳ್ಳಾಪುರ- 9902211155, ಶಿಡ್ಲಘಟ್ಟ ಕಸಬಾ ಪ್ರವೀಣ್ ಆರ್ ಪಾಟೀಲ್ ಜಿಲ್ಲಾ ಪರಿಶಿಷ್ಟವರ್ಗಗಳ ಕಲ್ಯಾಣಾಧಿಕಾರಿಗಳು- 9449670060, ಜಂಗಮಕೋಟೆ ನಿರ್ಮಲಾ ಮುಖ್ಯ ಯೋಜನಾಧಿಕಾರಿ ಜಿಲ್ಲಾ ಪಂಚಾಯಿತಿ ಚಿಕ್ಕಬಳ್ಳಾ ಪುರ- 9480859004, ಬಶೆಟ್ಟಿಹಳ್ಳಿ ಮಾರೆಪ್ಪ ಬಾಲಪ್ಪ ಬೀರಲದಿನ್ನಿ ಉಪನಿರ್ದೇಶಕರು ರೇಷ್ಮೆ ಇಲಾಖೆ- 9538799652, ಸಾದಲಿ-ತೇಜಾನಂದರೆಡ್ಡಿ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಚಿಕ್ಕ ಬಳ್ಳಾಪುರ- 9900007027,ಚಿಂತಾಮಣಿ ಕಸಬಾ-ರಾಮಕೃಷ್ಣಪ್ಪ ಕಾರ್ಯಪಾಲಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಚಿಕ್ಕಬಳ್ಳಾಪುರ- 9886629118, ಅಂಬಾಜಿದುರ್ಗ ಗಾಯಿತ್ರಿ ಎಂ ಜಂಟಿ ನಿರ್ದೇಶಕರು ತೋಟಗಾರಿಕೆ ಇಲಾಖೆ ಚಿಕ್ಕಬಳ್ಳಾಪುರ- 8861686383 ,ಮುಂಗಾನಹಳ್ಳಿ-ರಘು ಜಿ.ಪಿ. ಮುಖ್ಯ ಲೆಕ್ಕಾಧಿಕಾರಿ ಜಿಲ್ಲಾ ಪಂಚಾಯಿತಿ ಚಿಕ್ಕಬಳ್ಳಾಪುರ- 9480859003, ಮುರುಗಮಲೆ-ಭವ್ಯರಾಣಿ ಜಿ.ಆರ್, ಉಪನಿರ್ದೇಶಕರು ಕೃಷಿ ಇಲಾಖೆ ಚಿಂತಾಮಣಿ- 8277930803, ಕೈವಾರ-ಮಾಧವಿ ಕೆ.ಕಾರ್ಯಪಾಲಕ ಅಭಿಯಂತರರು ಜಿಲ್ಲಾ ನಗರಾಭಿವೃದ್ಧಿಕೋಶ ಚಿಕ್ಕಬಳ್ಳಾಪುರ- 8296224567,ಬಾಗೇಪಲ್ಲಿ ಕಸಬಾ-ಅಬೀದ್ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಚಿಕ್ಕಬಳ್ಳಾಪುರ- 7892139927, ಮಿಟ್ಟೇಮರಿ-ವಿಶ್ವನಾಥ್, ಉಪನಿರ್ದೇ ಶಕರು ಮೀನುಗಾರಿಕೆ ಇಲಾಖೆ ಚಿಕ್ಕಬಳ್ಳಾಪುರ- 9844466228, ಗೂಳೂರು-ಪದ್ಮಜ ಉಪನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಚಿಕ್ಕಬಳ್ಳಾಪುರ- 9148225053, ಪಾತಪಾಳ್ಯ-ಮುನಿವೆಂಕಟಪ್ಪ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸಾಂಖ್ಯಿಕ ಇಲಾಕೆ ಚಿಕ್ಕಬಳ್ಳಾಪುರ- 9448359387, ಗುಡಿಬಂಡೆ ಕಸಬಾ-ಬೋರಪ್ಪ ಹಿರಿಯ ಭೂ ವಿಜ್ಞಾನಿ ಅಂತರ್ಜಲ ಇಲಾಖೆ- 9945302488,ಸೋಮೇನಹಳ್ಳಿ-ಪ್ರಸಾದ್ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ- 9686409096, ಗೌರಿಬಿದನೂರು ಕಸಬಾ- ಮಂಜುನಾಥ್ ಎ.ಎಸ್. ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ದಿ ಕೋಶ ಚಿಕ್ಕಬಳ್ಳಾಪುರ- 73382922223, ತೊಂಡೆಬಾವಿ ಶಿವಲಿಂಗಯ್ಯ ಜಂಟಿ ನಿರ್ದೇಶಕರು ಜಂಟಿ ನಿರ್ದೇಶಕರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಚಿಕ್ಕಬಳ್ಳಾಪುರ- 9448505524, ಡಿಪಾಳ್ಯ ಬಿಂದುಮಣಿ ಜಿಲ್ಲಾ ಅಧಿಕಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಚಿಕ್ಕಬಳ್ಳಾಪುರ- 8217380575, ನಗರಗೆರೆ-ನಾಗರಾಜ್ ಎಸ್ ನಾಯಕ್ ಪ್ರಾದೇಶಿಕ ಸಾರಿಗೆ ಅಧಿಕಾರಿ ಚಿಕ್ಕಬಳ್ಳಾಪುರ- 9900328777, ಹೊಸೂರು-ನೌತಾಜ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಿಕ್ಕಬಳ್ಳಾಪುರ- 9480760444, ಚೇಳೂರು-ರಂಗಪ್ಪ ಹೆಚ್.ಎನ್. ಉಪನಿರ್ದೇಶಕರು ಪಶುಪಾಳನಾ ಮತ್ತು ಪಶುವೈದ್ಯ ಸೇವಾ ಇಲಾಖೆ- 9845454597, ಚಿಲಕಲ ನೇರ್ಪು-ವಿರುಪಾಕ್ಷಪ್ಪ ಉಪನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ ಚಿಕ್ಕಬಳ್ಳಾಪುರ- 9986392953,ಮಂಚೇನಹಳ್ಳಿ-ದೀಪಶ್ರೀ.ಜಿ. ಉಪನಿರ್ದೇಶಕರು-೧ ಕೃಷಿ ಇಲಾಖೆ ಚಿಕ್ಕಬಳ್ಳಾಪುರ- 8277930802.